WHO IS THE KILLER OF SHIVAMOGGA’S NATORIOUS ROWDY HANDI ANNI BRUTAL MURDER….:ನಟೋರಿಯಸ್ ಪಾತಕಿ “ಹಂದಿ ಅಣ್ಣಿ”ಗೆ ಮೂಟೆ ಕಟ್ಟಿದ ಗ್ಯಾಂಗ್ ಯಾವ್ದು..? “ಬಂಕ್ ಬಾಲು” ಹುಡುಗ್ರೋ..!! “ನವುಲೆ ಮೋಹನ”ನ ಬಂಟರೋ..!! ಪ್ರಕರಣದಲ್ಲಿ ಅಣ್ಣಿ ಫ್ರೆಂಡ್ “ಹೆಬ್ಬಟ್ಟು ಮಂಜ”ನ ಹೆಸ್ರು ಕೇಳಿಬರ್ತಿರೋದ್ಹೇಕೆ..?!

ಕೆಎ-19 ರಿಜಿಸ್ಟ್ರೇಷನ್ ಇರೋ ಇನ್ನೋವಾದಲ್ಲಿ ಬಂದಿದ್ದ ಹಂತಕರು-ಪಾತಕಿಗಳ ಸುಳಿವು ಪತ್ತೆ ಹಚ್ಚುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ವಿ

0
ಒಂದೂವರೆ ದಶಕಗಳಷ್ಟು ಅವಧಿವರೆಗೆ ಶಿವಮೊಗ್ಗದ ಪಾತಕ ಜಗತ್ತನ್ನು ಆಳಿ ಅಷ್ಟೇ ಕ್ಷುಲ್ಲಕವಾಗಿ ಕೊಲೆಯಾಗಿ ಹೋದ ಪಾತಕಿ ಹಂದಿ ಅಣ್ಣಿ..
ಒಂದೂವರೆ ದಶಕಗಳಷ್ಟು ಅವಧಿವರೆಗೆ ಶಿವಮೊಗ್ಗದ ಪಾತಕ ಜಗತ್ತನ್ನು ಆಳಿ ಅಷ್ಟೇ ಕ್ಷುಲ್ಲಕವಾಗಿ ಕೊಲೆಯಾಗಿ ಹೋದ ಪಾತಕಿ ಹಂದಿ ಅಣ್ಣಿ..

ಶಿವಮೊಗ್ಗ: ಮಲೆನಾಡನ್ನು ಸುಮಾರು ಒಂದೂವರೆ ದಶಕದ ಕಾಲ ಬೆಚ್ಚಿಬೀಳಿಸಿದ್ದ ಪಾತಕಿಯ ಹೆಣ ಬಿದ್ದಿದೆ.ಲವಕುಶ ಎನ್ನೋ ಮೋಸ್ಟ್ ನಟೋರಿಯಸ್ ರೌಡಿ ಬ್ರದರ್ಸ್ ನ್ನು ಹಾಡಹಗಲೇ ಗಾಡಿಕೊಪ್ಪ ರಸ್ತೆಯ ಗ್ಯಾರೇಜ್ ವೊಂದ್ರಲ್ಲಿ ಸೀಳಿ ಹಾಕುವ ಮೂಲಕ ಕುಖ್ಯಾತಿ ಪಡೆದಿದ್ದ ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ಬೀದಿ ಹೆಣವಾಗಿದ್ದಾನೆ. ಒಂದೆಡೆ ಪಾತಕಿಯೊಬ್ಬನ ಅವಸಾನವಾಯ್ತೆನ್ನುವ ನಿಟ್ಟುಸಿರಾದ್ರೆ ಅದಕ್ಕೆ ಪ್ರತೀ ಕಾರವಾಗಿ ಮತ್ತೊಂದಷ್ಟು ಹೆಣ ಬೀಳಬಹುದಾ ಎನ್ನುವ ಆತಂಕದ ಅಂದಾಜು-ಲೆಕ್ಕಾಚಾರ ಶುರುವಾಗಿದೆ.

ಶಿವಮೊಗ್ಗವನ್ನು ಬೆಚ್ಚಿಬೀಳಿಸಿದ ಮಾಜಿ ಪಾತಕಿ ಹಂದಿ ಅಣ್ಣಿಯನ್ನು ಹೊಡೆದು ಹಾಕಿರುವುದನ್ನು ನೋಡಿದ್ರೆ ಇದು ಫೀಲ್ಡ್ ಗೆ ಹೊಸಬರಂತೇನು ಕಾಣ್ತಿಲ್ಲ.ಪಕ್ಕಾ ಕಸಬುದಾರರಿರಬಹುದು ಎಂಬ ಶಂಕೆ ಮೂಡುತ್ತೆ.ಅವ್ರು ಆತನನ್ನು ಮನೆಯಿಂದ ಫಾಲೋ ಮಾಡಿಕೊಂಡು ಬಂದಿದ್ದು, ಎಲ್ಲಿ ಅಟೆಂಪ್ಟ್ ಮಾಡಿದ್ರೆ ಸೂಕ್ತ ಎನ್ನೋ ಸ್ಕೆಚ್ ನಂತೆ ಕೊಚ್ಚಿ ಹಾಕಿರುವುದೆಲ್ಲಾ ಇದು ಪಕ್ಕಾ ಪ್ರೊಫೆಷನಲ್ಲಿರೋರೆ ಮಾಡಿರಬಹುದೆನ್ನುವ ಸತ್ಯವನ್ನು ಸಾರಿ ಹೇಳುವಂತಿದೆ.

ಹಾಗಾದ್ರೆ ಹಂದಿ ಅಣ್ಣಿಯನ್ನು ಯಾರ್ ಮುಗಿಸಿದ್ರು..ಯಾತಕ್ಕೆ ಮುಗಿಸಿದ್ರು..ಹೆಣದ ಮೂಟೆ ಕಟ್ಟೋದ್ರ ಹಿಂದೆ ಯಾರಿದ್ದಾರೆ.ಯಾವ್ ರೈವಲ್ರಿ ಗುಂಪಿದೆ ಎನ್ನುವ ಪ್ರಶ್ನೆಗಳ ಸುತ್ತ ಇಡೀ ಪ್ರಕರಣ ಗಿರಕಿ ಹೊಡೆಯುತ್ತಿದೆ.

ಹಾಡಹಗಲೇ ಹಂದಿ ಅಣ್ಣಿಯನ್ನು ಅಟ್ಟಾಡಿಸಿಕೊಂಡು ಓಡುತ್ತಿರುವ ಹಂತಕರ ಪಡೆ.ಪಾತಕಿಗಳಿಂದ ತಪ್ಪಿಸಿಕೊಳ್ಳೊಕ್ಕೆ ಯರ್ರಾಬಿರ್ರಿ ಓಡುತ್ತಿರುವ ಅಣ್ಣಿ( ಹಳದಿ ಟೀ ಶರ್ಟ್ ತೊಟ್ಟಿರುವವನೇ ಹಂದಿ ಅಣ್ಣಿ)
ಹಾಡಹಗಲೇ ಹಂದಿ ಅಣ್ಣಿಯನ್ನು ಅಟ್ಟಾಡಿಸಿಕೊಂಡು ಓಡುತ್ತಿರುವ ಹಂತಕರ ಪಡೆ.ಪಾತಕಿಗಳಿಂದ ತಪ್ಪಿಸಿಕೊಳ್ಳೊಕ್ಕೆ ಯರ್ರಾಬಿರ್ರಿ ಓಡುತ್ತಿರುವ ಅಣ್ಣಿ( ಹಳದಿ ಟೀ ಶರ್ಟ್ ತೊಟ್ಟಿರುವವನೇ ಹಂದಿ ಅಣ್ಣಿ) (ದೃಶ್ಯ-1)

ಅಂದ್ಹಾಗೆ 2006 ರಲ್ಲಿ ಲವಕುಶ ರೌಡಿ ಬ್ರದರ್ಸ್ ಮರ್ಡರ್ ಆಗಿದ್ದಕ್ಕೆ ರಿವೆಂಜ್ ನ ರೇಂಜ್ನಲ್ಲಿ ಈ ಮರ್ಡರ್ ಆಯ್ತಾ..? ಹಂದಿ ಅಣ್ಣಿಯಿಂದ ಕೊಲೆಯಾದ ನವುಲೆ ಮೋಹನನ ಕಡೆ ಹುಡುಗ್ರು ಪ್ರತೀಕಾರಕ್ಕೆ ಇಳುದ್ರೋ..ಅಥವಾ ಬಂಕ್ ಬಾಲು ಕಡೆ ಹುಡುಗ್ರು ಮುಗಿಸೋ ಸ್ಕೆಚ್ ಹಾಕಿದ್ರೋ ಎನ್ನುವ ಕೆಲವು ಶಂಕೆಗಳ ಸುತ್ತ ಪ್ರಕರಣ ಗಿರಕಿ ಹೊಡೆಯುತ್ತಿದೆ.

ಹಾಡಹಗಲೇ ಹಂದಿ ಅಣ್ಣಿಯನ್ನು ಅಟ್ಟಾಡಿಸಿಕೊಂಡು ಓಡುತ್ತಿರುವ ಹಂತಕರ ಪಡೆ.ಪಾತಕಿಗಳಿಂದ ತಪ್ಪಿಸಿಕೊಳ್ಳೊಕ್ಕೆ ಯರ್ರಾಬಿರ್ರಿ ಓಡುತ್ತಿರುವ ಅಣ್ಣಿ( ಹಳದಿ ಟೀ ಶರ್ಟ್ ತೊಟ್ಟಿರುವವನೇ ಹಂದಿ ಅಣ್ಣಿ)
ಹಾಡಹಗಲೇ ಹಂದಿ ಅಣ್ಣಿಯನ್ನು ಅಟ್ಟಾಡಿಸಿಕೊಂಡು ಓಡುತ್ತಿರುವ ಹಂತಕರ ಪಡೆ.ಪಾತಕಿಗಳಿಂದ ತಪ್ಪಿಸಿಕೊಳ್ಳೊಕ್ಕೆ ಯರ್ರಾಬಿರ್ರಿ ಓಡುತ್ತಿರುವ ಅಣ್ಣಿ( ಹಳದಿ ಟೀ ಶರ್ಟ್ ತೊಟ್ಟಿರುವವನೇ ಹಂದಿ ಅಣ್ಣಿ) (ದೃಶ್ಯ-2)

ಲವಕುಶ ಮರ್ಡರ್ ಗೆ ಪ್ರತೀಕಾರವಾಗಿ ಇದು ನಡೆದಿರಬಹುದೆನ್ನುವ ಊಹೆ ಅಸಹಜ ಎನ್ನುವುದು ಪೊಲೀಸ್ರ ಅಂದಾಜು.ಏಕೆಂದ್ರೆ ಲವಕುಶ ಮರ್ಡರ್ ಆಗಿ 15 ವರ್ಷ ಮೇಲಾಗಿದೆ.ಆತನ ಸಹಚರರು ಈಗ ಬದುಕಿರೋದು ಡೌಟು..ಹಾಗಾದ್ರೆ ಹಂದಿ ಅಣ್ಣಿ ಹುಡುಗಿರಿಂದ ಮರ್ಡರ್ ಆದ ಬಂಕ್ ಬಾಲು ಹುಡುಗ್ರು ಹೊಡೆದಾಕಿದ್ರಾ.. ಪ್ರತೀಕಾರದ ಜ್ವಾಲೆಯಲ್ಲಿದ್ಗ ನವುಲೆ ಮೋಹನನ ಹುಡುಗ್ರು ಮುಗಿಸಾಕಿದ್ರಾ..ಈ ಎರಡು ಗುಮಾನಿಗಳ ಹುಳುಗಳನ್ನು ತಲೆಗೆ ಬಿಟ್ಟುಕೊಂಡಿರುವ ಶಿವಮೊಗ್ಗ ಪೊಲೀಸ್ರು ಈ ಕೊಲೆಗಳ ಹಿಸ್ಟರಿ..ಪಾತಕಿಗಳ ಹಿನ್ನಲೆ..ಪ್ರತೀಕಾರದ ಭಾಗವಾಗಿ ನಡೆದಿರಬಹುದಾದ ಬೆಳವಣಿಗೆಗಳ ಮೇಲೆ ಬೆಳಕು ಚೆಲ್ಲೊಕ್ಕೆ ಶುರುಮಾಡಿದ್ದಾರೆ.

ಹಾಡಹಗಲೇ ಹಂದಿ ಅಣ್ಣಿಯನ್ನು ಅಟ್ಟಾಡಿಸಿಕೊಂಡು ಓಡುತ್ತಿರುವ ಹಂತಕರ ಪಡೆ.ಪಾತಕಿಗಳಿಂದ ತಪ್ಪಿಸಿಕೊಳ್ಳೊಕ್ಕೆ ಯರ್ರಾಬಿರ್ರಿ ಓಡುತ್ತಿರುವ ಅಣ್ಣಿ( ಹಳದಿ ಟೀ ಶರ್ಟ್ ತೊಟ್ಟಿರುವವನೇ ಹಂದಿ ಅಣ್ಣಿ) (ದೃಶ್ಯ-2)
ಹಾಡಹಗಲೇ ಹಂದಿ ಅಣ್ಣಿಯನ್ನು ಅಟ್ಟಾಡಿಸಿಕೊಂಡು ಓಡುತ್ತಿರುವ ಹಂತಕರ ಪಡೆ.ಪಾತಕಿಗಳಿಂದ ತಪ್ಪಿಸಿಕೊಳ್ಳೊಕ್ಕೆ ಯರ್ರಾಬಿರ್ರಿ ಓಡುತ್ತಿರುವ ಅಣ್ಣಿ( ಹಳದಿ ಟೀ ಶರ್ಟ್ ತೊಟ್ಟಿರುವವನೇ ಹಂದಿ ಅಣ್ಣಿ) (ದೃಶ್ಯ-3)

ನವುಲೆ ಮೋಹನ ಮತ್ತು ಬಂಕ್ ಬಾಲು ಮರ್ಡರ್ ಗೆ ಪ್ರತೀಕಾರವಾಗಿ ಅವ್ರ ಕಡೆಯ ಹುಡುಗ್ರು ಹಂದಿ ಅಣ್ಣಿಗೆ ಮುಹೂರ್ತ ಇಟ್ಟಿರೋ ಸಾಧ‍್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ.ಯಾಕಂದ್ರೆ ಪ್ರತೀಕಾರದ ಕೊಲೆಗಳು ಯಾವಾಗ..ಹೇಗೆ ಬೇಕಾದ್ರೂ..ಎಲ್ಲಿಯಾದ್ರೂ ನಡೆಯೋ ಸಾಧ್ಯತೆಗಳು ಇದ್ದೇ ಇರುತ್ವೆ.ಈ ಅನುಮಾನಗಳ ಮೇಲೆ ಪೊಲೀಸ್ರು ತಂಡಗಳಾಗಿ ವರ್ಕ್ ಶುರುವಿಟ್ಟುಕೊಂಡಿದ್ದಾರೆ.

ಈ ಗುಮಾನಿಗಳ ಜತೆಯಲ್ಲೇ ಶಿವಮೊಗ್ಗ ಪೊಲೀಸರಿಗೆ ಮತ್ತೊಂದು ದೊಡ್ಡ ಶಂಕೆ ಹುಟ್ಕೊಂಡಿರುವುದು ಪಾತಕಿ ಹೆಬ್ಬಟ್ಟು ಮಂಜನ ಮೇಲೆ ಎನ್ನಲಾಗುತ್ತಿದೆ.ಹಾಗೆ ನೋಡಿದ್ರೆ ಹಂದಿ ಅಣ್ಣಿಗೂ ಹೆಬ್ಬಟ್ಟು ಮಂಜನಿಗೂ ಒಳ್ಳೆ ಅಂಡರ್ ಸ್ಟ್ಯಾಂಡಿಂಗ್ ಇತ್ತಂತೆ.ಬಂಕ್ ಬಾಲು ಕೊಲೆಯನ್ನು ಹಂದಿ ಅಣ್ಣಿ ಹುಡುಗ್ರು ಮಾಡಿದ್ರೂ ಅದಕ್ಕೆ ಬ್ಯಾಕ್ ಎಂಡ್ ಸಪೋರ್ಟ್ ಇದ್ದುದ್ದೇ ಹೆಬ್ಬಟ್ಟು ಎನ್ನಲಾಗುತ್ತಿದೆ.

ಕೇವಲ 15-20 ಸೆಕೆಂಡುಗಳಲ್ಲಿ ಹಂದಿ ಅಣ್ಣಿಯನ್ನು ಕೊಚ್ಚಿ ಕೊಲೆ ಮಾಡಿ ವಾಪಸ್ಸಾಗುತ್ತಿರುವ ಹಂತಕರ ಪಡೆ
ಕೇವಲ 15-20 ಸೆಕೆಂಡುಗಳಲ್ಲಿ ಹಂದಿ ಅಣ್ಣಿಯನ್ನು ಕೊಚ್ಚಿ ಕೊಲೆ ಮಾಡಿ ವಾಪಸ್ಸಾಗುತ್ತಿರುವ ಹಂತಕರ ಪಡೆ

ಅಂದ್ರೆ ಹಂದಿ ಅಣ್ಣಿಯನ್ನು ಇಟ್ಕೊಂಡು ಸಾಕಷ್ಟು ಡೀಲ್-ವರ್ಕ್ ಗಳನ್ನು ಹೆಬ್ಬಟ್ಟು ಮಾಡಿಸುತ್ತಿದ್ದ ಎನ್ನಲಾಗಿದೆ.ಆದ್ರೆ 2016ರ ನಂತ್ರ ಸೈಲೆಂಟ್ ಆದ ಹಂದಿ ಅಣ್ಣಿ ರೌಡಿಸಂನಿಂದ ರೋಸಿ ಹೋಗಿ ಜನಸಾಮಾನ್ಯರಂತೆ ಬದುಕೋ ಸಂಕಲ್ಪ ಮಾಡಿದ್ದನಂತೆ.

ಈ ನಡುವೆ ಶಿವಮೊಗ್ಗದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿರುವ ಹೆಬ್ಬಟ್ಟು ತನಗೆ ನಂಬಿಗಸ್ಥನಂತಿದ್ದ ಅಣ್ಣಿ ಪಾತಕ ಲೋಕ ಬಿಟ್ಟು ಸನ್ಯಾಸಿಯಾಗಲು ಯತ್ನಿಸುತ್ತಿರು ವುದು ಸಿಟ್ಟು ತರಿಸಿರಬಹುದೇನೋ..ಸಾಕಷ್ಟು ತಿಳಿ ಹೇಳೊಕ್ಕೆ ಯತ್ನಿಸಿದ್ದಾನೆ..ಬಂಪರ್ ಎನ್ನುವಂತ ಆಫರ್ ಕೊಟ್ಟು ಮನವೊಲಿಕೆಗೆ ಯತ್ನಿಸಿದ್ದಾನೆ. ಆದ್ರೆ ಆತ ಯಾವುದಕ್ಕೂ ಸೊಪ್ಪಾಕಿಲ್ಲ.. ತಾನು ಹೇಳಿದ ಒಂದಷ್ಟು ಕೆಲಸ ಮಾಡದೆ ಇದ್ದಾಗ ಹೆಬ್ಬಟ್ಟು ಸ್ವಲ್ಪ ಗದರಿದ್ದಾನೆ. ಹಂದಿ ಅಣ್ಣಿನೂ ಅದಕ್ಕೆ ಠಕ್ಕರ್ ಕೊಟ್ಟಿರಬಹುದು..

2006 ರಲ್ಲಿ ಶಿವಮೊಗ್ಗದ ಮಟ್ಟಿಗೆ ನಟೋರಿಯಸ್ ರೌಡಿ ಬ್ರದರ್ಸ್ ಎಂದೇ ಕರೆಯಿಸಿಕೊಂಡಿದ್ದ ಈ ಲವಕುಶ ರನ್ನು ಗಾಡಿಕೊಪ್ಪದ ಗ್ಯಾರೇಜ್ ವೊಂದ್ರಲ್ಲಿ ತನ್ನ ಬಂಟರೊಂದಿಗೆ ಸೇರಿಕೊಂಡು ಕತ್ತರಿಸಿ ಕೊಂದು ನಟೋರಿಟಿ ಪಡೆದುಕೊಂಡಿದ್ದ ಹಂದಿ ಅಣ್ಣಿ..ಈ ಬ್ರದರ್ಸ್ ಕೊಲೆ ನಂತರ ಹಂದಿ ಅಣ್ಣಿ ಪಾತಕ ಲೋಕದಲ್ಲಿ ಹಿಂತಿರುಗಿ ನೋಡಲೇ ಇಲ್ಲ.
2006 ರಲ್ಲಿ ಶಿವಮೊಗ್ಗದ ಮಟ್ಟಿಗೆ ನಟೋರಿಯಸ್ ರೌಡಿ ಬ್ರದರ್ಸ್ ಎಂದೇ ಕರೆಯಿಸಿಕೊಂಡಿದ್ದ ಈ ಲವಕುಶ ರನ್ನು ಗಾಡಿಕೊಪ್ಪದ ಗ್ಯಾರೇಜ್ ವೊಂದ್ರಲ್ಲಿ ತನ್ನ ಬಂಟ ರೊಂ ದಿಗೆ ಸೇರಿಕೊಂಡು ಕತ್ತರಿಸಿ ಕೊಂದು ನಟೋರಿಟಿ ಪಡೆದುಕೊಂಡಿದ್ದ ಹಂದಿ ಅಣ್ಣಿ..ಈ  ನಂತರ ಹಂದಿ ಅಣ್ಣಿ ಪಾತಕ ಲೋಕದಲ್ಲಿ ಹಿಂತಿರುಗಿ ನೋಡಲೇ ಇಲ್ಲ.

ಈ ಬೆಳವಣಿಗೆ ಸಾಕಷ್ಟು ದಿನಗಳ ಕಾಲ ಅವರ ನಡುವೆ ನಡೆದಿರಬಹುದು..ಆದ್ರೆ ಹೆಬ್ಬಟ್ಟ್ ಗೆ ಸಾಥ್ ಕೊಡೊಕ್ಕೆ ಹಿಂದೇಟು ಹಾಕಿರಬಹುದು..ಆ ಸಿಟ್ಟಿಗೋ ಅಥವಾ ಇಂದಲ್ಲ ನಾಳೆ ಹಂದಿ ಅಣ್ಣಿ ತನಗಿಂತ ಪ್ರಬಲವಾಗಿ ಬೆಳೆಯಬಹುದೆನ್ನುವ ಕಾರಣಕ್ಕೋ ಹೆಬ್ಬಟ್ಟು ಮಂಜ ಹುಡುಗರನ್ನು ಬಿಟ್ಟು ಹಂದಿ ಅಣ್ಣಿಗೆ ಮೂಟೆ ಕಟ್ಟಿಸಿರುವ ಸಾಧ್ಯತೆಗಳನ್ನೂ ಅಲ್ಲಗೆಳೆಯುವಂತಿಲ್ಲ.

ಶಿವಮೊಗ್ಗದ ಎಸ್ಪಿ ಲಕ್ಷ್ಮಿ ಪ್ರಸಾದ್
ಶಿವಮೊಗ್ಗದ ಎಸ್ಪಿ ಲಕ್ಷ್ಮಿ ಪ್ರಸಾದ್

ಶಿವಮೊಗ್ಗದಲ್ಲಿ ಹೆಬ್ಬಟ್ಟಿಗಿಂತ ಒಂದ್ ಲೆವಲ್ ನಲ್ಲಿ ನಟೋರಿಟಿ ಬೆಳೆಸಿಕೊಂಡಿದ್ದ ಹಂದಿ ಅಣ್ಣಿ ಮೇಲೆ ಸಹಜವಾಗೇ ಸಿಟ್ಟುಬಂದು.ತಾನು ಫೀಲ್ಡ್ ಮಾಡುವ ಸ್ಥಳದಲ್ಲಿ ಮತ್ತೊಬ್ಬ ಪ್ರತಿಸ್ಪರ್ಧಿ ಇರಬಾರದೆನ್ನುವ ಕಾರಣಕ್ಕೆ ಹೆಬ್ಬಟ್ಟು ಮಂಜ ಕೂಡ ಇಂತದ್ದೊಂದು ಕೆಲಸ ಮಾಡಿಸಿರಬಹುದೆನ್ನುವ ಮಾತುಗಳು ಕೇಳಿಬರಲಾರಂಭಿಸಿವೆ..ನೆಗ್ಲೆಕ್ಟ್ ಮಾಡದೆ ಪೊಲೀಸರು ಈ ಆಂಗಲ್ ನಲ್ಲೂ ತನಿಖೆ ಶುರುಮಾಡಿದ್ದಾರೆ.

ಹಂದಿ ಅಣ್ಣಿ ಕೊಲೆಯಲ್ಲಿ ಹೆಬ್ಬಟ್ಟು ಮಂಜನ ಹೆಸರು ಥಳಕು ಹಾಕ್ಕೊಳ್ತಿರುವುದೇಕೆ..?
ಹಂದಿ ಅಣ್ಣಿ ಕೊಲೆಯಲ್ಲಿ ಹೆಬ್ಬಟ್ಟು ಮಂಜನ ಹೆಸರು ಥಳಕು ಹಾಕ್ಕೊಳ್ತಿ ರುವುದೇಕೆ..?

ಅದೇನೇ ಇರಲಿ,ಹಂದಿ ಅಣ್ಣಿ ಮರ್ಡರ್ ನಿಂದ ಶಿವಮೊಗ್ಗದ ಜನತೆ ಶಾಂತಿಯಿಂದ ಇರಬಹುದೆನ್ನುವ ಯಾವುದೇ ಭರವಸೆ ಇಟ್ಟುಕೊಳ್ಳುವಂತಿಲ್ಲ.ಏಕಂದ್ರೆ ಹಂದಿ ಅಣ್ಣಿ ಸಹಚರರು ಈಗಾಗ್ಲೇ ಪ್ರತೀಕಾರದ ಜ್ವಾಲೆಯಲ್ಲಿ ಕುದಿಯುತ್ತಿದ್ದಾರೆ.ಪೊಲೀಸ್ ತನಿಖೆಯಿಂದ ಪಾತಕಿಗಳು ಯಾರೆನ್ನುವುದು ಕನ್ಫರ್ಮ್ ಆಗುತ್ತಿದ್ದಂತೆ ಶತೃಪಾಳೆಯದ ಒಂದೆರಡು ಹೆಣ ಉರುಳಿಸ್ಲಿಕ್ಕೆ ಸ್ಕೆಚ್ ಹಾಕ್ಕೊಂಡಿರುವುದಂತೂ ಸತ್ಯ.ಹಾಗೇನಾದ್ರೂ ನಡುದ್ರೆ ಆ ಕೊಲೆಗಳಿಗೆಮತ್ತೊಂದಷ್ಟು ಪ್ರತೀಕಾರದ ಕೊಲೆ ಗ್ಯಾರಂಟಿ..ಇದಕ್ಕೆಲ್ಲಾ ಮದ್ದು-ಮುಲಾಮು ಎರಡೂ ಪೊಲೀಸ್ರ ಕೈಯಲ್ಲಿದೆ.ಇರೋದ್ರಲ್ಲೇ ಖಡಕ್ ಎನಿಸಿಕೊಂಡಿರುವ ಎಸ್ಪಿ ಲಕ್ಷ್ಮಿಪ್ರಸಾದ್ ಅವರು ಇದಕ್ಕೆಲ್ಲಾ ಅಂತ್ಯ ಹಾಡ್ಬೇಕಷ್ಟೇ..

ಹಂದಿ ಅಣ್ಣಿಯ ಮರ್ಡರ್ ಹಳೇ ದ್ವೇಷದ ಹಿನ್ನಲೆಯಲ್ಲೇ ನಡೆದಿದೆ ಎನ್ನುವುದು ಸ್ಪಷ್ಟ.ಆದ್ರೆ ಒಂದೆಡೆ ಲವಕುಶ, ಮತ್ತೊಂದೆಡೆ ನವುಲೆ ಮೋಹನ ಇನ್ನೊಂದೆಡೆ ಬಂಕ್ ಬಾಲು ಹುಡುಗರ ಕಡೆಯವರಿಂದ ಥ್ರೆಟ್ ಇದ್ದುದ್ದರಿಂದ ಈ ಮೂರು ತಂಡಗಳಲ್ಲಿ ಯಾವ ತಂಡ ಇವನ ಮೂಟೆ ಕಟ್ಟಿದೆ ಎನ್ನುವುದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ.ಇದರ ನಡುವೆ ಹೆಬ್ಬಟ್ಟು ಮಂಜನ ಹೆಸ್ರು ಥಳಕು ಹಾಕ್ಕೊಳ್ತಿರುವುದರಿಂದ ಪ್ರಕರಣಕ್ಕೆ ಮತ್ತಷ್ಟು ರೋಚಕತೆ ದೊರಕಿದೆ.ಅದೇನೇ ಇರಲಿ,ಯಾರೇ ಹೊಡೆದಿರಲಿ ಅವರಿಗೆ ಫೀಲ್ಡ್ ನಲ್ಲಿ ಮತ್ತಷ್ಟು ನಟೋರಿಟಿ..ಡಿಮ್ಯಾಂಡ್ ಕುದುರೋದಂತೂ ಗ್ಯಾರಂಟಿ.ಪೊಲೀಸರಿಗೆ ಒಂದ್ ತಲೆನೋವು ತಪ್ಪಿತೆನ್ನೋದು ಎಷ್ಟು ನಿಜವೋ, ಅಣ್ಣಿ ಮರ್ಡರ್ ಗೆ ಪ್ರತೀಕಾರವಾಗಿ ನಡೆಯಬಹುದಾದ ಮತ್ತಷ್ಟು ಅವಘಡಗಳನ್ನು ಊಹಿಸಿ ಅದನ್ನು ಕಂಟೋಲ್ ಮಾಡೋದು ಕೂಡ ಅಷ್ಟೇ ಸವಾಲಿನ ಕೆಲಸ.

ಹಂದಿ ಅಣ್ಣಿಯ ಮರ್ಡರ್ ಹಳೇ ದ್ವೇಷದ ಹಿನ್ನಲೆಯಲ್ಲೇ ನಡೆದಿದೆ ಎನ್ನುವುದು ಸ್ಪಷ್ಟ.ಆದ್ರೆ ಒಂದೆಡೆ ಲವಕುಶ, ಮತ್ತೊಂದೆಡೆ ನವುಲೆ ಮೋಹನ ಇನ್ನೊಂದೆಡೆ ಬಂಕ್ ಬಾಲು ಹುಡುಗರ ಕಡೆಯವರಿಂದ ಥ್ರೆಟ್ ಇದ್ದುದ್ದರಿಂದ ಈ ಮೂರು ತಂಡಗಳಲ್ಲಿ ಯಾವ ತಂಡ ಇವನ ಮೂಟೆ ಕಟ್ಟಿದೆ ಎನ್ನುವುದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ.ಇದರ ನಡುವೆ ಹೆಬ್ಬಟ್ಟು ಮಂಜನ ಹೆಸ್ರು ಥಳಕು ಹಾಕ್ಕೊಳ್ತಿರುವುದರಿಂದ ಪ್ರಕರಣಕ್ಕೆ ಮತ್ತಷ್ಟು ರೋಚಕತೆ ದೊರಕಿದೆ.

ಅದೇನೇ ಇರಲಿ,ಯಾರೇ ಹೊಡೆದಿರಲಿ ಅವರಿಗೆ ಫೀಲ್ಡ್ ನಲ್ಲಿ ಮತ್ತಷ್ಟು ನಟೋರಿಟಿ..ಡಿಮ್ಯಾಂಡ್ ಕುದುರೋದಂತೂ ಗ್ಯಾರಂಟಿ.ಪೊಲೀಸರಿಗೆ ಒಂದ್ ತಲೆನೋವು ತಪ್ಪಿತೆನ್ನೋದು ಎಷ್ಟು ನಿಜವೋ, ಅಣ್ಣಿ ಮರ್ಡರ್ ಗೆ ಪ್ರತೀಕಾರವಾಗಿ ನಡೆಯಬಹುದಾದ ಮತ್ತಷ್ಟು ಅವಘಡಗಳನ್ನು ಊಹಿಸಿ ಅದನ್ನು ಕಂಟೋಲ್ ಮಾಡೋದು ಕೂಡ ಅಷ್ಟೇ ಸವಾಲಿನ ಕೆಲಸ.

WHO IS THE KILLER OF SHIVAMOGGA’S NATORIOUS ROWDY HANDI ANNI BRUTAL MURDER….:ನಟೋರಿಯಸ್ ಪಾತಕಿ “ಹಂದಿ ಅಣ್ಣಿ”ಗೆ ಮೂಟೆ ಕಟ್ಟಿದ ಗ್ಯಾಂಗ್ ಯಾವ್ದು..? “ಬಂಕ್ ಬಾಲು” ಹುಡುಗ್ರೋ..!! “ನವುಲೆ ಮೋಹನ”ನ ಬಂಟರೋ..!! ಪ್ರಕರಣದಲ್ಲಿ ಅಣ್ಣಿ ಫ್ರೆಂಡ್ “ಹೆಬ್ಬಟ್ಟು ಮಂಜ”ನ ಹೆಸ್ರು ಕೇಳಿಬರ್ತಿರೋದ್ಹೇಕೆ..?!

Spread the love
Leave A Reply

Your email address will not be published.

Flash News