ರೈತ ನಾಯಕ ಕೋಡಿಹಳ್ಳಿ “ಸ್ಟಿಂಗ್” ಹಿಂದೆ ಯಾರ “ಕೈವಾಡ”.?!.ಅವರ “ಜತೆ”ಗಿದ್ದು ಈಗ “ದೂರ” ವಾಗಿರುವವರ ಮೇಲೆಯೇ “ಗುಮಾನಿ”..!! 35 ಕೋಟಿ ಡೀಲ್ ವಿಚಾರದಲ್ಲಿ ಕೋಡಿಹಳ್ಳಿ ಒಬ್ರೇ ತಪ್ಪಿತಸ್ಥರಾ..?!
ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧದ ರಹಸ್ಯ ಕಾರ್ಯಾಚರಣೆ ಸರ್ಕಾರದ ಪ್ಲ್ಯಾನಾ..ಕೋಡಿಹಳ್ಳಿ ಹಣ ಡಿಮ್ಯಾಂಡ್ ಮಾಡುತ್ತಿರುವ ವಿಚಾರವನ್ನು ಸಾರಿಗೆ ಸಚಿವ ಸವದಿ ಅಂದೇ ಕಾರ್ಮಿಕರಿಗೆ ಹೇಳಿ ಎಚ್ಚರಿಸಿದ್ದು ನಿಜನಾ..?


ಬೆಂಗಳೂರು:ಸಾರಿಗೆ ಮುಖಂಡರೆನಿಸಿಕೊಂಡವರ ಮುಖವಾಡ ಕಳಚಿಬಿದ್ದಿದೆ.ಅಮಾಯಕ ಸಾರಿಗೆ ಕಾರ್ಮಿಕರ ಬದುಕಿನೊಂದಿಗೆ ಚೆಲ್ಲಾಟವಾಡಿ ಅವರನ್ನು ಅಕ್ಷರಶಃ ಬೀದಿಗೆ ತಂದುನಿಲ್ಲಿಸಿದ್ದ ನಾಯಕರುಗಳ “ಖೊಟ್ಟಿ” ನೀಯತ್ತು ಜಗಜ್ಜಾಹೀರಾಗಿದೆ.ಇವರನ್ನು ನಂಬಿ ಅನ್ನ ಕೊಡುವ ಸಂಸ್ಥೆಯನ್ನೇ ಎದುರಾಕಿಕೊಂಡು ಅವರ ದ್ವೇಷ ಕಟ್ಟಿಕೊಂಡು ಹೋರಾಟಕ್ಕಿಳಿದ ಅಮಾಯಕ-ನಿಷ್ಪಾಪಿ ಕಾರ್ಮಿಕರ ಬದುಕುಗಳನ್ನು ಬರ್ಬಾದ್ ಮಾಡಿದ ನಾಯಕರುಗಳಿಗೆ ಧಿಕ್ಕಾರ ಹೇಳಲೇಬೇಕು.
ಖಾಸಗಿ ಸುದ್ದಿ ವಾಹಿನಿ ಪವರ್ ನಲ್ಲಿ ಪ್ರಸಾರವಾದ ಸ್ಟಿಂಗ್ ಆಪರೇಷನ್ ಕೋಡಿಹಳ್ಳಿ ಚಂದ್ರಶೇಖರ್ ಅವರ ಅಸಲಿಯತ್ತನ್ನು ಬಯಲು ಮಾಡಿದೆ( ಕೆಲವು ಮೂಲಗಳ ಪ್ರಕಾರ ಸರ್ಕಾರದ ಮಟ್ಟದಿಂದಲೇ ಪೂರೈಕೆಯಾದ ವೀಡಿಯೋ ಇದೆನ್ನಲಾಗುತ್ತಿದೆ).ಸಂಬಂಧವೇ ಪಡದ ಸಾರಿಗೆ ಕಾರ್ಮಿಕರ ವಿಷಯದಲ್ಲಿ ಅನಗತ್ಯವಾಗಿ ಮೂಗು ತೂರಿಸಿ ಕೊನೆಗೆ ಅನಂತ ಸುಬ್ಬರಾವ್ ಅವರಂಥ ಹಿರಿಯ ಜೀವವನ್ನೇ ಅವಮಾ ನಿಸಿ,ಅವರನ್ನು ಸಾರಿಗೆ ಕಾರ್ಮಿಕರ ದೃಷ್ಟಿಯಲ್ಲಿ ವಿಲನ್ ಮಾಡಿದ ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ಹೋರಾಟದ ಅಖಾಡಕ್ಕೆ ಧುಮುಕುವುದರ ಹಿಂದಿನ ಉದ್ದೇಶ ಇದಾಗಿತ್ತಾ..ಥೂ..?! ಎಂದು ಕಾರ್ಮಿಕರು ಹಿಡಿಶಾಪ ಹಾಕುವಂತಾಗಿದೆ.
ಇನ್ ಫ್ಯಾಕ್ಟ್ ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ಕಾರ್ಮಿಕರ ಹೋರಾಟಕ್ಕೆ ಧುಮುಕಿದಾಗಲೇ ಅನೇಕ ರಲ್ಲಿ ಸಂದೇಹವಿತ್ತು..ಪ್ರಶ್ನೆಗಳಿದ್ವು.ಆದ್ರೆ ಚಂದ್ರಶೇಖರ್ ಅಲಿಯಾಸ್ ಚಂದ್ರು ಮಾತಿಗೆ ಕಟ್ಟುಬಿದ್ದು ಕಾರ್ಮಿಕರು ಕೋಡಿಹಳ್ಳಿಯನ್ನು ಅನಿವಾರ್ಯವಾಗಿಯಾದ್ರೂ ಒಪ್ಪಬೇಕಾಯಿತು( ಚಂದ್ರಶೇಖರ್ ಅವರನ್ನು ತನಿಖೆಗೊಳಪಡಿಸಿದ್ರೆ ಬಹುಷಃ ಈ ಸ್ಟಿಂಗ್ ನ ಹಿಂದೆ ಇದೆ ಎನ್ನಲಾಗುತ್ತಿರುವ ಕೈವಾಡ ಬಯಲಾಗಬಹುದೇನೋ ಎನ್ನುವುದು ಅನೇಕ ಕಾರ್ಮಿಕರ ಅಭಿಪ್ರಾಯ).ಕೋಡಿಹಳ್ಳಿ ಹೇಳಿದ ಮಾತಿಗೆ ತಲೆ ಅಲ್ಲಾಡಿಸುತ್ತಾ,ಅವರು ಹೇಳಿದಂತೆಯೇ ಮಾಡಿದ ತಪ್ಪಿಗೆ ಕೊನೆಗೆ ಕಾರ್ಮಿಕರಿಗೆ ಸಿಕ್ಕಿದ್ದು ಕೇಂದ್ರ ಸರ್ಕಾರಿ ನೌಕರಿಯ ಭಾಗ್ಯವಲ್ಲ,ಬದಲಿಗೆ ಸಸ್ಪೆಂಡ್-ಡಿಸ್ಮಿಸ್ ಭಾಗ್ಯ.
ಕೋಡಿಹಳ್ಳಿ ಅವರನ್ನು ನಂಬಿದ್ರೆ ನಿಮಗೆ ಚಿಪ್ಪೆ ಗತಿ ಎಂದು ನಿಗಮಗಳಲ್ಲಿರುವ ಅಧಿಕಾರಿಗಳೇ ಕಾರ್ಮಿಕರಿಗೆ ಬುದ್ದಿ ಹೇಳಿದ್ದುಂಟು.ಹೋರಾಟಗಳ ಹಿನ್ನಲೆ ಇರುವ, ಎಲ್ಲಕ್ಕಿಂತ ಹೆಚ್ಚಾಗಿ ಕೋಡಿಹಳ್ಳಿ ಅವರ “ಯೂಟರ್ನ್” ಹೋರಾಟಗಳ ಬಗ್ಗೆ ಸ್ಪಷ್ಟ ಮಾಹಿತಿ ಇರುವ ಅನಂತ ಸುಬ್ಬರಾವ್ ಅವರಂಥ ಹಿರಿಯರು ಕಾರ್ಮಿಕರನ್ನು ಮನವೊಲಿಸುವ ಕೆಲಸ ಮಾಡಿದ್ರೂ ಕೋಡಿಹಳ್ಳಿ ಹಾಗೂ ಚಂದ್ರು ಅವರ ಸಾರಿಗೆ ಕೂಟ ಕಾರ್ಮಿಕರ ತಲೆಯಲ್ಲಿ ಬೇಡದ ವಿಚಾರಗಳನ್ನು ತುಂಬಿ ಬದುಕುಗಳು ಬೀದಿಗೆ ಬರುವಂತೆ ಮಾಡಿದ್ದಕ್ಕೆ ಘಟನೆಗಳೇ ಸಾಕ್ಷಿ ಇವೆ.
ಹತ್ತಲವು ಬೇಡಿಕೆಗಳ ಪೈಕಿ ಕೆಲವೊಂದು ಈಡೇರಿಸುವ ಚೌಕಾಸಿ ಮಾತುಕತೆಗೆ ಕೋಡಿಹಳ್ಳಿಯಾದಿಯಾಗಿ ಅನೇಕ ಮುಖಂಡರನ್ನು ಕರೆದಾಗಲೂ ಖುದ್ದು ಅವರೇ ಅದಕ್ಕೆ ಅವಕಾಶ ಕೊಡಲಿಲ್ಲ.ಸರ್ಕಾರದ ಮುಂದೆ ಮಂಡಿಯೂರುವುದಿಲ್ಲ ಎಂದು ರಚ್ಚೆ ಹಿಡಿದಿದ್ದರು.ಸರ್ಕಾರ ಪರ್ಸನಲ್ಲಾಗಿ ಕರೆದಾಗಲೂ ಅದಕ್ಕೆ ಸೊಪ್ಪಾಕಲಿಲ್ಲ..ಯಡಿಯೂರಪ್ಪಯಾದಿಯಾಗಿ ಅನೇಕರು ಮನವೊಲಿಸುವ ಕೆಲಸ ಮಾಡಿದ್ರು ಒಪ್ಪಲಿ ಲ್ಲ. ಸೌಹಾರ್ದಯುತ ಮಾತುಕತೆ ಮೂಲಕ ಬಗೆಹರಿಯಬಹುದಾಗಿದ್ದ ಸಮಸ್ಯೆಯನ್ನು ಜಠಿಲಗೊಳಿಸಿದ್ದೇ ಈ ಕೋಡಿಹಳ್ಳಿ ಎನ್ನುವ ಮಾತಿದೆ.ಇದನ್ನು ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಿತ್ತು.ಕೋಡಿಹಳ್ಳಿ ಚಂದ್ರಶೇಖರ್ ಬಗ್ಗೆ ಇದ್ದ ಗೌರವಯುತ ಭಾವನೆ ಅನೇಕರಿಗೆ ಇಲ್ಲವಾಗದೆ ಹೋಗಿದ್ದು ಕೂಡ ಸತ್ಯನೇ..

ಈ ನಡುವೆ ಸಾರಿಗೆ ಸಚಿವ ಲಕ್ಷ್ಮಣ್ ಸವದಿ,ತಮ್ಮನ್ಜು ಭೇಟಿಯಾದ ಸಾರಿಗೆ ಕಾರ್ಮಿಕರಿಗೆ ತಿಳಿ ಹೇಳುವಾಗ ಕೋಡಿಹಳ್ಳಿ ನಂಬಿಕೊಂಡು ಹೋಗ್ಬೇಡಿ.ಹಾಳಾಗಿ ಹೋಗ್ತಿರ..ನನ್ ಮಾತ್ ಕೇಳಿ ಸರ್ಕಾರ ನಿಮ್ಮ ಜತೆ ಸದಾ ಇದೆ.ಸರ್ಕಾರಿ ನೌಕರಿ ಮಾನ್ಯತೆ ಬಿಟ್ಟು ಉಳಿದೆಲ್ಲಾ ಬೇಡಿಕೆ ಈಡೇರಿಸಲು ನಾವ್ ಸಿದ್ಧ..ಸುಮ್ಮನೆ ಕೆಲಸಕ್ಕೆ ಹಾಜರಾಗಿ ಎಂದು ತಿಳಿ ಹೇಳಿದ್ರು.ಆದ್ರೆ ಕೋಡಿಹಳ್ಳಿ ಅವರ ಮೇಲಿನ ಕುರುಡು ಅಭಿಮಾನವನ್ನು ತಲೆ-ಮನಸಿಗೆ ಹಚ್ಚಿಸಿಕೊಂಡಿದ್ದ ಸಾರಿಗೆ ಕಾರ್ಮಿಕರು ಮಾತ್ರ ಸುತಾರಾಂ ಒಪ್ಪಲಿಲ್ಲ..ಆಗಲೇ ಸವದಿ ಅವರು ಕೋಡಿಹಳ್ಳಿ ಪ್ಲ್ಯಾನ್ ಬಗ್ಗೆ ಸೂಕ್ಷ್ಮವಾಗಿ ಹೇಳಿದ್ದರಂತೆ.
ಕೋಡಿಹಳ್ಳಿ ಸ್ಟ್ರೈಕ್ ನ್ನು ವಾಪಸ್ ಪಡೆಯೊಕ್ಕೆ ಹಣವನ್ನು ಡಿಮ್ಯಾಂಡ್ ಮಾಡ್ತಿದ್ದಾರೆನ್ನುವ ಸುದ್ದಿ ಇದೆ.ಅದು ಹಲವಾರು ಕೋಟಿಗಳಷ್ಟು.ಅಷ್ಟನ್ನು ಕೊಟ್ಟರೆ ಸ್ಟ್ರೈಕ್ ವಾಪಸ್ ಪಡೆಯುತ್ತಾರಂತೆ.ನಿಮ್ಮ ತಲೆ ತೋರಿಸಿ ಹಣ ಮಾಡಿಕೊಳ್ಳುವ ಪ್ಲ್ಯಾನ್ ಬಿಟ್ಟರೆ ಅವರಿಗೆ ನಿಮ್ಮ ಬಗ್ಗೆ ಯಾವುದೇ ಕಾಳಜಿಯಾಗಲಿ,ಕಳಕಳಿಯಾಗಲಿ ಇಲ್ಲ..ಅರ್ಥ ಮಾಡಿಕೊಳ್ಳಿ ಎಂದಿದ್ದರಂತೆ.ಅಲ್ಲದೇ ಅವರನ್ನು ಸಮಾಧಾನ ಮಾಡೊಕ್ಕೆ, ಅವರೊಂದಿಗೆ ಮಾತುಕತೆ ನಡೆಸೊಕ್ಕೆ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯನ್ನು ಕಳುಹಿಸಿದ್ದೆವು.ಅವರು ಮಾತನಾಡಿರುವುದೆಲ್ಲಾ ನಮ್ಮ ಬಳಿ ಇದೆ..ಅದನ್ನು ಕಾಲ ಬಂದಾಗ ರಿವೀಲ್ ಮಾಡುತ್ತೇವೆ ಎಂದಿದ್ದರೆನ್ನುವುದನ್ನು ಅನೇಕ ಕಾರ್ಮಿಕ ಮುಖಂಡರು ಈಗ ಬಾಯಿ ಬಿಡಲಾರಂಭಿಸಿದ್ದಾರೆ( ಸರ್ಕಾರದ ಭಾಗವಾಗಿ ಸವದಿ ಅವರ ಪಾತ್ರ ಇದರಲ್ಲಿ ಎಷ್ಟಿದೆ ಎನ್ನುವುದು ಬಹುಷಃ ತನಿಖೆಯಿಂದಲೇ ಸಾಬೀತಾಗಬೇಕೇನೋ..)



ಆದ್ರೆ ಇದೆಲ್ಲಾ ಸರಿ..ಕೋಡಿಹಳ್ಳಿ ಇಷ್ಟೊಂದು ಮೊತ್ತದ ಡೀಲ್ ಗೆ ಒಪ್ಪಿಕೊಂಡಿದ್ದರೆನ್ನುವುದೇ ಸತ್ಯವಾದ್ರೆ ಅದರಲ್ಲಿ ಅವರೊಬ್ಬರೇ ಭಾಗಿಯಾಗಿರುತ್ತಾರೆನ್ನುವುದನ್ನು ಒಪ್ಪಿಕೊಳ್ಳೊಕ್ಕಾಗೊಲ್ಲ..ಇನ್ನಿತರರು ಕೂಡ ಅದರಲ್ಲಿ ಶಾಮೀಲಾಗಿರಬಹುದಾದ ಸಾಧ್ಯತೆಗಳಿರಬಹುದಲ್ವಾ..ಏಕಂದ್ರೆ ಸ್ಟ್ರೈಕ್ ಮುಗಿಸುವಂತದ್ದು ಕೋಡಿಹಳ್ಳಿ ಅವರ ಏಕಪಕ್ಷೀಯ ನಿರ್ದಾರವಾಗಿರಲಿಕ್ಕೆ ಸಾಧ್ಯ ಇಲ್ಲವೇ ಇಲ್ಲ..ಈ ವಿಷಯದಲ್ಲಿ ಕೆಲವೇ ಕೆಲವು ಸಾರಿಗೆ ಮುಖಂಡರೊಂದಿಗೆ ಚರ್ಚಿಸಿಯೇ ಮಾತುಕತೆಗೆ ಮುಂದಾಗಿರಬಹುದಾದ ಸಾಧ್ಯತೆಗಳಿರಬ ಹುದಲ್ವಾ..?
ಏಕಂದ್ರೆ ಸಾರಿಗೆ ಮುಖಂಡರ ಜತೆ ಚರ್ಚಿಸಿ ಅವರೊಂದಿಗೆ ಸಮಾಲೋಚನೆ ನಡೆಸಿ ಅವರಿಂದ ಅಭಿಪ್ರಾಯಗಳನ್ನು ಪಡೆಯದ ಹೊರತಾಗಿ ಇಂತದ್ದೊಂದು ಬೇಡಿಕೆಯನ್ನು ಕೋಡಿಹಳ್ಳಿ ಒಡ್ಡೊಕ್ಕೆ ಸಾಧ್ಯವೇ ಇಲ್ಲ ಎನ್ನುವುದು ಅನೇಕ ಸಾರಿಗೆ ಕಾರ್ಮಿಕ ಮುಖಂಡರ ವಾದ.ಅಲ್ಲದೇ ಇಷ್ಟೊಂದು ಬೃಹತ್ ಬೇಡಿಕೆಯನ್ನು ಏಕಪಕ್ಷೀಯವಾಗಿ ನಿರ್ದರಿಸಿ ಇಡುವಷ್ಟು ಧೈರ್ಯ ಕೋಡಿಹಳ್ಳಿ ಅವರಿಗಿಲ್ಲ ಎನ್ನುವುದು ನಮ್ಮ ಭಾವನೆ.ಅವರ ಜತೆಗಿದ್ದು,ಈಗ ದೂರವಾಗಿರುವವರಲ್ಲೇ ಯಾರೋ ವ್ಯವಸ್ಥಿತವಾಗಿ ಮಾಡಿರುವ ಷಡ್ಯಂತ್ರ ಎನ್ನುವುದು ಸಧ್ಯಕ್ಕೆ ಕೇಳಿಬರುತ್ತಿರುವ ಮಾತು.
ಹಾಗಾದ್ರೆ ನಿಜಕ್ಕೂ ಸ್ಟಿಂಗ್ ಮಾಡಿದ್ದ್ಯಾರು..ಅದರ ಹಿಂದಿರುವ ಮಾಸ್ಟರ್ ಮೈಂಡ್ ಯಾರು..ಅವರ ಹಿಂದಿನ ಉದ್ದೇಶ ಏನಾಗಿದ್ದಿರಬಹುದು ಎನ್ನುವ ಪ್ರ…ಶ್ನೆ ಕಾಡೋದು ಸಹಜ..ಒನ್ಸ್ ಅಗೈನ್ ಕೋಡಿಹಳ್ಳಿ ಜತೆಗಿದ್ದು ಈಗ ಇಲ್ಲದವರ ಮೇಲೆಯೇ ಅನುಮಾನದ ಕತ್ತಿ ತೂಗಲಾರಂಭಿಸಿದೆ.ಸೋ ಒಂದು ತನಿಖೆ ಮಾತ್ರ ಇದಕ್ಕೆಲ್ಲಾ ಉತ್ತರ ನೀಡಬಲ್ಲದು..ಆದ್ರೆ ಕಾರ್ಮಿಕರನ್ನು ನಂಬಿಸಿ ಅವರ ಕುತ್ತಿಗೆ ಕೊಯ್ದ ಕೋಡಿಹಳ್ಳಿ ಸೇರಿದಂತೆ ಇತರೆ ಸಾರಿಗೆ ನಾಯಕರಿಗೆ ಮಾತ್ರ ಸಾರಿಗೆ ಕುಟುಂಬಗಳ ಹಿಡಿಶಾಪ ತಟ್ಟದೇ ಬಿಡೊಲ್ಲ.