ಬೆಂಗಳೂರು: ಡಿವೈಎಸ್ಪಿ ಗಣಪತಿ ಸೂಸೈಡ್ ಪ್ರಕರಣದಲ್ಲಿ ಗೃಹ ಸಚಿವ ಕೆ.ಜೆ ಜಾರ್ಜ್ ಅವರ ರಾಜೀನಾಮೆಗೆ ಒತ್ತಡ ಹಾಕಿದ್ದ ಈಶ್ವರಪ್ಪ ತಮ್ಮ ಮೇಲೆ ಗಂಭೀರ ಆರೋಪ ಕೇಳಿಬಂದಾಗ ಯೂ ಟರ್ನ್ ಹೊಡೆಯೊಕ್ಕೆ ಕಾರಣವಾಗಿದ್ದಾದ್ರೂ ಏನು..?ಆ ಎರಡು ಕಾರಣಗಳೇ ರಾಜೀನಾಮೆ ನೀಡದಿರಲು ಅಸ್ತ್ರವಾದವು ಎನ್ನಲಾಗ್ತಿದೆ.
ಮೈಸೂರಿನಲ್ಲಿದ್ದ ಈಶ್ವರಪ್ಪ ಆತ್ಮಹತ್ಯೆ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದಾಗ ಮನಸಿನಲ್ಲಿ ರಾಜೀನಾಮೆ ನೀಡುವ ನಿರ್ದಾರ ಕೈಗೊಂಡಿದ್ದು ನಿಜವಂತೆ.ಇದನ್ನು ತನ್ನ ಅತ್ಯಾಪ್ತರ ಬಳಿಯೂ ಹೇಳಿಕೊಂಡಿದ್ರಂತೆ.
ಆದರೆ ಬೆಂಗಳೂರಿಗೆ ಬಂದು ನಂತರ ಶಿವಮೊಗ್ಗಕ್ಕೆ ಪ್ರಯಾಣಿಸುವ ಹೊತ್ತಿನಲ್ಲಿ ಆತ್ಮಹತ್ಯೆ ಹಿಂದೆ ಕಾಂಗ್ರೆಸ್ ಹುನ್ನಾರವಿದೆ ಎನ್ನುವ ಇಂಟಲಿಜೆನ್ಸ್ ರಿಪೋರ್ಟ್ ಹಾಗೂ ಇದೆಲ್ಲವೂ ಕಾಂಗ್ರೆಸ್ ಟೂಲ್ ಕಿಟ್ ನ ಭಾಗ ಎನ್ನೋದು ಹೆಚ್ಚು ಪ್ರಚಾರ ಪಡೆಯುತ್ತಿದ್ದಂತೆ ರಾಜೀನಾಮೆ ನಿರ್ದಾರದಿಂದ ಯೂ ಟರ್ನ್ ಹೊಡೆದರೆನ್ನುವ ವಿಶ್ಲೇಷಣೆಗಳಿವೆ.ಮೊದಲು ರಾಜೀನಾಮೆ ಸುಳಿವು ಕೊಟ್ಟಿದ್ದ ಈಶ್ವರಪ್ಪ ಕೆಲ ಗಂಟೆಗಳಲ್ಲೇ ಯೂ ಟರ್ನ್ ಹೊಡೆದಿದ್ದು ಸಾಕಷ್ಟು ಗುಮಾನಿ ಸೃಷ್ಟಿಸಿದೆ.
ನಿಗಧಿಯಂತೆ ಭಾನುವಾರ ಈಶ್ವರಪ್ಪ ದೆಹಲಿಗೆ ತೆರಳಲಿಲ್ಲವೇಕೆ..?: ಈ ಬೆಳವಣಿಗೆ ಕೂಡ ನಾನಾ ಅನುಮಾನ ಮೂಡಿಸುವಂತಿದೆ.ಏಕೆಂದರೆ ಕಳೆದ ಶನಿವಾರ ಈಶ್ವರಪ್ಪ ಬೆಂಗಳೂರಲ್ಲಿ ಸುದ್ದಿಗೋಷ್ಟಿ ಮಾಡಿದ್ರು.ಆ ಸುದ್ದಿಗೋಷ್ಟಿಯಲ್ಲಿ ಭಾನುವಾರದಂದು ನಾನು ದೆಹಲಿಗೆ ಹೋಗುತ್ತಿದ್ದೇನೆ. ಆದರೆ ಹೋಗುತ್ತಿರುವುದು ಬೇರೆ ವಿಷಯಕ್ಕೆ.. ಹೈಕಮಾಂಟಡ್ ಭೇಟಿಗೆ.ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದಿದ್ರು. ಅಂದ್ರೆ ಸಂತೋಷ್ ಪಾಟೀಲ್ ಪ್ರಕರಣದ ಇತ್ಯರ್ಥಕ್ಕೆ ಹೋಗೊಕ್ಕೆ ರೆಡಿಯಾಗಿದ್ರಾ..? ಗೊತ್ತಿಲ್ಲ..
ಆದ್ರೆ ಅವತ್ತು ಅವರು ದೆಹಲಿಗೆ ಹೋಗಲಿಲ್ಲ..ಏಕೆ ಹೋಗಲಿಲ್ಲ…? ಬಹುಷಃ ಸಂತೋಷ್ ಪಾಟೀಲ್ ಪ್ರಕರಣಕ್ಕೆ ಇತಿಶ್ರೀ ಹಾಡೊಕ್ಕಂತನೇ ಇಲ್ಲಿ ಉಳಿದುಕೊಂಡ್ರಾ..? ಗೊತ್ತಾಗ್ತಿಲ್ಲ. ( ಸಂತೋಷ್ ಆತ್ಮಹತ್ಯೆ ಹಿನ್ನಲೆಯಲ್ಲಿ ನೀಡಲಾದ ದೂರು ಸಂಬಂಧ ದಾಖಲಾಗಿರುವ ಎಫ್ ಐ ಆರ್ ನಲ್ಲಿ ಆತ್ಮಹತ್ಯೆಗೆ ಪ್ರಚೋದನೆಯನ್ನು ಉಲ್ಲೇಖಿಸುವ ಐಪಿಸಿ ಸೆಕ್ಷನ್ 34,306 ಅಡಿಯಲ್ಲಿ ಎ-1 ಈಶ್ವರಪ್ಪ.ಎ-2 ಬಸವರಾಜ್ ಮತ್ತು ರಮೇಶ್.ಆರೋಪ ಸಾಬೀತಾದರೆ 10 ವರ್ಷ ಜೈಲು ಎನ್ನುವುದು ಉಲ್ಲೇಖವಾಗಿದೆ,)