
ಬೆಂಗಳೂರು: ಇವರಿಗೆಲ್ಲಾ ಏನಾಗಿದೆಯೋ ಗೊತ್ತಾಗ್ತಿಲ್ಲ.ಒಬ್ಬರಿಗಾದರೂ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಬೆಳೆಸುವ ಮಾತು ಹಾಳಾಗಿ ಹೋಗ್ಲಿ ಉಳಿಸಿಕೊಂಡು ಹೋಗುವ ಬದ್ಧತೆನೇ ಇಲ್ಲ ಎನ್ಸುತ್ತೆ.ಒಬ್ಬ ಜವಾಬ್ದಾರಿಯುತವಾಗಿ ವ್ಯವಹರಿಸಬೇಕಾದ ಸಂಸದ ಸಾರಿಗೆ ಕಾರ್ಮಿಕರ ಆರೋಗ್ಯಭಾಗ್ಯಕ್ಕೆ ಇರುವ ಆಸ್ಪತ್ರೆಯನ್ನು ಖಾಸಗಿ ಅವರಿಗೆ ವಹಿಸೊಕ್ಕೆ ಗುತ್ತಿಗೆ ಹಿಡಿದವರಂತೆ ವರ್ತಿಸ್ತಿದ್ದರೆ ಶಾಂತಿನಗರದ ಕೇಂದ್ರ ಕಚೇರಿಯಲ್ಲಿ ಕುತ್ಕೊಂಡಿರುವ ಒಂದಷ್ಟು ಮಹಾನ್ ಬುದ್ದಿವಂತರೆನಿಸಿಕೊಂಡವ್ರು ಸುಸ್ತಿತಿಯಲ್ಲಿರುವ ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿಯನ್ನೇ ಕೆಡವುರುಳಿಸೊಕ್ಕೆ ಬ್ಲ್ಯೂ ಪ್ರಿಂಟ್ ರೆಡಿ ಮಾಡ್ಕೊಂಡು ಕೂತಿದ್ದಾರೆನ್ನುವ ಸ್ಪೋಟಕ ಮಾಹಿತಿ ಹೊರಬಿದ್ದಿದೆ.
ಕೇಳೊಕ್ಕೆ ಇದು ಅಚ್ಚರಿ-ಅಘಾತಕಾರಿ ಎನಿಸ್ಬೋದು.ಆದರೆ ವಾಸ್ತವಕ್ಕೆ ತೀರಾ ಹತ್ತಿರವಾದ ವಿಚಾರ ಎನ್ನೋದು ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿಯಿಂದಲೇ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ದೊರೆತಿದೆ.ಕೇಂದ್ರ ಕಚೇರಿಯಲ್ಲಿರೋ ಮಹನೀಯರು ಅಂದುಕೊಂಡಂತೆ ಯೇ ಎಲ್ಲವೂ ನಡುದ್ರೆ ಕೇಂದ್ರ ಕಚೇರಿ ಜಾಗದಲ್ಲಿ ಕಮರ್ಷಿಯಲ್ ಮಳಿಗೆಗಳು ತಲೆ ಎತ್ತಿನಿಲ್ಲಲಿವೆಯಂತೆ.ಇದೆಲ್ಲದರ ಹಿಂದಿನ ರೂ ವಾರಿ ಹಾಗೂ ಕಾರಣಕರ್ತ ಕೆಎಸ್ ಆರ್ ಟಿಸಿ ಅಧ್ಯಕ್ಷ ಶ್ರೀಮಾನ್ ಚಂದ್ರಪ್ಪ ಎನ್ನೋದು ಕೂಡ ಕೇಂದ್ರ ಕಚೇರಿಯಿಂದಲೇ ಸುದ್ದಿಯಾಗುತ್ತಿದೆ.


ಕೆಲವೇ ವರ್ಷಗಳ ಹಿಂದೆ ಲಾಭದಲ್ಲಿದ್ದ ಸಾರಿಗೆ ನಿಗಮಗಳನ್ನು ಬರ್ಬಾದ್ ಸ್ಥಿತಿಗೆ ತಂದುನಿಲ್ಲಿಸಿದ ಆಡಳಿತ ಮಂಡಳಿ ಹಾಗೂ ಸರ್ಕಾರಕ್ಕೆ ಸಾರಿಗೆ ಕಾರ್ಮಿಕರ ಕಲ್ಯಾಣ-ಸಾರಿಗೆ-ಭತ್ಯೆ-ಸೌಲಭ್ಯ ಕೊಡ್ಲಿಕ್ಕೆ ಹಣವಿಲ್ಲ.ಏನಾದ್ರು ಕೇಳಿದ್ರೆ ಕೆಎಸ್ಆರ್ಟಿಸಿ ಆರ್ಥಿಕ ನಷ್ಟದಲ್ಲಿದೆ ಎನ್ನುವ ರಾಗ ತೆಗೆದು ಕಾರ್ಮಿಕರ ಬಾಯಿ ಮುಚ್ಚಿಸುತ್ತಲೇ ಬಂದಿದೆ.ಆದರೆ ಅಧಿಕಾರಿಗಳ ಮಟ್ಟದ ದರ್ಬಾರ್-ಭ್ರಷ್ಟಾಚಾರ-ಆಟಾಟೋಪಕ್ಕೆ ಮಾತ್ರ ಬ್ರೇಕ್ ಬಿದ್ದಿಲ್ಲ..ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ.ಸಾರಿಗೆ ಸಂಸ್ಥೇ ನಷ್ಟದಲ್ಲಿದೆ ಎನ್ನುವ ಆಡಳಿತ ವರ್ಗ ತೆಗೆದುಕೊಳ್ಳೊಕ್ಕೆ ಹೊರಟಿದೆ ಎನ್ನಲಾಗುತ್ತಿರುವ ನಿರ್ದಾರ ಎಂಥವರನ್ನೂ ಕ್ಷಣ ಕೆಂಡಾಮಂಡಲವಾಗಿಸದೆ ಇರೊಲ್ಲ…
ಏಕೆ ಗೊತ್ತಾ,ಆಡಳಿತ ವರ್ಗ ಕಣ್ಣಾಕಿರುವುದು ಕೇಂದ್ರ ಕಚೇರಿ ಮೇಲೆ.ಕೇಂದ್ರ ಕಚೇರಿಯನ್ನು ಉರುಳಿಸಿ ಅಲ್ಲಿ ವಾಣಿಜ್ಯ ಚಟುವಟಿಕೆ ಆರಂಭಿಸಿದ್ರೆ ಸಂಸ್ಥೆಗೆ ಲಾಭ ಬರುತ್ತದೆ ಎನ್ನುವುದು ಇವರ ಆಲೋಚನೆ.ಆದರೆ ಇದೇ ಆಲೋಚನೆ ಸಾರಿಗೆ ಕಾರ್ಮಿಕ ಸಮುದಾಯದ ಕೆಂಗಣ್ನಿಗೆ ಗುರಿಯಾಗಿದೆ.ಕೇಂದ್ರ ಕಚೇರಿಗೆ ಅನೇಕ ದಶಕಗಳ ಇತಿಹಾಸವಿದೆ.ಅಲ್ಲದೇ ಕಟ್ಟದ ವಿಶಾಲವಾದ ಪ್ರದೇಶದಲ್ಲಿದೆ.ಎಲ್ಲಕ್ಕೂ ಮೀರಿ ಸುಸ್ಥಿತಿಯಲ್ಲಿದೆ.ಇಂತದ್ದೊಂದು ಕಟ್ಟಡವನ್ನು ಕೆಡವಿ ಹೊಸದೊಂದು ಕಟ್ಟಡ ನಿರ್ಮಾಣ ಮಾಡಲು ಹೊರಟಿದೆ ಎನ್ನುವುದರ ಹಿಂದಿನ ಉದ್ದೇಶ ಮಾತ್ರ ನಾನಾ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ದೇಶದ ನಂ.1 ಸಾರಿಗೆ ಸಂಸ್ಥೆ ಕೊರೊನಾ ಹೊಡೆತಕ್ಕೆ ಸಿಕ್ಕ ಮೇಲಂತೂ ನಷ್ಟದ ಕೂಪಕ್ಕೆ ಸಿಲುಕಿದೆ. ಕಳೆದ ಎರಡು ವರ್ಷಗಳಿಂದ ಸಾರಿಗೆ ನೌಕರರಿಗೆ ಸಂಬಳ ನೀಡುವುದಕ್ಕೆ ಹಣವಿಲ್ಲ.ಯಾವುದೇ ಸೌಲಭ್ಯಗಳೂ ದೊರೆಯಂತಾಗಿವೆ.ಏನೇ ಕೇಳಿದ್ರೂ ಹಣವಿಲ್ಲ ಎನ್ನುವ ಉತ್ತರ ಸಿದ್ಧವಾಗಿರುತ್ತದೆ.ಓ.ಕೆ ಒಪ್ಪಿಕೊಳ್ಳೋಣ, ಆದ್ರೆ ಕೆಎಸ್ಆರ್ಟಿಸಿ(KSRTC) ಯನ್ನ ಮುಳುಗಿಸೊಕ್ಕೆ ಸಿದ್ಧವಾಗಿದೆ ಎನ್ನಲಾಗುತ್ತಿರುವ ಪ್ಲಾನ್ ಅನುಷ್ಠಾನಕ್ಕೆ ಮಾತ್ರ ಹೇಗೆ ದುಡ್ಡು ಲಭ್ಯವಿದೆ.
ಎಕರೆಗಟ್ಟಲೇ ಇರುವ ಪ್ರದೇಶದಲ್ಲಿ ಮೈತಳೆದು ನಿಂತಿರುವ ಕೇಂದ್ರ ಕಚೇರಿಯ ಕಟ್ಟಡವನ್ನೇ ಕೆಡವಿ ಅಲ್ಲೊಂದು ಹೊಸ ಸಂಕೀರ್ಣ ನಿರ್ಮಿಸೊಕ್ಕೆ ನೀಲನಕ್ಷೆ ಸಿದ್ಧವಾಗಿದೆಯಂತೆ.ಸರ್ಕಾರದ ಮಟ್ಟದಲ್ಲಿ ಅನುಮೋದನೆಗೆ ಕಡತ ರವಾನೆಯಾಗಿದ್ದು ಖುದ್ದು ಅಧ್ಯಕ್ಷ ಚಂದ್ರಪ್ಪ ಅವರೇ ಈ ಪ್ಲ್ಯಾನ್ ಅಪ್ರೂವಲ್ ಫೈಲ್ ಇಟ್ಕೊಂಡು ಅಡ್ಡಾಡುತ್ತಿದ್ದಾರೆನ್ನುವ ಅಘಾತಕಾರಿ ಮಾಹಿತಿ ಹೊರಬಿದ್ದಿದೆ.
ಎಂಪಿ ವೋಟ್ ಬ್ಯಾಂಕ್ ಗೆ -ಕೆಎಸ್ ಆರ್ ಟಿಸಿ ಆಸ್ಪತ್ರೆ ಬಲಿ.- ಖಾಸಗಿ ಹಿತಾಸಕ್ತಿಗೆ ಬಲಿಯಾದ್ರಾ ಬೆಂ.ದಕ್ಷಿಣ ಸಂಸದ ತೇಜಸ್ವಿಸೂರ್ಯ..
ಸುಮಾರು 50 ವರ್ಷಗಳಷ್ಟು ಹಳೆಯದಾದ ಮೂರು ಅಂತಸ್ತಿನ ಕಟ್ಟಡ ಸದೃಢವಾಗಿದೆ. ಇನ್ನಷ್ಟು ವರ್ಷಗಳವರೆಗೂ ಬಾಳುವಷ್ಟು ಗಟ್ಟಿಮುಟ್ಟಾಗಿದೆ. ಸುಮಾರು 2 ಎಕರೆ 10 ಗುಂಟೆ ಜಾಗದಲ್ಲಿರುವ ಕಟ್ಟಡದ ಜಾಗದಲ್ಲೇ ಬೃಹತ್ ವಾಣಿಜ್ಯ ಕಟ್ಟಡ ಬಂದ್ರೆ ಅದು ನೋಡಲೂ ಆಕರ್ಷಕವಾಗಿರುತ್ತೆ,ಅಷ್ಟೇ ಅಲ್ಲ, ನಿಗಮಕ್ಕೂ ಆರ್ಥಿಕವಾಗಿ ಲಾಭವಾಗುತ್ತೆನ್ನುವುದು ಈ ಪ್ಲ್ಯಾನ್ ಹಿಂದಿರುವವರ ಉದ್ದೇಶವಾಗಿರಹುದು.ಈ ಅಂಶವನ್ನೇ ಮುಂದಿಟ್ಟುಕೊಂಡು 500 ಕೋಟಿ ವೆಚ್ಚದ ಪ್ರಾಜೆಕ್ಟ್ ನ್ನು ಸರ್ಕಾರದ ಮುಂದಿಟ್ಟಿದ್ದಾರೆ ಎನ್ನಲಾಗ್ತಿದೆ.


ಆದ್ರೆ ಅವರಿಗೆ ಸಾರಿಗೆ ನಿಗಮಗಳ ಉದ್ದಾರದ ಬಗ್ಗೆ ಮನಸಿರಬೇಕಲ್ವಾ..ಅದೇ ಇದ್ದಂತೆ ತೋರುತ್ತಿಲ್ಲ.ಹಾಗಾಗಿನೇ ವಾಣಿಜ್ಯಿಕರಣಕ್ಕೆ ಮುಂದಾಗಿದೆ.ಇದೆಲ್ಲದರ ಪ್ಲ್ಯಾನ್ ಬಹುತೇಕ ಅಧ್ಯಕ್ಷ ಚಂದ್ರಪ್ಪ ಅವರದೇ ಎನ್ನಲಾಗ್ತಿದೆ.ಆದರೆ ಅದು ಎಷ್ಟರ ಮಟ್ಟಿಗೆ ಸತ್ಯ ಎನ್ನೋದು ಗೊತ್ತಾಗ್ತಿಲ್ಲ. 500 ಕೋಟಿ ಮೊತ್ತದ ಪ್ರಾಜೆಕ್ಟ್ ಅನುಷ್ಠಾನಗೊಂಡ್ರೆ ಗುತ್ತಿಗೆದಾರರಿಂದ ಇಂತಿಷ್ಟು ಪರ್ಸಂಟೇಜ್ ಸಿಗಬಹುದೆನ್ನುವ ಆಲೋಚನೆ ಅವರದು ಎನ್ನಲಾಗುತ್ತಿದೆ.ಈ ಬಗ್ಗೆ ಸ್ಪಷ್ಟನೆ ಕೇಳಲು ಕನ್ನಡ ಫ್ಲ್ಯಾಶ್ ನ್ಯೂಸ್ ಚಂದ್ರಪ್ಪ ಅವರ 9448135696 ಮೊಬೈಲ್ ನಂಬರ್ ಗೆ ಕರೆ ಮಾಡಿತಾದ್ರೂ ಸಂಪರ್ಕ ಸಾಧ್ಯವಾಗಲಿಲ್ಲ.ಆದ್ರೆ ಬಹುತೇಕ ಕಾರ್ಮಿಕ ಸಿಬ್ಬಂದಿ ಮತ್ತು ಸಾರಿಗೆ ಯೂನಿಯನ್ ಗಳು ಅನಗತ್ಯವಾಗಿರುವ ಪ್ರಾಜೆಕ್ಟ್ ನ ರೂವಾರಿಯೇ ಅಧ್ಯಕ್ಷರು ಎನ್ನುವ ದಾಟಿಯಲ್ಲಿ ಮಾತನಾಡುತ್ತಿದ್ದಾರೆ.
ಮುಳುಗೋ ಹಡಗಿನಂತಾಗಿರುವ ಸಾರಿಗೆ ನಿಗಮಗಳನ್ನು ಸರ್ಕಾರ ಉದ್ದಾರ ಮಾಡಬೇಕೆ ಹೊರತು, ಯಾವುದೇ ಕಾರಣಕ್ಕು ಇಲ್ಲೊಂದು ವಾಣಿಜ್ಯ ಕಟ್ಟಡ 500 ಕೋಟಿಯಲ್ಲಿ ನಿರ್ಮಾಣಗೊಂಡು ಅದರಿಂದ ಬರೋ ಬಾಡಿಗೆಯಿಂದ ಆರ್ಥಿಕನಷ್ಟಕ್ಕೆ ಪರಿಹಾರ ಸಿಗ್ತದೆನ್ನುವುದು ಸತ್ಯ ಅಲ್ಲವೇ ಅಲ್ಲ,ಏಕೆಂದ್ರೆ ಈ 500 ಕೋಟಿ ಹಣವನ್ನು ಮತ್ತೆ ಸಾರಿಗೆ ನಿಗಮಗಳ ಬೊಕ್ಕಸದಿಂದಲೇ ಭರಿಸಬೇಕು..ಇದು ನಷ್ಟವನ್ನು ಮತ್ತೊಂದಷ್ಟು ಕೋಟಿಗಳಿಗೆ ಏರಿಕೆ ಮಾಡಬಹುದು.ಹಾಗಾಗಿ ಇದೆಲ್ಲಾ ತಾಳೆಯಾಗದ ಲೆಕ್ಕಾಚಾರವಾಗಬಹುದೇನೋ..ಹಾಗಾದ್ರೆ 500 ಕೋಟಿ ಪ್ರಾಜೆಕ್ಟ್ ಯಾರ ಉದ್ಧಾರಕ್ಕೋ..ಈ ಪ್ರಶ್ನೆಗೆ ಉತ್ತರ ಎಲ್ಲರ ನಾಲಿಗೆ ತುದಿಯಲ್ಲೇ ಇದೆ.
ಎಂಪಿ ವೋಟ್ ಬ್ಯಾಂಕ್ ಗೆ -ಕೆಎಸ್ ಆರ್ ಟಿಸಿ ಆಸ್ಪತ್ರೆ ಬಲಿ.- ಖಾಸಗಿ ಹಿತಾಸಕ್ತಿಗೆ ಬಲಿಯಾದ್ರಾ ಬೆಂ.ದಕ್ಷಿಣ ಸಂಸದ ತೇಜಸ್ವಿಸೂರ್ಯ..