SHAME TO BBMP…POOR PERFORMANCE IN SSLC.. ಶೇಮ್ ಟು ಬಿಬಿಎಂಪಿ…!!: SSLC ಪರೀಕ್ಷೆಯಲ್ಲಿ ಪಾಲಿಕೆ ಮಾನ ತೆಗೆದ “”ಭಲೇ”” ಜೋಡಿ..?!

ಹಣ ಪೋಲು ಮಾಡೊಕ್ಕೆ...ಅನಗತ್ಯ ಸ್ಕೀಮ್ ಸೃಷ್ಟಿಸೊಕ್ಕೆ.. ಇವರಿಗೆ ಟೈಮ್ ಇರುತ್ತೆ,.. ಶಾಲೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸೊಕ್ಕೆ ಪುರುಸೊತ್ತಿಲ್ಲವಂತೆ..?! ಹೀಗಾದ್ರೆ ಹೇಗೆ ಕಮಿಷನರ್ ಸಾಹೇಬ್ರೇ..

0

ಬೆಂಗಳೂರು: ನಿಜಕ್ಕೂ ಬಿಬಿಎಂಪಿಗೆ ಹೊಸದಾಗಿ ಬಂದಿರುವ ಮುಖ್ಯ ಆಯುಕ್ತರಿಗೆ ಬಿಬಿಎಂಪಿ ಮಾನ ಮರ್ಯಾದೆ ಉಳಿಸಬೇಕು ಎನ್ನುವ ಕಾಳಜಿ ಇದ್ದರೆ ಮೊದಲು ಶಿಕ್ಷಣ ವಿಭಾಗಕ್ಕೆ ಕಂಟಕಪ್ರಾಯದಂದಿರುವ ಈ ಜೋಡಿಯನ್ನು ತೊಲಗಿಸುವ ಕೆಲಸ ಮಾಡಬೇಕು,..ಹೀಗೊಂದು ಕಳಕಳಿಯ ಮನವಿ ಮಾಡಿಕೊಳ್ಳುತ್ತಿರೋದು ನಾವಲ್ಲ. ಬೆಂಗಳೂರಿನ ಜನ.ಇದಕ್ಕೆ ಕಾರಣ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬಿಬಿಎಂಪಿ ಶಾಲೆಗಳ ಕಳಪೆ ಹಾಗೂ ನೀರಸ ಫಲಿತಾಂಶ.

ಕಳೆದ ಬಾರಿ ಒಂದು ಶಾಲೆಯನ್ನು ಬಿಟ್ಟರೆ ಉಳಿದೆಲ್ಲಾ ಶಾಲೆಗಳ ಫಲಿತಾಂಶ ಶೇಕಡಾ 100 ರಷ್ಟಿತ್ತು.ಈ ಬಾರಿ ಕಂಪ್ಲೀಟ್ ಉಲ್ಟಾ..ಒಂದು ಶಾಲೆ ಮಾತ್ರ ಶೇಕಡಾ 100 ಫಲಿತಾಂಶ ಪಡೆದಿದೆ.. .. ಶೇಕಡಾ 50ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ 11. ಮರ್ಫಿಟೌನ್ ಹಾಗೂ ಕೆಜಿನಗರ ಶಾಲೆಗಳಿಗೆ ಶೂನ್ಯ ಫಲಿತಾಂಶ
ಕಳೆದ ಬಾರಿ ಒಂದು ಶಾಲೆಯನ್ನು ಬಿಟ್ಟರೆ ಉಳಿದೆಲ್ಲಾ ಶಾಲೆಗಳ ಫಲಿತಾಂಶ ಶೇಕಡಾ 100 ರಷ್ಟಿತ್ತು.ಈ ಬಾರಿ ಕಂಪ್ಲೀಟ್ ಉಲ್ಟಾ..ಒಂದು ಶಾಲೆ ಮಾತ್ರ ಶೇಕಡಾ 100 ಫಲಿತಾಂಶ ಪಡೆದಿದೆ.. .. ಶೇಕಡಾ 50ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ 11. ಮರ್ಫಿಟೌನ್ ಹಾಗೂ ಕೆಜಿನಗರ ಶಾಲೆಗಳಿಗೆ ಶೂನ್ಯ ಫಲಿತಾಂಶ

ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಬಿಬಿಎಂಪಿ ಪಾಲಿಗೆ ಅತ್ಯಂತ ನಾಚಿಕೆಗೇಡು ಹಾಗೂ ಮುಜುಗರ ತರುವ ವಿಚಾರವೇ ಸರಿ.ಶಾಲೆಗಳ ವಿದ್ಯಾರ್ಥಿ ಗಳ ಪ್ರದರ್ಶನದ ಬಗ್ಗೆ ಆಕ್ಷೇಪದ ಮಾತುಗಳು ಕೇಳಿಬರುತ್ತಿದ್ದರೂ ಇದರ ಹೊಣೆಯನ್ನು ಅವರ ಮೇಲೆ ಹಾಕೊಕ್ಕೆ ಸಾಧ್ಯವೇ ಇಲ್ಲ.ಗುಣಮಟ್ಟದ ಶಿಕ್ಷಕರ ಮೂಲಕ ಉತ್ತಮವಾದ ಶಿಕ್ಷಣ ನೀಡಬೇಕಿರುವ ಹೊಣೆ ಬಿಬಿಎಂಪಿ ಶಿಕ್ಷಣ ಇಲಾಖೆ ಮೇಲಿದೆ.ಆದ್ರೆ ಇಲಾಖೆಯನ್ನು ನೋಡಿಕೊಳ್ಳುವ ಸಹಾಯಕ ಆಯುಕ್ತ ಉಮೇಶ್ ಮತ್ತು ಅವರ ಗಳಸ್ಯಕಂಟಸ್ಯದಂತಿರುವ ಜೋಡಿ ನಿರ್ದೆಶಕ ಹನುಮಂತಪ್ಪ ಅವರನ್ನೇ ಇದೆಲ್ಲಕ್ಕೂ ಹೊಣೆ ಮಾಡಬೇಕಾಗುತ್ತದೆ ಎನ್ನುವುದು ಬೆಂಗಳೂರಿಗರ ಅಭಿಪ್ರಾಯ.

ಅಂದ್ಹಾಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 33 ಶಾಲೆಗಳಿವೆ.1991 ವಿದ್ಯಾರ್ಥಿಗಳು ಪರೀಕ್ಚೆಗೆ ಹಾಜರಾಗಿದ್ದರು.ಈ ಪೈಕಿ 1419 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನುತ್ತೀರ್ಣರಾದವರು 571.ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರು ಕೇವಲ 117 ವಿದ್ಯಾರ್ಥಿಗಳು.ಕಳೆದ ಬಾರಿ ಬಂದಿದ್ದ ಫಲಿತಾಂಶ ಶೇಕಡಾ 99.94.ಆದರೆ ಈ ಬಾರಿ ಬಂದಿರೋದು ಕೇವಲ ಶೇಕಡಾ 71.27.ಅದು ಕೂಡ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ ಕೊಡುವ ವ್ಯವಸ್ಥೆ ಜಾರಿಯಲ್ಲಿದ್ದುದ್ದರಿಂದ ಇಷ್ಟೊಂದು ಪ್ರಮಾಣದ ಫಲಿತಾಂಶ ಬಂದಿದೆ.

ನೀವು ನಂಬೊಲ್ಲ ಕಳೆದ ಬಾರಿ ಒಂದು ಶಾಲೆ( ಸಿಎಚ್ ಎಸ್ ಮಲ್ಲೇಶ್ವರಂ-ಕೋದಂಡರಾಮನಗರ)ಯನ್ನು ಬಿಟ್ಟರೆ 32 ಶಾಲೆಗಳ ರಿಸಲ್ಟ್ ನೂರಕ್ಕೆ ನೂರು ಬಂದಿತ್ತು.ಆದರೆ ಈ ಬಾರಿ ಕಂಪ್ಲೀಟ್ ಉಲ್ಟಾಪಲ್ಟಾ.ಸಿಎಚ್ ಎಸ್ ಶಾಂತಿನಗರ ಶಾಲೆಯನ್ನು ಬಿಟ್ಟರೆ ಉಳಿದೆಲ್ಲಾ ಶಾಲೆಗಳ ಫಲಿತಾಂಶ 90ಕ್ಕಿಂತ ಕಡಿಮೆ ಇದೆ ಎಂದ್ರೆ ನಂಬಲೇಬೇಕು,ಇದಕ್ಕೆ ಕೊರೊನಾ..ಲಾಕ್ ಡೌನ್..ಮಕ್ಕಳ ಆಸಕ್ತಿ ಹಾಗೂ ಕಲಿಕೆ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತೆನ್ನುವ ಕಾರಣ ಕೊಡಬಹುದು.

ಆದರೆ ಅದೇ ಕಾರಣದಿಂದಲೇ ಫೇಲಾಗುವ ಭೀತಿಯಲ್ಲಿರುವ ಮಕ್ಕಳನ್ನು ಗ್ರೇಸ್ ಮಾರ್ಕ್ಸ್ ಕೊಟ್ಟು ಪಾಸು ಮಾಡುವ ವ್ಯವಸ್ಥೆಯನ್ನು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಮಾಡಿತ್ತೆನ್ನುವುದನ್ನು ಮರೆಯಬಾರದು.ಪರಿಸ್ತಿತಿ ಹೀಗಿದ್ದ ಹೊರತಾಗ್ಯೂ ಎಸ್ ಎಸ್ ಎಲ್ ಸಿ ರಿಸಲ್ಟ್ ಇಷ್ಟೊಂದು ನಿರಾಶದಾಯಕವಾಗಿ ಬರುತ್ತೆ ಎಂದರೆ ಅದಕ್ಕೆ ಮಕ್ಕಳಂತೂ ಕಾರಣ ಅಲ್ಲವೇ ಅಲ್ಲ..

ಬಿಬಿಎಂಪಿಯಲ್ಲಿ ಶಿಕ್ಷಣ ಇಲಾಖೆಯ ಉಸ್ತುವಾರಿ ನೋಡಿಕೊಳ್ಳುವ ಸಹಾಯಕಆಯುಕ್ತ ಉಮೇಶ್ ಮತ್ತು ನಿರ್ದೆಶಕ ಹನುಮಂತಪ್ಪ ಜೋಡಿ ಎನ್ನೋದು ಮೇಲ್ನೋ ಟಕ್ಕೆ ಗೊತ್ತಾಗುತ್ತೆ. ಭೈರವೇಶ್ವರ ನಗರದ ಶಾಲೆ ಶೇಕಡಾ 91.52 ಮತ್ತು ಹೇರೊಹಳ್ಳಿ ಶಾಲೆ ಶೇಕಡಾ 90.12 ಫಲಿತಾಂಶ ಪಡೆದಿರುವುದೇ ದೊಡ್ಡ ಸಾಧನೆ ಎನ್ನುವಂತಾ ಗಿದೆ.ಇನ್ನು ಕ್ಲೀವ್ ಲ್ಯಾಂಡ್ ಟೌನ್(ಶೇಕಡಾ 88.27),ಜಯಮಹಲ್ ಶಾಲೆ(ಶೇಕಡಾ 87.50),ಲಗ್ಗೆರೆ ಶಾಲೆ (ಶೇಕಡಾ 85.34), ಕಾಟನ್ ಪೇಟೆ ಶಾಲೆ(ಶೇಕಡಾ 85) ಪಾದರಾಯನಪುರ ಶಾಲೆ(ಶೇಕಡಾ 82.96),ವಿಜಯನಗರದ ಶಾಲೆ ಶೇಕಡಾ 80 ಪಡೆದಿರುವುದೇ ಬಿಬಿಎಪಿಯ ಅತೀ ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳಬೇಕಷ್ಟೆ..

ಶೇಕಡಾ 50ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ 11 ಎಂದ್ರೆ ನೀವೇ ಆಲೋಚಿಸಿ ಬಿಬಿಎಂಪಿ ಶಾಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಈ ಇಬ್ಬರು ಅಧಿಕಾರಿಗಳು ಯಾವ್ ಹಂತಕ್ಕೆ ತಂದುನಿಲ್ಲಿಸಿದ್ದಾರೆ ಎನ್ನುವುದನ್ನು.ಇದಕ್ಕಿಂತ ಶೋಚನೀಯ ಹಾಗೂ ನಾಚಿಕೆಗೇಡಿನ ವಿಷಯ ಎಂದ್ರೆ ಮರ್ಫಿಟೌನ್ ಹಾಗೂ ಕೆಜಿನಗರ ಶಾಲೆಗಳಿಗೆ ಶೂನ್ಯ ಫಲಿತಾಂಶ ಬಂದಿದೆ.ಅಂದ್ಹಾಗೆ ಮರ್ಫಿಟೌನ್ ಶಾಲೆಯಲ್ಲಿ 19 ವಿದ್ಯಾರ್ಥಿಗಳು ಮತ್ತು ಕೆಜಿನಗರ ಶಾಲೆಯಲ್ಲಿ 2 ಮಕ್ಕಳು ಪರೀಕ್ಷೆ ಬರೆದಿದ್ದರು.21 ರಲ್ಲಿ 21 ವಿದ್ಯಾರ್ಥಿಗಳು ಫೇಲ್ ಆಗುವ ಮೂಲಕ ಪ್ರಪಾತಕ್ಕೆ ಇಳಿದಿರುವ ಶೈಕ್ಷಣಿಕ ಗುಣಮಟ್ಟಕ್ಕೆ ಕೈಗನ್ನಡಿ ಹಿಡಿದಿದ್ದಾರೆ.

ಕಳೆದ ಬಾರಿಯ ಫಲಿತಾಂಶಗಳೆಲ್ಲಾ ಚೆನ್ನಾಗಿ ಬಂದಿತ್ತಲ್ಲ ಎಂದು ವಾದಿಸುವ,ತಮ್ಮ ವಾದ ಸಮರ್ಥಿಸಿಕೊಳ್ಳಲಿಕ್ಕೂ ಈ ಇಬ್ಬರು ಅಧಿಕಾರಿಗಳು ಹಿಂದೆ ಮುಂದೆ ನೋಡುವುದಿಲ್ಲ.ಏಕೆಂದರೆ ಇವರು 2017-18 ರಲ್ಲಿ ಶೇಕಡಾ 51.92, 2018-19 ರಲ್ಲಿ ಶೇಕಡಾ 52.24, 2019-20 ರಲ್ಲಿ ಶೇಕಡಾ 50.16 ರಷ್ಟು ಫಲಿತಾಂಶ ಬಂದಿತ್ತು.ಆದರೆ ಅದರ ಗುಣಮಟ್ಟ ಕಳೆದ ವರ್ಷ ಸುಧಾರಣೆಯಾಗಿತ್ತು.ಎಲ್ಲೋ ಇದ್ದ ಫಲಿತಾಂಶವನ್ನು ಎಲ್ಲಿಗೋ ಕೊಂಡೊಯ್ದಿದ್ದೆವು,ಆದ್ರೆ ದುರಾದೃಷ್ಟವಶಾತ್ ಈ ಬಾರಿ ಕೊರೊನಾ-ಲಾಕ್ ಡೌನ್ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲ ಎಂದು ತಪ್ಪನ್ನು ಅವುಗಳ ಮೇಲ್ಹಾಕಿ ಜವಾಬ್ದಾರಿಯಿಂದ ನುಣುಚಿಕೊಳ್ಳೊಕ್ಕೆ ಮುಂದಾಗಬಹುದೆನ್ನುವ ಮಾತುಗಳಿವೆ.

ಆದ್ರೆ ಈ ಬಾರಿ ಫಲಿತಾಂಶದಲ್ಲಿ ಹೊಂದಾಣಿಕ ಮಾಡಿಕೊಂಡಷ್ಟು ಸರ್ಕಾರ ಮತ್ತು ಶಿಕ್ಷಣ ಇಲಾಖೆ ಹಿಂದೆಂದೂ ಮಾಡಿರಲಿಲ್ಲ..ಫೇಲಾಗುವ ವಿದ್ಯಾರ್ಥಿಗಳೆಲ್ಲಾ ಈ ಬಾರಿ ಗ್ರೇಸ್ ಮಾರ್ಕ್ಸ್ಸ್ ಪಡೆದು ಪಾಸಾಗಿದ್ದಾರೆ.ಅಂಥಾ ಅವಕಾಶ ಬಿಬಿಎಂಪಿ ಮಕ್ಕಳಿಗೂ ಇತ್ತಲ್ವಾ..ಅಂಥದ್ದೊಂದು ಅವಕಾಶ ಬಳಸಿಕೊಂಡು ಮಕ್ಕಳನ್ನು ತರಬೇತುಗೊಳಿ ಸಬಹುದಿತ್ತಲ್ಲ.. ಆ ನಿಟ್ಟಿನಲ್ಲಿ ಏಕೆ ಪ್ರಯತ್ನ ಮಾಡಲಿಲ್ಲ ಎನ್ನುವುದು ಶಿಕ್ಷಣ ತಜ್ಞ ಆರಾಧ್ಯ ಅವರ ಪ್ರಶ್ನೆ.?

 

ಕೊರೊನಾ, ಲಾಕ್ ಡೌನ್..ಇಂಥಾ ಕಾರಣಗಳನ್ನು ಮುಂದೊಡ್ಡಿ ಈ ಬಾರಿ ಎಸ್ ಎಸ್ ಎಲ್ ಸಿ ರಿಸಲ್ಟ್ ಕಡಿಮೆ ಯಾಯ್ತು ಎಂದು ನೂತನವಾಗಿ ಬಂದಿರುವ ಕಮಿಷನರ್ ತುಷಾರ್ ಗಿರಿನಾಥ್ ಅವರ ಕಿವಿಗೆ ಲಾಲ್ ಭಾಗ್ ಇಡುವ ಕೆಲಸವನ್ನು ಉಮೇಶ್-ಹನುಮಂತಪ್ಪ ಜೋಡಿ  ಮಾಡುತ್ತಿದೆ.ಕಮಿಷನರ್ ಸಾಹೇಬ್ರು ಕರೆ ಯುವ ಮೊದಲೇ ರಿಸಲ್ಟ್ ಶೀಟ್ ಇಟ್ಕೊಂಡು ಅವರ ಬಳಿ ಹೋಗಿ ನೆವಗಳನ್ನು ಹೇಳುವ ಕೆಲಸ ಮಾಡಿದೆ. ಬಿಬಿಎಂಪಿ ಶಾಲೆಗಳು ಕೊರೊನಾದಂಥ ಪ್ಯಾನಿಕ್ ಸನ್ನಿವೇಶದಲ್ಲೂ ಇಂಥಾ ರಿಸಲ್ಟ್ ಪಡೆದಿರುವುದು ಸಾಧನೆ ಸಾರ್ ಎಂದು ಹಾಡಿ ಹೊಗಳಿದ್ದಾರೆ.ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಹೇಳಿದ್ದಾರೆ.ಶಿಕ್ಷಣ ವ್ಯವಸ್ಥೆಯ ಪೂರ್ವಾಪರ ತಿಳಿಯದ ಕಮಿಷನರ್ ಸಾಹೇಬ್ರು. .ಹೌದಾ ಎಂದು ಹೇಳಿ ಎಲ್ಲರಿಗೂ 25 ಸಾವಿರ ಪ್ರೋತ್ಸಾಹಕ ಬಹುಮಾನ ಘೋಷಿಸಿದ್ದಾರೆ. ಆದರೆ..ಕಳೆದ ಬಾರಿ ಬಂದ ಶೇ.99 ರಷ್ಟು ಫಲಿತಾಂಶಕ್ಕೆ ಕಂಪೇರ್ ಮಾಡಿದ್ರೆ ಈ ಬಾರಿಯ ಫಲಿತಾಂಶ ಅತ್ಯಂತ ನಿರಾಶಾದಾಯಕ ಎನ್ನುವ ಸತ್ಯವನ್ನು ಮನದಟ್ಟು ಮಾಡಿಕೊಡುವವರು ಯಾರು..? ಎನ್ನುವುದೇ ಪ್ರಶ್ನೆ..  ತುಷಾರ್ ಗಿರಿನಾಥ್ ಸಾಹೇಬ್ರೇ ಎಲ್ಲವನ್ನು ನೀವು ಸಲೀಸಾಗಿ ನಂಬ್ತಾ ಹೋದ್ರೆ  ನಿಮ್ಮ ಮಾನ ವನ್ನು ಪಾಲಿಕೆ ಅಧಿಕಾರಿಗಳು ಹರಾಜಿಗಿಟ್ಟುಬಿಡೋದು ಗ್ಯಾರಂಟಿ..

-ಸಾಯಿದತ್ತಾ-ಸಾಮಾಜಿಕ ಕಾರ್ಯಕರ್ತ

ಸಹಾಯಕ ಆಯುಕ್ತ ಉಮೇಶ್
ಸಹಾಯಕ ಆಯುಕ್ತ ಉಮೇಶ್
ನಿರ್ದೇಶಕ ಹನುಮಂತಪ್ಪ
ನಿರ್ದೇಶಕ ಹನುಮಂತಪ್ಪ

ಬಿಬಿಎಂಪಿ ಶಾಲೆಗಳ ಗುಣಮಟ್ಟ ಹಾಗೂ ಅಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರ ಬುದ್ಧಿಮತ್ತೆಯನ್ನು ಯಾರಾದ್ರೂ ಟೆಸ್ಟ್ ಮಾಡಿದ್ರೆ ಅವರಿಗೆ ಆಶ್ವರ್ಯ-ನಾಚಿಕೆ-ಮುಜುಗರ ಆಗೋದು ಗ್ಯಾರಂಟಿ.ಏಕೆಂದ್ರೆ ಬಹುತೇಕ ಮಕ್ಕಳಿಗೆ ಪಠ್ಯದ ಬಗ್ಗೆ ಆಳವಾದ ಅರಿವು ಎನ್ನುವುದು ಹಾಳಾಗಿ ಹೋಗಲಿ ಮೂಲಭೂತವಾದ ಮಾಹಿತಿಯೇ ಸಿಗುತ್ತಿಲ್ಲ..ಶಿಕ್ಷಕರಿಗೆ ಆಳವಾದ ಜ್ಞಾನ-ವಿಷಯ ಪರಿಣಿತಿ ಇದ್ದರೆ ತಾನೇ ಮಕ್ಕಳಿಗೆ ಹೇಳಿಕೊಡುವುದು..ಅದೇ ಅವರಿಗಿಲ್ಲದಿರುವಾಗ ಮಕ್ಕಳಿಗ್ಹೇಗೆ ಹೇಳಿಕೊಡುವುದಕ್ಕೆ ಸಾಧ್ಯ..ಇದು ಸಹಜವಾಗೇ ಬಿಬಿಎಂಪಿಯ ಒಟ್ಟಾರೆ ಶೈಕ್ಷಣಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರದೆ ಇರೊಕ್ಕೆ ಸಾಧ್ಯವೇ ಇಲ್ಲ.

ಬಿಬಿಎಂಪಿ ಶಾಲೆಗಳ ಎಸ್ ಎಸ್ ಎಲ್ ಸಿ ಫಲಿತಾಂಶ ಶಿಕ್ಷಣ ಇಲಾಖೆಯ ಅವ್ಯವಸ್ಥೆ, ಅಧಿಕಾರಿಗಳ ದುರ್ನಡತೆ,ಉಡಾಫೆ, ದುರಾಡಳಿತ, ಅಂದಾದರ್ಬಾರ್,ಕಿಕ್ ಬ್ಯಾಕ್..?!  ಕಮಿಷನ್ ನ ಕರಾಳ ಮುಖಕ್ಕೆ ಕೈಗನ್ನಡಿ ಹಿಡಿದಂತಿದೆ.

ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ಹೊಣೆ ಹೊತ್ತು ಜವಾಬ್ದಾರಿಯುತ ಸ್ಥಾನದಲ್ಲಿ ಕೂತಿರುವವರೇ ಸ್ವಹಿತಾಸಕ್ತಿಗೆ ಇಡೀ ವ್ಯವಸ್ಥೆಯನ್ನು ಬಲಿಗೊಟ್ಟರೆ ಅಮೂಲಾಗ್ರ ಬದಲಾವಣೆ-ಸುಧಾರಣೆ ನಿರೀಕ್ಷಿಸುವುದು ಹೇಗೆ ಸಾಧ್ಯ ಎಂದು ಜವಾಬ್ದಾರಿಯುತ ನಾಗರಿಕರು ಪ್ರಶ್ನಿಸಲಾರಂಭಿಸಿದ್ದಾರೆ.  ಮುಖ್ಯ ಆಯುಕ್ತರಾಗಿ ಬಂದಿರುವ ತುಷಾರ್ ಗಿರಿನಾಥ್ ಹಳ್ಳ ಹಿಡಿಯುತ್ತಿರುವ ಬಿಬಿಎಂಪಿ ಶಿಕ್ಷಣ ವ್ಯವಸ್ಥೆಗೆ ಸಾಣೆ ಹಿಡಿಯುವ ಕೆಲಸ ಮಾಡಬೇಕಿದೆ.. ಇಲಾಖೆಯಲ್ಲಿರುವ ಅಸಮರ್ಥರನ್ನು ಕತ್ತಿಡಿದು ನೂಕುವುದು ಒಳ್ಳೇದು..ಈ ನಿಟ್ಟಿನಲ್ಲಿ ಕೆಲಸ ಮಾಡಬೇಕೆನ್ನುವುದು ನಾಗರಿಕರ ಒತ್ತಾಯ.

Spread the love
Leave A Reply

Your email address will not be published.

Flash News