5 LETRE COOCKING OIL DEMAND TO STAFF FOR LEAVE BY KALYANA KARNATAKA SAARIGE OFFICER:“ಕಲ್ಯಾಣ ಕರ್ನಾಟಕ ಸಾರಿಗೆ” ಯಲ್ಲೊಬ್ಬ “ನುಂಗುಬಾಕಿ”ಹೇಮಾವತಿ: ರಜೆ ಮಂಜೂರಾತಿಗೆ 5 ಲೀಟರ್ ಅಡುಗೆ ಎಣ್ಣೆಗೆ ಡಿಮ್ಯಾಂಡ್:

ಈಕೆ ಕೈ ಬೆಚ್ಚಗೆ ಮಾಡಿದ್ರೆ ರಜೆ ಆನ್ ಸ್ಪಾಟ್ ಸ್ಯಾಂಕ್ಷನ್:ಹೇಮಾವತಿ ಲಂಚಾವತಾರಕ್ಕೆ ಸಾರಿಗೆ ಕಾರ್ಮಿಕ ಸಿಬ್ಬಂದಿ ಫುಲ್ ಗರಂ.

0

ಬೆಂಗಳೂರು: ಇದು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ ನಡೆಯುತ್ತಿರುವ ಅಕ್ರಮದ ಮತ್ತೊಂದು ಝಲಕ್..ಇಲ್ಲಿ ಕೆಲಸ ಮಾಡ್ತಿರುವ ಅಧಿಕಾರಿಯೋರ್ವರಿಗೆ ಹಣ-ದಿನಸಿ  ಕೊಟ್ಟರೆ ಸಾಕು ಸಿಬ್ಬಂದಿಗೆ ಆನ್ ಸ್ಪಾಟ್ ಲೀವ್ ಸ್ಯಾಂಕ್ಷನ್ ಆಗುತ್ತೆ..ಅಲ್ಲದೇ ಕಚೇರಿಯ ಕೆಲಸಗಳು ಫಿನಿಷ್ ಆಗ್ತವೆ.ಅಂದ್ಹಾಗೆ ನೋಡೋವರೆಗೂ ನೋಡಿ..ತಡೆದುಕೊಳ್ಳೋವರೆಗು ಟಾರ್ಚರ್ ತಡೆದುಕೊಂಡಿದ್ದ ಸಿಬ್ಬಂದಿ ಆಕೆಯ ಡಿಮ್ಯಾಂಡ್ ಫುಲ್ ಫಿಲ್ ಮಾಡಲಿಕ್ಕಾಗದೆ “ಬೇಡಿಕೆ”ಯ ಆಡಿಯೋದ ಝಲಕ್ ವೊಂದನ್ನು ರಿಲೀಸ್ ಮಾಡಿದ್ದಾರೆ.

ಅಂದ್ಹಾಗೆ  ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಗಂಗಾವತಿ ಡಿಪೋದಲ್ಲಿ ಕಾರ್ಮಿಕ ಸಿಬ್ಬಂದಿ ಪಾಲಿಗೆ ಕಂಟಕವಾಗಿರುವ ಮಹಾತಾಯಿಯೇ ಹೇಮಾವತಿ.ನೋಡೊಕ್ಕೆ ಚೆನ್ನಾಗಿ ಕಾಣುತ್ತಾಳೆ.ಕೈ ತುಂಬಾ ಸಂಬಳ ಕೂಡ ಇದೆ.ವಯಸ್ಸು ಕೂಡ ಸಣ್ಣದು.ನೀಯತ್ತಾಗಿ ಕೆಲಸ ಮಾಡಿಕೊಂಡು ಹೋದ್ರೆ ಉತ್ತಮ ಸ್ಥಾನಮಾನಕ್ಕೂ ಹೋಗಬಹುದು.

ಆದ್ರೆ ಈಯಮ್ಮನ ವರ್ತನೆ,ಲಂಚಬಾಕತನ ಗಮನಿಸಿದ್ರೆ ಸಧ್ಯದಲ್ಲೇ ಯಾವುದೋ ಟ್ರಾಫ್ ಗೆ ಒಳಗಾಗಿ ಮನೆಗೆ ಹೋಗ್ತಾಳೇನೋ ಎಂಬ ಶಂಕೆ ವ್ಯಕ್ತವಾಗ್ತಿದೆ.ಈಕೆ ಮಾಡಿಕೊಳ್ಳುತ್ತಿರುವ ಯಡವಟ್ಟೇ ಹಾಗಿದೆ.ಡಿಪೋದಲ್ಲಿರುವ ಸಿಬ್ಬಂದಿಗೆ ಅಗತ್ಯವಾಗಿದ್ದ ರಜೆ ಮಂಜೂರು ಮಾಡ್ಲಿಕ್ಕೆ 5 ಲೀಟರ್ ಅಡುಗೆಎಣ್ಣೆ ತಂದುಕೊಡುವಂಥ ಡಿಮ್ಯಾಂಡ್ ಇಟ್ಟಿದ್ದಾಳೆನ್ನುವ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಗಂಗಾವತಿ ಡಿಪೋ ಅಸಿಸ್ಟೆಂಟ್ ಟ್ರಾಫಿಕ್ ಇನ್ಸ್ ಪೆಕ್ಟರ್ ಹೇಮಾವತಿ
ಗಂಗಾವತಿ ಡಿಪೋ ಅಸಿಸ್ಟೆಂಟ್ ಟ್ರಾಫಿಕ್ ಇನ್ಸ್ ಪೆಕ್ಟರ್ ಹೇಮಾವತಿ

ಗಂಗಾವತಿ ಡಿಪೋದಲ್ಲಿ ಅಸಿಸ್ಟೆಂಟ್ ಟ್ರಾಫಿಕ್ ಇನ್ಸ್ ಪೆಕ್ಟರ್ ಆಗಿರುವ ಹೇಮಾವತಿ ಮುಂದೆ ಡಿಪೋದ ಸಿಬ್ಬಂದಿ ರಜೆಯ ಮನವಿ ಮಾಡಿಕೊಂಡಿರಬೇಕು.ಮೊದಲೇ ಹಣ-ವಸ್ತು ಕಂಡ್ರೆ ಬಾಯಿಬಿಡೋ ಸ್ವಭಾವದ ಈಕೆ ಎಂದಿನಂತೆ ಸಿಬ್ಬಂದಿಗೆ ನಿನ್ನ ರಜೆ ಮಂಜೂರು ಮಾಡುತ್ತೇನೆ..ಯಾರಿಗು ಹೇಳ್ಬೇಡ.ಆದ್ರೆ ನನ್ನದೊಂದು ಬೇಡಿಕೆ ಇದೆ.ಪಗಾರ್ ಆದ್ಮೆಲೆ ಕೊಡುಸ್ತಿಯೋ,ಇವತ್ತೇ ಕೊಡುಸ್ತಿಯೋ ಗೊತ್ತಿಲ್ಲ,5 ಲೀಟರ್ ಅಡುಗೆ ಎಣ್ಣೆ ಕೊಡ್ಸು ಎಂದು ಡಿಮ್ಯಾಂಡ್ ಇಟ್ಟಿರುವ ಆಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೇಮಾವತಿ ಈ ರೀತಿಯ ಬೇಡಿಕೆ ಇಡೋದು,ಅದನ್ನು ಪಡೆಯೋದು ಹೊಸದೇನೆಲ್ಲ..ಸಿಬ್ಬಂದಿ ಕೂಡ ಆಕೆಗೆ ಹಣ-ವಸ್ತು ಕೊಟ್ಟು ತಮ್ಮ ಕೆಲಸ ಮಾಡಿಸಿಕೊಳ್ತಿದ್ದಾರೆ.ಅದೆಲ್ಲಾ ಮಾಮೂಲಾಗಿ ಹೋಗಿತ್ತು.ಆದರೆ ಈಕೆಯ ಬೇಡಿಕೆಗಳು ಸಿಕ್ಕಾಪಟ್ಟೆ ಟಾರ್ಚರ್ ಎನಿಸ್ಲಿಕ್ಕೆ ಯಾವಾಗ ಶುರುವಾಯ್ತೋ ಆಗಲೇ ಸಿಬ್ಬಂದಿ ಒಂದೊಂದಾಗೇ ಆಡಿಯೋ ವೈರಲ್ ಮಾಡ್ಲಿಕ್ಕೆ ಶುರುಮಾಡಿದ್ರು.ಹಣ ಹಾಗೂ ಅನೇಕ ವಸ್ತುಗಳಿಗೆ  ಬೇಡಿಕೆ ಇಟ್ಟಿದ್ದಾಳೆನ್ನುವ ಸಾಕಷ್ಟು ಆಡಿಯೋಗಳು ವೈರಲ್ ಆಗಿವೆ..ಇನ್ನೂ ಒಂದಷ್ಟು ವೈರಲ್ ಆಗಬೇಕಿವೆ..ಸಧ್ಯಕ್ಕೆ ಈ ಆಡಿಯೋ ಲಭ್ಯವಾಗಿದೆ.ನಿಜಕ್ಕೂ ನಾಚಿಕೆಗೇಡಿನ ವಿಷಯ ಎಂದು  ಸಾರಿಗೆ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೇಮಾವತಿಯ ಕರ್ಮಕಾಂಡ ಇಷ್ಟಕ್ಕೆ ನಿಲ್ಲೊಲ್ಲ.ಕೆಲ ವರ್ಷಗಳ ಹಿಂದೆ ಡಿಪೋದಲ್ಲಿ ಡ್ರೈವರ್ ಮಗಳೊಬ್ಬಳು ಸಾವನ್ನಪ್ಪಿದ್ಲಂತೆ.ಆದ್ರೆ ಆ ವಿಷಯನ್ನೂ ಆ ಹುಡುಗಿಯ ತಂದೆಗೂ ತಿಳಿಸಿರಲಿಲ್ಲವಂತೆ ಈ ಮಹಾತಾಯಿ.ಆ ಸನ್ನಿವೇಶದಲ್ಲಿ ಅದು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು.ಸಾರಿಗೆ ಕಾರ್ಮಿಕರಂತೂ ಈಕೆ ವಿರುದ್ಧ ಕೆಂಡಾಮಂಡಲವಾಗಿದ್ರು.

ಇದೀಗ ರಜೆ ಕೊಡ್ಲಿಕ್ಕೆ ಲಂಚದ ರೂಪದಲ್ಲಿ 5 ಲೀಟರ್ ಎಣ್ಣೆಗೆ ಡಿಮ್ಯಾಂಡ್ ಮಾಡಿ ವಿವಾದಕ್ಕೆ ಸಿಲುಕಿದ್ದಾಳಷ್ಟೇ ಅಲ್ಲ, ಸಾರಿಗೆ ಕಾರ್ಮಿಕರ ಆಕ್ರೋಶಕ್ಕೂ ಕಾರಣವಾಗಿದೆ.ಇಂಥಾ ಅಧಿಕಾರಿ ವಿರುದ್ದ ಕಠಿಣಾತೀ ಕಠಿಣ ಕ್ರಮ ಕೈಗೊಳ್ಳಬೇಕೆನ್ನುವುದು ಸಾರಿಗೆ ಕಾರ್ಮಿಕ ಸಮುದಾಯದ ಮನವಿ.

 

5 LETRE COOCKING OIL DEMAND TO STAFF FOR LEAVE BY KALYANA KARNATAKA SAARIGE OFFICER:

“ಕಲ್ಯಾಣ ಕರ್ನಾಟಕ ಸಾರಿಗೆ” ಯಲ್ಲೊಬ್ಬ “ನುಂಗುಬಾಕಿ”ಹೇಮಾವತಿ: ರಜೆ ಮಂಜೂರಾತಿಗೆ 5 ಲೀಟರ್ ಅಡುಗೆ ಎಣ್ಣೆಗೆ ಡಿಮ್ಯಾಂಡ್:

Spread the love
Leave A Reply

Your email address will not be published.

Flash News