ಬೆಂಗಳೂರು: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆಗೆ ನಿಖರವಾದ ಕಾರಣ ಗೊತ್ತಾಗದಿದ್ದರೂ ಮೇಲ್ನೋಟಕ್ಕೆ ಹಾಗೂ ಪ್ರಾಥಮಿಕ ತನಿಖೆ ಬೇನಾಮಿ ಆಸ್ತಿಗಾಗಿಯೇ ಕೊಲೆ ಪ್ರಹಸನ ನಡೆದಿರಬಹುದೆನ್ನುವ ಶಂಕೆ ಮೂಡಿಸಿದೆ.ಆರ್ಥಿಕವಾಗಿ ಸಾಕಷ್ಟು ಜರ್ಝರಿತವಾಗಿದ್ದ ಗುರೂಜಿ ಸಾಲಮುಕ್ತರಾಗೊಕ್ಕೆ ಆಸ್ತಿ ಮಾರಾಟಕ್ಕೆ ಮುಂದಾದಾಗ ಅದಕ್ಕೆ ವ್ಯಕ್ತವಾದ ವಿರೋಧವೇ ಕೊಲೆಯಲ್ಲಿ ಪರಿಸಮಾಪ್ತಿಯಾಯ್ತೆನ್ನುವುದು ಕೂಡ ಪೊಲೀಸ್ ರ ಗುಮಾನಿ.
ಸರಳವಾಸ್ತು ಮೂಲಕವೇ ನಾಡಿನಾದ್ಯಂತ ಹೆಸರಾಗಿದ್ದ ಚಂದ್ರಶೇಖರ ಗುರೂಜಿ ಇದೇ ವ್ಯವಹಾರದಿಂದ ಕೋಟ್ಯಾಂತರ ಸಂಪಾದನೆ ಮಾಡಿದ್ದರು.ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳೊಕ್ಕೆ ತನ್ನ ಒಂದಷ್ಟು ಆಸ್ತಿಯನ್ನು ಬೇನಾಮಿಗಳ ಹೆಸರಲ್ಲಿ ಮಾಡಿದ್ರು.ಆ ಪೈಕಿ ಕೆಲವರು ಹೆದರಿಸಿ-ಬೆದರಿಸಿ ಮುಂಡಾಯಿಸಿದ್ರೆನ್ನುವುದು ಸ್ಥಳೀಯರ ಮಾತು.
ಆದ್ರೆ ಕೆಲವು ಬೇನಾಮಿ ಆಸ್ತಿಗಳನ್ನು ಸ್ವಾಮೀಜಿ ಹಾಗೆಯೇ ಕಾಪಾಡಿಕೊಂಡು ಬಂದಿದ್ರು.ಅದರ ಮೇಲೆ ಇನ್ನೊಬ್ಬರು ಒಡೆತನ ಸಾಧಿಸದಂತೆಯು ನೋಡಿಕೊಂಡಿದ್ದರು.ಈ ನಡುವೆ ಪ್ರಮುಖವಾದ ಆಸ್ತಿಯೊಂದನ್ನು ಮಾರಿ ಸಾಲಮುಕ್ತನಾಗೊಕ್ಕೆ ಮುಂದಾಗಿದ್ರಂತೆ.ಆದ್ರೆ ಆ ಆಸ್ತಿಯ ಬೇನಾಮಿ ಗಳೆನ್ನಲಾಗುತ್ತಿರುವ ವನಜಾಕ್ಷಿ ಮತ್ತು ಆಕೆಯ ಪತಿ ಮಹಾಂತೇಶ್,ಆಸ್ತಿ ಮಾರಿದ್ರೆ ಹಣ ಕೈ ತಪ್ಪಿ ಹೋಗುತ್ತಲ್ಲ ಎನ್ನುವ ಆಲೋಚನೆಗೆ ಬಿದ್ದು ಕೊಲೆಯ ಸ್ಕೆಚ್ ರೂಪಿಸಿದ್ರಾ ಗೊತ್ತಾಗ್ತಿಲ್ಲ.
ಅಂದ್ಹಾಗೆ ವನಜಾಕ್ಷಿ ಹಾಗೂ ಆಕೆಯ ಪತಿ ಹೆಸರಿಗೇ ಸ್ವಾಮೀಜಿ ಆಸ್ತಿ ಮಾಡಿರಬಹುದೆನ್ನುವ ಶಂಕೆ ಇದೆ.ಆದ್ರೆ ಇಂತದೊಂದು ಆಸ್ತಿಯನ್ನು ವನಜಾಕ್ಷಿ ಹೆಸರಿಗೇನೇ ಏಕೆ ಮಾಡುದ್ರು..ಅಷ್ಟಕ್ಕೂ ವನಜಾಕ್ಷಿ ಹಾಗೂ ಸ್ವಾಮೀಜಿಗೂ ಏನ್ ಸಂಬಂಧ..ಆಕೆ ಸರಳ ವಾಸ್ತುನ ಹಳೆಯ ಉದ್ಯೋಗಿಯಾಗಿದ್ದಳೆನ್ನುವುದು ಸತ್ಯ.ಆದ್ರೆ ಒಂದು ಆಸ್ತಿಯನ್ನು ಆಕೆಯ ಹೆಸರಿಗೆ ಸ್ವಾಮೀಜಿ ಬರೆದಿಡುತ್ತಾರೆ..ಆಕೆಯೊಂದಿಗೆ ಒಡನಾಟ ಹೊಂದಿರುತ್ತಾರೆ ಎಂದ್ರೆ ಆ ಸಂಬಂಧ ಎಂತದ್ದೆನ್ನುವುದು ಕೂಡ ಗುಮಾನಿ ಮೂಡಿಸಿದೆ.
ಆಸ್ತಿ ಮಾರಲೇಬೇಕು..ಇಲ್ಲದಿದ್ದರೆ ಸಾಲದ ಶೂಲಕ್ಕೆ ಸಿಲುಕುತ್ತೇನೆ ಎಂದು ಸ್ವಾಮೀಜಿ ಹೇಳಿದಾಗ ಆ ಆಸ್ತಿಯನ್ನು ಹೊಡೆಯೊಕ್ಕೆ ಸ್ಕೆಚ್ ಹಾಕಿದ್ದ ವನಜಾಕ್ಷಿ ಮತ್ತು ಆಕೆಯ ಪತಿ ಮಹಾಂತೇಶ್ ವಿಲವಿಲ ಒದ್ದಾಡಿ ಹೋಗಿರ್ಬೇಕೇನೋ..ಆ ವಿಷಯದಲ್ಲಿ ಅವರ ನಡುವೆ ಆಗಾಗ ಗಲಾಟೆಗಳೂ ನಡೆದಿರಬಹುದೇನೋ…
ಸ್ವಾಮೀಜಿ ಕಾಂಪ್ರಮೈಸ್ ಆಗೋ ಮನಸ್ಥಿತಿಯಲ್ಲಿಲ್ಲ ಎಂದು ಯಾವಾಗ ಅನಿಸಲಾರಂಭಿಸ್ತೋ ಆಗ್ಲೇ ವನಜಾಕ್ಷಿ-ಮಹಾಂತೇಶ್ ಸ್ವಾಮೀಜಿಗೆ ಖೆಡ್ಡಾ ತೋಡೊಕ್ಕೆ ನಿರ್ಧರಿಸಿಯೇ ಬಿಟ್ರೇನೋ ಗೊತ್ತಾಗ್ತಿಲ್ಲ.
ಅದಕ್ಕೆ ಮಹಾಂತೇಶ್ ಕಲಘಟಗಿ ಗ್ರಾಮದ ಮಂಜುನಾಥ ದುಮ್ಮವಾಡ ಎಂಬಾತನನ್ನು ಸೇರಿಸಿಕೊಂಡು ಕೊಲೆ ಸ್ಕೆಚ್ ರೂಪಿಸಿದನು ಎನ್ನಲಾಗ್ತಿದೆ.ಸಧ್ಯಕ್ಕೆ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ.
ವನಜಾಕ್ಷಿಯನ್ನು ಕೂಡ ವಿದ್ಯಾನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕೊಲೆ ಮಾಡುವಂಥ ಅಥವಾ ಅದಕ್ಕೆ ಸ್ಕೆಚ್ ರೂಪಿಸುವಂತ ಕಾರಣವಾದರೂ ಏನಿತ್ತು..ಸ್ವಾಮೀಜಿಯನ್ನು ಕೊಲ್ಲುವಂಥ ದ್ವೇಷ ಏಕೆ ಸೃಷ್ಟಿಯಾಯ್ತು ಎಂಬ ಪ್ರಶ್ನೆಗಳಲ್ಲಿ ಆಕೆಯನ್ನು ಗ್ರಿಲ್ ಮಾಡುವ ಸಾಧ್ಯತೆಗಳಿವೆ.
ಸರಳ ವಾಸ್ತು ಮೂಲಕ ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿದ್ದ ಆ ಮೂಲಕವೇ ಕೋಟ್ಯಾಂತರ ಆಸ್ತಿ ಮಾಡಿದ ಚಂದ್ರಶೇಖರ ಗುರೂಜಿ ಎನ್ನುವ ವಾಸ್ತುತಜ್ಞ ಅದೇ ಆಸ್ತಿ ವಿಚಾರದಲ್ಲಿ ಸೃಷ್ಟಿಯಾದ ಕೋಲಾಹಲಕ್ಕೆ ಕೊಲೆಯಾಗಿ ಹೋಗ್ತಾರೆಂದ್ರೆ ಇದಕ್ಕೆ ಏನನ್ನಬೇಕೋ ಗೊತ್ತಾಗ್ತಿಲ್ಲ.