VEER SAVARKAR,HEDGEVAR,GOLWALKAR NAMES FOR BBMP WARDS…?!?! BBMP ಕೆಲ ವಾರ್ಡ್ ಗಳಿಗೆ “ವೀರ ಸಾವರ್ಕರ್, ಗೋಲ್ವಾಲ್ವಕರ್..ಹೆಡಗೆವಾರ್” ಹೆಸರು..!?!?

“ಹಿಂದುತ್ವ”ದ ಟ್ರಂಪ್ ಕಾರ್ಡ್ ಪ್ಲೇ ಮಾಡೊಕ್ಕೆ ಮುಂದಾಯ್ತಾ ಸರ್ಕಾರ..!? , ಹಿಂದೂ “ವೋಟ್ ಬ್ಯಾಂಕ್” ಮೇಲೆ ಸರ್ಕಾರದ ಕಣ್ಣು..!!??

0

ಬೆಂಗಳೂರು: ಎಲ್ಲಾ ಮುಗೀತು ಎಂದುಕೊಳ್ಳುತ್ತಿರುವಾಗಲೇ ಬೃಹತ್  ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮೇಲೆ ರಾಜ್ಯ ಸರ್ಕಾರದ “ಜಾತಿವ್ಯಾಮೋಹ”ದ ಕರಿನೆರಳು ಬಿದ್ದಂತಿದೆ.ಬೆಂಗಳೂರಿಗರ ಮತಗಳ ಮೇಲೆ.ಅದರಲ್ಲೂ ಒಂದು ಜಾತಿ/ಕೋಮಿನ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟಂತೆ ಕಾಣುತ್ತಿದೆ.ಅದಕ್ಕಾಗಿ ಹಿಂದುಗಳನ್ನು ಓಲೈಸುವ ಕೆಲಸಕ್ಕೆ ಕೈ ಹಾಕಿದೆ  ಎನ್ನುವ ಆರೋಪ ಕೇಳಿಬಂದಿದೆ.ಇದಕ್ಕೆ ಕಾರಣ ವಾರ್ಡ್ ಗಳಿಗೆ ಇಡಲಾಗಿದೆ ಎನ್ನಲಾಗುತ್ತಿರುವ ಹೆಸರುಗಳು. ಮಹನೀಯರು/ಮಹಾತ್ಮರು/ ಸಾಧಕರು/ ಇತಿಹಾಸಪುರುಷರುಗಳ ಹೆಸರನ್ನಿಡುವ ಬದಲು ಒಂದು ಪ್ರಬಲ ಸಿದ್ಧಾಂತವನ್ನು, ಜಾತಿ ಸಮುದಾಯ ವನ್ನು,ಅದರ ವಿಚಾರಧಾರೆಗಳ ಪ್ರಬಲ ಸಮರ್ಥಕರ ಹೆಸರುಗಳನ್ನು ಇಟ್ಟು ಸಂವಿಧಾನದ ಆಶಯಗಳ ಲ್ಲೊಂದಾದ ಜಾತ್ಯಾತೀತತೆಗೆ ಧಕ್ಕೆ ಉಂಟುಮಾಡಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಚುನಾಯಿತ ಪ್ರತಿನಿಧಿಗಳಿಲ್ಲದೆ ತುಕ್ಕು ಹಿಡಿದಂತೆ ಭಾಸವಾಗುತ್ತಿದೆ ಬಿಬಿಎಂಪಿ ಆಡಳಿತ.ಅಧಿಕಾರಿಗಳ ಅಂದಾ ದರ್ಬಾರ್ ನಲ್ಲಿ ಬೆಂಗಳೂರಿನ ಅಭಿವೃದ್ದಿ ಸಂಪೂರ್ಣ ಸೊರಗಿದೆ ಎನ್ನುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.ಇದೇ ವ್ಯವಸ್ಥೆ ಮುಂದುವರೆಸಿಕೊಂಡು ಹೋಗಬೇಕೆನ್ನುವ ಮನಸ್ಥಿತಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಸರ್ಕಾರಕ್ಕಿದೆ ಎನಿಸುತ್ತಿದೆ.ಹಾಗಾಗಿನೇ ಮಾಜಿ ಕಾರ್ಪೊರೇಟರ್ಸ್ ಗಳು ಚುನಾವಣೆಗೆ ಪಟ್ಟುಹಿಡಿದು ಕಾನೂನಾತ್ಮಕ ಸಮರ ಸಾರಿದ್ದರೆ ಬೆಂಗಳೂರಿನ ಬಹುತೇಕ ಶಾಸಕರುಗಳು ಚುನಾವಣೆ ಮುಂದೂಡೊಕ್ಕೆ ಹರಸಾಹಸ ಮಾಡುತ್ತಲೇ ಇದ್ದರು.

ಈ ನಡುವೆ ಸುಪ್ರಿಂ ಕೋರ್ಟ್ ಬೀಸಿದ ಚಾವಟಿಗೆ ತಬ್ಬಿಬ್ಬಾಗಿ ವಾರ್ಡ್ ಪುನರ್ವಿಂಗಡಣೆ ಪಟ್ಟಿಯನ್ನು ಸಿದ್ಧಪಡಿಸಿದೆ.ಇದಕ್ಕಾಗಿ ರಚಿಸಲಾಗಿದ್ದ ಕಮಿಟಿ ಕೂಡ ಜನಸಂಖ್ಯೆಯನ್ನಾಧರಿಸಿ ವಾರ್ಡ್ ಮೀಸಲು  ಪುನರ್ವಿಂಡಣೆ ಗಳ ಕರಡನ್ನು ಸಿದ್ದಪಡಿಸಿ ಸರ್ಕಾರಕ್ಕೆ ರವಾನಿಸಿತ್ತು.ಆದರೆ ಆ ಕರಡನ್ನು ಕೆಲವು ಕಾರಣಗಳಿಂದ ಸಾರಾಸಗಟಾಗಿ ತಿರಸ್ಕರಿಸಲಾಗಿದೆ ಎನ್ನುವ ಮಾತುಗಳಿವೆ.ಇದಕ್ಕೆ ಪ್ರಮುಖ ಕಾರಣವೇ ಚುನಾವಣೆ ಮುಂದೂಡಬೇಕೆನ್ನುವುದೆನ್ನಲಾಗುತ್ತಿದೆ. ಅದು ಸತ್ಯವೂ ಇರಬಹುದು.

ಹೆಡ್ಗೆವಾರ್
ಹೆಡ್ಗೆವಾರ್

ಅದೆಲ್ಲಾ ಒತ್ತಟ್ಟಿಗಿರಲಿ,ಏಕೆಂದ್ರೆ ಸರ್ಕಾರ ಏನೇ ಪ್ರಯತ್ನಿಸಿದ್ರೂ ಸುಪ್ರಿಂ ಕೋರ್ಟ್ 8 ವಾರದೊಳಗೆ ಚುನಾವಣೆ ಆಗಲೇಬೇಕೆನ್ನುವ ತನ್ನ ಮೊದಲಿನ ವಾದಕ್ಕೆ ಗಂಟುಬಿದ್ದರೆ ರಾಜ್ಯ ಸರ್ಕರ ಚುನಾವಣೆ ಮಾಡಲೇಬೇಕಾಗುತ್ತದೆ.ಅದು ಬೆಂಗಳೂರಿನ ಅಭಿವೃದ್ಧಿಯ ದೃಷ್ಟಿಯಿಂದ ಸಧ್ಯದ ತುರ್ತು ಕೂಡ. ಆದರೆ ಸಧ್ಯಕ್ಕೆ ಮತ್ತೊಂದು ಕಾರಣಕ್ಕೆ ವಾರ್ಡ್ ಗಳ ಪಟ್ಟಿ ತೀರಾ ಚರ್ಚೆಗೆ ಗ್ರಾಸವಾಗುತ್ತಿದೆ.ಇದಕ್ಕೆ ಕಾರಣ ವಾರ್ಡ್ ಗಳಿಗೆ ಇಡಲಾಗಿದೆ ಎನ್ನಲಾಗುತ್ತಿರುವ ಹೆಸರುಗಳು.ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಕೆಲವು ವಿಶ್ವಸನೀಯ ಮೂಲಗಳು ನೀಡಿದ ಮಾಹಿತಿ ಪ್ರಕಾರ ಹೆಸರುಗಳ ಕಾರಣಕ್ಕೆ ಪಟ್ಟಿ ತಿರಸ್ಕರಿಸಲ್ಪಟ್ಟಿದೆಯಂತೆ. ಇದು ಪ್ರಜ್ಞಾಪೂರ್ವಕವಾಗಿ ಮಾಡಲಾಗಿರುವ ಪ್ರಮಾದವಾಗಿದ್ದರೂ ಆಶ್ವರ್ಯವಿಲ್ಲವಂತೆ.

ಸುಪ್ರಿಂ ಆದೇಶದನ್ವಯ ನಡೆಯಲಿರುವ ಚುನಾವಣೆಗೆ ಪೂರಕವಾಗಿ ಮಾಡಲಾಗಿರುವ 243 ವಾರ್ಡ್ ಗಳಲ್ಲಿ ಅನೇಕ ವಾರ್ಡ್ ಗಳ ಹೆಸರುಗಳ ನಾಮಕರಣದಲ್ಲಿ ಪ್ರಬಲ ಜಾತಿ ವ್ಯಾಮೋಹ, ಒಂದು ಕೋಮಿನ ಓಲೈಕೆ,ಸಮುದಾಯದ ವೋಟ್ ಬ್ಯಾಂಕ್ ಗಳಿಕೆ ಮೇಲೆ ಕಣ್ಣಿಡಲಾಗಿದೆ ಎಂಬಂತೆ ವಿಶ್ಲೇಷಿಸಲಾಗುತ್ತಿದೆ.

ಏಕೆಂದರೆ ಮಹನೀಯರ ಹೆಸರುಗಳನ್ನು ಇಡುವ ಧಾವಂತದಲ್ಲಿ ಇನ್ನೊಂದು ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ, ಕೆರಳಿ ಕೆಂಡವಾಗುವಂತೆ, ಕೋಮುದ್ವೇಷನ್ನು ಪ್ರಚೋದಿಸುವ ದುರುದ್ದೇಶವನ್ನು ಕಮಿಟಿ ಹೊಂದಿತ್ತಾ( ಸರ್ಕಾರದ ಅಣತಿ ಮೇರೆಗೆ ವಾರ್ಡ್ ಹೆಸರು ಹಾಗೂ ಅವುಗಳ ಪುನರ್ವಿಂಗಡಣೆ ನಡೆಯುತ್ತೆ ಎನ್ನುವುದು ಕೂಡ ಸತ್ಯವಲ್ವಾ..) ಎನ್ನುವ ಶಂಕೆ ವ್ಯಕ್ತವಾಗುತ್ತಿದೆ.ಹಿಂದುತ್ವವನ್ನು ಬಲವಾಗಿ ಪ್ರತಿಪಾದಿಸುವ ಆಲೋಚನೆ ಇದ್ದಂತೆ ಕಾಣುತ್ತದೆ .ಹಿಂದುತ್ವ ಹಾಗೂ ಹಿಂದೂಗಳ ವೋಟ್ ಬ್ಯಾಂಕನ್ನಷ್ಟೇ ಗಮನದಲ್ಲಿಟ್ಟುಕೊಂಡು ವಾರ್ಡ್ ಗಳಿಗೆ ಇಡಲಾಗಿದೆ ಎನ್ನಲಾಗುತ್ತಿರುವ ಸಾಕಷ್ಟು ಹೆಸರುಗಳು ವಿವಾದಕ್ಕೆ ಎಡೆ ಮಾಡಿಕೊಡಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಗೋಲ್ವಾಲ್ಕರ್,
ಗೋಲ್ವಾಲ್ಕರ್,

ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಸಿಕ್ಕಿರುವ ಕೆಲವು ಮಾಹಿತಿ ಪ್ರಕಾರ   ವಾರ್ಡ್ ಗಳ ಮೀಸಲು-ಪುನರ್ವಿಂಡಣೆ ಕರಡಿನಲ್ಲಿರುವ ವಾರ್ಡ್ ಗಳ ಪೈಕಿ ಕೆಲವು ವಾರ್ಡ್ ಗಳಿಗೆ ಇಡಲಾಗಿದೆ ಎನ್ನಲಾಗುತ್ತಿರುವ ಹೆಸರುಗಳು ಆ ಪಟ್ಟಿ ಅಧೀಕೃತ ಬಹಿರಂಗಗೊಂಡಿದ್ದೇ ಆದಲ್ಲಿ ವಿವಾದ ಸೃಷ್ಟಿಸುವುದಂತೂ ಖಚಿತ ಎನ್ನಲಾಗುತ್ತಿದೆ. ಏಕೆಂದರೆ  ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದೂ ಮತಗಳು ಎಲ್ಲಿ ಹೆಚ್ಚಿವೆಯೋ ಅಂಥಾ ಕ್ಷೇತ್ರಗಳಲ್ಲಿ ಹಿಂದೂ ಮುಖಂಡರುಗಳ ಹೆಸರನ್ನು ಇಡಲಾಗಿದೆ ಎನ್ನಲಾಗುತ್ತಿದೆ.

ಆ ಪೈಕಿ ಆರ್ ಎಸ್ ಎಸ್ ಪ್ರಮುಖರಾದ ಹಾಗೂ ಅನೇಕ ಕಾರಣಗಳಿಂದ ವಿವಾದದ ಕೇಂದ್ರವಾಗಿರುವ ಗೋಲ್ವಾಲ್ಕರ್,ಹೆಡ್ಗೆವಾರ್ ಹಾಗೂ  ವೀರ ಸಾವರ್ಕರ್ ಹೆಸರುಗಳನ್ನು ವಾರ್ಡ್ ಗಳಿಗೆ ಇಡಲಾಗಿದೆ ಎನ್ನಲಾಗುತ್ತಿದೆ.ಅಷ್ಟೇ ಅಲ್ಲ ವಿವಾದಕ್ಕೆ ಎಡೆ ಮಾಡಿಕೊಡಬಲ್ಲ ಇನ್ನೂ ಸಾಕಷ್ಟು ಹೆಸರುಗಳು ಪಟ್ಟಿಯಲ್ಲಿವೆ ಎನ್ನಲಾಗುತ್ತಿದೆ.

ವೀರ ಸಾವರ್ಕರ್
ವೀರ ಸಾವರ್ಕರ್

ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯ,ನಾಡಪ್ರಭು ಕೆಂಪೇಗೌಡ, ನಾಲ್ವಡಿ ಕೃಷ್ಣರಾಜ ಒಡೆಯರ್,ಚಾಲುಕ್ಯ ಸಾಮ್ರಾಜ್ಯದ ಆಳರಸರ ಹೆಸರುಗಳನ್ನೂ ವಾರ್ಡ್ ಗಳಿಗೆ ಇಡಲಾಗಿದೆ.ಆದ್ರೆ ಇವರ ಕೊಡುಗೆ ಜಾತ್ಯಾತೀತ ಹಾಗೂ ಸಮಸಮಾಜ ನಿರ್ಮಾಣದ ಪರಿಕಲ್ಪನೆಗೆ ಹತ್ತಿರವಾಗಿದ್ದರಿಂದ ವಿವಾದ ಸೃಷ್ಟಿಯಾಗೋದು ಕಡಿಮೆ ಎನ್ನಲಾಗುತ್ತಿದೆ.ಆದರೆ ಯಾವುದೋ ಒಂದು ವಾರ್ಡ್ ಗೆ ಛತ್ರಪತಿ ಶಿವಾಜಿ ಮಹಾರಾಜ್ ಹೆಸರನ್ನು ಇಡಲಾಗಿದೆ ಎನ್ನಲಾಗುತ್ತಿರುವುದು ಸ್ವಲ್ಪ ವಿವಾದಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಗಳಿವೆ.

ಇದೆಲ್ಲವೂ ಕೆಲವು ಮೂಲಗಳಿಂದ ಸಿಕ್ಕಿರುವ ಮಾಹಿತಿಗಳು.ಆದರೆ ಸತ್ಯಾಸತ್ಯತೆ ಪಟ್ಟಿ ಹೊರಬಿದ್ದಾಗಲೇ ಬಹಿರಂಗವಾಗುತ್ತದೆ.ಆದರೆ ಹಾಗೊಮ್ಮೆ ಏನಾದ್ರು ಪಟ್ಟಿಯಲ್ಲಿರುವ ಹೆಸರುಗಳಲ್ಲಿ ನಾವು ಹೇಳಿರುವ ಹೆಸರುಗಳಿದ್ದಿದ್ದೇ ಆದಲ್ಲಿ ಬೆಂಗಳೂರಿನಲ್ಲಿ ಕೋಮುದ್ವೇಷದ ಕಿಡಿ ಹೊತ್ತಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.ಬೇರೆ ಸಮುದಾಯಗಳು ರಾಜ್ಯ ಸರ್ಕಾರದ ವಿರುದ್ದ ತಿರುಗಿ ಬೀಳುವುದರಲ್ಲಿ ಆಶ್ವರ್ಯವೇ ಇಲ್ಲ.ಹಾಗೆನಾದ್ರೂ ಆದ್ರೆ ಅದು ಬಿಬಿಎಂಪಿ ಚುನಾವಣೆ ಮೇಲೆ ಸಾಕಷ್ಟು ಎಫೆಕ್ಟ್ ಉಂಟುಮಾಡುವುದಂತೂ ಸತ್ಯ.

ಈ ಅಪಾಯದ ಅರಿವು ಸರ್ಕಾರಕ್ಕೂ ಇದೆ.ಹಾಗಾಗಿ ಈ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವುದು ಸೂಕ್ತ ಎನ್ನುವ ಅಭಿಪ್ರಾಯ ಸಾರ್ವಜನಿಕವಾಗಿ ಕೇಳಿಬರುತ್ತಿರುವುದು ಕೂಡ ಅಷ್ಟೇ ಸತ್ಯ.

Spread the love
Leave A Reply

Your email address will not be published.

Flash News