ANOTHER 300 ELECTRIC BUSES TO BMTC:..ಆಗ “90”..ಈಗ “300”…BMTC ಬರ್ಬಾದ್ ಮಾಡೋ “ಪ್ಲ್ಯಾನಾ”..?!

2 ಸಾವಿರ ಕೋಟಿ ನಷ್ಟದ ಸಂಸ್ಥೆಗೇಕೆ. “ಎಲೆಕ್ಟ್ರಿಕ್ ಬಸ್ ” ಗಳ ಖರೀದಿ ವ್ಯಾಮೋಹನೋ..?!

0

ಬೆಂಗಳೂರು: ನಷ್ಟದ ಮೇಲೆ ನಷ್ಟ ಅನುಭವಿಸುತ್ತಲೇ ಇರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನು ಸಂಪೂರ್ಣ ಮುಳುಗುವಂತೆ ಮಾಡೊಕ್ಕೆ ಆಡಳಿತ ವ್ಯವಸ್ಥೆಯೇ ಮುಂದಾಗಿದೆಯಾ. ಅನುಮಾನ ಕಾಡೊಕ್ಕೆ ಕಾರಣ ಎಲೆಕ್ಟ್ರಿಕ್  ಬಸ್ ಗಳ  ಖರೀದಿ ಬಗ್ಗೆ ತೋರಿಸ್ತಿರುವ ಅತಿಯಾದ ಕಾಳಜಿ ಹಾಗೂ ಆಸಕ್ತಿ. ಇದರಿಂದೆ ದೊಡ್ಡ ಮಟ್ಟದ ಹಣಕಾಸಿನ ಕೊಡುಕೊಳ್ಳುವಿಕೆ ನಡೆಯುತ್ತಿದೆಯಾ ಎನ್ನುವ ಶಂಕೆಯನ್ನುಕೂಡ ವ್ಯಕ್ತಪಡಿಸಲಾಗುತ್ತಿದೆ.

ಬಿಎಂಟಿಸಿಯನ್ನು ಪರಿಸರಸ್ನೇಹಿಯನ್ನಾಗಿಸುವ ಉದ್ದೇಶವೇ ಎಲೆಕ್ಟ್ರಿಕ್  ಬಸ್ ಗಳ ಖರೀದಿ..ಇದು ಬಿಎಂಟಿಸಿ ಆಡಳಿತ ವ್ಯವಸ್ಥೆಯ ಧ್ಯೇಯವಾಕ್ಯ. ಆದರೆ ಎಲೆಕ್ಟ್ರಿಕ್  ಬಸ್ ಗಳ  ಖರೀದಿ ಹಿಂದೆ ದುರುದ್ದೇಶಗಳಿತ್ತೆನ್ನುವ ಶಂಕೆಯನ್ನು ಅಂದೇ ವ್ಯಕ್ತಪಡಿಸಲಾಗಿತ್ತು. ಬೆಂಗಳೂರಿನ ವಾತಾವರಣಕ್ಕೆ ಎಲೆಕ್ಟ್ರಿಕ ಲ್ ಬಸ್ ಗಳ ಅಗತ್ಯ ನಿಜಕ್ಕೂ ಇದೆಯೇ ಎಂದು ಪ್ರಶ್ನಿಸಲಾರಂಭಿಸಿದ್ವು.

ಆದ್ರೂ ನಾನ್ ಮಾಡಿದ್ದೇ ರೂಲ್ಸ್ ಎನ್ನುವಂತಿರುವ ಸಾರಿಗೆ ಆಡಳಿತ ವ್ಯವಸ್ಥೆ ಯಾವ ವಿರೋಧಕ್ಕೂ ತಲೆ ಕೆಡಿಸಿಕೊಳ್ಳದೆ,ಬಿಎಂಟಿಸಿಗೆ ಇದರಿಂದ ಆಗಬಹುದಾದ ನಷ್ಟಕ್ಕೆ ಕ್ಯಾರೆ ಎನ್ನದೆ ಎಲೆಕ್ಟ್ರಿಕ್  ಬಸ್ ಬಗಳ ಖರೀದಿಗೆ ಮುಂದಾಗಿ ಮೊದಲ ಹಂತದಲ್ಲಿ 90 ಬಸ್ ಕೊಂಡಿದ್ದು,ಅವು ರಸ್ತೆಗಿಳಿದಿದ್ದು,ಗುತ್ತಿಗೆದಾರನ ಜೇಬಿಗೆ ಹಣ ತುಂಬಿಸಿ ತಮ್ಮ ಜೋಳಿಗೆ ಬರಿದುಮಾಡಿಕೊಂಡಿದ್ದೆಲ್ಲಾ ಈಗ ಇತಿಹಾಸ.

ಬಸ್ ಗಳ ಖರೀದಿ ವಿಚಾರದಲ್ಲಿ ಈಗಾಗಲೇ ಬಿಎಂಟಿಸಿ ಪಾಠ ಕಲಿತಿದ್ದಾಗಿದೆ.ಎಷ್ಟೋ ಕಂಪೆನಿಗಳಿಂದ ಖರೀದಿಸಿದ್ದ ಬಸ್ ಗಳನ್ನು ಲಾಂಗ್ ರನ್ ನಲ್ಲಿ ಓಡಿಸ್ಲಿಕ್ಕಾಗದೆ ಗುಜರಿಗೆ ಸೇರಿಸಿ ಕೋಟ್ಯಾಂತರ ಲಾಸ್ ಮಾಡಿಕೊಂಡಿರುವುದನ್ನು ನೋಡಿದ್ದೇವೆ.ಎಲೆಕ್ಟ್ರಿಕ್  ಬಸ್ ಗಳು ಪರಿಸರಸ್ನೇಹಿ ಎನ್ನುವ ಕಾರಣಕ್ಕೆ ಉತ್ತಮ ಎನ್ನುವುದನ್ನು ಬಿಟ್ಟರೆ ಬಿಎಂಟಿಸಿ ಮತ್ತು ಗುತ್ತಿಗೆ ಸಂಸ್ಥೆಗಳೊಂದಿಗಿನ ಒಪ್ಪಂದದಲ್ಲಿ ಇರುವ ಸಂಗತಿಗಳ ದೃಷ್ಟಿಯಿಂದ ಅನಗತ್ಯ  ಎನ್ನುವ ಅಭಿಪ್ರಾಯವನ್ನು ಅನೇಕ ಎಕ್ಸ್ ಪರ್ಟ್ ಗಳು ಹೇಳಿದ್ರು.

ಆದ್ರೆ ಯಾವುದೇ ಸಲಹೆ-ಅಭಿಪ್ರಾಯಗಳನ್ನು ಪಡೆಯದೆ ಏಕಾಏಕಿ ಬಸ್ ಗಳನ್ನು ಖರೀದಿಸುವ ಪ್ರಕ್ರಿಯೆಗೆ ಚಾಲನೆ ಕೊಟ್ಟೇ ಬಿಡ್ತು.ಅದರ ಪರಿಣಾಮ ಏನಾಯ್ತು. ಎಲೆಕ್ಟ್ರಿಕಲ್ ಬಸ್ ಗಳನ್ನು ಕೇಳುವವರೇ ಇಲ್ಲವಾಗಿದೆ.ದಿನದ ಗಳಿಕೆ ಗುತ್ತಿಗೆದಾರರ ಷರತ್ತುಗಳಂತೆ ಅವರ ಜೋಳಿಗೆಗೆ ಹೋಗುತ್ತಿದೆ.ಹಲವಾರು ತಿಂಗಳಿಂದ ಎಷ್ಟು ಪ್ರಮಾಣದ ಆದಾಯ  ಬಿಎಂಟಿಸಿಗೆ ಎಲೆಕ್ಟ್ರಿಕ ಲ್ ಬಸ್ ಗಳಿಂದ ಬಂದಿದೆ ಎಂದು ಕೇಳಿದ್ರೆ ಅದಕ್ಕೆ ಉತ್ತರವಿಲ್ಲ ಎನ್ನೋ ಆರೋಪ ಹಲವಾರು ಆರ್ ಟಿಐ ಕಾರ್ಯಕರ್ತರದು.

ಪರಿಸ್ಥಿತಿ ಹೀಗಿರುವಾಗಲೇ ಈಗ ಮತ್ತೊಂದು ದುಸ್ಸಾಹಸಕ್ಕೆ ಕೈ ಹಾಕ್ಲಿಕ್ಕೆ ಹೊರಟಿದೆ ಬಿಎಂಟಿಸಿ.ಹೆಚ್ಚುವರಿ 300 ಬಸ್ ಗಳನ್ನು ರಸ್ತೆಗಿಳಿಸಿವ ಪ್ಲ್ಯಾನ್ ಮಾಡಿದೆ.ಇದರಿಂದ ಗುತ್ತಿಗೆದಾರನ ಹೊಟ್ಟೆ ಭರ್ತಿಯಾಗುತ್ತದೆ ಎನ್ನುವುದನ್ನು ಬಿಟ್ಟರೆ ಬಿಎಂಟಿಸಿಗೆ ಆದಾಯ ಮಾತ್ರ ಖೋತವಾಗಲಿದೆ ಎನ್ನುವ ಚೇತಾವನಿಯನ್ನು ಅನೇಕರು ನೀಡಿದ್ದಾರೆ.ಆದರೆ ಸಂಸ್ಥೆ ಇರುವುದು ಗುತ್ತಿಗೆದಾರರನ್ನು ಉದ್ದಾರ ಮಾಡೊಕ್ಕೆ..ಅವರಿಂದ ಬರೋ ಕಿಕ್ ಬ್ಯಾಕ್ ಸಿಕ್ಕರೆ ಸಾಕೆನ್ನುವ ಮನಸ್ಥಿತಿಯಲ್ಲಿದ್ದಂತೆ ಇರುವ ಆಡಳಿತ ವ್ಯವಸ್ಥೆ ಇದ್ಯಾವ ಸಲಹೆ ಕೇಳುತ್ತಿಲ್ಲ ಎನ್ನುವ ಆಕ್ರೋಶ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ.

ಎಲೆಕ್ಟ್ರಿಕ್  ಬಸ್ ಗಳ ಮೂಲಕ ಖಾಸಗೀಕರಣದ ಕದ ತಟ್ಟಿದೆ ಎಂದು ವಿಶ್ಲೇಷಿಸುತ್ತಿರುವ ಸನ್ನಿವೇಶ ದಲ್ಲಿ ಮತ್ತಷ್ಟು ಬಸ್ ಗಳ ಖರೀದಿ ,ನಿಗಮದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಬೀದಿಗೆ ತಂದು ನಿಲ್ಲಿಸಿ ಅವರನ್ನು ನಿರುದ್ಯೋಗಿಗಳನ್ನಾಗಿ ಮಾಡುವುದೋ..ಗೊತ್ತಾಗ್ತಿಲ್ಲ..ಆದ್ರೆ 300 ಬಸ್ ಗಳ ಖರೀದಿ ಸಾರಿಗೆ ಕಾರ್ಮಿಕರಲ್ಲಿ ಮೂಡಿಸಿರುವ ಆತಂಕದ ಅನುಮಾನ ಹಾಗಿದೆ.

 

Spread the love
Leave A Reply

Your email address will not be published.

Flash News