TRANSPORT WORKERS “UNIFORM RATE” CONTROVERSY..!?ಸಾರಿಗೆ ಕಾರ್ಮಿಕರ “ಯೂನಿಫಾರ್ಮ್ “ಗೆ ಪುಡಿಗಾಸು..! ಹೆಚ್ಚುವರಿ ಹಣ ಪಾವತಿಸಿ ಸಮವಸ್ತ್ರ ಹೊಲಿಸಿಕೊಳ್ಳೋ ಅನಿವಾರ್ಯತೆ..? ಇದೊಂದ್ ರೀತಿ “ಆರ್ಥಿಕ ಶೋಷಣೆ” ಎನ್ನುತ್ತಿರುವ ಸಾರಿಗೆ ಸಿಬ್ಬಂದಿ…  

"ಯೂನಿಫಾರ್ಮ್ "ಗೆ ಓಬಿರಾಯನ ಕಾಲದ ದರ ನಿಗಧಿ: 2 ಸಾವಿರದಷ್ಟಾಗುವ ವೆಚ್ಚಕ್ಕೆ  ಇವ್ರು ಕೊಡ್ತಿರೋದು 742 ರೂ,  

0
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
                                                                                                                         ಪ್ರಾತಿನಿಧಿಕ ಚಿತ್ರ

ಬೆಂಗಳೂರು:ಇದು ನಿಜಕ್ಕೂ ಟ್ರ್ಯಾಜಿಡಿಯೇ ಸರಿ.ಅಧಿಕಾರಿಗಳು ನಿಗಮದಿಂದ ಸಿಗುವ ಸವಲತ್ತುಗಳನ್ನು ಝಾಮ್ ಝೂಮ್ ಅಂತ ಎಂಜಾಯ್ ಮಾಡ್ಬೋದು,ಆದ್ರೆ ಸಾರಿಗೆ ನಿಗಮಗಳ ಕಾರ್ಮಿಕರಿಗೆ ಅದರ ಸೌಭಾಗ್ಯವೇ ಸಿಗ್ತಿಲ್ಲ.ನಿಗಮಗಳ ಆಡಳಿತ ಮಂಡಳಿಗಳ ಯೋಗ್ಯತೆಗೆ ಕಾರ್ಮಿಕರು ಖುಷಿ ಖುಷಿಯಿಂದ ಸಮವಸ್ತ್ರ ಧರಿಸ್ಲಿಕ್ಕೆ ಆಗದಂತೆ ಮಾಡಿದ್ದಾರೆ.

ಏಕಂದ್ರೆ ಎಸಿ ಕಚೇರಿಗಳಲ್ಲಿ ಕುಳಿತ್ಕೊಂಡು ದರ್ಬಾರ್ ನಡೆಸುವಂಥ ಅಧಿಕಾರಿಗಳಿಗೆ ಇವತ್ತಿನ ದುಬಾರಿ ದುನಿಯಾದಲ್ಲಿ ಬಟ್ಟೆ ರೇಟ್ ಎಷ್ಟಾಗಿದೆ ಎನ್ನೋ ಮಾಹಿತಿ ಇಲ್ವಾ ಎನಿಸುತ್ತೆ.ಏಕಂದ್ರೆ ಕಾರ್ಮಿಕರಿಗೆ ಕೊಡ್ಲಿಕ್ಕೆ ಹೊರಟಿರುವ ಸಮವಸ್ತ್ರ ದರದ ವ್ಯವಸ್ಥೆಯೇ ನಗೆಪಾಟಿಲಿಗೆ ಈಡು ಮಾಡುವಂತಿದೆ.

ಇದು ಹೇಳಿ ಕೇಳಿ ದುಬಾರಿ ದುನಿಯಾ..ನಮ್ಮದುಡಿಮೆ,ಸಂಬಳ,ಭತ್ಯೆಗಳು ಪಾತಾಳಮುಖಿಯಾಗಿದ್ರೂ ಬಳಕೆಯ ವಸ್ತುಗಳು ಗಗನಮುಖಿಯಾಗಿವೆ.ಈ ಜೀವನ ಸಾಕಪ್ಪಾ ಎಂದು ಬೇಸತ್ತ ವ್ಯಕ್ತಿ ವಿಷ ಕೊಳ್ಳೊಕ್ಕೆ ಅಂಗಡಿಗಳಿಗೆ ಹೋದ್ರೂ ವಿಷದ ದರಕ್ಕೆ ಹೆದರಿ ವಾಪಸ್ಸಾಗುವಂತ ಸ್ತಿತಿ ಇಂದಿನದು.ಅಂತದ್ದರಲ್ಲಿ ಸಾರಿಗೆ ಕಾರ್ಮಿಕರಿಗೆ ಸಮವಸ್ತ್ರ ಕೊಂಡು ಹೊಲಿಸಿಕೊಳ್ಳೊಕ್ಕೆ ನೀಡಲು ಹೊರಟಿರುವ ದರ ಕೇಳಿದ್ರೆ ಎಂಥವರಿಗೂ ಆಶ್ಚರ್ಯ ಹಾಗೂ ಗಾಬರಿ ಮೂಡಿಸುತ್ತೆ.

ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೇಂದ್ರ ಕಚೇರಿ ಹೊರಡಿಸಿರುವ ಸುತ್ತೋಲೆ
ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೇಂದ್ರ ಕಚೇರಿ ಹೊರಡಿಸಿರುವ ಸುತ್ತೋಲೆ

ನಿಗಮದ 3 ಮತ್ತು 4ನೇ ದರ್ಜೆ ಸೇವೆಯಲ್ಲಿರುವ ತರಬೇತಿ ಕಾರ್ಮಿಕರಿಗೆ 2019-20 ಮತ್ತು 2020-21ರ ಸಾಲಿಗೆ ಅನ್ವಯವಾಗುವಂತೆ ಸಮವಸ್ತ್ರ ಪೂರೈಕೆ ವಿಚಾರಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಸುತ್ತೋಲೆ ಕಂಡು ಸಾರಿಗೆ ಕಾರ್ಮಿಕರು ತಬ್ಬಿಬ್ಬುಗೊಂಡಿದ್ದಾರೆ.ನಖಶಿಖಾಂತ ಉರಿದುಬಿದ್ದಿದ್ದಾರೆ.ಸಮವಸ್ತ್ರವನ್ನು ತಾವೇ ಖರೀದಿಸಿ ಹೊಲಿದು ಕಾರ್ಮಿಕರಿಗೆ ಪೂರೈಸುತ್ತಿದ್ದ ದಿನಗಳೇ ಚೆನ್ನಾಗಿದ್ವು.ಬಟ್ಟೆ ಕ್ವಾಲಿಟಿ-ಕ್ವಾಂಟಿಟಿ ಹೇಗಿದ್ರು ಪರ್ವಾಗಿಲ್ಲ ಎನ್ನುವಂತೆ ಧರಿಸುತ್ತಿದ್ದೆವೆಲ್ಲ ಎಂದು ಕಾರ್ಮಿಕರು ಅವತ್ತಿನ ಸ್ತಿತಿಯನ್ನು  ನೆನೆದು ಮಾತನಾಡುವಂತಾಗಿದೆ.

ಬಟ್ಟೆಯ ದರ ಉಳಿದೆಲ್ಲಾ ಕಚ್ಚಾ ವಸ್ತುಗಳಂತೆ ಏರಿಕೆ ಆಗುತ್ತಲೇ ಇದೆ.ಆದ್ರೆ ಇದನ್ನು ಸಾರಿಗೆ ನಿಗಮಗಳು ಅರ್ಥೈಸಿಕೊಂಡಂತೆ ಕಾಣ್ತಿಲ್ವೇನೋ ಎಂದೆನಿಸುತ್ತದೆ.ಏಕೆಂದರೆ ಆ ಸುತ್ತೋಲೆಯಲ್ಲಿರುವ ಸಂಗತಿಗಳೇ ಹಾಗಿವೆ.ಸಮವಸ್ತ್ರದ ಬದಲು ಹಣವನ್ನೇ ಕೊಟ್ ಬಿಡ್ತೇವೆ ಹೊಲಿಸಿಕೊಳ್ಳಿ ಎಂದು ಮಹಾ ಉಪಕಾರ ಮಾಡ್ತಿರೋ ರೇಂಜ್ನಲ್ಲಿ ಸುತ್ತೋಲೆ ಹೊರಡಿಸಿದೆ.

ರೇಮಂಡ್ಸ್ ಕಂಪೆನಿಯ ಬಟ್ಟೆಯಲ್ಲೇ ಪ್ಯಾಂಟ್-ಶರ್ಟ್ ಹೊಲೆದು ಪೂರೈಸುವ ಸಂಪ್ರದಾಯ ಸಾರಿಗೆ ನಿಗಮಗಳಲ್ಲಿದೆ.ಆಗಲೇ ದರ ಹೆಚ್ಚಿತ್ತು.ಈಗ ಅದು ಮತ್ತಷ್ಟು ಹೆಚ್ಚಿದೆ ಎನ್ನುವುದು ಅಧಿಕಾರಿಗಳಿಗೂ ಗೊತ್ತಿದೆ.ಹೀಗಿದ್ದರೂ ಅವರು ಬಟ್ಟೆ ಖರೀದಿಸಿ ಹೊಲಿದು ನಿಮ್ಗೆ ಪೂರೈಸುವುದು ಕಷ್ಟವಾಗ್ಬೋದು,ಹಾಗಾಗಿ ಅದರ ಹಣವನ್ನು ನಿಮ್ಗೆ ಕೊಟ್ ಬಿಡ್ತೇವೆ.ನೀವೇ ಖರೀದಿಸಿ ಹೊಲಿಸಿಕೊಂಡು ಹಾಕ್ಕೊಳ್ಳಿ.ಅದರಲ್ಲಿ ಉಳಿದ್ರೆ ನೀವೇ ಬಳಸಿಕೊಳ್ಳಿ ಎನ್ನುವಂತೆ ಸುತ್ತೋಲೆಯಲ್ಲಿ ತಿಳಿಸಿದೆ.

ಆದರೆ ಆಡಳಿತ ಮಂಡಳಿಗಳು ಕೊಡ್ಲಿಕ್ಕೆ ಹೊರಟಿರುವ ದರದಿಂದ ಎರಡು ಜತೆ ಪ್ಯಾಂಟ್ ಶರ್ಟ್ ಇರಲಿ,  ಸಂಪೂರ್ಣವಾಗಿ ಒಂದು ಜತೆ ಬಟ್ಟೆ ಹೊಲಿಸಲಿಕ್ಕೂ ಬರೊಲ್ಲ.2 ಪ್ಯಾಂಟ್ 2 ಶರ್ಟ್ ಖಾಕಿ ಸೂಟಿಂಗ್ಸ್( ಒಟ್ಟು 5.6 ಮೀಟರ್ ನಂತೆ)ಗೆ ಒಂದು ವರ್ಷಕ್ಕೆ ಪಾವತಿಸುತ್ತೇನೆಂದು ಹೇಳಿರುವುದು 742 ರೂ.ನೀಲಿ ಸೂಟಿಂಗ್ಸ್  ಗೆ 750 ರೂ ಹಾಗೆ ವೋಲ್ವೋ ಸಿಬ್ಬಂದಿಯ ಬಿಳಿ ಸೂಟಿಂಗ್ಸ್ಗೆ 731 ರೂ ನಗದು ಪಾವತಿಸುವುದಾಗಿ ಸುತ್ತೋಲೆಯಲ್ಲಿ ತಿಳಿಸಿದೆ.

ಇನ್ನು ಮಹಿಳಾ ಸಿಬ್ಬಂದಿಗಾದ್ರೆ 2 ಜತೆ ಖಾಕಿ ಮತ್ತು ನೀಲಿ ಸೀರೆ,ರವಿಕೆ( 6.20 ರಿಂದ 6.30 ಮೀಟರ್) ಗೆ 1707 ರೂಗಳನ್ನು ನಗದಾಗಿ ಪಾವತಿಸುತ್ತಿರುವುದಾಗಿ ಮುಖ್ಯ ಲೆಕ್ಕಾಧಿಕಾರಿಗಳು ಹೇಳ್ಕೊಂಡಿದ್ದಾರೆ.ಆದರೆ ವಾಸ್ತವದಲ್ಲಿ ಇದು ಸಾಧ್ಯನಾ ಎಂದು ನೋಡಿದ್ರೆ ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ..ಆನೆ ಬಾಯಿಗೆ ಹಪ್ಪಳ ಎನ್ನುವಂತಾಗಿದೆ.

ಸಾರಿಗೆ ಕಾರ್ಮಿಕ ಮುಖಂಡ ಆನಂದ್ ಪ್ರಕಾರ,1 ಮೀಟರ್ ರೇಮಂಡ್ಸ್ ಬಟ್ಟೆಗೆ ಕನಿಷ್ಟ 700 ರು ಇದೆ.ಒಂದು ಪ್ಯಾಂಟ್ ಹೊಲಿಸ್ಲಿಕ್ಕೆ 1.10 ಮೀಟರ್ ಬಟ್ಟೆ ಬೇಕು.ಶರ್ಟ್ ಗೆ 2.2 ಮೀಟರ್ ಬೇಕು.ಶರ್ಟ್ ಪ್ಯಾಂಟ್  ಹೊಲಿದುಕೊಡುವ ಕೂಲಿ ಎಲ್ಲಾ ಸೇರಿದ್ರೆ ಒಂದು ಜತೆ ಪ್ಯಾಂಟ್ ಗೆ 1000 ರು ಆಗುತ್ತೆ.ಅದು ಕೂಡ ಒಂದ್ ಜತೆ ಇನ್ನೊಂದು ಜತೆಗೆ ಮತ್ತೊಂದು ಸಾವಿರ ಆಗುತ್ತೆ.ಅಂದ್ರೆ 2 ಸಾವಿರ ಬೇಕಾಗುವ ಸಮವಸ್ತ್ರಕ್ಕೆ 742 ರೂ  ಕೊಟ್ಟು ಕೈ ತೊಳೆದುಕೊಳ್ಳೊಕ್ಕೆ ಅಧಿಕಾರಿಗಳು ಹೊರಟಿದ್ದಾರೆ.ಹಣವನ್ನು ಕಾರ್ಮಿಕರು ಪಡೆದಿದ್ದೇ ಆದಲ್ಲಿ ಹೆಚ್ಚುವರಿಯಾಗಿ ಹಣ ನೀಡಿ ಇವರೇ ಬಟ್ಟೆ ಹೊಲಿಸಿಕೊಳ್ಳಬೇಕಾಗುತ್ತದೆ ಹುಷಾರ್ ಎಂದು ಎಚ್ಚರಿಸಿದ್ದಾರೆ.

ಇನ್ನು ಮಹಿಳೆಯರ ವಿಚಾರಕ್ಕೆ ಬಂದ್ರೆ  ಚೂಡಿದಾರ್ ಅಥವಾ ಪ್ಯಾಂಟ್ ಸಾಕು..ಸೀರೆ ಯಾಕೆ ಬೇಕು ಎಂದು ಮೊದಲಿನಿಂದಲು ಮಹಿಳಾ ಸಿಬ್ಬಂದಿ ಹೇಳುತ್ತಲೇ ಬಂದಿದ್ದಾರೆ.ಆದ್ರೆ ಅವರ ಬೇಡಿಕೆಗೆ ಸ್ಪಂದಿಸದೆ ಹಳೇ ರೂಲ್ಸ್ ಪ್ರಕಾರವೇ ಖಾಕಿ.ನೀಲಿ ಸೀರೆ ಮತ್ತು ರವಿಕೆ ಕೊಡ್ಲಿಕ್ಕೆ ಹೊರಟಿದ್ದಾರೆ.ಅವರಿಗೆ 1707 ರೂ ಕೊಟ್ಟು ಕೈ ತೊಳೆದುಕೊಳ್ಳೊಕ್ಕೆ ಮುಂದಾಗಿದ್ದಾರೆ ಅಧಿಕಾರಿಗಳು.ಆದ್ರೆ ಇವರಿಗೂ ಇಷ್ಟೊಂದು ಹಣದಲ್ಲಿ 2 ಜತೆ ಯೂನಿಫಾರ್ಮ್ ಖರೀದಿಸುವುದು,ಹೊಲೆಸುವುದು ಕಷ್ಟವಾಗುತ್ತದೆ ಎನ್ನುವುದು ಮಹಿಳಾ ಸಿಬ್ಬಂದಿಯ ವಾದ.

ಆಡಳಿತ ಮಂಡಳಿಗೂ ಇಷ್ಟೊಂದು ಕಡಿಮೆ ಮೊತ್ತದಲ್ಲಿ ಯೂನಿಫಾರ್ಮ್ ಖರೀದಿ ಕಷ್ಟಸಾಧ್ಯ ಎನ್ನುವುದು ಗೊತ್ತಿದೆ.ಆದ್ರೂ ಏನೋ ಕೊಟ್ಟಿದ್ದೀವಿ ಎಂದು ಹೇಳಿಕೊಳ್ಳೊಕ್ಕೆ ಈ ಮಾರ್ಗ ಅನುಸರಿಸುತ್ತಿದೆ ಎನ್ನುವುದು ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಮಾತು.ಅದೇನೇ ಆಗಲಿ,ಸಾರಿಗೆ ನಿಗಮಗಳ ಕಾರ್ಮಿಕ ಸಿಬ್ಬಂದಿಗೆ ಯೂನಿಫಾರ್ಮ್ ನೆಪದಲ್ಲಿ ಮತ್ತೊಂದು ರೀತಿಯ ಆರ್ಥಿಕ ಶೋಷಣೆ ನಡೆಸಲಿಕ್ಕೆ ಮುಂದಾಗಿರುವುದು ಮಾತ್ರ ದುರಾದೃಷ್ಟಕರ.

TRANSPORT WORKERS “UNIFORM RATE” CONTROVERSY..!?ಸಾರಿಗೆ ಕಾರ್ಮಿಕರ “ಯೂನಿಫಾರ್ಮ್ “ಗೆ ಪುಡಿಗಾಸು..! ಹೆಚ್ಚುವರಿ ಹಣ ಪಾವತಿಸಿ ಸಮವಸ್ತ್ರ ಹೊಲಿಸಿಕೊಳ್ಳೋ ಅನಿವಾರ್ಯತೆ..? ಇದೊಂದ್ ರೀತಿ “ಆರ್ಥಿಕ ಶೋಷಣೆ” ಎನ್ನುತ್ತಿರುವ ಸಾರಿಗೆ ಸಿಬ್ಬಂದಿ…  

Spread the love
Leave A Reply

Your email address will not be published.

Flash News