DIESEL THEFT IN BMTC BUS DEPOS-DEPO MANAGERS THEMSELVES INVOLVE IN THIS MAAFIA..?! ಬಿಎಂಟಿಸಿಯಲ್ಲೇ “ಡೀಸೆಲ್ ಕಳ್ಳ”ರು..?! ಕೆಲ ನಾಲಾಯಕ್ ಡಿಪೋ ಮ್ಯಾನೇಜರ್ ಗಳಿಂದ್ಲೇ ಡೀಸೆಲ್ ಕಳ್ಳತನಕ್ಕೆ ಕುಮ್ಮಕ್ಕು..!!??

ಹಣ ಸೋರಿಕೆಗೆ ಬ್ರೇಕ್ ಹಾಕುತ್ತಿರುವ ಎಂಡಿ ಸತ್ಯವತಿಗೆ “ಡೀಸೆಲ್ ಕಳ್ಳಾಟ”ವೇ ದೊಡ್ಡ ಸವಾಲು.

0

ಬೆಂಗಳೂರು:ಮನೆ ಹೊರಗಿನ ಕಳ್ಳರನ್ನು ಹುಡುಕಿ ಹಿಡಿಯಬಹುದು..ಆದ್ರೆ ಮನೆ ಒಳಗಿನ ಕಳ್ಳರ ವಿಷಯದಲ್ಲಿ ಅದು ಕೊಂಚ ಕಷ್ಟ.ಬಿಎಂಟಿಸಿಯಲ್ಲಿ ಆಗಿರೋದು ಅಷ್ಟೇ..ಡೀಸೆಲ್ ಕೊರತೆಯಿಂದ ಸಾವಿರಾರು ಬಸ್ ಗಳು ರಸ್ತೆಗಿಳಿಯೋದು ಕಷ್ಟಸಾಧ್ಯ ಎನ್ನುವಂತ ಸ್ಥಿತಿ ನಿರ್ಮಾಣವಾಗಿದ್ದರೆ ಆ ಕೊರತೆಯನ್ನೇ ಕೆಲವು ನಾಲಾಯಕ್ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡು ಸಂಸ್ಥೆಗೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದ್ದಾರೆನ್ನುವ ಅಘಾತಕಾರಿ ಸುದ್ದಿ ಕೇಳಿಬಂದಿದೆ.ಕೆಲವು ಡಿಪೋ ಮ್ಯಾನೇಜರ್ ಗಳೇ ಡೀಸೆಲ್ ಭರ್ತಿ ಮಾಡುವುದರಿಂದ ಹಿಡಿದು,ಡೀಸೆಲ್ ಪ್ರಮಾಣದಲ್ಲಿ ಸುಳ್ಳು ಲೆಕ್ಕ ಸೃಷ್ಟಿಸಿ ದಿನಕ್ಕೆ ಲಕ್ಷಾಂತರ ಲೂಟಿ ಮಾಡುತ್ತಿದ್ದಾರೆನ್ನುವ ವರ್ತಮಾನ ಡಿಪೋ ಸಿಬ್ಬಂದಿಯಿಂದ್ಲೇ ಕೇಳಿಬಂದಿದೆ.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುವ ಸತ್ಯವತಿ ಅವರಿಗೆ ಬಿಎಂಟಿಸಿ ಸಮಸ್ಯೆಗಳು ಬಿಸಿ ತುಪ್ಪವಾಗಿ ಪರಿಣಮಿಸಿರೋದು ಸಹಜ. ಆದ್ರೂ ಬಿಎಂಟಿಸಿಯಲ್ಲಿರುವ ಅವ್ಯವಸ್ಥೆಯಿಂದಾಗಿ ಸೃಷ್ಟಿಯಾಗುತ್ತಿರುವ ಸಮಸ್ಯೆಗಳನ್ನು ನೀಗಿಸೊಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು  ಬಿಎಂಟಿಸಿಯಲ್ಲಿ ಏನೂ ಆಗೊಲ್ಲ ಎಂಬ ಬೇಸರದಿಂದ ಆಶಾವಾದವನ್ನೇ ಕಳ್ಕೊಂಡಿದ್ದ ಕಾರ್ಮಿಕ ಸಿಬ್ಬಂದಿಯ ಮನಸಲ್ಲಿ ನಿರೀಕ್ಷೆಗಳು ಗರಿಗೆದರೊಕ್ಕೆ ಕಾರಣವಾಗಿರುವುದು ಕೂಡ ಸುಳ್ಳಲ್ಲ..

ಆದ್ರೆ ಬಿಎಂಟಿಸಿಯ ಕೇಂದ್ರ ಕಚೇರಿ ಹಾಗೂ ಡಿಪೋಗಳಲ್ಲಿ ಎಂಥಾ ಖತರ್ನಾಕ್ ಗಳಿದ್ದಾರೆಂದ್ರೆ ಏನಾದ್ರೊಂದು ಹೊಸತನ್ನು ಮಾಡುವ ಇರಾದೆ ಹಾಗೂ ಉಮೇದಿ ನಿಂದ ಬರೋವ್ರ ಹಾದಿ ತಪ್ಪಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡ್ತನೇ ಬಂದಿದ್ದಾರೆ.ಈಗಿನ ಎಂಡಿ ಸತ್ಯವತಿ ಮೇಡಮ್ ಈ ಬಗ್ಗೆ ಎಚ್ಚರದಿಂದಿರುವುದು ಸೂಕ್ತ ಎನ್ನುವುದು ಕನ್ನಡ ಫ್ಲ್ಯಾಶ್ ನ್ಯೂಸ್ ನ ಆತ್ಮೀಯ ಸಲಹೆ.

ಡೀಸೆಲ್ ವಿಚಾರದಲ್ಲಿ ಸೃಷ್ಟಿಯಾಗಿರುವ ಸಮಸ್ಯೆಯನ್ನು ದೊಡ್ಡದಾಗಿ ಬಿಂಬಿಸುತ್ತಿರುವ ಡಿಪೋ ಮ್ಯಾನೇಜರ್ಸ್ ಅದೇ ಸಮಸ್ಯೆಯನ್ನು ತಮ್ಮ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆನ್ನುವುದನ್ನು ದಯವಿಟ್ಟು ಮೇಡಮ್ ಅರ್ಥೈಸಿಕೊಳ್ಳಬೇಕಾಗುತ್ತದೆ.ಡಿಪೋಗಳಲ್ಲಿ ಬಂಕ್ ಗಳ ಮೂಲಕ ಡೀಸೆಲ್ ತುಂಬಿಸಿಕೊಳ್ಳುವ ಸ್ಥಿತಿ ಯಾವಾಗ ನಿರ್ಮಾಣವಾಯಿತೋ ಆ ಹೊತ್ತಿನಿಂದಲೇ ಅನೇಕ ಡಿಪೋ ಮ್ಯಾನೇಜರ್ಸ್ ಡೀಸಲ್ ಟ್ಯಾಂಕರ್ ಗಳಿಂದ ಇಂತಿಷ್ಟು ಪ್ರಮಾಣದ ಡೀಸೆಲ್ ನ್ನು ಕದ್ದು  ಟ್ಯಾಂಕರ್ ಮಾಲೀಕರೊಂದಿಗೆ ಪರ್ಸಂಟೇಜ್ ವ್ಯವಹಾರಕ್ಕೆ ಇಳಿದ್ರು ಎನ್ನುವುದು ಸುಳ್ಳಲ್ಲ..ಸತ್ಯವತಿ ಮೇಡಮ್ ಇದರಾಳಕ್ಕಿಳಿದ್ರೆ ಸತ್ಯ ಮನದಟ್ಟಾಗೊಕ್ಕೆ ಹೆಚ್ಚಿಗೆ ಸಮಯ ಹಿಡಿಯೋದಿಲ್ವೇನೋ.

ಡೀಸೆಲ್ ನ್ನು ಸಗಟಾಗಿ ಪೂರೈಸುತ್ತಿದ್ದ ಕಂಪೆನಿಯೊಂದಿಗೆ ಒಪ್ಪಂದ ಕಡಿದುಕೊಂಡು, ಪೆಟ್ರೋಲ್ ಬಂಕ್ ಮಾಲೀಕರ ಮೂಲಕ ಚಿಲ್ಲರೆ ದರದಲ್ಲಿ ಲಮ್ ಸಮ್ ಡೀಸೆಲ್ ಖರೀದಿಸಲು ಆರಂಭಿಸಿ ಅನೇಕ ತಿಂಗಳಾಗಿವೆ. ಡಿಪೋಗಳಿಗೇ ಬಂದು ಪ್ರತಿ ಬಸ್ ಗೆ ಇಂತಿಷ್ಟು ಎಂದು ಡೀಸೆಲ್ ತುಂಬಿಸುವ ಕೆಲಸ ನಡೆಯುತ್ತಿತ್ತು.ಆದರೆ ಈ ಅವಧಿಯಲ್ಲಿ ಅನೇಕ ಡಿಪೋ ಮ್ಯಾನೇಜರ್ಸ್ ಬಸ್ ಗಳಿಗೆ ತುಂಬಿಸುವ ಡೀಸೆಲ್ ಪ್ರಮಾಣದಲ್ಲಿ ಸುಳ್ಳು ಲೆಕ್ಕ ಸೃಷ್ಟಿಸಲಾರಂಭಿಸಿದ್ರು ಎನ್ನುವ ಆರೋಪವಿದೆ.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ

ಅಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಡದಂಥ ವ್ಯವಸ್ಥೆಯೊಂದನ್ನು ಅವರೇ ಸೃಷ್ಟಿಸಿಕೊಂಡು ಪೆಟ್ರೋಲ್ ಬಂಕ್ ಗಳ ಮಾಲೀಕರು, ಡೀಸೆಲ್ ನ್ನು ಡಿಪೋಗಳಿಗೆ ತಂದು ಪೂರೈಸುವ ಕ್ಯಾಂಟರ್ ಚಾಲಕ ಹಾಗೂ ಆ ವೇಳೆ ಹಾಜರಿರುವಂತ ಸಿಬ್ಬಂದಿಯನ್ನು ಮ್ಯಾನೇಜ್ ಮಾಡಿಕೊಂಡು ಹಣ ಹೊಡೆಯುವ ಕೆಲಸವನ್ನು ಡಿಪೋ ಮ್ಯಾನೇಜರ್ಸ್ ಮಾಡುತ್ತಿದ್ದಾರೆನ್ನುವ ಮಾಹಿತಿಯನ್ನು ಕೆಲವು ಡ್ರೈವರ್ಸ್-ಕಂಡಕ್ಟರ್ಸ್ ಹಾಗೂ ಡಿಪೋ ಸಿಬ್ಬಂದಿನೇ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ನೀಡಿದ್ದಾರೆ.

ಹತ್ತಿರತ್ತಿರ 50 ಡಿಪೋಗಳಿರುವ ಬಿಎಂಟಿಸಿಯಲ್ಲಿ ಸಧ್ಯಕ್ಕೆ 6 ಸಾವಿರದಷ್ಟು ಬಸ್ ನಿತ್ಯ ಕಾರ್ಯಾಚರಣೆ ಮಾಡುತ್ತವೆ.ಪ್ರತ್ಯೇಕ ಡಿಪೋಗಳಲ್ಲಿ ಕನಿಷ್ಟ 100 ಬಸ್ ಗಳು ಆಪರೇಟ್ ಆಗ್ತವೆ ಎಂದೇ ಇಟ್ಟುಕೊಳ್ಳೋಣ.ಪ್ರತಿ ಬಸ್ ದಿನಕ್ಕೆ ಇಂತಿಷ್ಟು ಎಂದು ಡೀಸೆಲ್ ತುಂಬಿಸಿಕೊಳ್ಳುವ ಕೆಲಸ ಮಾಡುತ್ತಲೇ ಇರುತ್ವೆ.ಪ್ರತಿ ಬಸ್ ಗೂ ತುಂಬಿಸುವ ಡೀಸೆಲ್ ನಲ್ಲಿ ಒಂದಷ್ಟು ಲೀಟರ್ ಲೆಕ್ಕವನ್ನು ತಪ್ಪಾಗಿ ನಮೂದಿಸಿದ್ರೂ ಅದರಿಂದಲೇ ದಿನಕ್ಕೆ ಅದೆಷ್ಟೋ ಸಾವಿರಗಳಾಗುತ್ತವೆ.ಆ ಲಾಭವನ್ನು ಈ ಕಳ್ಳಾಟದಲ್ಲಿ ಶಾಮೀಲಾಗಿರುವವರು ಹಂಚಿಕೊಳ್ಳುವುದರಿಂದ ಅಕ್ರಮದ ಬಗ್ಗೆ ಶಂಕೆಯೇ ಮೂಡುತ್ತಿಲ್ಲವಂತೆ.

ಬಿಎಂಟಿಸಿ ವಿಜಿಲೆನ್ಸ್ ಮುಖ್ಯಸ್ಥೆ ಜಿ.ರಾಧಿಕಾ
ಬಿಎಂಟಿಸಿ ವಿಜಿಲೆನ್ಸ್ ಮುಖ್ಯಸ್ಥೆ ಜಿ.ರಾಧಿಕಾ

ಅಂದ್ಹಾಗೆ ಡಿಪೋ ಗಳಲ್ಲಿ ನಡೆಸುತ್ತಿರುವ ಡೀಸೆಲ್ ದಂಧೆಯ ಕಳ್ಳಾಟ ಕೇಂದ್ರೆ ಕಚೇರಿಗೆ ಗೊತ್ತಿಲ್ವಾ ಎಂದು ಪ್ರಶ್ನಿಸಿದ್ರೆ ಮಾಹಿತಿ ಇಲ್ದೆ ಇರೊಕ್ಕೆ ಸಾಧ್ಯವೇ ಇಲ್ಲ ಎನ್ನುವ ಉತ್ತರ ಸಿಗುತ್ತೆ.ಡಿಪೋಗಳಲ್ಲಿ ನಡೆಯುತ್ತಿರುವ ಡೀಸೆಲ್ ಕಳ್ಳಾಟದ ಬಗ್ಗೆ ಮಾಹಿತಿ ಇದ್ದಾಗ್ಯೂ ಅಧಿಕಾರಿಗಳು ಯಾವ್ದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದ್ರೆ ಅದಕ್ಕೆ ಅವರ ಶಾಮೀಲಾತಿ-ಸಹಮತ-ಪಾಲ್ಗೊಳ್ಳುವಿಕೆ ಇದೆ ಎಂದರ್ಥ ಅಲ್ಲವೇ..?

ಆಡಳಿತ ನಿರ್ವಹಣೆಯಲ್ಲಿ ಆಗುತ್ತಿರುವ  ಲೋಪಗಳಿಂದ ಸಂಭವಿಸುತ್ತಿರುವ ಹಣದ ಸೋರಿಕೆಗೆ ಬ್ರೇಕ್ ಹಾಕೊಕ್ಕೆ ಮುಂದಾಗಿರುವ ಸತ್ಯವತಿ ಮೇಡಮ್, ಡೀಸೆಲ್ ಪೂರೈಕೆ,ಅದರ ಖರ್ಚು ವೆಚ್ಚ,ಅದರ ನಿರ್ವಹಣೆ,ಲೆಕ್ಕಾಚಾರವನ್ನು ಡಿಪೋ ಮಟ್ಟದಲ್ಲಿ ಕೂಲಂಕುಶವಾಗಿ ಪರಿಶೀಲಿಸಿದ್ರೆ ಬಹುಷಃ ಡೀಸೆಲ್ ಕಳ್ಳಾಟದ ಅಕ್ರಮ ಸಮಗ್ರವಾಗಿ ಹೊರ ಬರಬಹುದೇನೋ..

ಬಿಎಂಟಿಸಿ ಐಟಿ ಮುಖ್ಯಸ್ಥ ಸೂರ್ಯಸೇನ್
ಬಿಎಂಟಿಸಿ ಐಟಿ ಮುಖ್ಯಸ್ಥ ಸೂರ್ಯಸೇನ್

ರಾಧಿಕಾ ಮೇಡಮ್ ಮನಸು ಮಾಡಬೇಕು:ಬಿಎಂಟಿಸಿ ವಿಜಿಲೆನ್ಸ್ ವಿಂಗ್ ಗೆ ಮುಖ್ಯಸ್ಥೆಯಾಗಿ ಬಂದಿರುವ ಐಪಿಎಸ್ ಅಧಿಕಾರಿ ಜಿ.ರೇವತಿ ಅವರು ಡಿಪೊಗಳಿಗೆ ಖುದ್ದು ಇಂಟರೆಸ್ಟ್ ತಗೊಂಡು ವಿಸಿಟ್ ಮಾಡಿ ತಮ್ಮ ಸ್ಟೈಲ್ ನಲ್ಲಿ ಕಾರ್ಯಾಚರಣೆಗಿಳಿದ್ರೆ  ಕೆಲ ಡಿಪೋ ಮ್ಯಾನೇಜರ್ಸ್ ಗಳ ಕಳ್ಳಾಟ ಬಯಲಾಗುತ್ತೆ.ಬಹುದೊಡ್ಡ ಆರ್ಥಿಕ ಸಂಕಷ್ಟದಿಂದ ಸಂಸ್ಥೆಯನ್ನು ಪಾರು ಮಾಡಿದ ಹೆಗ್ಗಳಿಕೆ ರಾಧಿಕಾ ಮೇಡಮ್ ಗೆ ಸಲ್ಲುತ್ತೆ

ಎಂಡಿಗಳೆನಿಸಿಕೊಂಡವರು ಎಸಿ ಚೇಂಬರ್ ಬಿಟ್ಟು ಹೊರ ಬರಲಾರದಂಥ ಸ್ಥಿತಿಯಲ್ಲಿರುವುದರಿಂದಲೇ ಅಧಿಕಾರಿಗಳು ತಾವಾಡಿದ್ದೇ ಆಟ..ಹೂಡಿದ್ದೇ ಲಗ್ಗೆ..ಮಾಡಿದ್ದೇ ರೂಲ್ಸ್ ಎನ್ನುವಷ್ಟು ಕೊಬ್ಬೋಗಿದ್ದಾರೆ. ಎಂಡಿ ನಮ್ಮಲ್ಲಿಗೆ ಬರೊಲ್ಲ ಬಿಡು ಎಂದು ಕಳ್ಳಾಟವಾಡಿ ತಮ್ಮ ಜೇಬಿಗೂ ಹಣ ಇಳಿಸಿಕೊಳ್ಳುತ್ತಿದ್ದಾರೆ.ಅಷ್ಟೇ ಅಲ್ಲ ಅನ್ನ ಕೊಡುತ್ತಿರುವ ಸಂಸ್ಥೆಗೂ ದ್ರೋಹ ಬಗೆಯುತ್ತಿದ್ದಾರಂತೆ.

ಎಂಡಿ ಸತ್ಯವತಿ ಎಸಿ ಕಚೇರಿಗೆ ಸೀಮಿತವಾಗದೆ ಪ್ರತಿ ಡಿಪೋಗಳಿಗೆ ವಿಸಿಟ್ ಹಾಕಿ,ಅಲ್ಲಿನ ವ್ಯವಸ್ಥೆ ಪರಿಶೀಲಿಸುವ ಅದರಲ್ಲೂ ಪ್ರಮುಖವಾಗಿ ಡೀಸೆಲ್ ನ ಬಳಕೆ-ಖರ್ಚು ವೆಚ್ಚದ ಮೇಲೆ ಕಣ್ಣಾಯ್ಸಿದ್ರೆ ಡೀಸಲ್ ಕಳ್ಳಾಟ ಮಾಫಿಯಾ ತನ್ನಿಂತಾನೇ ಅನಾವರಣವಾಗಬಹುದೇನೋ..

ಓಪನಿಂಗ್ ರೀಡಿಂಗ್ ನಿಂದ ಎಂಡ್ ರೀಡಿಂಗ್, ಬಸ್ ಗಳ ಕಾರ್ಯಾಚರಣೆ,ಅವು ತುಂಬಿಸಿದ ಇಂಧನದ ಪ್ರಮಾಣದ ಬಗ್ಗೆ ತನಿಖೆ ನಡೆಸಿದ್ರೆ ,ಒಂದ್ವೇಳೆ  ಅಲ್ಲಿರಬಹುದಾದ ಸಿಸಿ ಕ್ಯಾಮೆರಾಗಳ( ಸಿಸಿ ಕ್ಯಾಮೆರಾಗಳಿದ್ದರೆ ಅದು ಬಿಎಂಟಿಸಿ ಅದೃಷ್ಟ) ದೃಶ್ಯಾವಳಿಗಳನ್ನು ಅವಲೋಕಿಸಿದ್ರೆ ಡಿಪೋ ಮ್ಯಾನೇಜರ್ಸ್ ಡಿಪೊಗಳಲ್ಲಿ ನಡೆಸುತ್ತಿರುವ ಡೀಸೆಲ್ ಮಾಫಿಯಾ ಗಮನಕ್ಕೆ ಬರಬಹುದೇನೋ..ಆ ಕೆಲಸ ಮೊದಲು ಎಂಡಿ ಸತ್ಯವತಿ ಅವರಿಂದಾಗಬೇಕಿದೆ.ಡೀಸೆಲ್ ಕಳ್ಳಾಟದಿಂದ ಆಗುತ್ತಿರುವ ನಷ್ಟಕ್ಕೆ ಬ್ರೇಕ್ ಬೀಳೋದು ಕೂಡ ಆಗಲೇ ಅಲ್ವಾ..

Spread the love
Leave A Reply

Your email address will not be published.

Flash News