WHY YEDIYURAPPA DICISION MAKES FEAR TO K.S.ESHWARAPPA..!!??ಯಡಿಯೂರಪ್ಪ ಕ್ಷೇತ್ರ ತ್ಯಾಗ ಮಾಡಿದ್ರೆ,ಈಶ್ವರಪ್ಪ ಅವರಿಗೇಕೆ ನಡುಕ..!!

ಮನಸಿನೊಳಗೆ ಯಡಿಯೂರಪ್ಪಂಗೆ ಹಿಡಿಶಾಪ ಹಾಕ್ತಿದ್ದಾರಾ ಈಶ್ವರಪ್ಪ..?!

0

ಬೆಂಗಳೂರು/ಶಿವಮೊಗ್ಗ: ರಾಜಕೀಯ ದಲ್ಲಿ ಎಲ್ಲವೂ ಸಾಧ್ಯ..ಇಲ್ಲಿ ಕ್ಷಣ ಕ್ಷಣವೂ ವಿದ್ಯಾಮಾನಗಳು ಬದಲಾಗ್ತಲೇ ಇರ್ತವೆ. ಪಲ್ಲಟಗಳಂತೂ ಸರ್ವೇಸಾಮಾನ್ಯ.. ಹೀಗೆಯೇ ಆಗುತ್ತೆಂದು ಊಹಿಸೋದು ಕಷ್ಟ..ಎಲ್ಲವೂ ಅನಿಶ್ಚಿತ. ಯಡಿಯೂರಪ್ಪ ಭವಿಷ್ಯ ದಲ್ಲಿ ತನ್ನ ಉತ್ತರಾಧಿಕಾರಿ ಯನ್ನಾಗಿ ವಿಜಯೇಂ ದ್ರ ಅವರನ್ನು ಆಯ್ಕೆ ಮಾಡಿಕೊಳ್ಳೋದು ಕನ್ಫರ್ಮ್ ಆಗಿತ್ತಾದ್ರೂ ತತ್ ಕ್ಷಣ ಕ್ಕೇನೆ ಪಟ್ಟಾಭಿಷೇಕ ಮಾಡ್ತಾರೆಂದು ಯಾರೊಬ್ಬರೂ ಊಹಿಸಿರಲಿಲ್ಲ..ಅನಿರೀಕ್ಷಿತವಾದ ಬೆಳವಣಿಗೆಯಾಗಿರುವುದರಿಂದಲೇ ಇದನ್ನು ಪಕ್ಷವಷ್ಟೇ ಅಲ್ಲ, ಸಾರ್ವಜನಿಕರು ಅರಗಿಸಿಕೊಳ್ಳೋದು ಕೂಡ ಸ್ವಲ್ಪ ಕಷ್ಟ.

ಯಡಿಯೂರಪ್ಪ ತಮ್ಮ ಮಗನಿಗಾಗಿ ಶಿಕಾರಿಪುರ ಕ್ಷೇತ್ರವನ್ನು ಬಿಟ್ಟುಕೊಡುವ ಘೋಷಣೆ ಮಾಡ್ತಿದ್ದಂಗೆ ಪಕ್ಷದೊಳಗೇ ಸಂಚಲನ- ಅಲ್ಲೋಲಕಲ್ಲೋಲ-ತಳಮಳ ಶುರುವಾಗಿದ್ದಂತೂ ಸತ್ಯ. ಇದಕ್ಕೆ ಕಾರಣ ವಯಸ್ಸು ಇರಬಹುದೇನೋ.. ಚುನಾವಣಾ  ರಾಜಕಾರಣದ ಸ್ಪರ್ಧೆಗೆ ಇಂತಿಷ್ಟು  ವಯಸ್ಸನ್ನು ನಿಗಧಿಪಡಿಸಿ ಹೈಕಮಾಂಡ್ ಆದೇಶ ಹೊರಡಿಸುವ ಮುನ್ಸೂಚನೆ ಇಂತದ್ದೊಂದು ಆತಂಕಕ್ಕೆ ಕಾರಣವಾಗಿರಬಹುದು.

ವಯೋಸಹಜ ಕಾರಣಕ್ಕೋ..ಅಥವಾ ಪಕ್ಷದಲ್ಲಿ ಸ್ಥಾನಮಾನ ಸಿಗದ ಬೇಸರಕ್ಕೆ ಠಕ್ಕರ್ ಕೊಡ್ಬೇಕೆನ್ನೋ ಕಾರಣಕ್ಕೋ ಯಡಿಯೂರಪ್ಪ ಕ್ಷೇತ್ರ ತ್ಯಾಗದ ನಿರ್ದಾರ ಪ್ರಕಟಿಸಿದ್ರಾ ಎನ್ನುವ ವಿಶ್ಲೇಷಣೆ-ವ್ಯಾಖ್ಯಾನ ನಡೆಯುತ್ತಿರುವಾಗ್ಲೇ  ಯಡಿಯೂರಪ್ಪ ಘೋಷಣೆಗೆ ತೀವ್ರ ಕಳವಳ-ಅಸಮಾಧಾನ ವ್ಯಕ್ತವಾಗಿದ್ದು ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರಿಂದ ಎನ್ನುವ ಸುದ್ದಿ ಶಿವಮೊಗ್ಗದಿಂದ ತೇಲಿಬರುತ್ತಿದೆ.

ಯಡಿಯೂರಪ್ಪ ಕ್ಷೇತ್ರ ತ್ಯಾಗದ ನಿರ್ದಾರ ಪ್ರಕಟಿಸುತ್ತಿದ್ದಂತೆ ಮೊದಲು ಕೆಂಡಾಮಂಡಲವಾದವ್ರೇ ಕೆ.ಎಸ್.ಈಶ್ವರಪ್ಪ ಅವರಂತೆ.ಇದಕ್ಕೆ ಕಾರಣ, ಯಡಿಯೂರಪ್ಪ ಹಿರಿಯ ರಾಜಕಾರಣಿ,ಮುತ್ಸದ್ಧಿ, ಬಿಜೆಪಿ ಮನೆಯ ಯಜಮಾನ.ಅವರ ಅನುಪಸ್ತಿತಿ ದೊಡ್ಡ ಲಾಸ್ ಎನ್ನೋದಾ ಎಂದುಕೊಂಡವರಿಗೆ ಅವರ ಪಕ್ಷದವರೇ ಶಾಕ್ ಎನ್ನುವಂತ ಸುಳಿವು ನೀಡಿದ್ದಾರೆ.ಈಶ್ವರಪ್ಪಂಗೆ  ಭಯ ಶುರುವಾಗಿರೋದು ಅವರಿಗು ವಯಸ್ಸಿನ ಕಾರಣಕ್ಕಂತೆ..!  ಯಡಿಯೂರಪ್ಪ ಅವರಂತೆ ನೀವು ನಿವೃತ್ತಿ ಘೋಷಿಸ್ಬಿಡಿ ಎಂದು ಹೈಕಮಾಂಡ್  ಹೇಳಿದರೆ ಕಥೆ ಏನು ಎನ್ನುವ ದಿಗಿಲು ಹುಟ್ಕೊಂಡಿದೆಯಂತೆ.

ದೇಹದಲ್ಲಿ ಕೊನೇ ಉಸಿರು ಇರುವವರೆಗೂ ಅಧಿಕಾರ ಅನುಭವಿಸುತ್ತಲೇ ಇರಬೇಕು ಎನ್ನುವ ಇರಾದೆಯ ರಾಜಕಾರಣಿ ಕೆ.ಎಸ್.ಈಶ್ವರಪ್ಪ.ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿವಾದದಲ್ಲಿ ಮಂತ್ರಿಸ್ಥಾನ ಕಳೆದುಕೊಂಡ ದಿನಗಳಿಂದಲೂ ಅಧಿಕಾರವಿಲ್ಲದೆ ವಿಲ ವಿಲ ಒದ್ದಾಡಿದ್ರು. ಬಿ ರಿಪೋರ್ಟ್ ಸಲ್ಲಿಕೆಯಾಗ್ತಿದ್ದಂಗೆ ಮೊದಲು ಹೈಕಮಾಂಡ್ ಹತ್ರ ಮಂತ್ರಿಸ್ಥಾನಕ್ಕೆ ಡಿಮ್ಯಾಂಡ್ ಇಡೊಕ್ಕೆ ಪ್ಲ್ಯಾನ್ ಮಾಡಿದ್ದರಂತೆ.ಅದನ್ನು ವರ್ಕೌಟ್ ಮಾಡಿಕೊಳ್ಳಬೇಕೆನ್ನುವ ಐಡ್ಯಾದಲ್ಲಿರುವಾಗ್ಲೇ ಯಡಿಯೂರಪ್ಪ ಕೊಟ್ಟಂಥ ಶಾಕ್ ಗೆ ಒಂದ್ ಕ್ಷಣ ಈಶ್ವರಪ್ಪಂಗೆ  ಗರ ಬಡಿದಂತಾಯ್ತಂತೆ ಎನ್ನುವ ಮಾತುಗಳಿವೆ.

ಅಂದ್ಹಾಗೆ ಕೆ.ಎಸ್.ಈಶ್ವರಪ್ಪಂಗೆ ಮೊನ್ನೆ ಮೊನ್ನೆ ಜೂನ್ 10ಕ್ಕೆ 74 ತುಂಬಿದೆ. (ಜನ್ಮದಿನಾಂಕ:10 ಜೂನ್ 1948). ಯಡಿಯೂರ ಪ್ಪ ವಯಸ್ಸು 79( ಹುಟ್ಟಿದ ದಿನಾಂಕ:27 ಏಪ್ರಿಲ್ 1943) ಹಾಗೆ ನೋಡಿದರೆ ಇಬ್ಬರ ನಡುವೆ ಹೇಳಿಕೊಳ್ಳುವಂಥ ಭಾರೀ ವಯಸ್ಸಿ ನ ಅಂತರವೇನೂ ಇಲ್ಲ..ಯಡಿಯೂರಪ್ಪಂಗೆ ಹೋಲಿಸಿದ್ರೆ ಈಶ್ವರಪ್ಪ 5 ವರ್ಷ ಸಣ್ಣವರಷ್ಟೇ. ಆದ್ರೆ ದೈಹಿಕ ಸ್ಥಿರತೆ ಗಮನಿಸಿದ್ರೆ ಈಶ್ವರಪ್ಪ ಸ್ವಲ್ಪ ಸ್ಟ್ರಾಂಗ್ ಆಗಿ ಕಾಣ್ತಾರೆನ್ನುವುದು ಕೂಡ ನಿಜ.

ಯಡಿಯೂರಪ್ಪ ಹಾಗೂ ಈಶ್ವರಪ್ಪ ರಾಜ್ಯ ರಾಜಕಾರಣದಲ್ಲಿ ಜೋಡೆತ್ತುಗಳಾಗಿ ಬಿಜೆಪಿ ಪಕ್ಷ ಕಟ್ಟ ಬೆಳೆಸಿದವರು.ಒಂದ್ ಹಂತ ದಲ್ಲಿ ಯಡಿಯೂರಪ್ಪ ಶಿವಮೊಗ್ಗಕ್ಕೆ ಶಿಕಾರಿಪುರದಿಂದ ಬಂದ್ರೆ ಅವರನ್ನು ರಿಸೀವ್ ಮಾಡ್ಕೊಂಡು ಪಕ್ಷ ಸಂಘಟನೆ ಮಾಡುತ್ತಿ ದ್ದವರೇ ಈಶ್ವರಪ್ಪ.ಕಾಲಿಗೆ ಚಕ್ರ ಕಟ್ಕೊಂಡು ಇಬ್ಬರು ಪಕ್ಷ ಕಟ್ಟಿದ ರೀತಿ ಮಾತ್ರ ಅತ್ಯದ್ಭುತ.ಇವತ್ತು ಈಶ್ವರಪ್ಪ ಅವರ ಬಗ್ಗೆ ಏನೇ ಹೇಳಿದ್ರೂ ಯಡಿಯೂರಪ್ಪಂಗೆ ಆರ್ಥಿಕ-ನೈತಿಕವಾಗಿ ಬೆಂಬಲಕೊಟ್ಟವರು ಇದೇ ಈಶ್ವರಪ್ಪ.ಹಾಗಾಗಿನೇ ಇಬ್ಬರ ನಡುವೆ ಏನೇ ವೈಮನಸ್ಸು ಬಂದ್ರೂ ಅದು ಧೀರ್ಘಕಾಲದವರೆಗೂ ಉಳಿದ ನಿದರ್ಶನ ಕಡಿಮೆ.

ಇದೆಲ್ಲಾ ಒತ್ತಟ್ಟಿಗಿರಲಿ,ಯಡಿಯೂರಪ್ಪ ಹಾಗೂ ಈಶ್ವರಪ್ಪ ಸಂಬಂಧ ಸ್ವಲ್ಪ ಹಳಸಿದೆ ಎನ್ನುವುದು ಕೂಡ ಸತ್ಯ. ಯಡಿಯೂರಪ್ಪ ತಾನು  ಏನೇ ನಿರ್ದಾರ ತೆಗೆದುಕೊಳ್ಳುವ ಮುನ್ನ ಸಂಪರ್ಕಿಸುತ್ತಿದ್ದುದೇ ಈಶ್ವರಪ್ಪ ಅವರನ್ನು.ಆದ್ರೆ ಅದು ಇವತ್ತಿಗೆ ಉಳಿದಿಲ್ಲ ಬಿಡಿ.ಏಕೆಂದ್ರೆ ಯಡಿಯೂರಪ್ಪ ಕ್ಷೇತ್ರ ತ್ಯಾಗ ನಿರ್ದಾರ ತೆಗೆದುಕೊಳ್ಳುವ ಮುನ್ನವೇನಾದ್ರೂ ಈಶ್ವರಪ್ಪರನ್ನು ಸಂಪರ್ಕಿಸಿದಿದ್ದರೆ ಅವರು ಖಂಡಿತಾ ಬೇಡ ಎನ್ನುತ್ತಿದ್ದರೇನೋ..?

ಬೇರೆ ರೀತಿಯ ಆಲೋಚನೆ ಮಾಡೋ ಸಲಹೆ ಕೊಡುತ್ತಿದ್ದರೇನೋ..ಆದ್ರೆ ಈ ಬಾರಿ ಹಾಗಾಗಲಿಲ್ಲ..ಯಡಿಯೂರಪ್ಪ ತಮ್ಮ ನಿರ್ದಾರದ ಸಣ್ಣ ಸುಳಿವನ್ನೂ ಈಶ್ವರಪ್ಪಂಗೆ ಕೊಡಲಿಲ್ಲ.ಹಾಗಾಗಿನೇ ಯಡಿಯೂರಪ್ಪ ಅವರ ಕ್ಷೇತ್ರ ತ್ಯಾಗ ನಿರ್ದಾರ ಈಶ್ವರಪ್ಪ ಮಟ್ಟಿಗೆ ಭಾರೀ ಶಾಕ್..ಅಚ್ಚರಿದಾಯಕ ಹಾಗೇ ಅಸಮಾಧಾನಕರ ಎನ್ನಲಾಗುತ್ತಿದೆ.

ಈಶ್ವರಪ್ಪ ಅವರಿಗೆ ಯಡಿಯೂರಪ್ಪ ಅವರ ನಿರ್ದಾರ ಅತೃಪ್ತಿ,ಅಸಮಾಧಾನ ತಂದಿದೆ ಎನ್ನುವು ದಕ್ಕಿಂತ ರಾಜಕೀಯ ಅಸ್ಥಿತ್ವದ ಬಗ್ಗೆ ಆತಂಕವನ್ನೂ ಮೂಡಿಸಿದೆ.ವಯಸ್ಸು ಇತ್ತೀಚೆಗೆ ಪಕ್ಷದಲ್ಲಿ ಭಾರೀ ಸದ್ದು ಮಾಡುತ್ತಿರುವುದರಿಂದ ಯಡಿಯೂರಪ್ಪ ಅವರ ನಿರ್ದಾರ ತನಗೆಲ್ಲಿ ಕುತ್ತು ತರುತ್ತೋ ಎನ್ನುವ ಆತಂಕ ಮೂಡಿಸಿದೆ.

ಏಕೆಂದ್ರೆ ಯಡಿಯೂರಪ್ಪ ಅವರಿಗಿಂತ ಕೇವಲ 5 ವರ್ಷ ಸಣ್ಣವ ರಾಗಿರುವ ನೀವೂ ಕೂಡ ಕ್ಷೇತ್ರ ತ್ಯಾಗದ ನಿರ್ದಾರ ಮಾಡಿದ್ದಾ ರಾ ಎಂದು “ಮಾದ್ಯಮ” ಕೇಳದೆ ಇರೊಲ್ಲ..ಆಗ ಕೊಡಬೇಕಾದ ಉತ್ತರದ ಬಗ್ಗೆ ಈಶ್ವರಪ್ಪ ತಲೆ ಕೆಡಿಸಿಕೊಂಡಿದ್ದಾರೆನ್ನ ಲಾಗುತ್ತಿದೆ. ಯಡಿಯೂರಪ್ಪ ಅವರಂತೆ ತಾನು ರಾಜಕೀಯದಲ್ಲಿ ನಿರ್ಲಿಪ್ತನಲ್ಲ ಎನ್ನುವುದನ್ನು ಅನೇಕ ಬಾರಿ ಹೇಳಿಕೊಂಡಿ ರುವ ಈಶ್ವರಪ್ಪಂಗೆ ಯಡಿಯೂರಪ್ಪ ಅವರ ನಿರ್ದಾರ ಅಸಮಾಧಾನಕ್ಕಿಂತ ಆಕ್ರೋಶ ಮೂಡಿಸಿರುವುದು ಇದೇ ಕಾರಣಕ್ಕೆ.

ಇದರ ಬೆನ್ನಲ್ಲೇ ಮಾದ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಯಡಿಯೂರಪ್ಪ ಅವರ ನಿರ್ದಾರವನ್ನು ಸ್ವಾಗತಿಸುವಂಥ ಬೆಳವಣಿಗೆ ನಡೆಯುತ್ತಿವೆ.ಯಡಿಯೂರಪ್ಪ ಅವರಂತೆ ಈಶ್ವರಪ್ಪ ಹಾಗೂ ಇನ್ನೂ ಅನೇಕ ತಲೆಗಳು ಕೂಡ ಕ್ಷೇತ್ರ ತ್ಯಾಗ ಅಥವಾ ಸ್ವಯಂನಿವೃತ್ತಿಯಂಥ ನಿರ್ದಾರ ತೆಗೆದುಕೊಳ್ಳೋದು ಸೂಕ್ತ.

ಸಣ್ಣವರಿಗೆ ಜಾಗ ಬಿಟ್ಟುಕೊಟ್ಟು ಸಲಹೆ ಕೊಟ್ಟಿಕೊಂಡಿರುವ ಚಿಂತಕರ ಚಾವಡಿ ಸೇರಬೇಕೆನ್ನುವ ಅಭಿಪ್ರಾಯ ಪಕ್ಷದ ಕಾರ್ಯಕರ್ತರಿಂದಲೇ ಕೇಳಿಬರುತ್ತಿದೆ.ಹಾಗಾಗಿ ಯಡಿಯೂರಪ್ಪ ಅವರ ಕ್ಷೇತ್ರ ತ್ಯಾಗದ ಘೋಷಣೆ ಬಿಜೆಪಿ ಪಕ್ಷದೊಳಗೆ ಅನೇಕ ಬದಲಾವಣೆ ಮತ್ತು ಬೆಳವಣಿಗೆಗೆ ವೇದಿಕೆ ಸೃಷ್ಟಿಸಲಾರಂಭಿಸಿದೆ.

Spread the love
Leave A Reply

Your email address will not be published.

Flash News