300 MORE “SWITCH”PRIVATE BUSES ENTRY TO BMTC..?! ಬೀದಿಪಾಲಾಗ್ತಾರಾ “BMTC” 300 ಡ್ರೈವರ್ಸ್: JBM ನಂತ್ರ ಮತ್ತೊಂದು SWITCH ಕಂಪೆನಿಗೆ “ರೆಡ್ ಕಾರ್ಪೆಟ್”?!

300 ಬಸ್ ಗಳ ಸಂಚಾರಕ್ಕೆ ಪ್ಲ್ಯಾನ್..ಬಸ್ ಡೆಮೋನೂ ಓಕೆಯಾಗಿದೆ..ಇನ್ನೇನು ರೈಟ್ ರೈಟ್ ಎನ್ನಬೇಕು ಅಷ್ಟೇ…

0

ಬೆಂಗಳೂರು:ಏನೇ ಹೇಳಲಿ..ಸರ್ಕಾರವೇಕೋ  ಬಿಎಂಟಿಸಿಯನ್ನು ಪ್ರೈವೇಟೈಸ್ ಮಾಡೇ ತೀರುವ ಆಲೋಚನೆಯಲ್ಲಿದ್ದಂತೆ ತೋರುತ್ತಿದೆ..ಯಾವುದೇ ಕಾರಣಕ್ಕೂ ಖಾಸಗಿಕರಣ ಮಾಡುವುದಿಲ್ಲ. ಆ ಆಲೋಚನೆಯೇ ಸರ್ಕಾರಕ್ಕಿಲ್ಲ ಎನ್ನುತ್ತಲೇ ಖಾಸಗೀಕರಣಕ್ಕೆ ಬೇಕಾದ ಒಂದೊಂದೇ ಅವಕಾಶಗಳ ಸುತ್ತ ಕೆಲಸ ಮಾಡುತ್ತಲೇ ಇದೆ..ಇಂತದ್ದೊಂದು ಆತಂಕ ಮತ್ತಷ್ಟು ಬಲವಾಗೊಕ್ಕೆ ಕಾರಣ ಜೆಬಿಎಂ ಎನ್ನುವ ಸಂಸ್ಥೆ ಎಲೆಕ್ಟ್ರಿಕ್ ಬಸ್ ಗಳನ್ನು ಪೂರೈಸಿದ ನಂತರ ಮತ್ತೊಂದು ಸಂಸ್ಥೆ ಪೂರೈಸಲಿದೆ ಎನ್ನಲಾಗಿರುವ ಆ 300 ಬಸ್ ಗಳು..ಇಂತದ್ದೊಂದು ಸ್ಪೋಟಕ ಮಾಹಿತಿಯನ್ನು ಕನ್ನಡ ಫ್ಲ್ಯಾಶ್ ನ್ಯೂಸ್  ಸಾಕ್ಷ್ಯ ಸಮೇತ ಎಲ್ಲರ ಮುಂದಿಡುತ್ತಿದೆ.

ಯಾವುದೇ ಕಾರಣಕ್ಕೂ ಖಾಸಗಿ ಅವರನ್ನು ಬಿಎಂಟಿಸಿ ಒಳಗೆ ಎಂಟ್ರಿಯಾಗೊಕ್ಕೆ ಬಿಡೊಲ್ಲ..ಇದು ಯಾವುದೇ ಪಕ್ಷದ ಸರ್ಕಾರಗಳು ಅಧಿಕಾರಕ್ಕೆ ಬಂದ್ರೂ ಆಯಾ ರಾಜ್ಯ ಸರ್ಕಾರಗಳ ಸಿದ್ಧ ಉತ್ತರ.ಆದ್ರೆ ಬಿಜೆಪಿ ಸರ್ಕಾರ ಎಲ್ಲರಿಗಿಂತ ಒಂದ್ ಹೆಜ್ಜೆ ಮುಂದ್ಹೋಗಿ ತನ್ನ ಅವಧಿಯಲ್ಲಿ ಜೆಬಿಎಂ ಎನ್ನುವ ಖಾಸಗಿ ಕಂಪೆನಿಗೆ ರೆಡ್ ಕಾರ್ಪೆಟ್ ಹಾಸಿಕೊಟ್ಟಿದ್ದು ಅದರ ಭಾಗವಾಗಿ ಕೆಲ ನೂರು ಬಸ್ ಗಳನ್ನು ರಸ್ತೆಗಿಳಿಸಿದ್ದೂ ಆಯ್ತು.ಸಾಕಷ್ಟು ವಿರೋಧ ವ್ಯಕ್ತವಾದ್ರೂ ಯಾವುದಕ್ಕೂ ಕೇರ್ ಮಾಡುವ ಮನಸ್ತಿತಿಯಲ್ಲಿ ಸರ್ಕಾರವಿರಲಿಲ್ಲ ಎನ್ನುವುದು  ಕೂಡ ಅಷ್ಟೇ ಸತ್ಯ.

ಜೆಬಿಎಂ ಕಂಪೆನಿ ಬಸ್ ಗಳಿಗೆ ರಸ್ತೆಗಿಳೊಯೊಕ್ಕೆ ಅವಕಾಶ ಮಾಡಿಕೊಟ್ಟಾಗಲೇ ಸಾಕಷ್ಟು ವಿರೋಧಕ್ಕೆ ಗ್ರಾಸವಾಗಿದ್ದ ಸರ್ಕಾರ ಮತ್ತು ಬಿಎಂಟಿಸಿ ಆಡಳಿತ ಮಂಡಳಿ ಇದೀಗ ಮತ್ತೊಂದು ಸುತ್ತಿನಲ್ಲಿ 300 ಖಾಸಗಿ ಬಸ್ ಗಳನ್ನು ಬೆಂಗಳೂರಿನ ರಸ್ತೆಗಿಳಿಸೊಕ್ಕೆ ಮುಂದಾಗಿದೆಯಂತೆ.ಇದರ ಭಾಗವಾಗಿ ಈಗಾಗ್ಲೇ ಸ್ವಿಚ್ ಎನ್ನುವ ಕಂಪೆನಿ ಬಸ್ ನ ಡೆಮೋವನ್ನು ಕೂಡ ಬಿಎಂಟಿಸಿ ಎಂಡಿ ಸತ್ಯವತಿ ಹಾಗೂ ಅಧಿಕಾರಿಗಳ ಮುಂದೆ ನೀಡಿದೆಯಂತೆ.ಅಲ್ಲಿಗೆ ಆ ಬಸ್ ಗಳು ಬಿಎಂಟಿಸಿಗೆ ಎಂಟ್ರಿ ಕೊಡೋದು ಬಹುತೇಕ ಖಚಿತ ಎನ್ನುವಂತಾಯಿತು.

ಕೆಲವು ಮೂಲಗಳ ಪ್ರಕಾರ 300 ಬಸ್ ಪೂರೈಕೆಗೆ ಸ್ಚಿಚ್ ಕಂಪೆನಿ ಜತೆಗೆ ಒಪ್ಪಂದ ಕೂಡ ಆಗಿದೆಯಂತೆ.ಒಂದ್ವೇಳೆ ಅದು ಫೈನಲ್ಲಾದ್ರೆ ಜೆಬಿಎಂ ಕಂಪೆನಿಯಂತೆಯೇ ಈ ಸಂಸ್ಥೆ ಕೂಡ ತನ್ನದೇ ಕಂಪೆನಿಯ ಡ್ರೈವರ್ ಗಳನ್ನು ಚಾಲನೆಗೆ ಬಳಸಿಕೊಳ್ಳಲಿದೆ.ಕಂಡಕ್ಟರ್ಸ್ ಮಾತ್ರ ಬಿಎಂಟಿಸಿಯವ್ರೇ ಇರಲಿದ್ದಾರೆ ಎನ್ನಲಾಗ್ತಿದೆ.ಆದ್ರೆ ಈ ಬೆಳವಣಿಗೆಯಿಂದ ಮತ್ತಷ್ಟು ಡ್ರೈವರ್ಸ್ ಗಳು ಕೆಲಸವಿಲ್ಲದೆ ಕೂರಬೇಕಾದ ಸ್ತಿತಿ ನಿರ್ಮಾಣವಾಗೋದಂತೂ ಸತ್ಯ.

ಜೆಬಿಎಂಗೆ ಎಂಟ್ರಿ ಕೊಟ್ಟ ಸರ್ಕಾರ ಮತ್ತು ಆಡಳಿತ ಮಂಡಳಿ ಯಾವುದೇ ಕಾರಣಕ್ಕೂ ಸ್ವಿಚ್ ಕಂಪೆನಿಗೂ ಅವಕಾಶ ಮಾಡಿಕೊಡಬಾರದು ಎಂದು ಸಾರಿಗೆ ನಿಗಮದ ಕಾರ್ಮಿಕರು ಹಾಗೂ ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ.ಖಾಸಗಿ ಕಂಪೆನಿಗಳ ಎಂಟ್ರಿ ಕೇವಲ ಕಾರ್ಮಿಕರಿಗಿಲ್ಲ,ಸಂಸ್ಥೆ ಬೆಳವಣಿಗೆಗು ಮಾರಕವಾಗಲಿದೆ..ಸರ್ಕಾರದ ಈ ನಿಲುವನ್ನು ಖಂಡಿಸ್ತೇವೆ ಎಂದು ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ತಿಳಿಸಿದ್ದಾರೆ.

ಅದೇನೇ ಆಗಲಿ,ಆಗ ಜೆಬಿಎಂ ಈಗ ಸ್ವಿಚ್ ಗೆ ಎಂಟ್ರಿ ಕೊಡ್ತಿರುವ ಬಿಎಂಟಿಸಿ ಭವಿಷ್ಯದಲ್ಲಿ ಇನ್ನೊಂದಷ್ಟು ಕಂಪೆನಿಗಳಿಗೆ ಎಂಟ್ರಿ ಕೊಟ್ಟರೆ ಖಾಸಗೀಕರಣ ಮಾಡೊಕ್ಕೆ ಸರ್ಕಾರ ಬೇಡ..ಬಿಎಂಟಿಸಿನೇ ಅದರ ಪಾಡಿಗೆ ಖಾಸಗಿಕರಣವಾಗ್ಹೋಗುತ್ತೆ ಅಷ್ಟೇ..

300 MORE “SWITCH”PRIVATE BUSES ENTRY TO BMTC..?! ಬೀದಿಪಾಲಾಗ್ತಾರಾ “BMTC” 300 ಡ್ರೈವರ್ಸ್: JBM ನಂತ್ರ ಮತ್ತೊಂದು SWITCH ಕಂಪೆನಿಗೆ “ರೆಡ್ ಕಾರ್ಪೆಟ್”?!

Spread the love
Leave A Reply

Your email address will not be published.

Flash News