300+ CRORES LOST IN 10 DAYS FOR BMTC BECAUSE OF TRANSPORT STRIKE: ಸಾರಿಗೆ ಮುಷ್ಕರದ ಎಫೆಕ್ಟ್ : 10 ದಿನ 300 ಕೋಟಿ ನಷ್ಟ..

ಸಾರಿಗೆ ನಿಗಮಗಳ “ದಿವಾಳಿ”ಗೆ,ಕಾರ್ಮಿಕರಿಗೆ “ಸಂಬಳ”ಸಮಸ್ಯೆಯಾಗೊಕ್ಕೆ “ಮಷ್ಕರ ನಷ್ಟ”ವೇ ನೆವ.

0

ಬೆಂಗಳೂರು:ಸರ್ಕಾರಿ ನೌಕರರ ಮಾನ್ಯತೆಗೆ ಒತ್ತಾಯಿಸಿ ಸಾರಿಗೆ ಕಾರ್ಮಿಕರು ನಡೆಸಿದ ಮುಷ್ಕರದಿಂದ ಸಾರಿಗೆ ನಿಗಮಕ್ಕೆ ಆದ ನಷ್ಟ ಎಷ್ಟು..? ಇಂತದ್ದೊಂದು ಪ್ರಶ್ನೆ ಸಹಜವಾಗೇ ಎಲ್ಲರನ್ನೂ ಕಾಡುತ್ತಿತ್ತು.ಈಗ ಅದಕ್ಕೆ ಉತ್ತರವೂ ಸಿಕ್ಕಿದೆ.2021 ರ ಏಪ್ರಿಲ್ 7 ರಿಂದ ಏಪ್ರಿಲ್ 10 ರವರೆಗೆ ನಡೆಸಿದ ಮುಷ್ಕರದಿಂದ ಸಾರಿಗೆ ಸಂಸ್ಥೆಗೆ ಆದ ನಷ್ಟ 3050.20 ಲಕ್ಷ ಅಂದ್ರೆ 300 ಕೋಟಿಯಂತೆ. ಹೌದು ಇಂತದ್ದೊಂದು ಸ್ಪೋಟಕ ಮಾಹಿತಿ ನೀಡಿರೋದು ಸ್ವತಃ ಬಿಎಂಟಿಸಿ ಆಡಳಿತ ಮಂಡಳಿ.

ಸರ್ಕಾರಿ ನೌಕರರ ಮಾನ್ಯತೆ ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಮುಂದಿಟ್ಟು ಕೊಂಡು ಸಾರಿಗೆ ಕಾರ್ಮಿಕರು ನಡೆಸಿದ ಮುಷ್ಕರದಿಂದ ಸಾರಿಗೆ ಸೇವೆ ಸಂಪೂರ್ಣ ಅಸ್ತವ್ಯಸ್ತವಾಗಿ ಸಾರ್ವಜನಿಕರು ಮನೆಯಿಂದ ಹೊರಗೆ ಬರದಂತಾಯಿತು.ಎಷ್ಟೇ ಮನವಿ,ಬಿನ್ನಹಗಳ ಹೊರತಾಗ್ಯೂ ಸಾರಿಗೆ ಕಾರ್ಮಿಕರು ತಮ್ಮ ಬಿಗಿಪಟ್ಟು ಸಡಿಲಿಸಲೇ ಇಲ್ಲ.

ಈ 10 ದಿನಗಳ ಅವಧಿಯಲ್ಲಿ ಎಷ್ಟು ಪ್ರಮಾಣದ ನಷ್ಟ ಸಾರಿಗೆ ನಿಗಮಕ್ಕೆ ಆಗಿದೆ ಎನ್ನುವುದನ್ನು ತಿಳಿಯೊಕ್ಕೆ ಆರ್ ಟಿಐ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.ಇದಕ್ಕೆ ರಿಯಾಕ್ಟ್ ಮಾಡಿರುವ ಸಾರಿಗೆ ವಿಭಾಗದ ಸಹಾಯಕ ಸಂಖ್ಯಾಧಿಕಾರಿಗಳು 07/04/2021 ರಿಂದ 16/04/2021 ರವರೆಗೆ ಮುಷ್ಕರದಿಂದ ಸಂಸ್ಥೆಗೆ 3050 ಲಕ್ಷ ಅಂದ್ರೆ 300 ಕೋಟಿನಷ್ಟವಾಗಿದೆ ಎಂಬ ಉತ್ತರ ನೀಡಿದ್ದಾರೆ.

ಆದ್ರೆ ಅಷ್ಟೇನೂ ಅಚ್ಚರಿದಾಯಕ ಎನಿಸೊಲ್ಲ ಈ ಅಂಕಿಅಂಶಗಳು.ಏಕೆಂದ್ರೆ ಇಷ್ಟೊಂದು ಅವಧಿಯಲ್ಲಿ ಇಷ್ಟೊಂದು ನಷ್ಟ ನಿರೀಕ್ಷಿತವೇ ಆಗಿತ್ತೆನ್ನುವುದು ಎಲ್ಲರಿಂದ ಕೇಳಿಬರುತ್ತಿರುವ ವಿಶ್ಲೇಷಣೆ.ಆದ್ರೆ ಮೊದಲೇ ಆರ್ಥಿಕ ನಷ್ಟಕ್ಕೆ ಸಿಲುಕಿ ತತ್ತರಿಸುತ್ತಿರುವ ಬಿಎಂಟಿಸಿಗೆ ಈ 300 ಕೋಟಿ ನಷ್ಟ ಮುಳುಗೋ ಹಡಗಿನಂತಿರುವ ಬಿಎಂಟಿಸಿಯನ್ನು ಮತ್ತಷ್ಟು ದಿವಾಳಿಯಂಚಿಕೆಗೆ ಸಿಲುಕಿಸಿದ್ದು ವಿಪರ್ಯಾಸ.

ಬಹುಷಃ ಸಾರಿಗೆ ನಿಗಮದ ಅಧಿಕಾರಿಗಳು ಕಾರ್ಮಿಕರನ್ನು ಶತೃಗಳಂತೆ ನೋಡೊಕ್ಕೆ ಕಾರಣವಾಗಿದ್ದು ಕೂಡ ಇದೇ ನಷ್ಟ ಎನ್ನೋದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.ನಷ್ಟದಲ್ಲಿರುವ ಸಂಸ್ಥೆಯನ್ನು ಮತ್ತಷ್ಟು ಹಾಳು ಮಾಡಬೇಡಿ ಎಂದು ಮನವಿ ಮಾಡಿಕೊಂಡ ಹೊರತಾಗ್ಯೂ ಮನವಿಗೆ ಸ್ಪಂದಿಸದಿರುವುದು ಆಡಳಿತ ಮಂಡಳಿಯ ಆಕ್ರೋಶಕ್ಕೆ ಕಾರಣವೆನ್ನುವುದು ಕೂಡ ಅಷ್ಟೇ ಸ್ಪಷ್ಟ.

ಸಾರಿಗೆ ನಿಗಮಗಳಿಗೆ ಇಷ್ಟೊಂದು ಪ್ರಮಾಣದ ನಷ್ಟವಾಗಿರುವುದನ್ನು ನೆವವಾಗಿಟ್ಟುಕೊಂಡು ಆಡ ಳಿತ ವ್ಯವಸ್ಥೆ, ಇವತ್ತಿನ ದಿನಗಳಲ್ಲಿ ಕಾರ್ಮಿಕರಿಗೆ ಸಂಬಳ ಸರಿಯಾಗಿ ಕೊಡುತ್ತಿಲ್ಲ.ಕಾರಣ ಕೇಳಿದ್ರೆ ಮುಷ್ಕರ ವೇಳೆಯಲ್ಲಾದ ನಷ್ಟವನ್ನು ಮುಂದಿಟ್ಟುಕೊಂಡು ಕೈ ಚೆಲ್ಲುತ್ತಿವೆ.ಪರಿಸ್ತಿತಿ ಯಾವಾ್ಗ ಸುಧಾರಣೆ ಯಾಗಬಹುದು ಎಂದು ಕೇಳಿದ್ರೆ ಸಧ್ಯಕ್ಕಂತೂ ಇಲ್ಲ ಎನ್ನುವ ಉತ್ತರ ಕೊಡುತ್ತಿದ್ದಾರೆ. ಬಿಎಂಟಿಸಿ ಆಡಳಿತ ವ್ಯವಸ್ಥೆಗೆ ಬೇಕಿರುವುದು ಕೂಡ ಇಂತದ್ದೇ ನೆವಗಳೆನಿಸುತ್ತದೆ.ಹಾಗಾಗಿನೇ ಸಮಸ್ಯೆಗೆ ಕಾರ್ಮಿಕರನ್ನೇ ಬೊಟ್ಟು ಮಾಡಿ ತೋರಿಸಲಾಗುತ್ತಿದೆ.ನಂಬಿದವರೇ ಕೈ ಬಿಟ್ಟಿರುವುದರಿಂದ ಸಾರಿಗೆ ಕಾರ್ಮಿಕರ ಸ್ತಿತಿ ಅಕ್ಷರಶಃ ದಾರಿ ತಪ್ಪಿದ ಮಕ್ಕಳಂತಾಗುತ್ತಿದೆ.

ಸಾವಿರಾರು ಕಾರ್ಮಿಕರು ಗೈರುಕೋಟ್ಯಾಂತರ ರೂ ದಂಡ ವಸೂಲಿ:ಅದೇ ರೀತಿ ಈ 10 ದಿನಗಳಲ್ಲಿ ಬಿಎಂಟಿಸಿಯ ವಿವಿಧ ಘಟಕಗಳಲ್ಲಿ ಗೈರಾದ ಕಾರ್ಮಿಕರು ಮತ್ತು ಅವರಿಂದ ದಂಡದ ರೂಪದಲ್ಲಿ ಸಂಗ್ರಹಿಸಲಾದ ಹಣದ ವಿವರವನ್ನೂ ಕೇಳಲಾಗಿತ್ತು.

ಆರ್ ಟಿಐ ನಲ್ಲಿ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ 07/04/2021 ರಿಂದ 16/04/2021 ರವರೆಗೆ ಮುಷ್ಕರದ ಕಾರಣಕ್ಕೆ 581 ಕಾರ್ಮಿಕರು ಗೈರಾಗಿದ್ದರು.ಘಟಕ ಮಟ್ಟದಲ್ಲಿ ಕಾರ್ಮಿಕರಿಂದ 15 ಲಕ್ಷದ 73 ಸಾವಿರದ 800 ರೂಗಳೆಂದು ಮಾಹಿತಿ ಕೊಟ್ಟಿದ್ದಾರೆ. ಕೇಂದ್ರೀಯ ಕಾರ್ಯಾಗಾರದಲ್ಲಿ ಮೇಲ್ಕಂಡ 10 ದಿನಗಳಲ್ಲಿ 158 ಕಾರ್ಮಿಕರು ಗೈರಾಗಿದ್ದರೆ ಅವರಿಂದ 3,16,00 ರೂ ದಂಡ ವಸೂಲಿ ಮಾಡಲಾಗಿದೆಯಂತೆ.

ಘಟಕ 44 ರಲ್ಲಿ 198 ಕಾರ್ಮಿಕರು ಗೈರಾಗಿದ್ದರೆ ಅವರಿಂದ ಸಂಗ್ರಹಿಸಲಾದ ದಂಡ 6,69,000 ರೂ.ಘಟಕ 46 ರಲ್ಲಿ 319 ಕಾರ್ಮಿಕರು ಗೈರಾದರೆ ಸಂಗ್ರಹಿಸಲಾದ ದಂಡ 8,87,550 ರೂಗಳೆಂದು ಉತ್ತರ ನೀಡಿದ್ದಾರೆ.

 

300+ CRORES LOST IN 10 DAYS FOR BMTC BECAUSE OF TRANSPORT STRIKE: ಸಾರಿಗೆ ಮುಷ್ಕರದ ಎಫೆಕ್ಟ್ : 10 ದಿನ 300 ಕೋಟಿ ನಷ್ಟ..

Spread the love
Leave A Reply

Your email address will not be published.

Flash News