MLA LAXMI HEBBALKAR’S POLITICS ON DEAD BODY..?! “ಹೆಣ”ದ ಮುಂದೆ ಹೆಬ್ಬಾಳ್ಕರ್ ರಾಜಕೀಯ..?! ಡಿಕೆಶಿಗೆ “ವೀಡಿಯೋ ಕ್ಲಿಪ್” ಗುನ್ನಾ..?!

2 ಕೋಟಿ ಮಂಜೂರು ಮಾಡಿದಿದ್ದರೆ ಸಂತೋಷ್ ಸಾಯ್ತಿದ್ರಾ..? ಅಸಹಜ ಸಾವಿನ ಬೆನ್ನಲ್ಲೇ ಬಿಜೆಪಿಯಿಂದ ವೀಡಿಯೋ ಕ್ಲಿಪ್ ರಿಲೀಸ್ ..?!

0

ಬೆಂಗಳೂರು: ಕಾಂಟ್ರ್ಯಾಕ್ಟರ್ ಸಂತೋಷ್ ಪಾಟೀಲ್ ಅಸಹಜ ಸಾವನ್ನು ಯಾವುದೇ ನಾಚಿಕೆ-ಮುಲಾಜಿಲ್ಲದೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ತಿವೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೆಣದ ಮುಂದೆ ರಾಜಕೀಯ ಮಾಡುತ್ತಿದ್ದರೆ,ಡಿಕೆಶಿ ತಮ್ಮದೇ ಆದ ಧಾಟಿಯಲ್ಲಿ ಟೀಕಾಸ್ತ್ರ ಪ್ರಯೋಗಿಸುತ್ತಿದ್ದಾರೆ.ಇನ್ನು ಯಾವಾಗ್ಲೊ ಮಾಡಿಟ್ಟುಕೊಂಡಿದ್ದ ಕ್ಲಿಪ್ ನ್ನು ಬಿಜೆಪಿಗರು ಡಿಕೆಶಿಗೆ ಗುನ್ನಾ ಹೊಡೀಲಿಕ್ಕೆ ಬಳಸಿಕೊಳ್ಳಲಾರಂಭಿಸಿದ್ದಾರೆ.

ಹೆಣದ ಮೇಲೆ ರಾಜಕೀಯ ಮಾಡ್ತಿದಾರಾ ಹೆಬ್ಬಾಳ್ಕರ್..?! ತನ್ನ ಕ್ಷೇತ್ರದ ಮತದಾರನೇ ಆಗಿದ್ದ ಸಂತೋಷ್ ಪಾಟೀಲ್ 4 ಕೋಟಿ ಮೊತ್ತದ ಕಾಮಗಾರಿ ನಡೆಸಿ ಬಿಲ್ ಡ್ರಾ ಆಗದೆ ಸಂಕಷ್ಟದಲ್ಲಿರೋ ವಿಷಯ ಹೆಬ್ಬಾಳ್ಕರ್ ಗೆ ಗೊತ್ತಿತ್ತು.ಆಗ ತನ್ನ ವಿವೇಚನಾನಿಧಿಯಲ್ಲಿ ಅವಕಾಶವಿದ್ದ 2 ಕೋಟಿ ಬಿಡುಗಡೆ ಮಾಡಿ ಸ್ಪಂದಿಸಬಹುದಿತ್ತು.ಆದರೆ ಆ ಕೆಲಸ ಮಾಡದೆ ಸತ್ತ ಮೇಲೆ ಭಾವುಕವಾಗಿ ಮಾತನಾಡುತ್ತಿರುವುದು ಕೂಡ ಶಂಕೆ ಮೂಡಿಸುತ್ತದೆ.

ಆಗ 2 ಕೋಟಿ ಕೊಟ್ಟಿದಿದ್ದರೆ ಇವತ್ತು ಆ  ಕ್ಷೇತ್ರದ ಮಗ ಉಳಿದುಕೊಳ್ಳುತ್ತಿದ್ದನಲ್ಲಾ..ಈಗ ಹೆಣದ ಮುಂದೆ  ಕುಳಿತು ಈಶ್ವರಪ್ಪ ಹಾಗೂ ಬಿಜೆಪಿ ವಿರುದ್ಧ ಪ್ರಚೋದನಾಕಾರಿಯಾಗಿ ಮಾತನಾಡುತ್ತಾ ಶೋಕಸಾಗರದಲ್ಲಿ ಮುಳುಗಿರುವ ಕುಟುಂಬವನ್ನು ಸರ್ಕಾರದ ವಿರುದ್ಧ ಮಾತನಾಡುವಂತೆ ಟಾಂಟ್ ಕೊಡುತ್ತಿರುವುದು ಎಷ್ಟು ಸರಿ..11 ಲಕ್ಷದ ಪರಿಹಾರ ಕೊಟ್ಟಿರುವುದು ಕುಟುಂಬಕ್ಕೆ ನೆರವಾಗುತ್ತದೆ ಎನ್ನೋದು ನೆಮ್ಮದಿ.ಆದರೆ 2 ಕೋಟಿ ಹಣ ಬಿಡುಗಡೆ ಮಾಡಿದಿದ್ದರೆ ಈ 11 ಲಕ್ಷ ಕೊಡುವಂಥ ಪರಿಸ್ತಿತಿ ನಿರ್ಮಾಣವಾಗುತ್ತಿತ್ತಾ ಎನ್ನೋದು ಕೂಡ ಪ್ರಶ್ನೆಯಲ್ಲವೇ..?

  ಬಿಜೆಪಿ ಏಕೆ ಈ ಕ್ಲಿಪ್  ಬಿಡುಗಡೆ ಮಾಡ್ತು..ಡಿಕೆಶಿ ವಿರುದ್ಧ ಅನುಮಾನ ಬರೊಕ್ಕಾ..? ಸಂತೋಷ್ ಪಾಟೀಲ್ ಆತ್ಮಹತ್ಯೆಯಿಂದ ಪ್ರತಿಭಟನೆಗಳು ತೀವ್ರವಾಗುತ್ತಿರುವ ಬೆನ್ನಲ್ಲೇ  ಬಿಜೆಪಿ  ಮೀಡಿಯಾ ರಿಲೀಸ್ ಮಾಡಿದ  ಆ ವೀಡಿಯೋ ತುಣುಕು ಕೂಡ ಬಿಜೆಪಿಯ ಷಡ್ಯಂತ್ರದ ಬಗ್ಗೆ ಅನುಮಾನ ಮೂಡಿಸುವಂತಿದೆ.ವಿಧಾನಸೌಧದಲ್ಲಿ ಕೆಲ ತಿಂಗಳ ಹಿಂದೆ  ಕಾಂಗ್ರೆಸ್ ನವರು ಆಹೋರಾತ್ರಿ ಧರಣಿ ಮಾಡುವಾಗ ಡಿಕೆಶಿ ಮಾದ್ಯಮಗಳ ಜತೆ ಮಾತನಾಡಿದ್ರು.

ಕಲಾಪದ ವೇಳೆ ತನ್ನ ಹಾಗೂ ಈಶ್ವರಪ್ಪ ನಡುವೆ ನಡೆದಿದ್ದ ವಾಕ್ಸಮರವನ್ನು ಉಲ್ಲೇಖಿಸಿ ಮಾತನಾಡಿದ್ದ ಡಿಕೆಶಿ ಮಾತಿನ ನಡುವೆ ಈಶ್ವರಪ್ಪ ನನ್ನಪ್ಪನ ಬಗ್ಗೆ ಮಾತನಾಡ್ತಿದಾರೆ..ನಮ್ಮಪ್ಪನು ಕೂಡ ಮೇಲೆ ಕುತ್ಕೊಂಡು ನೋಡ್ತಿದಾರೆ..ನಾನು ಕೂಡ ಶೀಘ್ರದಲ್ಲೇ ನಮ್ಮಪ್ಪ ಇರೋ ಕಡೆ ಅವರನ್ನು ಕಳುಹಿಸುತ್ತೇನೆ ಎಂಬ ತಾತ್ಪಾರ್ಯದ ವೀಡಿಯೋದ ತುಣುಕನ್ನು ಹರಿಯಬಿಟ್ಟಿದ್ದಾರೆ.ಈ ಸನ್ನಿವೇಶದಲ್ಲಿ ಮೇಲ್ಕಂಡ ವೀಡಿಯೊ ರಿಲೀಸ್ ಮಾಡುವ ಅವಶ್ಯಕತೆ ಏನಿತ್ತು..?

ಈಶ್ವರಪ್ಪ ಅವರನ್ನು ಖೆಡ್ಡಾಕ್ಕೆ ಕೆಡವೊಕ್ಕೆ ಡಿಕೆಶಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಮೆಗಾಪ್ಲ್ಯಾ ನ್ ಮಾಡಿದ್ರಾ ಎನ್ನುವ ಬಲವಾದ ಶಂಕೆ ಮೂಡಿಸುವಂತಿದೆ ಈ ವೀಡಿಯೋ ಎನ್ನುವ ಮಾತು ಕೇಳಿಬರುತ್ತಿದೆ

Spread the love
Leave A Reply

Your email address will not be published.

Flash News