2000 BMTC MIDI VEHICLES FOR LAST MILE CONNECTIVITY..?! “ಕೊನೇ ಪ್ರಯಾಣಿಕ” ತಲುಪಬೇಕಿರೋ ಸ್ಥಳಕ್ಕೂ ಸಾರಿಗೆ ವ್ಯವಸ್ಥೆ:2 ಸಾವಿರಕ್ಕೂ ಹೆಚ್ಚು ಮಿಡಿ ವಾಹನಗಳ ಸಂಚಾರಕ್ಕೆ ಬಿಎಂಟಿಸಿ ಪ್ಲ್ಯಾನ್

ಕೈ ತಪ್ಪುತ್ತಿರುವ ಲಾಭ ಗಿಟ್ಟಿಸಲು ಬಿಎಂಟಿಸಿಯಿಂದ ವಿನೂತನ ಪ್ಲ್ಯಾನ್-ವಾಹನಗಳ ಖರೀದಿಗೆ ಬ್ಲ್ಯೂ ಪ್ರಿಂಟ್ ರೆಡಿ.

0
ಮಿಡಿ ವಾಹನಗಳ ಸ್ಬರೂಪ ಹೀಗೂ ಇರಬಹುದಾ ಎನ್ನುವುದರ ಸಾಂದರ್ಭಿಕ ಚಿತ್ರ
ಮಿಡಿ ವಾಹನಗಳ ಸ್ಬರೂಪ ಹೀಗೂ ಇರಬಹುದಾ ಎನ್ನುವುದರ ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರು ಕ್ಷಿಪ್ರಗತಿಯಲ್ಲಿ ಬೆಳೀಬೋದೆನ್ನುವ ಕಲ್ಪನೆ ನಿಜಕ್ಕು ಬಿಎಂಟಿಸಿಗೆ ಇದ್ದರೆ ಈ ಪ್ಲ್ಯಾನನ್ನು ಯಾವತ್ತೋ ಮಾಡಬಹುದಿತ್ತು..ಆಗ ಮಾಡಿದಿದ್ರೆ ಪ್ಲ್ಯಾನ್ ವರ್ಕೌಟ್ ಆಗುತ್ತಿತ್ತೇನೊ..ಆದ್ರೆ ಲೇಟಾಗಿ ಎಚ್ಚೆತ್ತುಕೊಂಡಂತೆ ಇದೀಗ ಲಾಸ್ಟ್ ಮೈಲ್ ಕನೆಕ್ಟಿವಿಟಿ( ಕೊನೇ ಪ್ರಯಾಣಿಕ ತಲುಪಬೇಕಿರುವ ಸ್ಥಳದವರೆಗೂ) ಕಲ್ಪಿಸೊಕ್ಕೆ ಬಿಎಂಟಿಸಿ ಮುಂದಾಗಿದೆ.

ಇದೊಂದ್ ರೀತಿ ಊರು ಕೊಳ್ಳೆ ಹೊಡುದ್ಮೇಲೆ ದಿಡ್ಡಿ ಬಾಗಿಲು ಹಾಕಿದ್ರು ಎನ್ನುವ ಗಾಧೆ ನೆನಪಿಸುವಂತಿದೆ.ಬಿಎಂಟಿಸಿ ಬಸ್ ಗಳಿಗಿದ್ದ ಡಿಮ್ಯಾಂಡ್( ಡಿಮ್ಯಾಂಡನ್ನು ಸರ್ಕಾರ ಹಾಗು ಸಾರಿಗೆ ನಿಗಮಗಳೇ ಹಾಳು ಮಾಡಿದ್ದೆಂದರೆ ಸೂಕ್ತವಾಗಬಹುದು) ಇತರೆ ಸಾರಿಗೆ ವ್ಯವಸ್ಥೆಗಳ ಎದುರು ಕ್ಷೀಣಿಸುತ್ತಿರುವಾಗ ದಿಢೀರ್ ಎಚ್ಚೆತ್ತುಕೊಂಡಂತೆ ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಲಾಸ್ಟ್ ಮೈಲ್ ಕನೆಕ್ಟಿವಿಟಿ ಕಲ್ಪಿಸುವಂತ ವ್ಯವಸ್ಥೆಗೆ ಚಿಂತನೆ ನಡೆಸಿದಂತಿದೆ.

ಮಿಡಿ ವಾಹನಗಳ ಸ್ಬರೂಪ ಹೀಗೂ ಇರಬಹುದಾ ಎನ್ನುವುದರ ಸಾಂದರ್ಭಿಕ ಚಿತ್ರ
                                                                     ಮಿಡಿ ವಾಹನಗಳ ಸ್ಬರೂಪ ಹೀಗೂ ಇರಬಹುದಾ ಎನ್ನುವುದರ ಸಾಂದರ್ಭಿಕ ಚಿತ್ರ

ಬಿಎಂಟಿಸಿ ಬಸ್ ಗಳು ತಲುಪೊಕ್ಕೆ ಸಾಧ್ಯವಿಲ್ಲದ ಹಿನ್ನಲೆಯಲ್ಲಿ ಇತರೆ ಸಾರಿಗೆ ವ್ಯವಸ್ಥೆಗಳು ಆ ಕೊರತೆಯನ್ನು ಎನ್ ಕ್ಯಾಶ್ ಮಾಡಿಕೊಂಡಂತದ್ದು ವಾಸ್ತವ.ಇದರಿಂದ ಬಿಎಂಟಿಸಿಗಿದ್ದ ಡಿಮ್ಯಾಂಡ್ ಕಡಿಮೆಯಾದದ್ದೂ ಸತ್ಯನೇ..ಆದರೆ ಮೊದಲೇ ಇಂತದ್ದೊಂದು ಆಲೋಚನೆ ಮಾಡಿ ಲಾಸ್ಟ್ ಮೈಲ್ ಕನೆಕ್ಟಿವಿಟಿ ಕಲ್ಪಿಸುವ ಕೆಲಸ ಮಾಡಿದಿದ್ದರೆ ಇವತ್ತು ಎಲ್ಲೆಲ್ಲೂ ಬಿಎಂಟಿಸಿನೇ ರಾರಾಜಿಸುತ್ತಿತ್ತು.ಇತರೆ ಸಾರಿಗೆ ವ್ಯವಸ್ಥೆಗಳು ಹಂಚಿಕೊಂಡಿರುವ ಲಾಭವನ್ನು ತಾನೊಂದೇ ಪಡೆಯಬಹುದಿತ್ತು.ಹೀಗಾಗಿದ್ದೇ ಆದಲ್ಲಿ ಬಿಎಂಟಿಸಿ ಲಾಭದಾಯಕವಾಗೇ ಇರ್ತಿತ್ತೇನೋ.

ಆದರೆ ಅಂತದ್ದೊಂದು ದೂರಗಾಮಿ ಆಲೋಚನೆಯನ್ನು ಬಿಎಂಟಿಸಿ ಮಾಡಲೇ ಇಲ್ವೇ..ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದ ಅನೇಕ ಖಾಸಗಿ ಸಾರಿಗೆ ವ್ಯವಸ್ಥೆಗಳು ಬೈಕ್-ಟ್ಯಾಕ್ಸಿ-ಕಾರು-ಆಟೋ-ಸೈಕಲ್ ಗಳನ್ನು ಜಾರಿಗೆ ತಂದು ಲಾಭ ಮಾಡಿಕೊಂಡಿದ್ದಷ್ಟೇ ಅಲ್ಲ, ಬಿಎಂಟಿಸಿಗಿದ್ದ ಸ್ಥಾನಮಾನವನ್ನು ತಾವ್ ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾದ್ವು.ಬಿಎಂಟಿಸಿ ಪರಿಸ್ತಿತಿ ದಿನಕಳೆದಂತೆಲ್ಲಾ ಶೋಚನೀಯವಾಗುತ್ತಲೇ ಬಂದಿದ್ದನ್ನು ಒಪ್ಪಲೇಬೇಕು.

ಮಿಡಿ ವಾಹನಗಳ ಸ್ಬರೂಪ ಹೀಗೂ ಇರಬಹುದಾ ಎನ್ನುವುದರ ಸಾಂದರ್ಭಿಕ ಚಿತ್ರ
                                                                                                                                                                        ಮಿಡಿ ವಾಹನಗಳ ಸ್ಬರೂಪ ಹೀಗೂ ಇರಬಹುದಾ ಎನ್ನುವುದರ ಸಾಂದರ್ಭಿಕ ಚಿತ್ರ

ಎಲ್ಲಾ ಮುಗಿದು ನಿರ್ವಾತ ಸ್ಥಿತಿಗೆ ತಲುಪುತ್ತಿರುವ ಸನ್ನಿವೇಶದಲ್ಲಿ ಬಿಎಂಟಿಸಿಗೆ ದಿಢೀರ್ ಎಚ್ಚರವಾಗಿದೆ.ಬೇರೆ ಸಂಸ್ಥೆಗಳು ಪಡೆದು ಕೊಳ್ಳುತ್ತಿರುವ ಲಾಭವನ್ನು ತಾನೇ ಏಕೆ ಮಾಡಿಕೊಳ್ಳಬಾರದು ಎನ್ನುವ ಆಲೋಚನೆ ಬಂದಂತಿದೆ.ಹಾಗಾಗಿನೇ ಅವು ನೀಡುವಂಥ ಸೇವೆಯನ್ನು ನಾವೇ ಏಕೆ ಕೊಡಬಾರದು ಎನ್ನುವ ಗಂಭೀರ ಚಿಂತನೆ ನಡೆಸಿ ಸುಮಾರು 2 ಸಾವಿರದಷ್ಟು ಚಿಕ್ಕ ಗಾತ್ರದ  ಮ್ಯಾಕ್ಸಿ ಕ್ಯಾಬ್ ಗಳನ್ನು ರಸ್ತೆಗಿಳಿಸೊಕ್ಕೆ ಮುಂದಾಗಿದೆಯಂತೆ.ಅಂದ್ಹಾಗೆ ಇದರ ಸುಳಿವು ನೀಡಿರುವುದು ಬಿಎಂಟಿಸಿಯ ಹಿರಿಯ ಅಧಿಕಾರಿಗಳು.

ಪ್ರಯಾಣಿಕರನ್ನು ತಲುಪಿಸ್ಲಿಕ್ಕೆ ಸಾಧ್ಯವಾಗದಿರುವ ಪ್ರದೇಶಗಳಿಗೆ ಇತರೆ ಬೈಕ್-ಟ್ಯಾಕ್ಸಿ-ಆಟೋಗಳು ತಲುಪುತ್ತಿರುವುದನ್ನು ತಪ್ಪಿಸೊಕ್ಕೆ ಪುಟ್ಟಗಾತ್ರದ ವಾಹನಗಳನ್ನು ಓಡಿಸಿದ್ರೆ ಹೇಗೆ ಎನ್ನುವ ಆಲೋಚನೆಯ ಸುತ್ತ ಬಿಎಂಟಿಸಿ ಆಡಳಿತ ತಲೆಕೆಡಿಸಿಕೊಂಡಿದೆಯಂತೆ.ಇದಕ್ಕಾಗಿ ನೀಲನಕ್ಷೆ ಕೂಡ ಸಿದ್ಧವಾಗಿದೆಯಂತೆ.ಯಾವ ಗಾತ್ರದ ವೆಹಿಕಲ್ ಗಳನ್ನು ಬಳಸಿಕೊಳ್ಳುವುದು..ಇದಕ್ಕಾಗಿಯೇ ವಿನೂತನ ರೀತಿಯಲ್ಲಿ ವಾಹನಗಳನ್ನು ವಿನ್ಯಾಸಗೊಳಿಸಬೇಕೋ..ಎನ್ನುವ ಆಲೋಚನೆಯ ಸುತ್ತ ಕೆಲಸಗಳು ಕೂಡ ಆರಂಭವಾಗಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

ಮಿಡಿ ವಾಹನಗಳ ಸ್ಬರೂಪ ಹೀಗೂ ಇರಬಹುದಾ ಎನ್ನುವುದರ ಸಾಂದರ್ಭಿಕ ಚಿತ್ರ
ಮಿಡಿ ವಾಹನಗಳ ಸ್ಬರೂಪ ಹೀಗೂ ಇರಬಹುದಾ ಎನ್ನುವುದರ ಸಾಂದರ್ಭಿಕ ಚಿತ್ರ

ಇಂತದ್ದೊಂದು ವ್ಯವಸ್ಥೆ ತುರ್ತಾಗಿ ನಡೆಯಲೇಬೇಕು..ತಡವಾಗಿ ಸಾಕಷ್ಟು ಸಮಸ್ಯೆ ಮಾಡಿಕೊಂಡಿದ್ದೇವೆ.ನಷ್ಟವನ್ನು ಅನುಭವಿಸಿ ದ್ದೇವೆ.ನಮ್ಮ  ಈ ನಷ್ಟವನ್ನೇ ಬೇರೆಯವರು ಲಾಭಕ್ಕಾಗಿ ಬಳಸಿಕೊಂಡಿದ್ದಾರೆ.ಇದನ್ನು ತಪ್ಪಿಸಲೇಬೇಕು.ಇಲ್ಲವಾದಲ್ಲಿ ಬಿಎಂಟಿಸಿ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗುತ್ತದೆ.ಅಷ್ಟೇ ಅಲ್ಲ ನಮ್ಮ ಸಂಸ್ಥೆಯನ್ನೇ ಜನ ಮರೆತುಬಿಡುವ ಆತಂಕವಿದೆ. ಹಾಗಾಗಿ ಲಾಸ್ಟ್ ಮೈಲ್ ಕನೆಕ್ಟಿವಿಟಿ ಕಲ್ಪಿಸೊಕ್ಕೆ ವಾಹನಗಳನ್ನು ಬಿಎಂಟಿಸಿ ಮೂಲಕ ರಸ್ತೆಗಿಳಿಸೊಕ್ಕೆ ನಿರ್ಧರಿಸಿದೆ ಎಂದು ಅಧಿಕಾರಿಗಳು ಹೇಳ್ತಾರೆ.

ಬಿಎಂಟಿಸಿ ತಡವಾಗಿಯಾದ್ರೂ ಇಂತದ್ದೊಂದು ಪ್ಲ್ಯಾನ್ ಮಾಡಿದೆಯಲ್ಲಾ ಎಂಬ ಸಮಾಧಾನಕ್ಕೆ ಈ ವಿಚಾರವನ್ನು ಒಪ್ಪಬಹುದು. ಇದರ ಹಿಂದೆ ನಿಜಕ್ಕೂ ಪ್ರಯಾಣಿಕರ ಕಾಳಜಿ ಇದೆ ಎನ್ನುವುದೇ ಆದಲ್ಲಿ ಅದನ್ನು ನಿಸ್ಸಂಶಯವಾಗಿ ಮೆಚ್ಚಲೇಬೇಕಾಗುತ್ತದೆ.ಆದರೆ ಅದರಿಂದಲೇ ದುಡ್ಡು ಮಾಡಬೇಕು..2 ಸಾವಿರ ಬಸ್ ಇಳಿಸಿದ್ರೆ ನೂರಾರು ಕೋಟಿ ಕಿಕ್ ಬ್ಯಾಕ್ ಸಿಗುತ್ತೆನ್ನುವ ಏಕೈಕ ಉದ್ದೇಶದಿಂದಲೇ ಈ ಪ್ಲ್ಯಾನ್ ರೆಡಿಯಾಗ್ತಿದೆ ಎನ್ನುವುದಾದದಲ್ಲಿ ಅದರ ಅಗತ್ಯವೇ ನಮಗಿಲ್ಲ ಎನ್ನುವುದು ಬೆಂಗಳೂರಿಗರ ವಾದ.

ಅದೇನೇ ಆಗಲಿ 2 ಸಾವಿರ ಪುಟ್ಟ ವಾಹನಗಳನ್ನು ಪ್ರಯಾಣಿಕರ ಉದ್ದೇಶಕ್ಕೆ ರಸ್ತೆಗಿಳಿಸುತ್ತಿರುವುದು ಸಂತೋಷದ ವಿಚಾರ.ಅದು ಆದಷ್ಟು ಶೀಘ್ರವಾಗಿ ಆಗಲಿ..ಯಾವುದೆ ದುರುದ್ದೇಶದಿಂದ ಕೂಡಿರದೆ ಜಾರಿಯಾಗಲಿ ಎನ್ನುವುದು ಬೆಂಗಳೂರಿಗರ ಆಶಯ.

2000 BMTC MIDI VEHICLES FOR LAST MILE CONNECTIVITY..?! “ಕೊನೇ ಪ್ರಯಾಣಿಕ” ತಲುಪಬೇಕಿರೋ ಸ್ಥಳಕ್ಕೂ ಸಾರಿಗೆ ವ್ಯವಸ್ಥೆ:2 ಸಾವಿರಕ್ಕೂ ಹೆಚ್ಚು ಮಿಡಿ ವಾಹನಗಳ ಸಂಚಾರಕ್ಕೆ ಬಿಎಂಟಿಸಿ ಪ್ಲ್ಯಾನ್.

Spread the love
Leave A Reply

Your email address will not be published.

Flash News