SHOCKING…PRIVATE DRIVERS FOR BMTC :BMTCಗೆ ಪ್ರೈವೇಟ್ ಡ್ರೈವರ್ಸ್ ಎಂಟ್ರಿ..?!..ಔಟ್ ಸೋರ್ಸ್ ಏಜೆನ್ಸಿಯಿಂದ ಚಾಲಕರ ನೇಮಕಕ್ಕೆ ಚಿಂತನೆ..?!

ಬಿಎಂಟಿಸಿ ಮೇಲೆ ಖಾಸಗಿಕರಣದ ಕರಿನೆರಳು-ಖಾಸಗಿಕರಣದತ್ತ ಹೆಜ್ಜೆಯೇ.. ಆಡಳಿತ ಮಂಡಳಿಯಿಂದ ಗಂಭೀರ ಚಿಂತನೆ

0

ಬೆಂಗಳೂರು: ಏನೂ ಆಶ್ಚರ್ಯಪಡಬೇಕಿಲ್ಲ..ಇದು ನಿರೀಕ್ಷಿತ ಬೆಳವಣಿಗೆ ಎಂದುಕೊಂಡು ಸುಮ್ಮನಾಗಬೇಕಷ್ಟೆ..ಏಕೆಂದ್ರೆ ಕಾರ್ಮಿಕರ ಹಿತ ಕಾಯುವ ಉದ್ದೇಶದಲ್ಲಿ ಯಾವಾಗ ತಾನೇ ಆಡಳಿತ ಮಂಡಳಿಗಳು ಚಿಂತಿಸಿವೆ..ನಿರ್ದಾರ ಕೈಗೊಂಡಿವೆ..ಅದನ್ನು ಕಾರ್ಯರೂಪಕ್ಕೆ ಇಳಿಸಿವೆ.ಸಾಧ್ಯವೇ ಇಲ್ಲ.ಇದೆಲ್ಲದರ ನಡುವೆ ಖಾಸಗಿ ಡ್ರೈವರ್ಸ್ ಗಳನ್ನು ನೇಮಿಸಿಕೊಳ್ಳಬೇಕೆನ್ನುವ ಚಿಂತನೆ ನಡೆಸಿರುವುದು ಖಾಸಗೀಕರಣದ ಮೊದಲ ಪ್ರಯತ್ನ ಎನ್ನಬಹುದೇನೊ..?

ಹೌದು..ಬಿಎಂಟಿಸಿ ಬಸ್ ಗಳನ್ನು ಚಾಲನೆ ಮಾಡುವವರ ಸೀಟ್ ನಲ್ಲಿ ಖಾಸಗಿಯವರನ್ನು ಕಾಣಬಹುದಾದ ದಿನಗಳು ದೂರ ಇಲ್ಲ ಎನ್ಸುತ್ತೆ.ಏಕೆಂದರೆ ಬಿಎಂಟಿಸಿ ಆಡಳಿತ ಮಂಡಳಿ ಅಂತದ್ದೊಂದು ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎನ್ನುವುದಕ್ಕೆ ಅದರ ಪ್ರಕಟಣೆಯೇ ಸಾಕ್ಷಿ.ಆ ಪ್ರತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಎಕ್ಸ್ ಕ್ಲ್ಯೂಸಿವ್ ಅಗಿ ಲಭ್ಯವಾಗಿದೆ.

ಆ ಪ್ರಕಟಣೆಯಲ್ಲಿ ತಿಳಿಸಿರುವಂತೆ ಸಂಸ್ಥೆಯಲ್ಲಿ ಬಾಹ್ಯ ಏಜೆನ್ಸಿ ಮೂಲಕ ಚಾಲಕರನ್ನು  ನೇಮಿಸಿಕೊಳ್ಳಲು ಚಿಂತನೆ ನಡೆದಿದ್ದು ಇದರ ಬಗ್ಗೆ ಚರ್ಚೆ ನಡೆಸಲು ಹಾಗೂ ಸಾಧಕ ಬಾಧಕಗಳ ಅಂಶಗಳನ್ನು ಸಮಗ್ರವಾಗಿ ಕ್ರೋಢೀಕರಿಸಲು ಎಂಡಿ ಅವರು ಸಮಿತಿ ರಚಿಸಿದ್ದಾರೆ.ಈ ಹಿನ್ನಲೆಯಲ್ಲಿ ಚರ್ಚೆ ನಡೆಸೊಕ್ಕೆ ಸಮಿತಿ ಸಭೆಯನ್ನು ಇಂದು ಅಂದ್ರೆ 07-06-2022 ರಂದು ಕರೆದಿರುತ್ತಾರೆ ಎಂಬ ಸಂಗತಿಗಳು ಉಲ್ಲೇಖವಾಗಿವೆ.

ಬಿಎಂಟಿಸಿಯಲ್ಲಿ ಇರುವ ಡ್ರೈವರ್ಸ್ ಗಳಿಗೇನೆ ಕೆಲಸ ಇಲ್ಲವಾಗಿದೆ.ಡ್ಯೂಟಿ ಸಿಗದೆ ದಿನಂಪ್ರತಿ ಎಷ್ಟೋ ಚಾಲಕರು ಮನೆಗೆ ವಾಪಸ್ಸಾಗುತ್ತಿದ್ದಾರೆ.ಇನ್ನು ಸಸ್ಪೆಂಡ್ ಆಗಿ ಡಿಸ್ಮಿಸ್ ಆಗಿ ಮನೆಯಲ್ಲಿ ಕುಳಿತಿರುವ ಚಾಲಕರೇ ಸಾವಿರಾರು ಸಂಖ್ಯೆಯಲ್ಲಿದ್ದಾರೆ.ಅವರ ಮೇಲಿರುವ ಕೇಸ್ ಗಳನ್ನೆಲ್ಲಾ ವಾಪಸ್ ಪಡೆದು ಕೆಲಸಕ್ಕೆ ಹಚ್ಚಿದ್ರೆ ಖಾಸಗಿ ಅವರನ್ನು ನೇಮಿಸಿಕೊಳ್ಳುವ ಅಗತ್ಯವೇ ಇಲ್ಲ ಎನ್ನುವುದು ಸಧ್ಯದ ವಾಸ್ತವ.

ಆದರೆ ಬಿಎಂಟಿಸಿ ಆಡಳಿತದ ಚುಕ್ಕಾಣಿ ಹಿಡಿದಿರುವವರಿಗೆ ಇದ್ಯಾವುದು ಗಂಭೀರ ವಿಷಯ ಎನಿಸುತ್ತಲೇ ಇಲ್ವೆ.ಅವರ ಒಂದೇ ಒಂದು  ಉದ್ದೇಶ ಖಾಸಗಿ ಅವರನ್ನು ಒಳಗೆ ಕರೆತಂದು ಅವರಿಂದ ಕಿಕ್ ಬ್ಯಾಕ್ ಪಡೆಯುವುದು.ಆದ್ರೆ ಆ ಕಿಕ್ ಬ್ಯಾಕ್ ಪಡೆಯುವ ಮೂಲಕ ಸಂಸ್ಥೆಯ ಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯುವುದಿದೆಯೆಲ್ಲಾ ಅದಕ್ಕಿಂತ ಅಮಾನವೀಯವಾದ ಕೃತ್ಯ ಮತ್ತೊಂದಿಲ್ಲ ಎನ್ನುವುದು ಸಾರಿಗೆ ಕಾರ್ಮಿಕ ಮುಖಂಡರ ವಾದ.

ಕಾರ್ಮಿಕರ ಕಾಳಜಿ ಹಾಗೂ ಹಿತದ ಬಗ್ಗ ಕೊಂಚವೂ ಆಲೋಚಿಸದ ಬಿಎಂಟಿಸಿ ಆಡಳಿತ ಮಂಡಳಿ ಖಾಸಗಿ ಅವರನ್ನು ಒಳಗೆ ತರುವ ಪ್ರಯತ್ನದ ಮೂಲಕ ಕಾರ್ಮಿಕ ವಿರೋಧಿಯಾಗಿ ವರ್ತಿಸುತ್ತಿದೆಯಲ್ಲದೇ ಖಾಸಗಿಕರಣದ ಗುಮ್ಮನನ್ನು ಒಳ ತರೊಕ್ಕೆ ಕಾರಣವಾಗಲಿದ್ದಾರೆ ಎನ್ನುವ ವಿಶ್ಲೇಷ ಕೇಳಿಬರುತ್ತಿದೆ.

ಇಂದು ನಡೆದ ಸಭೆಯು ಬಹುತೇಕ ಖಾಸಗಿ ಡ್ರೈವರ್ಸ್ ಗಳ ನೇಮಕಾತಿ ಬಗ್ಗೆನೇ ಒಲವು ತೋರಿದೆ ಎನ್ನುವ ಮಾತುಗಳು ಕೇಳಿಬಂದಿದೆ.ಹಾಗೇನಾದ್ರೂ ಆಗಿದ್ದೇ ಆದಲ್ಲಿ ಕಾರ್ಮಿಕರ ಮತ್ತೊಂದು ಸುತ್ತಿನ ಹೋರಾಟಕ್ಕೆ ವೇದಿಕೆ ಕಲ್ಪಿಸಿದಂತಾಗಲಿದೆ.

Spread the love
Leave A Reply

Your email address will not be published.

Flash News