IS THAT COMPLAINT IMPACT BEHIND BBMP CHIEF COMMISSINOR GAURAV GUPTA TRANSFER..?! “ಅಸಮರ್ಥ” ಎಂದು ಉಲ್ಲೇಖಿಸಿ ಬರೆಯಲಾಗಿದ್ದ “ಆ” ಲೆಟರ್ರೇ, BBMP ಚೀಫ್ ಕಮಿಷನರ್ ಗೌರವ್ ಗುಪ್ತಾ “ಎತ್ತಂಗಡಿ”ಗೆ “ಖೆಡ್ಡ”ವಾಯ್ತ,.?!

06-04-2022 ರಂದೇ “ಅಸಮರ್ಥ” ಆಯುಕ್ತ ಗೌರವ್ ಗುಪ್ತಾ ಬದಲಿಸುವಂತೆ ಪತ್ರ ಬರೆದಿದ್ದ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ.

0

 

“ಗೌರವ್ ಗುಪ್ತಾ ಅಧಿಕಾರ ವಹಿಸಿಕೊಂಡ ದಿನಗಳಿಂದಲೂ ಅವರ ಕಾರ್ಯವೈಖರಿ ಗಮನಿಸುತ್ತಲೇ ಇದ್ದೆನು. ಸಾರ್ವಜನಿಕರಿಂದ ಸಂಪೂರ್ಣ ದೂರವಾಗಿ ವಾರ್ ರೂಂನಲ್ಲೇ ಗೂಟಾ ಹೊಡ್ಕಂಡು ಇರೋರು.ನಾನೂ ಸೇರಿದಂತೆ ಸಾರ್ವಜನಿಕರು ತಮ್ಮ ದೂರು-ದುಮ್ಮಾನ-ಅಹವಾಲು ಹೇಳಿಕೊಳ್ಳೊಕ್ಕೆ ಚೇಂಬರ್  ಮುಂದೆ ದಿನವಿಡೀ ಕಾಯುತ್ತಾ ಕೂತಿರಬೇಕಾಗುತ್ತಿತ್ತು.

ಸರ್ಕಾರ ನಮ್ಮ ತೆರಿಗೆ ದುಡ್ಡಿನಿಂದ ಲಕ್ಷಾಂತರ ಸಂಬಳ-ಭತ್ಯೆ ಕೊಟ್ಟು ಗೌರವ್ ಗುಪ್ತಾ ಅವರಂಥ ಅಧಿಕಾರಿಯನ್ನು ತಂದು ಕೂರಿಸಿದ್ರೆ ಅಂಥವರು ಜನಸೇವೆ ಮಾಡಬೇಕೇ ಹೊರತು,ತಮಗೆ ಬೇಕಾದ ಫೈಲ್ಸ್ ಕ್ಲಿಯರೆನ್ಸ್ ಮಾಡುವುದರಲ್ಲೇ ಮಗ್ನವಾಗುವಂತದ್ದಲ್ಲ.ಅಕ್ರಮ ಜಾಹಿರಾತು,ಅನಧೀಕೃತ ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ..

ಇದರಿಂದೇ ಬೇಸತ್ತು ಸರ್ಕಾರಕ್ಕೆ ದೂರು ಕೊಡಬೇಕಾಗಿ ಬಂತು.ಸರ್ಕಾರ ಕೊನೆಗೂ ಇಂಥಾ ಜನವಿರೋಧಿ ಅಧಿಕಾರಿಯನ್ನು ಎತ್ತಂಗಡಿ ಮಾಡಿತಲ್ಲ ಎನ್ನೋದೇ ಸಮಾಧಾನ.ಅವರ ವರ್ಗಾವಣೆಯಲ್ಲಿ ನನ್ನ ದೂರು ಕೆಲಸ ಮಾಡಿದ್ದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ ಎನ್ನುತ್ತಾರೆ ಸಾಯಿದತ್ತಾ..”          -ಸಾಯಿದತ್ತಾ-ಸಾಮಾಜಿಕ ಕಾರ್ಯಕರ್ತ  

ಬೆಂಗಳೂರು: ಬಿಬಿಎಂಪಿಯಲ್ಲಿ ಆಡಳಿತ ನಡೆಸಿದ ಆಯುಕ್ತರು/ಮುಖ್ಯ ಆಯುಕ್ತರು/ಆಡಳಿತಾಧಿಕಾರಿಗಳ ಇತಿಹಾಸದಲ್ಲಿ “ನಾಟ್ ರೀಚಬಲ್” ಐಎಎಸ್ ಎಂದೇ ಕರೆಯಿಸಿಕೊಂಡಿದ್ದ  ಗೌರವ್ ಗುಪ್ತಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ನಿರ್ಗಮಿಸಿದ್ದಾರೆ.ಅಂದ್ಹಾಗೆ ಸರ್ಕಾರ ಗೌರವ್ ಗುಪ್ತಾ ಅವರನ್ನು ವರ್ಗ ಮಾಡೊಕ್ಕೆ ಕಾರಣವಾದ ಸಂಗತಿಗಳಲ್ಲಿ ಆ ಒಂದು ಪತ್ರವೂ ಕೂಡ ಪ್ರಮುಖ ರೀಸನ್ ಆಗಿತ್ತಾ ಎನ್ನುವ ಪ್ರಶ್ನೆ ಮೂಡುತ್ತಿದೆ.

ಹೌದು…ಇದು ಕಾಕತಾಳೀಯವೋ ಅಥವಾ ಸತ್ಯವೋ ಗೊತ್ತಿಲ್ಲ.ಆದರೆ ಸಾಮಾಜಿಕ ಕಾರ್ಯಕರ್ತರೊಬ್ಬರು ಸರಕಾರಕ್ಕೆ ಬರೆದ ಪತ್ರದ ಎಫೆಕ್ಟ್ ಕೂಡ ಗೌರವ್ ಗುಪ್ತಾ ವರ್ಗಾವಣೆ ವಿಚಾರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿರುವುದಂತೂ ಸತ್ಯ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತೆ..ಅಂದ್ಹಾಗೆ ಸರ್ಕಾರಕ್ಕೆ ಗೌರವ್ ಗುಪ್ತಾ ವಿರುದ್ದ ಪತ್ರ ಬರೆದು ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ,ಅಕ್ಷರಶಃ ಅವರನ್ನು ಅಸಮರ್ಥ ಕಮಿಷನರ್ ಎಂದೇ ವ್ಯಾಖ್ಯಾನಿಸುವಂಥ ಧೈರ್ಯ ತೋರಿದ ಆ ಸಾಮಾಜಿಕ ಕಾರ್ಯಕರ್ತ ಬೇರ್ಯಾರು ಅಲ್ಲ.,.ಸಾಯಿದತ್ತಾ..

ಪರಿಸ್ತಿತಿಯನ್ನು ಒಟ್ಟಾರೆಯಾಗಿ ಉಲ್ಲೇಖಿಸಿದಾಗ ಸಾಮಾಜಿಕ ಕಾರ್ಯಕರ್ತ 06-04-2022 ರಂದು ಸಾಯಿದತ್ತಾ ಬರೆದ ದೂರು ಗೌರವ್ ಗುಪ್ತಾ ವಿರುದ್ದ ಸರ್ಕಾರ ಗಂಭೀರವಾಗಿ ಕ್ರಮ ಕೈಗೊಳ್ಳೊಕ್ಕೆ ಕಾರಣವಾಗಿರಬಹುದೆಂದು ಅಂದಾಜಿಸಬಹುದೇನೋ..ಏಕೆಂದರೆ ಬಿಬಿಎಂಪಿಯ ಅಸಮರ್ಥ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರನ್ನು ಬದಲಿಸುವಂತೆ ಮುಖ್ಯಮಂತ್ರಿಗಳಿಗೆ ಸಾಯಿದತ್ತಾ ಪತ್ರವೊಂದನ್ನು ಬರೆದಿದ್ದರು.

ಆ ಪತ್ರಕ್ಕೆ ತತ್ ಕ್ಷಣ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿಗಳ ಕಚೇರಿ 11-04-2022 ರಂದು ಸಾಯಿದತ್ತಾ ಅವರಿಗೆ ಪತ್ರದ ಮುಖೇನ ದೂರು ಸಂಬಂಧ ಕೈಗೊಳ್ಳಲಾಗಿ ರುವ ಕ್ರಮದ ವಿವರಣೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಪಡೆಯುವಂತೆ ಪತ್ರ ಬರೆದಿದ್ದರು.ಈ ಕುರಿತಾದ ದಾಖಲೆ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭ್ಯವಾಗಿದೆ.

ಸಾರ್ವಜನಿಕರ ನಡುವಿದ್ದು ಅವರ ಸಮಸ್ಯೆ-ಅಹವಾಲು ಕೇಳಬೇಕಿದ್ದ ಗೌರವ್ ಗುಪ್ತಾ ಅವರಂಥ ಅಧಿಕಾರಿಯನ್ನು ಬಿಬಿಎಂಪಿಯ ಆಯಕಟ್ಟಿನ ಹುದ್ದೆನೆ ನಿಯೋಜಿಸಿದಾಗಲೇ ಸಾರ್ವಜನಿಕವಾಗಿ ಸಾಕಷ್ಟು ಆಕ್ಷೇಪ ಕೇಳಿಬಂದಿತ್ತು.ಆದರೆ ಪ್ರಭಾವಿ ಸಚಿವರೊಬ್ಬರ ಕೃಪಕಟಾಕ್ಷದಿಂದ ಮೊದಲು ಆಡಳಿತಾಧಿಕಾರಿ ನಂತರ ಮುಖ್ಯ ಆಯುಕ್ತರಾಗಿ ನೇಮಕಗೊಂಡ ಆಪಾದನೆ ಗೌರವ್ ಗುಪ್ತಾ ಮೇಲಿದೆ.

ಅಧಿಕಾರ ವಹಿಸಿಕೊಂಡ ಮೇಲೆ ಎದುರಾದ ಸಾಲು ಸಾಲು ಸಮಸ್ಯೆ-ಸವಾಲುಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಪ್ರತಿ ಹಂತಗಳಲ್ಲೂ ವಿಫಲವಾದ ಕಳಂಕ ಗೌರವ್ ಗುಪ್ತಾ ಮೇಲಿದೆ.ಆದರೂ ಸರ್ಕಾರದ ಸಚಿವರುಗಳ ಶ್ರೀರಕ್ಷೆಯಿಂದಾಗಿ ಪ್ರತಿ ಬಾರಿಯೂ ಅಪಾಯದಿಂದ ಪಾರಾಗುತ್ತಾ ಬಂದಿದ್ದರು.ಆದರೆ ಯಾವತ್ತಾದ್ರೂ ಒಂದು ದಿನ ಅದರ ಎಫೆಕ್ಟ್ ಅವರ ವೃತ್ತಿ ಮೇಲೆ ಆಗುತ್ತೆ ಎನ್ನುವ ನಂಬಿಕೆ-ವಿಶ್ವಾಸವಿಟ್ಟುಕೊಂಡಿದ್ದ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಅನೇಕ ಸಂದರ್ಭಗಳಲ್ಲಿ ಸರ್ಕಾರದ ಮಟ್ಟದಲ್ಲಿ ಪತ್ರ ಬರೆದು ಗೌರವ್ ಗುಪ್ತಾ ಅವರ ಕಾರ್ಯವೈಖರಿಯ ಬಗ್ಗೆ ಆಕ್ಷೇಪ-ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದರು.

ಗೌರವ್ ಗುಪ್ತಾ ಅವರನ್ನು ಅಸಮರ್ಥ ಮುಖ್ಯ ಆಯುಕ್ತ ಎಂದು ಉಲ್ಲೇಖಿಸುವ ಧೈರ್ಯ ತೋರಿದ ಸಾಯಿದತ್ತಾ ತಮ್ಮ ದೂರಿನಲ್ಲಿ ಆ ರೀತಿಯ ಪದ ಪ್ರಯೋಗ ಮಾಡೊಕ್ಕೆ ಕಾರಣವೇನು ಎನ್ನುವುದನ್ನೂ ಉಲ್ಲೇಖಿಸಿದ್ದರು.ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಗುಪ್ತಾ ವರ್ಗಾವಣೆಗೆ ಇದನ್ನೂ ಒಂದು ಕಾರಣವಾಗಿ ಪರಿಗಣಿಸಿದ್ದರೂ ಆಶ್ಚರ್ಯವಿಲ್ಲ..ಒಬ್ಬ ಸಾಮಾಜಿಕ ಕಾರ್ಯಕರ್ತನ ದೂರು ಒಬ್ಬ ಮುಖ್ಯ ಆಯುಕ್ತರ ವರ್ಗಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎನ್ನುವುದಾದರೆ ಸಾರ್ವಜನಿಕರ ಅಭಿಪ್ತಾಯಕ್ಕೆ ಬೆಲೆ ಕೊಡುವಂಥ ವ್ಯವಸ್ಥೆ ಇನ್ನೂ ಜೀವಂತವಾಗಿದೆಯಲ್ಲ ಎನ್ನುವ ಸಮಾಧಾನ ಮೂಡುತ್ತೆ.. ಒಂದ್ ಹ್ಯಾಟ್ಸ್ ಆಫ್ ನ್ನು ಸಾಯಿದತ್ತಾಗೆ ಹೇಳಲೇಬೇಕಾಗುತ್ತದೆ.

Spread the love
Leave A Reply

Your email address will not be published.

Flash News