BJP/HINDU ACTIVISTS ANGRY ON EX-MINISTER K.S.ESHWARAPPA…!?!? ಬಿಜೆಪಿ/ಹಿಂದೂ ಕಾರ್ಯಕರ್ತರ “ನೀಯತ್ತು-ಕಿಮ್ಮತ್ತಿನ”ಬೆಲೆ ಗೊತ್ತಾ ಈಶ್ವರಪ್ಪ ಅವ್ರೇ…?!

ಇತಿಹಾಸ ಮರುತ್ರಾ ಈಶ್ವರಪ್ಪ..?! ಸೋಲಿನ ದವಡೆಗೆ ಸಿಕ್ಕಾಗಲೆಲ್ಲಾ ಪಾರು ಮಾಡಿ ಗೆಲುವಿನ ದಡ ಸೇರಿಸಿದ್ದು ಇದೇ ಕಾರ್ಯಕರ್ತರಲ್ವೇ..?

0

ಶಿವಮೊಗ್ಗ/ಬೆಂಗಳೂರು:  ಪಾಪ.. ತಪ್ಪು ಈಶ್ವರಪ್ಪ ಅವರದ್ದು ಅಲ್ಲವೇ ಅಲ್ಲ ಬಿಡಿ..!! ಅವರ ನಾಲಿಗೆಗೆ ಬ್ರೇಕ್ ಹಾಕೊಕ್ಕೆ ಸಾಧ್ಯವಾಗದ ಬಿಜೆಪಿಗರ ತಪ್ಪು.! ಇಂಥವರನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸುವ ಪ್ರಜ್ಞಾವಂತ ಶಿವಮೊ ಗ್ಗದ ಮತದಾರರ ತಪ್ಪು..??!! ( ಆ ತಪ್ಪಿನ ಅರಿವು ಈ ಬಾರಿಯಂತೂ ಹೆಚ್ಚು ಸ್ಪಷ್ಟವಾದಂತಿದೆ).

ಯಾವ್ ಸನ್ನಿವೇಶದಲ್ಲಿ ಯಾವ್ ರೀತಿ ಮಾತ್ನಾಡ್ಬೇಕೆನ್ನುವುದನ್ನು ಹೇಳಿಕೊ ಡದ, ಕಿವಿ ಹಿಂಡದ ದುರ್ಬಲ ನಾಯಕರಿಂದಾಗಿ ಯೇ ಈಶ್ವರಪ್ಪ ಹಿಂದೆಯೂ ಇಷ್ಟೇ ಉಡಾಫೆಯಿಂದ ಮಾತ್ನಾಡಿದ್ರು.. ಇಂದೂ ಹಾಗೆಯೇ ನಾಲಿಗೆ ಹರಿಬಿಟ್ಟಿದ್ದಾರೆ.. ನಾಳೆಯೂ ಅಷ್ಟೇ ಸಂವೇದನಾರಹಿತರಂತೆ ಮಾತ್ನಾಡ್ತಾರೆ.ಡೌಟೇ ಬೇಡ.!!

ಇಡೀ ರಾಜ್ಯಕ್ಕೆ ರಾಜ್ಯವೇ ಕರಾವಳಿಯ ಸರಣಿ ಕೊಲೆಗಳ ಬೇಗುದಿಯಲ್ಲಿ ಬೆಂದು ಹೋಗುತ್ತಿದೆ. ಉದ್ವಿಗ್ನಗೊಂಡಿರುವ ಕರಾವಳಿಯಲ್ಲಿ ನಾಳೆ ಇನ್ನೇನಾಗಬಹು ದೋ ಎನ್ನುವ ಆತಂಕದಲ್ಲಿದ ಪೊಲೀಸ್ ಇಲಾಖೆ. ಕರಾವಳಿಯಕೋಮು ಸೌಹಾರ್ದತೆ ಕದಡಬಹುದಾದ ಸಂದಿಗ್ಧ ಸ್ತಿತಿ ನಿರ್ಮಾಣವಾಗಿದೆ.

ಕರಾವಳಿಯ ಕಿಡಿ ಕರುನಾಡಿನಾದ್ಯಂತ ವಿವಿಧ ಸ್ವರೂಪಗಳಲ್ಲಿ ಕಾಡ್ಗಿಚ್ಚಿನಂತೆ ವ್ಯಾಪಿಸಿದರೇನು ಕಥೆ ಎಂದು ರಾಜ್ಯ ಸರ್ಕಾರವೇ ತಲೆ ಮೇಲೆ ಕೈ ಹೊತ್ತು ಕೂತಿದೆ..ಇಂಥಾ ಸನ್ನಿವೇಶದಲ್ಲಿ ಪಕ್ಷದ ಒಬ್ಬ ಹಿರಿಯ ನಾಯಕನಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕಾದ ಈಶ್ವರಪ್ಪ ಮಾತನಾಡಿರುವ ರೀತಿಯನ್ನು ಹೊಣೆಗೇಡಿತನದ ಪರಮಾವಧಿ ಎಂದೇ ವಿಶ್ಲೇಷಿಸಲಾಗುತ್ತಿದೆ.

ಈಶ್ವರಪ್ಪ ಆವೇಶಕ್ಕೊಳಗಾಗಿ ವಿವೇಚನೆ ಕಳ್ಕೊಂಡವರಂತೆ ಕೊಡುತ್ತಿರುವ ಹೇಳಿಕೆಗಳು, ನಡೆದುಕೊಳ್ಳುತ್ತಿರುವ ರೀತಿ, ಬಿಜೆಪಿ ಮುಖಂಡರನ್ನೇ ಮುಜುಗರಕ್ಕೀಡು ಮಾಡಿದ್ರೆ ,ಪಕ್ಷಕ್ಕಾಗಿ ದುಡಿದ, ಬಾವುಟ-ಬ್ಯಾನರ್ ಹಾಕಿದ, ಹಗಲು ರಾತ್ರಿಯೆನ್ನದೆ ಪೋಸ್ಟರ್ ಗಳನ್ನು ಗೋಡೆ ಕಾಂಪೌಂಡ್ ಗಳ ಮೇಲೆ  ಹಾಕಿದ,ಸೋಲಿನ ದವಡೆಗೆ ಸಿಲುಕಿದಾಗಲೆಲ್ಲಾ ಈಶ್ವರಪ್ಪ ಅವರನ್ನು  ಗೆಲುವಿನ ದಡಕ್ಕೆ ಸೇರಿಸಿದ ಕೆಳ ಹಂತದ ಕಾರ್ಯಕರ್ತರನ್ನಂತು ನಖಶಿಖಾಂತ ಉರಿಸಿಬಿಟ್ಟಿದೆ.ನಿಗಿನಿಗಿ ಕೆಂಡವನ್ನಾಗಿಸಿದೆ.ಈಶ್ವರಪ್ಪ ಅವರಾದಿಯಾಗಿ ಬಿಜೆಪಿ ನಾಯಕರಿಗಾಗಿ  ಎಲ್ಲವನ್ನು ತ್ಯಾಗ ಮಾಡಿ ಹಿಂದುತ್ವಕ್ಕಾಗಿ ಕೊಲೆಯಾಗಿ ಹೋಗುವ ಸಾಮಾನ್ಯ ಕಾರ್ಯಕರ್ತರಿಗೆ ಪಕ್ಷದಲ್ಲಿ ಎಂಥಾ ಬೆಲೆಯಿದೆ ಎನ್ನೋದು ಇವತ್ತಿನ ಆಗುಹೋಗುಗಳಿಂದಲೇ ವೇದ್ಯವಾಗುತ್ತದೆ.

ಅಧಿಕಾರಕ್ಕೆ ಬರೊಕ್ಕೆ. ಕಾಂಗ್ರೆಸ್ ವಿರುದ್ಧ ಹೋರಾಡೊಕ್ಕೆ,ಮುಸ್ಲಿಂರ ವಿರುದ್ಧ ತೊಡೆ ತಟ್ಟೊಕ್ಕೆ,ಅದರ ಪರಿಣಾಮ ವಾಗಿ ಅವರೊಂದಿಗೆ ದ್ವೇಷ ಕಟ್ಟಿಕೊಂಡು ಜೀವವನ್ನೇ ಅಪಾಯಕ್ಕೆ ತಂದುಕೊಳ್ಳೊಕ್ಕೆ ಇವರಿಗೆಲ್ಲಾ ಕಾರ್ಯಕರ್ತರು ಬೇಕು.ಅವರ ತ್ಯಾಗ-ನಿಸ್ವಾರ್ಥ-ಬಲಿದಾನಗಳ ಮೇಲೆಯೇ ಅಧಿಕಾರದ ಸೌಧ ಕಟ್ಟಿಕೊಳ್ಳಬೇಕು.ಅದೇ ಕಾರ್ಯಕರ್ತರು ಕೊಲೆಯಾದಾಗ ಅವರನ್ನು ಸಂತೈಸುವ ಕನಿಷ್ಟ ಯೋಗ್ಯತೆ-ಸೌಜನ್ಯ ತೋರಿಸದಿದ್ದರೆ ಅವರು ಸುಮ್ಮನಿರಬೇಕಾ.. ಈಶ್ವರಪ್ಪ ಅವರಂಥ ನಾಯಕರ ದೃಷ್ಟಿಯಲ್ಲಿ ಹೌದು..ಅವರು ಬಡವ ನೀ ಮಡಗಿದಂಗೆ ಇರು ಎನ್ನುವಂತಿರಬೇಕು .ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರಬೇಕು ಎನ್ನುವಂತಿದೆ.ಆದರೆ ಪ್ರವೀಣ್ ಕೊಲೆಯಿಂದ ಬೇಸತ್ತ ಕಾರ್ಯಕರ್ತರು ಒಂದು ಹೆಜ್ಜೆ ಮುಂದ್ಹೋಗಿ ಸಾಮೂಹಿಕ ರಾಜೇನಾಮೆಗೆ ಮುಂದಾದ್ರು.

ಜವಾಬ್ದಾರಿಯುತ ಸ್ಥಾನದಲ್ಲಿರುವಂಥ  ಈಶ್ವರಪ್ಪ ಕಾರ್ಯಕರ್ತರ ಆಕ್ರೋಶ-ಭಾವೋದ್ವೇಗ-ಆವೇಶವನ್ನು ಅರ್ಥ ಮಾಡಿಕೊಂಡು ಅವರ ಮನಸನ್ನು ತಿಳಿಗೊಳಿಸಬೇಕಿತ್ತು. ಆದರೆ ಮಾಡಿದ್ದೇನು..?ಮೊದಲೇ ಆವೇಶದಲ್ಲಿ ನಿಗಿನಿಗಿ ಕೆಂಡವಾಗಿದ್ದ ಕಾರ್ಯಕರ್ತರನ್ನು ಕೆರಳಿಸುವ ರೀತಿಯಲ್ಲಿ ವರ್ತಿಸಿದ್ದಾರೆ.

ಕಾರ್ಯಕರ್ತರು ರಾಜೀನಾಮೆ ಕೊಟ್ಟರೆ ವೈಯುಕ್ತಿಕವಾಗಿ ಅವರಿಗೆ  ನಷ್ಟವೇ ಹೊರತು,ಪಕ್ಷಕ್ಕೆ ಅಲ್ಲವೇ ಅಲ್ಲ.ಅವರಿಲ್ಲದಿದ್ದರೆ ಇನ್ನೊಬ್ಬರು.ಇವತ್ತು ಪಕ್ಷದ ಸಿದ್ದಾಂತ ಒಪ್ಪಿಕೊಂಡು ಬರೊಕ್ಕೆ ಸಾವಿರಾರು ಯುವಕರು ಕ್ಯೂನಲ್ಲಿದ್ದಾರೆ ಎನ್ನುವ ಧಾಟಿಯಲ್ಲಿ ಮಾತ್ನಾಡಿ ತಮ್ಮ “ಅವಿವೇಕತನ”ವನ್ನು ಪ್ರದರ್ಶಿಸಿದ್ದಾರೆ.ಅವರ “ಹೊಣೆಗೇಡಿತನ”ವನ್ನು ಸಾಬೀತುಪಡಿಸಿದ್ದಾರೆ. ಕಾರ್ಯಕರ್ತರ ಮನಸಿನಲ್ಲಿ ಮೂಡಿರುವ ಗಾಯದ ಮೇಲೆ ಬರೆ ಎಳೆದಿದ್ದಾರೆ ಎನ್ನೋ ಆರೋಪ ಅವರ ಪಕ್ಷದ ಮುಖಂಡರಿಂದಲೇ ಕೇಳಿಬಂದಿದೆ.

ಈಶ್ವರಪ್ಪ ಅವರಿಗೆ ಇದೆಲ್ಲಾಬೇಕಿತ್ತಾ..? ಅವರ ಹೇಳಿಕೆ ಕಾರ್ಯಕರ್ತರ ವಲಯದಲ್ಲಿ ಪಕ್ಷಕ್ಕೆ ಹೆದರದೆ, ಜರುಗಬಹು ದಾದ ಕಠಿಣ ಕ್ರಮಕ್ಕೂ ತಲೆಕೆಡಿಸಿಕೊಳ್ಳದೆ  ಬಹಿರಂಗವಾಗಿ ಹರಿಹಾಯುವಂತೆ ಮಾಡಿದೆ. “ನೀವಿಲ್ಲದಿದ್ದರೆ ಇನ್ನೊ ಬ್ಬರು” ಎನ್ನುವಂತೆ ಮಾತ್ನಾಡಿದ್ದೀರಲ್ಲ..”ಲಾಸ್ ನಿಮಗೇ ಹೊರತು ಪಕ್ಷಕ್ಕಲ್ಲ” ಎಂದಿದ್ದೀರಲ್ಲಾ ನಮ್ಮ ಬೆಲೆ ಏನೆನ್ನುವುದನ್ನು ಪ್ರೂವ್ ಮಾಡಿ ತೋರಿಸ್ತೇವೆ ಎಂದು ಶಿವಮೊಗ್ಗದಲ್ಲೇ ನೂರಾರು ಕಾರ್ಯಕರ್ತರು ಪರಸ್ಪರ ಮಾತ್ನಾಡಿಕೊಳ್ಳುತ್ತಿದ್ದಾರೆ.

ಮುಸ್ಲಿಮರು ರಾಷ್ಟ್ರದ್ರೋಹಿಗಳು ಎನ್ನುವ ಮೂಲಕ ಮುಸ್ಲಿಂ ವೋಟ್ ಬ್ಯಾಂಕನ್ನು ಬಹುತೇಕ ಕಳೆದುಕೊಂಡಿರುವ ಈಶ್ವರಪ್ಪ ಅವರಿಗೆ ಮುಂದಿನ ಚುನಾವಣೆಯಲ್ಲಿ ಇರೋದು ಕೇವಲ ಹಿಂದುಗಳ ವೋಟ್ ಬ್ಯಾಂಕ್.ಹಾಗಾಗಿ ನಾನು ಡೇಂಜರ್ ಝೋನ್ ನಲ್ಲಿದ್ದೇನೆ ಎನ್ನುವುದನ್ನು ಅರಿತು ಸೂಕ್ಷ್ಮವಾಗಿ ಮಾತನಾಡೋದನ್ನು,ವ್ಯವಹರಿಸೋದನ್ನು ಬಿಟ್ಟು ಕಾರ್ಯಕರ್ತರನ್ನೇ ನಿರ್ಲಕ್ಷ್ಯಿಸುವ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆನ್ನುವುದು ಅವರ ರಾಜಕೀಯ ಭವಿಷ್ಯಕ್ಕೆ ಮುಳುವಾಗಬಹುದೆನ್ನುವ ವಿಶ್ಲೇಷಣೆ ಕೇಳಿಬರಲಾರಂಭಿಸಿವೆ.

ಕಾರ್ಯಕರ್ತರಿಲ್ಲದೆ ಈಶ್ವರಪ್ಪ ಎನ್ನುವಂತ ಕ್ಯಾರೆಕ್ಟರ್ ಕೇವಲ ಝೀರೋ.ಸೋಲಿನ ದವಡೆಗೆ ಸಿಲುಕಿದ್ದಾಗ ಅವರ ನ್ನು ಹಗಲಿರುಳೆನ್ನದೆ ದುಡಿದು ಮನೆಮನೆಗೆ ತೆರಳಿ ಜನರನ್ನು ಮನ ವೊಲಿಸಿ, ಸೋಲನ್ನು ಗೆಲುವನ್ನಾಗಿ ಪರಿವ ರ್ತಿಸಿದ್ದು ಇದೇ ಕಾರ್ಯಕರ್ತರು ಎನ್ನೋದನ್ನು ಈಶ್ವರಪ್ಪ ಮರೆತಂತಿದೆ.ಅವರನ್ನು ಧಿಕ್ಕರಿಸಿ,ನಿರ್ಲಕ್ಷ್ಯಿಸಿ ನಾನು ಗೆಲ್ಲಬಲ್ಲೆ..ಈಜಿ ದಡ ಸೇರಬಲ್ಲೆ ಎಂದುಕೊಂಡಿದ್ದರೆ ಅದು ಅವರ ಮೂರ್ಖತನ ಎಂದು ರಾಜಕೀಯ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.2023ರ ಚುನಾವಣೆಯಲ್ಲಿ ಒಂದ್ವೇಳೆ ಈಶ್ವರಪ್ಪ ಸೋಲುಂಡ್ರೆ ಅದಕ್ಕೆ ಮುಸ್ಲಿಂರಿಗಿಂತ ಹೆಚ್ಚಿನ ಕಾರಣ ಪಕ್ಷದ ಈ ಕಾರ್ಯಕರ್ತರೇ ಆಗಿದ್ರೂ ಆಶ್ವರ್ಯಪಡಬೇಕಿಲ್ಲ.

ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಪ್ಪು ಒಪ್ಪುಗಳಿದ್ದರೆ ಅದನ್ನು ಸರಿಪಡಿಸಿಕೊಂಡು ಹೋಗಬೇಕಿರುವ ಈಶ್ವರಪ್ಪ ಪ್ರಚೋದನಾತಾತ್ಮಕ ಹೇಳಿಕೆಗಳಿಂದ ಅನಗತ್ಯ ವಿವಾದ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಮೊದಲೇ ಕ್ಷೇತ್ರದಲ್ಲಿ ದೊಡ್ಡ ಡ್ಯಾಮೇಜ್ ಮಾಡ್ಕೊಂಡಿದ್ದಾರೆ.ಆ ಡ್ಯಾಮೇಜ್ ಕಂಟ್ರೋಲ್ ಸರಿ ಮಾಡಿಕೊಳ್ಳೋದನ್ನು ಬಿಟ್ಟು ಹಿಂದುತ್ವದ ವಾರಸುದಾರರಂತೆ-ಅದನ್ನು ಗುತ್ತಿಗೆ ಹಿಡಿದವರಂತೆ ಮಾತನಾಡುವುದು ಸರಿ ಕಾಣುತ್ತಿಲ್ಲ.

ಬ್ಯಾಕ್ ಟು ಬ್ಯಾಕ್ ಹಿಂದು ಕಾರ್ಯಕರ್ತರ ಕೊಲೆಗಳಾಗುತ್ತಿರುವುದರಿಂದ ಸಹಜವಾಗೇ ಆವೇಶಕ್ಕೊಳಗಾಗಿರುವ  ಕಾರ್ಯಕರ್ತರನ್ನು ಸಮಾಧಾನಿಸಿ ಅವರ  ಮನವೊಲಿಸಿ ರಾಜೀನಾಮೆ ಹಿಂಪಡೆಯುವ ಕೆಲಸ ಮಾಡೋದ್ರ ಬದಲಿಗೆ ಕೆರಳಿ ಕೆಂಡವಾಗಿಸುವುದು ಎಷ್ಟು ಸರಿ..ಅದು ಅವರ 2023 ರ ರಾಜಕೀಯ  ಚುನಾವಣೆ ಮೇಲೆ ಮಾರಕ ಪರಿಣಾಮ ಬೀರಿದ್ರೂ ಅತಿಶಯವಿಲ್ಲ.ಆ ದಿನಮಾನಗಳಲ್ಲಿ ಅದೇ ಅವರ ಡ್ಯಾಮೇಜ್  ಹೆಚ್ಚಿಸಿದ್ರೂ ಆಶ್ಚರ್ಯಪಡಬೇಕಿಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಪಕ್ಷದ ಮತಗಳಿಕೆಗೂ ಇದು ಡ್ಯಾಮೇಜ್ ಉಂಟುಮಾಡಬಹುದು  ಎನ್ನುವುದು ರಾಜಕೀ ಯ ಪಂಡಿತರ ಲೆಕ್ಕಾಚಾರ.

ಬೇಕಾದಂತೆ ನಾಲಿಗೆ ಹರಿಬಿಡೋದು..ಕೇಳಿದ್ದಕ್ಕಲ್ಲಾ ಉದ್ವೇಗ-ಆವೇಶದಿಂದ ಹೇಳಿಕೆ ನೀಡೋದು,ಹಿಂದುತ್ವದ ಕಟ್ಟರ್ ಪ್ರತಿಪಾದಕರೆಂದು ಬಿಂಬಿಸಿಕೊಳ್ಳುವ ಭರದಲ್ಲಿ ಉಳಿದೆಲ್ಲವನ್ನೂ ತುಚ್ಛೀಗೊಳಿಸುವುದು,ಎಲ್ಲರನ್ನೂ ಡಮ್ಮಿ ಪೀಸ್ ಗಳಂತೆ ನೋಡುವುದು, ವೈಯುಕ್ತಿಕವಾಗಿ ಈಶ್ವರಪ್ಪ ಅವರಿಗೂ ಒಳ್ಳೇದಲ್ಲ..ಬಿಜೆಪಿ ಪಕ್ಷದ ಬೆಳವಣಿಗೆಗೂ ಪೂರಕವಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಲಾರಂಭಿಸಿದೆ…

Spread the love
Leave A Reply

Your email address will not be published.

Flash News