WHY THIS INJUSTICE IN BMTC : BMTCಯಲ್ಲಿ ಇದೆಂಥಾ ಅನ್ಯಾಯ…?! “ಅಧಿಕಾರಿ”ಗಳ ಕಣ್ಣಿಗೆ “ಬೆಣ್ಣೆ”….”ಕಾರ್ಮಿಕ” ಸಿಬ್ಬಂದಿಗೆ “ಸುಣ್ಣ”ನಾ..? ಸಾಮಾಜಿಕ ನ್ಯಾಯಕ್ಕೆ ಬೆಲೆಯೇ ಇಲ್ವಾ..?!
ಸಾವಿರ”ಗಳಲ್ಲಿ “ಲಾಸ್” ಮಾಡಿದ “ಡ್ರೈವರ್ಸ್-ಕಂಡಕ್ಟರ್ಸ್” ಗೆ ಸಸ್ಪೆನ್ಷನ್ ಶಿಕ್ಷೆ..”ಕೋಟ್ಯಾಂತರ” ಅಕ್ರಮದ ಆರೋಪ ಹೊತ್ತ “ಕಳಂಕಿತ” “ಅಧಿಕಾರಿ”ಗಳಿಗೆ ದೊಡ್ಡವರ “ಶ್ರೀರಕ್ಷೆ”..

ಬೆಂಗಳೂರು: ನ್ಯಾಯವೆಲ್ಲಿ.. ನ್ಯಾಯವೆಲ್ಲಿ.. ನ್ಯಾಯವೆಲ್ಲಿ ಅಡಗಿದೆ…ಕನ್ನಡದ ವರನಟ ಡಾ.ರಾಜ್ ಕುಮಾರ್ ನಟನೆಯ ಧ್ರುವತಾರೆ ಚಿತ್ರದ ಸಾಲುಗಳಿವು..
ಬಿಎಂಟಿಸಿಯಲ್ಲಿ ಆಗುತ್ತಿರುವ ಅನ್ಯಾಯ ಕೂಡ ಇದೇ ಸಾಲುಗಳನ್ನು ನೆನಪಿಸುತ್ತದೆ. ನ್ಯಾಯದಾನದಲ್ಲಿ ಒಬ್ಬರಿಗೊಂದು, ಇನ್ನೊಬ್ಬರಿ ಗೊಂದು ಎನ್ನುವ ತಾರತಮ್ಯ ಅನುಸರಿಸಲಾಗು ತ್ತಿರುವುದು ಕಾರ್ಮಿಕ ವಲಯದಲ್ಲಿ ಭಾರೀ ಆಕ್ರೋಶವನ್ನೇ ಮೂಡಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ( ಬಿಎಂಟಿಸಿ)ಯಲ್ಲಿ ನಡೆಯುತ್ತಿರುವುದು “ಅಂದಾದರ್ಬಾರ್” ಅಲ್ದದೆ ಇನ್ನೇನು..ಸದಾ ಅಧಿಕಾರಿ ಗಳ ಪರವಾಗೇ ನಿಲ್ಲುವ ಆಡಳಿತ ವರ್ಗ ಕಾರ್ಮಿಕರನ್ನು ಕಾಲಕಸದಂತೆ ಟ್ರೀಟ್ ಮಾಡ್ತಿದೆ ಎನ್ನೋದಕ್ಕೆ ದಂಡಿ ದಂಡಿ ಉದಾಹ ರಣೆ ಕೊಡಬಹುದು..ಅಧಿಕಾರಿಗಳು ಕೋಟಿಗಳಲ್ಲಿ ಭ್ರಷ್ಟಾಚಾರ ಮಾಡಿದ್ದಕ್ಕೆ ಕಣ್ಣಿಗೆ ರಾಚುವಂಥ ಸಾಕ್ಷ್ಯಗಳಿದ್ದರೂ ಅದಕ್ಕೆ ತೇಪೆ ಹಚ್ಚೋ ಕೆಲಸ ನಡೆಯುತ್ತದೆ.ಅದೇ ಡ್ರೈವರ್-ಕಂಡಕ್ಟರ್ಸ್ ಸಿಬ್ಬಂದಿ ಪ್ರಜ್ಞಾಪೂರ್ವಕವಾಗಿ ತಪ್ಪೆಸಗದಿದ್ದರೂ ಅವರನ್ನು ಅಮಾನತ್ತಿ ನಲ್ಲಿಡುವ ಅಥವಾ ವಜಾಗೊಳಿಸಲಾಗುತ್ತದೆ.
ಬಿಎಂಟಿಸಿ ಆಡಳಿತ ವರ್ಗದ ಪಕ್ಷಪಾತ ಧೋರಣೆ ಬಗ್ಗೆ ಮಾತನಾಡೊಕ್ಕೆ ಕಾರಣವೂ ಇದೆ.ಇದು ಹತ್ತಿರತ್ತಿರ 7 ವರ್ಷಗಳ ಹಿಂದಿನ ಪ್ರಕರಣ.(ಆದರೆ ಅಧಿಕಾರಿಗಳು ಅದೇ ಅವಧಿಯಲ್ಲಿ ಎಸಗಿರುವ ಅಕ್ರಮಗಳು ಮುಚ್ಚೇ ಹೋಗುತ್ತವೆ).ಅಷ್ಟೊಂದು ಹಳೆಯ ಪ್ರಕರಣ ಬಹುತೇಕ ಮೆರೆತೇ ಹೋಗಿರುತ್ತದೆ.ಆದರೆ ಅಧಿಕಾರಿಗಳು ಸೇಡಿಗೆ ನಿಂತ್ರೆ ಏನ್ ಬೇಕಾದ್ರೂ ಮಾಡ್ತಾರೆನ್ನು ವುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗ್ತದೆ.
ಏಳು ವರ್ಷಗಳ ಹಿಂದೆ ಅಂದ್ರೆ 07/12/2015 ರಂದು ಘಟಕ 9 ರಲ್ಲಿ ವೇಣುಗೋಪಾಲ್ ಎನ್ನುವವರು ಕಾರ್ಯನಿರ್ವಹಿಸುತ್ತಿದ್ದರು. ಅವತ್ತಿಗೆ ನಡೆದ ಮುಷ್ಕರವೊಂದ್ರಲ್ಲಿ ಈ ವೇಣುಗೋಪಾಲ್ ಘಟಕದ ಚಾಲಕ-ನಿರ್ವಾಹಕರನ್ನು ಒಟ್ಟುಗೂಡಿಸಿ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಮಾಡಿರುತ್ತಾರೆ.ಅದು ಅವತ್ತಿಗೆ ಚರ್ಚೆಯಾಗಿ ಮರೆತೇ ಹೋಗಿರುತ್ತದೆ.ಆದ್ರೆ ಆಡಳಿತ ವರ್ಗ ಎಷ್ಟರ ಮಟ್ಟಿಗೆ ಜಿದ್ದಿಗೆ ಬಿದ್ದಿರುತ್ತದೆ ಎಂದ್ರೆ ಆ ದಿನ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ಕೆ.ಎಂ ಮುನಿಕೃಷ್ಣ ಚಾಲಕ ವೇಣುಗೋಪಾಲ್ ವಿರುದ್ಧ ಸಲ್ಲಿಸಿದ್ದ ವರದಿ 2022ರ ಜುಲೈ 1 ರಂದು ಚಾಲ್ತಿಗೆ ಬಂದುಬಿಟ್ಟಿದೆ.

ಈ ರಿಪೋರ್ಟ್ ಪ್ರಕಾರ ವೇಣುಗೋಪಾಲ್,ಒಟ್ಟು 57 ಟ್ರಿಪ್ ಗಳಲ್ಲಿ 37 ಟ್ರಿಪ್ ಗಳು ತಡವಾಗಿ ಆಚರಣೆಯಾಗಿದ್ದರಿಂದ ಸಂಸ್ಥೆಗೆ ಆ ದಿನ 21,660 ರೂ ನಷ್ಟವಾಗಿದೆ.ಇದೊಂದು ಗಂಭೀರ ಆಪಾದನೆಯಾಗಿದ್ದು ಸಂಸ್ಥೆಗೆ ಅಪಾರ ಪ್ರಮಾಣದ ನಷ್ಟವಾಗಿರುವುದಕ್ಕೆ ವೇಣುಗೋಪಾಲ್ ಅವರನ್ನು ಸೇವೆಯಿಂದಲೇ ವಜಾ ಮಾಡಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ.

ಆದರೆ ನೈತಿಕವಾಗಿ ಮತ್ತು ಸಾಮಾಜಿಕ ನ್ಯಾಯದ ಆಧಾರದಲ್ಲಿ ವೇಣುಗೋಪಾಲ್ ವಿಷಯದಲ್ಲಿ ಆಡಳಿತ ವರ್ಗ ಮಾಡಿದ್ದು ಮೋಸ ಎಂದೇ ವಿಶ್ಲೇಷಿಸಬೇಕಾಗುತ್ತದೆ.ಏಕೆಂದ್ರೆ ವೇಣುಗೋಪಾಲ್ ಗಿಂತ ಘನಘೋರ ಅನ್ಯಾಯವನ್ನು..ಅನ್ನ ತಿಂದ ಮನೆಗೆ ಗಳ ಎಣಿಸಿದವರನ್ನು..ಅಕ್ರಮವನ್ನು ಲಕ್ಷ,ಕೋಟಿಗಳಲ್ಲಿ ನಡೆಸಿದಂತವರನ್ನು ಶಿಕ್ಷಿಸದೆ ಅವರಿಗೆ ಶ್ರೀರಕ್ಷೆಯಾಗಿ ನಿಲ್ಲುವ ಕೆಲಸ ಮಾಡಿರುವುದರಿಂದ ಅವರೆಲ್ಲಾ ಇವತ್ತು ಆರಾಮಾಗಿ ಅಡ್ಡಾಡಿಕೊಂಡಿದ್ದಾರೆ.ಕಾರ್ಮಿಕ ತಪ್ಪು ಮಾಡಿದ್ರೆ ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುವ ಶಿಸ್ತುಪಾಲನ ಅಧಿಕಾರಿಗಳು ಕೋಟಿಗಳಲ್ಲಿ ಅಕ್ರಮ ಎಸಗಿದವರನ್ನು ಮತ್ತಷ್ಟು ಮೇಯ್ದು..ಕೊಬ್ಬುವ ರೇಂಜ್ನಲ್ಲಿ ಬಿಟ್ಟಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಲೇಬೇಕಾಗುತ್ತದೆ.

ಹೊಸದಾಗಿ ಸಂಸ್ಥೆಗೆ ಬಂದಿರುವ ಸತ್ಯವತಿ ಮೇಡಮ್ ಅವರ ಮುಂದೆ, ಕನ್ನಡ ಫ್ಲ್ಯಾಶ್ ನ್ಯೂಸ್ ಬಿಎಂಟಿಸಿ ಆಡಳಿತ ವರ್ಗದ ಪಕ್ಷಪಾತ ಧೋರಣೆ ಹೇಗಿದೆ ಎನ್ನುವುದಕ್ಕೆ ಒಂದಷ್ಟು ನಿದರ್ಶನ ನೀಡೊಕ್ಕೆ ಇಚ್ಛಿಸುತ್ತೆ.ಮೊದಲನೆಯದಾಗಿ.. ರಮಾಮಣಿ..ಇದು 20-07-2005 ರಿಂದ 13-08-2006 ರ ಅವಧಿಯಲ್ಲಿ ಬಿಎಂಟಿಸಿಯಲ್ಲಿ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದವರೇ ಎಚ್.ಕೆ .ರಮಾಮಣಿ. ಕಾರ್ಮಿಕರ ಭವಿಷ್ಯ ನಿಧಿ ಹಣದ ವಿನಿಮಯದಲ್ಲಿ ಸಾಕಷ್ಟು ಲೋಪ ಎಸಗಿರುವ ಆಪಾದನೆ ರಮಾಮಣಿ ವಿರುದ್ದ ಕೇಳಿಬಂದಿತ್ತು.
2004 ರಲ್ಲಿ 31,61,000, 2005 ರಲ್ಲಿ 56,09,360 ರೂ,2006 ರಲ್ಲಿ 1,00,03,530 ರೂ ಒಟ್ಟು ಮೂರು ವರ್ಷಗಳಲ್ಲಿ 1 ಕೋಟಿ 87 ಲಕ್ಷದ 73 ಸಾವಿರ ರೂಗಳಷ್ಟು ದುರುಪಯೋಗ ವಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು(ಶಿಸ್ತುಪಾಲನಾ ಅಧಿಕಾರಿ)ಗಳು ವರದಿ ನೀಡಿದ್ದರು.ಕೋಟ್ಯಾಂತರ ದುರುಪಯೋಗ ಮಾಡಿಕೊಂಡಿದ್ದಾರೆನ್ನುವ ಗಂಭೀರ ಆಪಾದನೆ ಹೊರತಾಗ್ಯೂ ರಮಾಮಣಿ ಅವರ ವಿರುದ್ದ ಕೈಗೊಳ್ಳಲಾದ ಕ್ರಮ ಮಾತ್ರ ಶೂನ್ಯ..ಸನ್ಮಾನ್ಯರು ಇತ್ತೀಚೆಗೆ ಸ್ವಯಂನಿವೃತ್ತಿ ಪಡೆಯೊಕ್ಕೆ ಅರ್ಜಿ ಹಾಕ್ಕೊಂಡಿದ್ರಂತೆ.ಆದ್ರೆ ಕೆಲವು ಮೂಲಗಳ ಪ್ರಕಾರ ಅವರ ಸ್ವಯಂನಿವೃತ್ತಿ ಅರ್ಜಿಯನ್ನು ತಿರಸ್ಕರಿಸಲಾಗಿದೆಯಂತೆ.ಆದ್ರೆ ವೇಣುಗೋಪಾಲ್ ಗೆ ಮಾತ್ರ ವಜಾಶಿಕ್ಷೆನಾ..ಇದೆಂಥಾ ನ್ಯಾಯ ನೀವೇ ಹೇಳಿ ಸತ್ಯವತಿ ಮೇಡಮ್ ಎಂದು ಪ್ರಶ್ನಿಸ್ತಿದ್ದಾರೆ ಸಾರಿಗೆ ಕಾರ್ಮಿಕರು.


ಇನ್ನು ಮಂಜುಶ್ರೀ ಸಹಾಯಕ ಲೆಕ್ಕಾಧಿಕಾರಿ ಮಂಜುಶ್ರೀ ವಿರುದ್ದ ಕೇಳಿಬಂದ ಆರೋಪವೂ ಅಷ್ಟೇ.28-08-2004 ರಿಂದ 19-07-2005 ರ ಅವಧಿಯಲ್ಲಿ 1,87,73,890 ರೂ ದುರುಪಯೋಗದಲ್ಲಿ ರಮಾಮಣಿ ಜತೆಗೆ ಇವರ ಹೆಸರು ಥಳಕು ಹಾಕ್ಕೊಂಡಿತ್ತು.ಆದ್ರೆ ಇವ್ರ ವಿರುದ್ಧ ಆದ ಕ್ರಮವೇನು..? ಶಿಸ್ತುಪಾಲನಾಧಿಕಾರಿಗಳೇ ಉತ್ತರಿಸ್ಬೇಕು. ಇನ್ನು 17-02-2004 ರಿಂದ 27-08-2004 ಹಾಗೂ 27-10-2-2006 ರಿಂದ 20-03-2007ರ ಅವಧಿಯಲ್ಲಿ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಹಾಯಕ ಲೆಕ್ಕಾಧಿಕಾರಿ ಯಮುನ ಅವರನ್ನು ಕೂಡ ಆರೋಪಿಯನ್ನಾಗಿಸಲಾಗಿತ್ತು.ಆದ್ರೆ ಇವರಿಗೆ ಆದ ಶಿಕ್ಷೆ ಏನು..? ಶಿಸ್ತುಪಾಲನಾಧಿಕಾರಿಗಳೇ ಉತ್ತರಿಸ್ಬೇಕು.

ಇನ್ನು 2006ರ ಡಿಸೆಂಬರ್ ನಲ್ಲಿ ನಿಗಮದ ಅಧಿಕಾರಿಗಳಾದ ಜಯರಾಮ್ ಅವರಿಗೆ ಎರಡು ಬಾರಿ ಅಕ್ರಮವಾಗಿ 48 ಸಾವಿರ ರೂ ಮತ್ತು ಅಜಯ್ ಅವರಿಗೆ 1 ಲಕ್ಷದ 05 ಸಾವಿರ ರೂಗಳನ್ನು ಭವಿಷ್ಯನಿಧಿಗೆ ಪಾವತಿಸಲಾಗಿತ್ತು.ಎರೆಡೆರಡು ಬಾರಿ ಹಣ ಖಾತೆಗೆ ಬಂದಿರೋದನ್ನು ಗಮನಿಸಿಯಾದ್ರೂ ಇವರಿಬ್ಬರು ಹಣ ವಾಪಸ್ ಮಾಡಬಹುದಿತ್ತು.ಆದರೆ ಪುಕ್ಕಟೆ ಬರುತ್ತದೆಂದ್ರೆ ಯಾರ್ ಬಿಡ್ತಾರೆಂದುಕೊಂಡು ಹಣ ಡ್ರಾ ಮಾಡಿಕೊಂಡರೆನ್ನಲಾಗಿದೆ.ಇವರ ಬದಲಿಗೆ ಡ್ರೈವರ್ಸ್-ಕಂಡಕ್ಟರ್ಸ್ ಏನಾದ್ರೂ ಹಾಗೆ ಮಾಡಿದಿದ್ರೆ ಅವರನ್ನು ಜೈಲಿಗೇ ಅಟ್ಟಿಬಿಡುತ್ತಿದ್ದರು.ಆದ್ರೆ ಶಿಸ್ತುಪಾಲನಾಧಿಕಾರಿಗಳು ಹಾಗೆ ಮಾಡದಿರುವುದು ಕೂಡ ಪ್ರಶ್ನಾರ್ಹ.
ಇದಿಷ್ಟೇ ಅಲ್ಲ,2004,2005,2006 ಹಾಗೂ 2007 ರಲ್ಲಿ 71 ಸದಸ್ಯರ ಭವಿಷ್ಯನಿಧಿ ಖಾತೆಯಲ್ಲಿ ವಿಮೆ ಹಣಕ್ಕಿಂತ ಹೆಚ್ಚುವರಿಯಾಗಿ 18 ಲಕ್ಷದ 90 ಸಾವಿರದ 220 ರೂಗಳನ್ನು ಪಾವತಿಸಿರುವುದನ್ನು ಪತ್ತೆ ಮಾಡಲಾಗಿತ್ತು. ಮೇಲ್ಕಂಡ ಪ್ರಕರಣದಲ್ಲಿ ಲೆಕ್ಕಪತ್ರ ಮೇಲ್ವಿಚಾರಕಿ ಪ್ರೇಮಲತಾ ಮತ್ತು 18 ಪ್ರಕರಣಗಳಲ್ಲಿ 03,30,091 ರೂಗಳ ಹೆಚ್ಚುವರಿ ಪಾವತಿ ಆಪಾದನೆಯಲ್ಲಿ ಕಿರಿಯ ಸಹಾಯಕಿ ಪ್ರಮೀಳಾ ಮೇಲೆ ಗಂಭೀರ ಆಪಾದನೆ ಕೇಳಿಬಂದಿತ್ತು.ಆದರೆ ಅವರಿಗೆ ಆದ ಶಿಕ್ಷೆ ಏನು ಎನ್ನುವುದನ್ನು ಒನ್ಸ್ ಅಗೈನ್ ಶಿಸ್ತುಪಾಲನಾಧಿಕಾರಿಗಳೇ ವಿವರಿಸಬೇಕಾಗುತ್ತದೆ.ಮೇಲ್ಕಂಡ ಆಪಾದನೆಗಳನ್ನು ಹೊತ್ತ ಹೊರತಾಗ್ಯೂ ಅವರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳದ ಶಿಸ್ತುಪಾಲನಾಧಿಕಾರಿಗಳ ಕಾರ್ಯವೈಖರಿಯೇ ಇವತ್ತು ಪ್ರಶ್ನೆಗೀಡಾಗುತ್ತಿದೆ. ಗಂಭೀರ ಆಪಾದನೆ ಹೊತ್ತಂತ ರಮಾಮಣಿ,ಹೇಮಲತಾ, ಪ್ರೇಮಲತಾ, ಜಯರಾಮ್,ಅಜಯ್,ಪ್ರಮೀಳಾ ಅವರುಗಳು ಆರಾಮಾಗಿ ಅಡ್ಡಾಡಿಕೊಂಡಿದ್ದಾರೆ.
ಹೀಗೆ ವಿವರಿಸುತ್ತಾ ಹೋದರೆ ಅಧಿಕಾರಿಶಾಹಿ ವಿರುದ್ಧ ಗಂಭೀರ ಸ್ವರೂಪದ ಆಪಾದನೆಗಳು ದಂಡಿದಂಡಿಯಾಗಿವೆ.ಆದರೆ ಅವರನ್ನು ರಕ್ಷಿಸೊಕ್ಕೆ ಅಧಿಕಾರಿಗಳೇ ತುದಿಗಾಗಲಲ್ಲಿ ಇರೋದ್ರಿಂದ ಬಹುತೇಕರಿಗೆ ಶಿಕ್ಷೆ ಆಗುವುದಾಗಲಿ,ಇದೇ ಕಾರಣಗಳಿಗೆ ಅಮಾನತ್ತು.ವಜಾ ಆದಂಥ ಉದಾಹರಣೆಗಳೇ ಇಲ್ಲ..

ಆದ್ರೆ ಕೆಳಹಂತದ ಡ್ರೈವರ್ಸ್-ಕಂಡಕ್ಟರ್ಸ್ ಹಾಗೂ ಇತರೆ ಸಿಬ್ಬಂದಿ ಮಾತ್ರ ಈ ಕ್ಷಣದವರೆಗೂ ಅಮಾನತ್ತು-ವಜಾಗೊಳ್ಳುತ್ತಲೇ ಇದ್ದಾರೆ.ಯಾವೊಬ್ಬ ಕಾರ್ಮಿಕನ ಬದುಕನ್ನು ಬೀದಿಗೆ ತಂದು ನಿಲ್ಲಿಸೊಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದ್ರೂ ಜನವರಿ 2022 ರಿಂದ ಈವರೆಗೂ ನೂರಾರು ಸಂಖ್ಯೆಯಲ್ಲಿ ಡ್ರೈವರ್ಸ್-ಕಂಡಕ್ಟರ್ಸ್ ಕ್ಷುಲ್ಲಕ ಕಾರಣಗಳಿಗೆ ಶಿಕ್ಷೆಗೊಳಪಡುತ್ತಲೇ ಇದ್ದಾರೆ.ಸಚಿವ ಶ್ರೀರಾಮುಲು ಕೊಟ್ಟ ಮಾತು ಉಳಿಸಿಕೊಳ್ಳಲಿಕ್ಕೂ ಅಧಿಕಾರಿಶಾಹಿ ಅವಕಾಶ ಕೊಡುತ್ತಿಲ್ಲ.
ನೂತನವಾಗಿ ಎಂಡಿಯಾಗಿ ಅಧಿಕಾರ ವಹಿಸಿಕೊಂಡಿರುವ ಸತ್ಯವತಿ ಮೇಡಮ್ ಕನ್ನಡ ಫ್ಲ್ಯಾಶ್ ನ್ಯೂಸ್ ಸಾಕ್ಷ್ಯ ಸಮೇತ ಕೊಟ್ಟಿರುವ ಮೇಲ್ಕಂಡ ಪ್ರಕರಣಗಳ ಬಗ್ಗೆ ಕೂಲಂಕುಷ ತನಿಖೆಗೆ ಆದೇಶ ಕೊಡಲಿ,ಸ್ವಯಂನಿವೃತ್ತಿ ಪಡೆದು ಮನೆಯಲ್ಲಿ ಕೂತಿದ್ದಾರೆ ಎನ್ನಲಾಗುತ್ತಿರುವ ರಮಾಮಣಿ ಅವರಿಂದ ಹಿಡಿದು ಮಾಡಿದ ತಪ್ಪಿನ ಬಗ್ಗೆ ಪಾಪಪ್ರಜ್ಞೆಯಿಲ್ಲದೆ ಅಡ್ಡಾಡಿಕೊಂಡಿರುವ ಸಾಕಷ್ಟು ಕಳಂಕಿತ ಅಧಿಕಾರಿಗಳ ಬಂಡವಾಳ ಬಯಲಾಗ್ಬೋದು.
BMTCಯಲ್ಲಿ ಇದೆಂಥಾ ಅನ್ಯಾಯ…?! “ಅಧಿಕಾರಿ”ಗಳ ಕಣ್ಣಿಗೆ “ಬೆಣ್ಣೆ”….”ಕಾರ್ಮಿಕ” ಸಿಬ್ಬಂದಿಗೆ “ಸುಣ್ಣ”ನಾ..? ಸಾಮಾಜಿಕ ನ್ಯಾಯಕ್ಕೆ ಬೆಲೆಯೇ ಇಲ್ವಾ..?!