BIG..INSULT TO BBMP IT CHIEF TRILOK CHNADRA BY CHIEF COMMISSINOR TUSHAR GIRINATH..?! : IAS ತ್ರಿಲೋಕ್ ಚಂದ್ರ ಗೆ BBMP ಚೀಫ್ ತುಷಾರ್ ಗಿರಿನಾಥ್ ಅಪಮಾನ..?! :IT ಕಸಿದುಕೊಂಡು IFS ಸೂರ್ಯಸೇನ್ ಗೆ ಹಸ್ತಾಂತರ…

2 ಬಾರಿ UPSC ಪಾಸ್ ಮಾಡ್ಕೊಂಡ ತ್ರಿಲೋಕ್ ಚಂದ್ರಗೆ IT ಹ್ಯಾಂಡಲ್ ಮಾಡೋದು ಕಷ್ಟನಾ ಸರ್..ಪರಿಣಿತಿ ಹೊರತಾಗ್ಯೂ ಅಧಿಕಾರ ಕಿತ್ತುಕೊಂಡ ಚೀಫ್ ಕಮಿಷನರ್..

0
ಬಿಬಿಎಂಪಿ ಮಹಾದೇವಪುರ ವಿಭಾಗದ ವಿಶೇಷ ಆಯುಕ್ತ,ಆರೋಗ್ಯ,ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ತ್ರಿಲೋಕ್ ಚಂದ್ರ
ಬಿಬಿಎಂಪಿ ಮಹಾದೇವಪುರ ವಿಭಾಗದ ವಿಶೇಷ ಆಯುಕ್ತ,ಆರೋಗ್ಯ,ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ತ್ರಿಲೋಕ್ ಚಂದ್ರ

ಬೆಂಗಳೂರು: ಬಿಬಿಎಂಪಿ ನೂತನ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ ಮೇಲೆ ಆಡಳಿತ ಯಂತ್ರದಲ್ಲಿ ಸಾಕಷ್ಟು ಬದಲಾವಣೆಗೆ ತುಷಾರ್ ಗಿರಿನಾಥ್ ಮುಂದಾಗಿದ್ದಾರೆ.ಜಡ್ಡು ಹಿಡಿದಿರುವ ಆಡಳಿತ ಯಂತ್ರದ ಸುಧಾರಣೆ ಕಾರಣಕ್ಕೆ ಇದು ಗುಡ್ ಸ್ಟೆಪ್.. ಸ್ವಾಗತಾರ್ಹ.ಆದ್ರೆ ಬದಲಾವಣೆ ಮಾಡ್ಬೇಕೆನ್ನುವ ಏಕೈಕ ಕಾರಣಕ್ಕೆ ಕಮಿಟ್ ಆಗಿ ಕೆಲಸ ಮಾಡುವ,ಪ್ರಾಮಾಣಿಕವಾಗಿ ತಮ್ಮ ಹುದ್ದೆಗೆ ನ್ಯಾಯ ಸಲ್ಲಿಸುತ್ತಿರುವ ಅಧಿಕಾರಿಗಳನ್ನು ಡಿಸ್ಟರ್ಬ್ ಮಾಡೋದು ಯಾವ ನ್ಯಾಯ…ತುಷಾರ ಗಿರಿನಾಥ್ ವಿರುದ್ಧ ಕೇಳಿಬಂದಿರುವ ಆರೋಪವೂ ಅದೇ,

ತುಷಾರ್ ಗಿರಿನಾಥ್ ಬಂದ್ಮೇಲೆ ಅದೇನ್ ಸುಧಾರಣೆ ಆಯ್ತೋ ಬಿಡ್ತೋ ಗೊತ್ತಿಲ್ಲ.ಆದ್ರೆ ತುಕ್ಕು ಹಿಡಿದಿದ್ದ ಆಡಳಿತ ಯಂತ್ರಕ್ಕೆ ಮಾತ್ರ ಸಾಣೆ ಸಿಕ್ಕಿದೆ. ಹಳ್ಳ ಹಿಡಿದಿದ್ದ ಅಧಿಕಾರಿಗಳ ಕಾರ್ಯನಿರ್ವಹಣೆ ಸರಿಯಾಗಿದೆ.ಜಡ್ಡುಗಟ್ಟಿ ಹೋಗಿದ್ದ ಐಎಎಸ್/ಕೆಎಎಸ್ ಅಧಿಕಾರಿಗಳು ಮೈಕೊಡವಿ ಏಳುವಂತಾಗಿದ್ದಂತೂ ಸತ್ಯ..ಈ ಎಲ್ಲಾ ಕಾರಣಗಳಿಗೆ ತುಷಾರ್ ಗಿರಿನಾಥ್ ಅವರನ್ನು ಅಭಿನಂದಿಸಲೇಬೇಕು.

ಹಾಗೆಂದು ಎಲ್ಲವನ್ನು ಮೆಚ್ಚೊಕ್ಕೆ ಆಗೊಲ್ವೆ,…ತುಷಾರ್ ಗಿರಿನಾಥ್ ಅವರು ಚೀಫ್ ಕಮಿಷನರ್ ಆಗಿ ಇಲ್ಲಿಗೆ ಬರುವಾಗ್ಲೇ ಅವರೊಂದಿಗೆ ಸಾಕಷ್ಟು ಅಧಿಕಾರಿ ಸಿಬ್ಬಂದಿ ಕರೆತಂದರೆನ್ನುವುದು “ಆಡಳಿತ ನಿರ್ವಹಣೆ ದೃಷ್ಟಿಯಿಂದಲೂ ಅನಗತ್ಯ ಹಾಗೂ ದುಬಾರಿ” ಎನ್ನುವ ಆರೋಪ ಸೃಷ್ಟಿಸಿತ್ತು.ಡೆಪ್ಯುಟೇಷನ್ ಮಾಡಿಸಿಕೊಂಡು ಬರುವಾಗ ಅಧಿಕಾರಿ ಸಿಬ್ಬಂದಿಗೆ ಎರವಲು ಆದೇಶ ಮಾಡಿಸಿಕೊಳ್ಳೊಕ್ಕೆ ಸಾಹೇಬ್ರು ಮರೆತುಬಿಟ್ರು ಎನ್ನುವ ಆರೋಪವೂ ಕೇಳಿಬಂದಿತ್ತು.ಆದರೆ ಅದಕ್ಕೆ ನಿರ್ಧಿಷ್ಟ ಎನ್ನುವಂತ ಆದೇಶ-ಮಾರ್ಗಸೂಚಿಗಳಿಲ್ಲದ ಕಾರಣಕ್ಕೆ ಅದು ಕಮಿಷನರ್ ಸಾಹೇಬ್ರ ವಿವೇಚನಾಯುತ ಅಧಿಕಾರ ಎಂದು ಸುಮ್ಮನಾದ್ರು.

ಆದರೆ ತುಷಾರ್ ಗಿರಿನಾಥ್ ಆ ಒಬ್ಬ ಹಿರಿಯ ಐಎಎಸ್ ಅಧಿಕಾರಿ ವಿಷಯದಲ್ಲಿ ತೆಗೆದುಕೊಂಡ ನಿರ್ದಾರ ಮಾತ್ರ ಸಾರ್ವಜನಿಕವಾಗಿ ಪ್ರಶ್ನೆಗೀಡಾಗುತ್ತಲೇ ಇದೆ..ಇದು ಸಹಜವೂ ಸಹ.ಬಿಬಿಎಂಪಿ ಮಹಾದೇವಪುರ ವಿಭಾಗದ ವಿಶೇಷ ಆಯುಕ್ತರಾಗಿ ಕೆಲಸ ಮಾಡುತ್ತಿರುವ ಹಾಗೆಯೇ ಆರೋಗ್ಯ,ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರೂ ಆಗಿರುವ ಡಾ.ತ್ರಿಲೋಕ್ ಚಂದ್ರ ಅವರಿಂದ ಅವಗಿರುವ ಪ್ರಮುಖ ಹುದ್ದೆಯನ್ನು ಕಿತ್ತುಕೊಂಡಿರುವುದು,ಅದರ ಬದಲಿಗೆ ಮತ್ತೋರ್ವ ಐಎಫ್ ಎಸ್ ಅಧಿಕಾರಿಯನ್ನು ತಂದು ಕೂರಿಸಿರುವುದು ಮಾತ್ರ ಸಾರ್ವಜನಿಕರ ಕೋಪಕ್ಕೆ ಗ್ರಾಸವಾಗಿದೆ.

ಬಿಎಂಟಿಸಿಯಲ್ಲಿ ಐಟಿ ನಿರ್ದೇಶಕರಾಗಿರುವ ಎ.ವಿ ಸೂರ್ಯಸೇನ್
ಬಿಎಂಟಿಸಿ ಐಟಿ ನಿರ್ದೇಶಕ ಸೂರ್ಯಸೇನ್

ತ್ರಿಲೋಕ್ ಚಂದ್ರ ರಾಜ್ಯ ಕಂಡ ಕೆಲವೇ ಕೆಲವು ನಿಷ್ಟಾವಂತ ಹಾಗು ದಕ್ಷ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು.ಕಮಿಟೆಡ್ ಆಫೀಸರ್.ಹಿಡಿದ ಕೆಲಸವನ್ನು ಮಾಡಿ ಮುಗಿಸುವವರೆಗೂ ವಿರಮಿಸುವವರಲ್ಲ.ಕೆಲಸ ಮಾಡಿದ ಸ್ಥಳದಲ್ಲೆಲ್ಲಾ ತಮ್ಮ ಕಾರ್ಯವೈಖರಿ ,ದಕ್ಷತೆ,ಸ್ವಚ್ಛ ಆಡಳಿತ ನಿರ್ವಹಣೆಯ ಕಾರಣಕ್ಕೆ ಒಳ್ಳೆಯ ಹೆಸರನ್ನು ಪಡೆದವರು..ಅದೆಲ್ಲಕ್ಕಿಂತ ಮುಖ್ಯವಾಗಿ ಅಕ್ರಮ-ಭ್ರಷ್ಟಾಚಾರ-ಹಗರಣಗಳಿಂದ ಕೈ ಕೊಳಕು ಮಾಡಿಕೊಂಡವರಲ್ಲ, ಹೆಸರು ಹಾಳು ಮಾಡಿಕೊಂಡವರಲ್ಲ.

ಬಿಬಿಎಂಪಿಗೆ ವರ್ಗವಾಗಿ ಬಂದ ಮೇಲೆ ತನಗೆ ವಹಿಸಿದ ಜವಾಬ್ದಾರಿಯನ್ನು ಅತ್ಯಂತ ಶೃದ್ದೆ ಹಾಗೂ ನಿಷ್ಟೆಯಿಂದ ಮಾಡುತ್ತಾ ಬಂದಿದ್ದಾರೆ ಕೂಡ.ಮಾಹಿತಿ ತಂತ್ರಜ್ಞಾನ ವಿಚಾರದಲ್ಲಿ ಈವರೆಗೂ ಸಾಧ್ಯವಾಗದ ರೋಡ್ ಹಿಸ್ಟರಿಯಂಥ ಪರಿಕಲ್ಪನೆಯನ್ನು ಜಾರಿಗೆ ತರೊದ್ರಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಹಿರಿಮೆ ಅವರದು.ಅದೀಗ ಅನುಷ್ಠಾನದ ಹಂತದಲ್ಲಿದೆ.ಅಷ್ಟೇ ಅಲ್ಲ ಸಾಕಷ್ಟು ಸವಾಲಿನ ಕೆಲಸಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ.ತಮ್ಮ ಕೆಲಸದ ಬಗ್ಗೆ ಯಾರೂ ಬೆರಳು ಮಾಡಿ ತೋರಿಸದಂತೆ ಕೆಲಸ ಮಾಡಿರುವ ತ್ರಿಲೋಕ್ ಚಂದ್ರ ಅವರನ್ನು ಡಿಸ್ಟರ್ಬ್ ಮಾಡುವ ಕೆಲಸ ಮಾಡಿದ್ದಾರೆ ತುಷಾರ್ ಗಿರಿನಾಥ್.

ತ್ರಿಲೋಕ್ ಚಂದ್ರ ಅವರದು ಏನ್ ವಿಶೇಷ ಬಹುತೇಕ ಜನರಿಗೆ ಗೊತ್ತಿದೆಯೋ ಇಲ್ವೋ..ಬದುಕಿನಲ್ಲಿ ಒಮ್ಮೆ ಯುಪಿಎಸ್ ಸಿ ಮಾಡಿಕೊಂಡ್ರೆ ಸಾಕೆನ್ನುವವರಿದ್ದಾರೆ.ಆದರೆ ತ್ರಿಲೋಕ್ ಚಂದ್ರ ಅವರು ಎರಡು ಬಾರಿ ಯುಪಿಎಸ್ ಸಿ ಪಾಸ್ ಮಾಡಿದ್ದಾರೆ.ಎಸ್ಪಿಯಾಗಿಯೂ ಕೆಲಸ ಮಾಡಿದ್ದಾರೆ.ಆದರೆ ತನ್ನ ಗುರಿ ಡಿಸಿ ಆಗಿದ್ದರಿಂದ ಅವರು ಮತ್ತೊಮ್ಮೆ ಯುಪಿಎಸ್ ಸಿ ಬರೆದು ಐಎಎಸ್ ನ್ನು ಪಾಸ್ ಮಾಡ್ತಾರೆ.ಇಂಥಾ ಅಧಿಕಾರಿ ಐಟಿ ಎನ್ನುವಂಥ ಸಬ್ಜೆಕ್ಟ್ ನ್ನು ಹ್ಯಾಂಡಲ್ ಮಾಡೊಕ್ಕಾಗೊಲ್ಲ ಎಂದು ತುಷಾರ್ ಗಿರಿನಾಥ್ ಅವರಿಗೆ ಅನ್ನಿಸಿದ್ದೇಗೆ ಎನ್ನೋದೆ ಮಿಲಿಯನ್ ಡಾಲರ್ ಪ್ರಶ್ನೆ.

ತ್ರಿಲೋಕ್ ಚಂದ್ರ ಅವರ ಕೈಯಲ್ಲಿದ್ದ ಐಟಿ ಅಧಿಕಾರವನ್ನು ಕಿತ್ತುಕೊಂಡು ಬಿಎಂಟಿಸಿಯಲ್ಲಿ ಐಟಿ ನಿರ್ದೇಶಕರಾಗಿರುವ ಎ.ವಿ ಸೂರ್ಯಸೇನ್ ಎನ್ನುವ ಐಎಫ್ ಎಸ್ ರನ್ನು ತಂದು ಕೂರಿಸಲಾಗಿದೆ.ಬಿಎಂಟಿಸಿಯಲ್ಲಿ ಪ್ರತ್ಯೇಕ ಐಟಿ ನಿರ್ದೇಶಕರ ಅಗತ್ಯ ಹೆಚ್ಚಾಗಿರುವ ಹಿನ್ನಲೆಯಲ್ಲಿ ಅ ಕೆಲಸವನ್ನು ಮಾಡುತ್ತಿರುವ ಸೂರ್ಯಸೇನ್  ಪುರುಸೊತ್ತಿಲ್ಲದಷ್ಟು ಬ್ಯುಸಿಯಾಗಿರುವಾಗ ಅವರಿಗೆ ಬಿಬಿಎಂಪಿ ಐಟಿಯ ಹೆಚ್ಚುವರಿ ಹೊಣೆಗಾರಿಕೆ ನೀಡುವ ಕೆಲಸವಾಗಿದೆ.ಆದರೆ ತ್ರಿಲೋಕ್ ಚಂದ್ರ ಅವರೇ ಈ ಕೆಲಸವನ್ನು ಮಾಡುತ್ತಿರುವಾಗ ಆ ಹೊಣೆಗಾರಿಕೆಯನ್ನು ಕಿತ್ತುಕೊಂಡು ಸೂರ್ಯಸೇನ್ ಗೆ ಕೊಡಲಾಗುತ್ತೆ ಎಂದ್ರೆ ಇದರ ಹಿಂದಿರುವ ಮರ್ಮವನ್ನು ತುಷಾರ ಗಿರಿನಾಥ್ ಅವರೇ ಹೇಳಬೇಕಾಗುತ್ತದೆ.

ತುಷಾರ್ ಗಿರಿನಾಥ್ ಅವರಿಗೂ ತ್ರಿಲೋಕ್ ಚಂದ್ರ ಅವರು ಎಂಥಾ ಅಧಿಕಾರಿ ಎನ್ನೋದು ಗೊತ್ತಿದೆ.ಅವರ ಕಾರ್ಯವೈಖರಿ ಎಂತದ್ದೆನ್ನೋದು ಕೂಡ ತಿಳಿದಿದೆ.ಹೀಗಿರುವಾಗ ಐಟಿ ವಿಭಾಗವನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಹೊರತಾಗ್ಯೂ ಅವರಿಂದ ಐಟಿಯನ್ನು ಕಸಿದುಕೊಂಡು ಸೂರ್ಯಸೇನ್ ಎನ್ನುವವರಿಗೆ ನೀಡುತ್ತಾರೆಂದರೆ ಇದರ ಅರ್ಥ ತ್ರಿಲೋಕ್ ಚಂದ್ರ ಅಸಮರ್ಥ ಎನ್ನೋದೋ ಅಥವಾ ಆ ಹುದ್ದೆಯಲ್ಲಿ ಅವರು ಕೆಲಸ ಮಾಡುತ್ತಿರುವುದು ನನಗಿಷ್ಟ ಎನ್ನೋದೋ ಗೊತ್ತಾಗುತ್ತಿಲ್ಲ.ಸೂರ್ಯಸೇನ್ ಅವರನ್ನು ತಂದು ಕೂರಿಸಿರುವುದರ ಹಿಂದೆ ಯಾವ್ ಉದ್ದೇಶಗಳಿವೆ ಎನ್ನೋದೆಲ್ಲಾ ತುಷಾರ್ ಗಿರಿನಾಥ್ ಅವ್ರೇ ಸ್ಪಷ್ಟಪಡಿಸಬೇಕು.

ಈ ಬಗ್ಗೆ ತ್ರಿಲೋಕ್ ಚಂದ್ರ ಅವರನ್ನು ಪ್ರಶ್ನಿಸಿದ್ರೆ ನಾವು ಸರ್ಕಾರದ ಸೇವಕರು.ನಮಗೆ ಯಾವ್ ಜವಾಬ್ದಾರಿಯನ್ನು ಯಾವ್ ಸಂದರ್ಭದಲ್ಲಿ ವಹಿಸ್ತಾರೋ ಅದನ್ನು ಶೃದ್ದೆ-ಪ್ರಾಮಾಣಿಕತೆಯಿಂದ ಮಾಡಬೇಕು ಅಷ್ಟೇ.ನನಗೆ ವಹಿಸಿಕೊಟ್ಟಿದ್ದ ಜವಾಬ್ದಾರಿಯನ್ನು ನಾನು ಸಮರ್ಥವಾಗಿ ಮಾಡಿದ್ದೇನೆ ಅಷ್ಟೇ ಎಂದ್ರು.ಆದ್ರೆ ಅವರ ಮಾತಿನ ಲಹರಿಯಲ್ಲೇ ಅವರಿಗೆ ಆಗಿರುವ ನೋವು-ಅವಮಾನ ಹಾಗು ಮುಜುಗರ ಕಾಣುತ್ತಿತ್ತು.

ತುಷಾರ್ ಗಿರಿನಾಥ್ ಮುಖ್ಯ ಆಯುಕ್ತರಾಗಿ ಬಂದ ಮೇಲೆ ಸಾಕಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದಾರೆನ್ನುವುದರಲ್ಲಿ ಎರಡು ಮಾತಿಲ್ಲ.ಆದರೆ ಅದರ ನಡುವೆ ಇಂತಹದೊಂದಿಷ್ಟು ಬೇಡವಾದ ಬೆಳವಣಿಗೆಗಳಿಗೆ ಕೈ ಹಾಕುತ್ತಿರುವುದೇಕೋ ಅನೇಕರಿಗೆ ಸರಿ ಎನಿಸುತ್ತಿಲ್ಲ.ಅದರಲ್ಲೂ ತ್ರಿಲೋಕ್ ಚಂದ್ರ ಅವರಂಥ ದಕ್ಷ-ಪ್ರಾಮಾಣಿಕ ಐಎಎಸ್ ಗಳನ್ನು ಮುಜುಗರ ಹಾಗು ಅವಮಾನಕ್ಕೆ ಈಡುಮಾಡುವಂತದ್ದಂತೂ ಖಂಡಿತಾ ಸರಿಯಲ್ಲ.

Spread the love
Leave A Reply

Your email address will not be published.

Flash News