BBMP “WAR ROOM-AIRCONDITIONED” COMMISSINOR GAURAV GUPTA TRANSFER..“”ವಾರ್ ರೂಂ..ಏರ್ ಕಂಡೀಷನ್ಡ್”” ಚೀಫ್ ಕಮಿಷನರ್ ಗೌರವ್ ಗುಪ್ತಾಗೆ BBMP ಯಿಂದ“”ಹೀನಾಯ”” ನಿರ್ಗಮನ.?!

ಸಾರ್ವಜನಿಕರಿಂದ ಬಿಬಿಎಂಪಿ ಆಡಳಿತವನ್ನು ದೂರ ಮಾಡಿದ ಕಳಂಕಕ್ಕೆ ಬೆಲೆ ತೆತ್ತರಾ ಗೌರವ್ ಗುಪ್ತಾ..?! .. ಎಲೆಕ್ಷನ್ ಬೆನ್ನಲ್ಲಿ ಜಾಣನಡೆ ಅನುಸರಿಸ್ತಾ ಸರ್ಕಾರ..

0

ಬೆಂಗಳೂರು: ತಡವಾಗಿಯಾದರೂ ಪರವಾಗಿಲ್ಲ ಸರ್ಕಾರ ಒಂದೊಳ್ಳೆಯ ನಿರ್ಣಯ ಕೈಗೊಂಡಿದೆ.ಇದಕ್ಕೆ ನಾವು ಸರ್ಕಾರವನ್ನು ಅಭಿನಂದಿಸುತ್ತೇವೆ.. ಎನ್ನುವ ಮಾತು ಬಹುತೇಕ ಬೆಂಗಳೂರಿಗರಿಂದ ಕೇಳಿಬಂದಿದೆ. ಹೌದು..ಇದಕ್ಕೆ ಕಾರಣ ಬಿಬಿಎಂಪಿಯ ಮುಖ್ಯ ಆಯುಕ್ತ ಗೌರವ್ ಗುಪ್ತಾ ವರ್ಗಾವಣೆ.ಸರ್ಕಾರದ ದಿಢೀರ್ ವರ್ಗಾವಣೆ ಆದೇಶದಿಂದಾಗಿ ಗೌರವ್ ಗುಪ್ತಾ ಬಿಬಿಎಂಪಿಯಿಂದ ಹೊರ ನಡೆದಿದ್ದಾರೆ..ನ ಡೆದಿದ್ದಾರೆ ಎನ್ನುವುದಕ್ಕಿಂತ ಅವರನ್ನು ಹೊರನಡೆಸಲಾಗಿದೆ.

ನಿರಂತರ ವೈಫಲ್ಯಗಳು..ಜನರಿಂದ ಬಿಬಿಎಂಪಿ ಆಡಳಿತವನ್ನು ಸಂಪೂರ್ಣ ದೂರವಾಗಿಟ್ಟ ಆರೋಪಗಳು..ವಾರ್ ರೂಂಗೆ ಸೀಮಿತವಾದ ಆಡಳಿತ ವೈಖರಿ..ಹೀಗೆ ಹತ್ತು ಹಲವು ಕಾರಣಗಳಿಂದ ಗೌರವ್ ಗುಪ್ತಾ ಅವರನ್ನು ಮುಖ್ಯ ಆಯುಕ್ತರ ಹುದ್ದೆಯಿಂದ ವರ್ಗಾವಣೆ ಮಾಡಲಾಗಿದೆ. ಗೌರವ ಗುಪ್ತಾ ಅವರಂಘ ಏರ್ ಕಂಡೀಷನ್ಡ್ ಐಎಎಸ್ ಅಧಿಕಾರಿ ವರ್ಗಾವಣೆಗೆ ಕಾರಣವೂ ಇದೆ.

ಮಂಜುನಾಥ್ ಪ್ರಸಾದ್ ಅವರಂಥ ಜನಪರ ಹಾಗೂ ಚಾಣಾಕ್ಷ ಅಧಿಕಾರಿಯನ್ನು ಗೌರವ್ ಗುಪ್ತಾರಿಗಾಗಿ ಒಕ್ಕಲೆಬ್ಬಿಸಿದ ಸರ್ಕಾರ ನಂತರ ತಾನು ಎಂಥಾ ಯಡವಟ್ಟ್ ಮಾಡಿಕೊಂಡೆ ಎಂದು ಪರಿತಪಿಸುವಂತಾಗಿತ್ತು.ಬಿಬಿಎಂಪಿ ಆಡಳಿತವನ್ನು ಹದಗೆಡಿಸಿ ಜನರಿಗೆ ಸಮೀಪವಾಗಬೇಕಿದ್ದ..ಅಪ್ಯಾಯಮಾನವಾಗಬೇಕಿದ್ದ ಬಿಬಿಎಂಪಿಯನ್ನು ಸಂಪೂರ್ಣ ದೂರ ಮಾಡಿದ್ದರ ಬಗ್ಗೆ ಸಾರ್ವಜನಿಕರಿಂದ ವ್ಯಾಪಕವಾಗಿ ದೂರು ಕೇಳಿಬರುತ್ತಲೇ ಇತ್ತು.

ಒಂದು ಹಂತದವರೆಗೆ ಇದೆಲ್ಲವನ್ನು ಸಹಿಸಿಕೊಂಡಿದ್ದ ಸರ್ಕಾರ ಚುನಾವಣೆ ಹತ್ತಿರವಾಗುತ್ತಿರುವ ಸನ್ನಿವೇಶದಲ್ಲಿ ಗೌರವ್ ಗುಪ್ತಾರಂಥ ಅಧಿಕಾರಿಯನ್ನು ಉಳಿಸಿಕೊಂಡರೆ ಜನ ತಮಗೆ ಕ್ಯಾಕರಿಸಿ ಉಗಿಯುತ್ತಾರೆ.ಇದು ಚುನಾವಣೆ ಮೇಲೂ ಎಫೆಕ್ಟ್ ಉಂಟುಮಾಡಬಹುದೆನ್ನುವ ಅಂಜಿಕೆಗೆ ಕೊನೆಗೂ ಗೌರವ್ ಗುಪ್ತಾ ಅವರನ್ನು ಹೇಳದೆ ಕೇಳದೆ..ಒಂದ್ ಸಣ್ಣ ಸುಳಿವೂ ಕೊಡದೆ ಎತ್ತಂಗಡಿ ಮಾಡಿಬಿಟ್ಟಿದೆ..ಇದು ಗೌರವ್ ಗುಪ್ತಾ ಅವರ ಜನವಿರೋಧಿ ಧೋರಣೆಯಿಂದ ಬೇಸತ್ತಿದ್ದ ಬೆಂಗಳೂರಿಗರಿಗೆ ಎಲ್ಲಿಲ್ಲದ ಸಂತಸ-ಹರ್ಷ ತಂದಿದೆ ಎನ್ನುವುದು ಕೂಡ ಅಷ್ಟೇ ಸತ್ಯ.

ಬಿಬಿಎಂಪಿ ನೂತನ ಮುಖ್ಯ ಆಯುಕ್ತರಾಗಿ ನೇಮಕಗೊಂಡಿರುವ ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್..
ಬಿಬಿಎಂಪಿ ನೂತನ ಮುಖ್ಯ ಆಯುಕ್ತರಾಗಿ ನೇಮಕಗೊಂಡಿರುವ ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್..

ಗೌರವ್ ಗುಪ್ತಾ ಆಡಳಿತಾಧಿಕಾರಿಯಾಗಿದ್ದಾಗಲೇ ಅವರ ಬಗ್ಗೆ ಅಸಹನೆ ವ್ಯಕ್ತವಾಗಿತ್ತು.ಅಲ್ಲೇ ಇದ್ದುಕೊಂಡು ಸಚಿವ ಅಶೋಕ್ ಮಟ್ಟದಲ್ಲಿ ನಡೆಸಿದರೆನ್ನಲಾದ ಲಾಭಿಯಿಂದ ಮುಖ್ಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಮೇಲಂತೂ ಬೆಂಗಳೂರು ಹಾಗೂ ಬಿಬಿಎಂಪಿ ಕಥೆ ಮುಗಿದೇ ಹೋಯ್ತು ಎಂದು ಜನ ಲೇವಡಿ ಮಾಡಿಕೊಂಡಿದ್ದರು.ಅದು ಸತ್ಯವೂ ಆಯ್ತೆನ್ನುವುದು ಅನೇಕ ಸನ್ನಿವೇಶಗಳಿಂದ ಪ್ರೂವ್ ಆಗಿದೆ.

ಮಂಜುನಾಥ್ ಪ್ರಸಾದ್
ಮಂಜುನಾಥ್ ಪ್ರಸಾದ್

ಬೆಂಗಳೂರಿನ ಮಟ್ಟದಲ್ಲಿ ಸ್ಥಳೀಯ ಸರ್ಕಾರವಾಗಿ ಆಡಳಿತ ನಡೆಸುವ ಬಿಬಿಎಂಪಿಯ ಆಡಳಿತ ನಡೆಸುವುದು ಅಂದುಕೊಂಡಷ್ಟು ಸುಲಭವೂ ಅಲ್ಲ..ಸಲೀಸಂತೂ ಮೊದಲೇ ಅಲ್ಲ..ಮಂಜುನಾಥ ಪ್ರಸಾದ್..ಸಿದ್ಧಯ್ಯ..ಅನಿಲ್ ಕುಮಾರ್ ಅವರಂಥ ಅಧಿಕಾರಿಗಳಿಗೆ ಮಾತ್ರ ಇದು ಸಾಧ್ಯವಾಗಿತ್ತು.ಬಿಬಿಎಂಪಿ ಕಚೇರಿಯಲ್ಲಿ ಕುಳಿತುಕೊಂಡು ಜನರ ಸಮಸ್ಯೆ-ಅಹವಾಲನ್ನು ಕೇಳುವ ವ್ಯವಧಾನ ಇದ್ದುದ್ದರಿಂದಲೇ ಇವರಿಗೆ ಇದೆಲ್ಲಾ ಸಾಧ್ಯವಾಗಿತ್ತು.

ಆದರೆ ಅಂಥಾ ಕೆಲಸವೇ ಗೌರವ್ ಗುಪ್ತಾ ಅವರಂಥ ಗಾಜಿನ ಮನೆಯ-ಎಸಿ ಚೇಂಬರ್ಡ್ ಅಧಿಕಾರಿಯಿಂದ ಆಗಲೇ ಇಲ್ಲ.ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ತನ್ನ ಕೆಪಾಸಿಟಿಯನ್ನು ಪ್ರೂವ್ ಮಾಡಿಕೊಳ್ಳೊ ಗೋಜಿಗೆ ಈ ಐಎಎಸ್ ಹೋಗಲಿಲ್ಲ.ಸರ್ಕಾರ ತನ್ನನ್ನು ನಂಬಿ ದೊಡ್ಡ ಹೊಣೆಗಾರಿಕೆ ಕೊಟ್ಟಿದೆ.ಆ ನಂಬಿಕೆ ಉಳಿಸಿಕೊಳ್ಳಬೇಕೆನ್ನುವ ಮನಸ್ಥಿತಿಯೂ ಅವರಿಗಿದ್ದಂತೆ ಕಾಣಲಿಲ್ಲ.

ಇರುವಷ್ಟು ದಿನ ಆರಾಮಾಗಿದ್ದುಕೊಂಡು ಪವರ್ ನ್ನು ಎಂಜಾಯ್ ಮಾಡಬೇಕೆನ್ನುವ ಚಿಂತನೆಯಲ್ಲೇ ದಿನದೂಡಿದ ಕಳಂಕ ಗೌರವ್ ಗುಪ್ತಾರದ್ದು.ಅವರಿಂದ ಬೆಂಗಳೂರಿಗೂ ಒಳ್ಳೇದಾಗಲಿಲ್ಲ..ಜನರಿಗಂತೂ ನಯಾಪೈಸೆ ಪ್ರಯೋಜನವೂ ಆಗಲಿಲ್ಲ..ಏಕೆಂದರೆ ಬಹುತೇಕ ಅವಧಿಯನ್ನು ಅನೆಕ್ಸ್ ಬಿಲ್ಡಿಂಗ್ ನ ಆರನೇ ಮಹಡಿಯಲ್ಲಿರುವ ವಾರ್ ರೂಂನಲ್ಲೇ ಕಳೆದಿದ್ದಷ್ಟೇ ಗೌರವ್ ಗುಪ್ತಾ ಹೆಗ್ಗಳಿಕೆ,ಪರಿಸ್ತಿತಿ ಹೀಗಿರುವಾಗ ಅವರಿಂದ ಜನರನ್ನು ನೋಡುವುದಾಗಲಿ..ಸಮಸ್ಯೆ ಹೇಳಿಕೊಳ್ಳೊಕ್ಕೆ ಅವಕಾಶ ಕೊಡುವುದಾಗಲಿ..ಸಮಸ್ಯೆಗಳನ್ನು ಬಗೆಹರಿಸುವುದು ಸಾಧ್ಯವಾಗಲೇ ಇಲ್ಲ..ಹಾಗಾಗಿನೇ ಗೌರವ್ ಗುಪ್ತ ವರ್ಗಾವಣೆ ಚರ್ಚೆ ಸಾಕಷ್ಟು ಭಾರೀ ಬಂದಾಗಲೂ ತೊಲಗಿದ್ರೆ ಸಾಕ್ ಬಿಡ್ರಿ ಎಂದು ಜನ ಬಿಬಿಎಂಪಿಯಲ್ಲಿ ಮಾತನಾಡಿಕೊಂಡಿದ್ದಿದೆ..

ಒಬ್ಬ ಮುಖ್ಯ ಆಯುಕ್ತರ ಬಗ್ಗೆ ಸಾರ್ವಜನಿಕರು ಈ ರೀತಿ ಬೈಯ್ದಿದ್ದು,…ಕೆಂಡಕಾರಿದ್ದು ಇತ್ತೀಚಿನ ವರ್ಷಗಳಲ್ಲಿ ಇಲ್ಲವೇ ಇಲ್ಲ ಎನ್ನುತ್ತಾರೆ ಬಿಬಿಎಂಪಿಯ ನಿವೃತ್ತ ಅಧಿಕಾರಿಯೋರ್ವರು. ಕೆಲವು ಹೊಗಳುಭಟ್ಟ ಅಧಿಕಾರಿಗಳು ಹಾಗೂ ಮಾದ್ಯಮಗಳನ್ನು ಬೆನ್ನಿಗಿಟ್ಟುಕೊಂಡು ಅಧಿಕಾರ ನಡೆಸಿದ ಆರೋಪ ಗೌರವ್ ಗುಪ್ತಾ ಅವರ ಮೇಲಿದೆ.ಮಾದ್ಯಮಗಳಿಂದಲಂತೂ ಸಾಕಷ್ಟು ಅಂತರ ಕಾಯ್ದುಕೊಂಡು ಸಾಕಷ್ಟು ಸನ್ನಿವೇಶಗಳಲ್ಲಿ ಟೀಕೆಗೆ ಗುರಿಯಾಗಿದ್ದಿದೆ..ಆಕ್ರೋಶಕ್ಕೆ ತುತ್ತಾಗಿದ್ದಿದೆ.

ಸಿದ್ದಯ್ಯ.
ಸಿದ್ದಯ್ಯ.
ಅನಿಲ್ ಕುಮಾರ್
ಅನಿಲ್ ಕುಮಾರ್

ಸಾರ್ವಜನಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳದೆ..ವಿಷಯಗಳನ್ನು ಬಹಿರಂಗಪಡಿಸದೆ ಗೌಪ್ಯತೆಯನ್ನು ಕಾಯ್ದುಕೊಳ್ಳುತ್ತಿದ್ದ ಬಗ್ಗೆ ಮಾದ್ಯಮಗಳು ಸರ್ಕಾರದ ಮಟ್ಟದಲ್ಲಿ ಗೌರವ್ ಗುಪ್ತಾ ಬಗ್ಗೆ ಕಂಪ್ಲೆಂಟ್ ಮಾಡಿದ್ದಿದೆ.ಕೆಲವರನ್ನು ಬಿಟ್ಟು ಬಹುತೇಕ ಮಾದ್ಯಮಗಳ ದೃಷ್ಟಿಯಲ್ಲಂತೂ ಗೌರವ್ ಗುಪ್ತಾ ಸದಾ ನಾಟ್ ರೀಚಬಲ್ ಚೀಫ್ ಕಮಿಷನರ್ ಆಗಿದ್ದು ದೌರ್ಭಾಗ್ಯಪೂರ್ಣ.ಮಾದ್ಯಮಗಳ ಪ್ರಶ್ನಿಸುವ ಹಕ್ಕನ್ನೇ ಮೊಟಕುಗೊಳಿಸಿ ಅವರು ಹೇಳಿದ್ದನ್ನಷ್ಟೇ ಕೇಳಿಸಿಕೊಂಡು ಬರೆಯಬೇಕಾದ ಸ್ಥಿತಿಯನ್ನು ಪಾಲಿಕೆಯಲ್ಲಿ ನಿರ್ಮಿಸಿದ್ದು ಅತ್ಯಂತ ಖಂಡನಾರ್ಹ ಎನ್ನುತ್ತಾರೆ ಹಿರಿಯ ಪತ್ರಕರ್ತ ವಿಜಯ್ ಕುಮಾರ್.

ಸಿದ್ದಯ್ಯ..ಮಂಜುನಾಥ್ ಪ್ರಸಾದ್..ಅನಿಲ್ ಕುಮಾರ್ ಅವರಂಥ ಕಮಿಷನರ್ ಗಳನ್ನು ಕಂಡಿರುವ ಬಿಬಿಎಂಪಿಗೆ ಗೌರವ್ ಗುಪ್ತಾ ಅವರ ಆಗಮನ ಶೋಭಾಯಮಾನ ಎನಿಸಲೇ ಇಲ್ಲ..ಸರ್ಕಾರದ ಅಸಮರ್ಥ-ತಪ್ಪು ಆಯ್ಕೆ ಎಂದು ವಿಶ್ಲೇಷಿಸಿದ್ದವರೇ ಹೆಚ್ಚು.ಅವರು ನಡೆದುಕೊಂಡಿದ್ದೂ ಹಾಗೆಯೇ ಇತ್ತು.ಎಲ್ಲರನ್ನು ದೂರ ಮಾಡಿಕೊಂಡು,ಎಲ್ಲವನ್ನು ಮೂಗಿನ ನೇರದಲ್ಲೇ ಮಾಡುತ್ತಿದ್ದ ಗೌರವ್ ಗುಪ್ತಾ ಕೆಲವೊಮ್ಮೆ ಸರ್ವಾಧಿಕಾರಿಯಂತೆ ಭಾಸವಾಗುತ್ತಾರೆ ಎಂದು ಅವರ ಕೆಳಗೆ ಕೆಲಸ ಮಾಡುವ ಅನೇಕ ಅಧಿಕಾರಿಗಳೇ ಬೈಯ್ದುಕೊಂಡಿದ್ದುಂಟು.

ಕೊರೊನಾದಂಥ ಸನ್ನಿವೇಶದಲ್ಲಿ ಗೌರವ್ ಗುಪ್ತಾ ಕಾರ್ಯನಿರ್ವಹಣೆ ಅಷ್ಟೇನೂ ಸಮಾಧಾನಕರವಾಗಿರಲಿಲ್ಲ ಎನ್ನುವ ಮಾತಿದೆ.ಇದಕ್ಕಾಗಿ ಸರ್ಕಾರದಿಂದ ಸಾಕಷ್ಟು ಬಾರಿ ಛೀಮಾರಿ ಹಾಕಿಸಿಕೊಂಡಿದ್ದೂ ಉಂಟಂತೆ.ಆಗಲೇ ಅವರಿಗೆ ವರ್ಗಾವಣೆಯ ಎಚ್ಚರಿಕೆಯನ್ನೂ ಕೊಡಲಾಗಿತ್ತಂತೆ.ಆದ್ರೆ ತಮ್ಮ ವರ್ತನೆ ಬದಲಿಸಿಕೊಳ್ಳದ ಗೌರವ್ ಗುಪ್ತಾ ಕೊನೆಗೂ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ನಿರ್ಗಮಿಸಿದ್ದಾರೆ.ಅವರ ವರ್ಗಾವಣೆ ಆದೇಶ ಸರ್ಕಾರದಿಂದಲೂ ಹೊರಬಿದ್ದಿದೆ.

ಜನಪರವಾಗಿ ಕೆಲಸ ಮಾಡೊಕ್ಕೆ ಸಿಕ್ಕ ಅಪೂರ್ವ ಅವಕಾಶವನ್ನು ಹಾಳು ಮಾಡಿಕೊಂಡು ಸರ್ಕಾರದ ನಿರೀಕ್ಷೆಯನ್ನು ಹುಸಿಗೊಳಿಸಿ,ಮುಜುಗರಕ್ಕೆ ಈಡಾಗುವಂತೆ ಮಾಡಿದ ಆರೋಪ ಅವರ ಮೇಲಿದೆ.ಹಾಗಾಗಿಯೇ ಆ ಕಳಂಕ-ತಪ್ಪಿಗೆ ಪಾಲಿಕೆಯಿಂದ ಹ್ಯಾಪ್ ಮೋರೆ ಹಾಕಿಕೊಂಡು ನಿರ್ಗಮಿಸುತ್ತಿರುವ ಶ್ರೀಮಾನ್ ಗೌರವ್ ಗುಪ್ತಾ ಇನ್ನಾದರೂ ಹೋದ ಕಡೆ ಒಂದಷ್ಟು ಜನಪರವಾಗಿ ದುಡಿಯುವಂತಾಗಲಿ..ಜನರ ತೆರಿಗೆ ದುಡ್ಡಿನಿಂದ ಪಡೆಯುತ್ತಿರುವ ಸಂಬಳಕ್ಕೆ ನೀಯತ್ತಾಗಿ ಜನರ ಸಮಸ್ಯೆಗೆ ಸ್ಪಂದಿಸುವಂತಾಗಲಿ..ತನ್ನ ಧೋರಣೆಯಿಂದ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸದಂತೆ ಆಗಲಿ… ಇದೇ ಕನ್ನಡ ಫ್ಲ್ಯಾಶ್ ನ್ಯೂಸ್ ಹಾರೈಕೆ ಹಾಗೂ ಬುದ್ಧಿಮಾತು.

Spread the love
Leave A Reply

Your email address will not be published.

Flash News