NATORIOUS CRIMINAL SURRENDER BEFORE BIJAPUR COURT:ಶಾಂತವಾಯ್ತು ಪ್ರಕ್ಷುಬ್ಧ “ಭೀಮೆ” ತೀರ.. ನಟೋರಿಯಸ್ ಪಾತಕಿ ಮಲ್ಲಿಕಾರ್ಜುನ್ ಚಡಚಣನ ಪತ್ನಿ ವಿಮಲಾಬಾಯಿ ಕೋರ್ಟ್ ಗೆ ಸರೆಂಡರ್..

ಎಡಿಜಿಪಿ ಅಲೋಕ್ ಕುಮಾರ್ ಕೊಟ್ಟ ವಾರ್ನಿಂಗ್ ಗೆ ಪತರುಗುಟ್ಟಿದ ಚಡಚಣ ಫ್ಯಾಮಿಲಿ..ಶೀಘ್ರವೇ ಭೀಮ ತೀರಕ್ಕಂಟಿದ ಕಳಂಕಕ್ಕೆ ಶಾಶ್ವತ ಬ್ರೇಕ್ ಬೀಳುವ ಸಾಧ್ಯತೆ

0
ಹಿಂದೆ ಶಾಂತವಾಗಿ ಹರಿಯುತ್ತಿದ್ದ ಬಿಜಾಪುರ ಜಿಲ್ಲೆಯ ಜೀವನದಿ ಭೀಮಾ ತೀರ..ಈ ನದಿಯ ತೀರ ಅದೆಷ್ಟು ಪ್ರತೀಕಾರದ ಕೊಲೆಗಳಿಗೆ ಸಾಕ್ಷಿಯಾಗಿದೆಯೋ ಗೊತ್ತಿಲ್ಲ..ಶಾಂತವಾಗಿದ್ದ ಭೀಮೆ ತೀರ ಪ್ರಕ್ಷುಬ್ಧ ವಾತಾವರಣ ಹೊತ್ತುಕೊಂಡಿದ್ದು ವಿಪರ್ಯಾಸ..ಆದರೆ ಈಗ ಗತವೈಭವ ಮರಳುವ ಲಕ್ಷಣ ಕಾಣಿಸ್ತಿದೆ.

ಬಿಜಾಪುರ: ಪ್ರಕ್ಷುಬ್ಧಗೊಂಡಿದ್ದ  ಭೀಮಾ ತೀರ ನೆಮ್ಮದಿಯಲ್ಲಿ ಮಗ್ಗಲು ಬದಲಿಸಿದೆ.ಪ್ರತೀಕಾರಕ್ಕಾದ ಹೊಗೆಗೆ ಪೊಲೀಸ್ ಫುಲ್ ಸ್ಟಾಪ್ ಇಟ್ಟಿದೆ.

ಭೀಮಾ ತೀರದ ಹಂತಕರ ಹೆಡೆಮುರಿ ಕಟ್ಟಿ ಜಿಲ್ಲೆಯಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡುತ್ತಿರುವ ಖಡಕ್ ಎಡಿಜಿಪಿ ಅಲೋಕ್ ಕುಮಾರ್..
ಭೀಮಾ ತೀರದ ಹಂತಕರ ಹೆಡೆಮುರಿ ಕಟ್ಟಿ ಜಿಲ್ಲೆಯಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡುತ್ತಿರುವ ಖಡಕ್ ಎಡಿಜಿಪಿ ಅಲೋಕ್ ಕುಮಾರ್..
ಕೋರ್ಟ್ ಗೆ ಶರಣಾದ ಭೀಮಾ ತೀರದ ಹಂತಕ ಮಲ್ಲಿಕಾರ್ಜುನ್ ಚಡಚಣ ಪತ್ನಿ ವಿಮಲಾಬಾಯಿ
ಕೋರ್ಟ್ ಗೆ ಶರಣಾದ ಭೀಮಾ ತೀರದ ಹಂತಕ ಮಲ್ಲಿಕಾರ್ಜುನ್ ಚಡಚಣ ಪತ್ನಿ ವಿಮಲಾಬಾಯಿ

ಭೀಮಾ ತೀರದಲ್ಲಿ ನಿರ್ಮಾಣವಾಗಿದ್ದ ಆತಂಕ ದೂರ ಮಾಡೊಕ್ಕೆ ಟೊಂಕಕಟ್ಟಿ ನಿಂತಂತೆ ಕೆಲಸ ಮಾಡುತ್ತಿರುವ ಎಡಿಜಿಪಿ ಅಲೋಕ ಕುಮಾರ್ ಅವರ ಪ್ರಯತ್ನಕ್ಕೆ ಫಲ ಸಿಗುವಂತೆ ಕಾಣ್ತಿದೆ.ಅವರ ಶ್ರಮದ ಭಾಗವಾಗಿಯೇ ಅನೇಕ ದಿನಗಳಿಂದ ನಿಗೂಢವಾಗಿದ್ದ ಭೀಮಾ ತೀರದ ಕುಖ್ಯಾತ ಹಂತಕ ಮಲ್ಲಿಕಾರ್ಜುನ್ ಚಡಚಣನ ಪತ್ನಿ ವಿಮಲಾಬಾಯಿ ಇಂದು ನ್ಯಾಯಾಲಯದಲ್ಲಿ ಶರಣಾಗತಳಾಗಿದ್ದಾಳೆ.

2020 ನವೆಂಬರ್ 2 ರಂದು ಪಾತಕಿ  ಮಹಾದೇವ ಬೈರಗೊಂಡ ಮೇಲೆ ಅಟ್ಯಾಕ್ ನಡೆದ ಬಳಿಕ ಭೂಗತಳಾಗಿದ್ದ ವಿಮಲಾಬಾಯಿ ಇಂದು ವಿಜಾಪುರ 4ನೇ ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಶರಣಾಗತಳಾದ್ಲು.ಆಕೆಯ ಜತೆಗೆ ನಂಬಿಗಸ್ಥ ಭಂಟ ಸೋನ್ಯಾ ರಾಠೋಡ್ ಕೂಡ ಶರಣಾಗತನಾಗಿದ್ದಾನೆ.

ಭೀಮಾತೀರಕ್ಕೆ ಅಂಟಿಕೊಂಡಿರುವ ಕುಖ್ಯಾತಿಯನ್ನು ಹೋಗಲಾಡಿಸುವ ಹಿನ್ನಲೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸಭೆ ಕರೆದು ಅವರ ಅಭಿಪ್ರಾಯ-ಅಹವಾಲು ಸ್ವೀಕರಿಸುತ್ತಿದ್ದಾರೆ.ಮೊನ್ನೆಯ ಸಭೆಯಲ್ಲೂ ಎಡಿಜಿಪಿ ಭೀಮಾ ತೀರದ ಹಂತಕರ ಪಟ್ಟಿಯಲ್ಲಿರುವವರನ್ನು ಕರೆದು ವಾರ್ನ್ ಮಾಡಿದ್ರು.ಇದೇ ದಂಧೆ ಮುಂದುವರೆಸಿದ್ರೆ ಗಡಿಪಾರು-ಎನ್ಕೌಂಟರ್ ಮಾಡಬೇಕಾಗ್ತದೆ ಎಂದು ಎಚ್ಚರಿಸಿದ್ದರು.

ಬಿಜಾಪುರ ಜಿಲ್ಲೆಯಲ್ಲಿ ಅಶಾಂತಿ ನೆಲೆಸಲು ಕಾರಣವಾದ ಭೀಮಾ ತೀರದ ಹಂತಕರ ಛಾಯೆಯನ್ನು ಇಟ್ಟುಕೊಂಡಿರುವವರಿಗೆ ಇತ್ತೀಚೆಗೆ ಎಡಿಜಿಪಿ ಅಲೋಕ್ ಕುಮಾರ್ ಸಾರ್ವಜನಿಕರ ಸಭೆ ನಡೆಸಿ ವಾರ್ನ್ ಮಾಡಿದ್ದರು.
ಬಿಜಾಪುರ ಜಿಲ್ಲೆಯಲ್ಲಿ ಅಶಾಂತಿ ನೆಲೆಸಲು ಕಾರಣವಾದ ಭೀಮಾ ತೀರದ ಹಂತಕರ ಛಾಯೆಯನ್ನು ಇಟ್ಟುಕೊಂಡಿರುವವರಿಗೆ ಇತ್ತೀಚೆಗೆ ಎಡಿಜಿಪಿ ಅಲೋಕ್ ಕುಮಾರ್ ಸಾರ್ವಜನಿಕರ ಸಭೆ ನಡೆಸಿ ವಾರ್ನ್ ಮಾಡಿದ್ದರು.

ಆ ಸಭೆಯಲ್ಲೆ  ಮಹಾದೇವ ಬೈರಗೊಂಡ ಮೇಲೆ ಅಟ್ಯಾಕ್ ನಡೆದ ಬಳಿಕ ಭೂಗತಳಾಗಿದ್ದ ವಿಮಲಾಬಾಯಿ ತತ್ ಕ್ಷಣಕ್ಕೆ ಶರಣಾಗತಳಾಗ್ಬೇಕು,.ಅದನ್ನು ಅವರ ತಂಡದವರೇ ಮಾಡಬೇಕು ಇಲ್ಲವಾದಲ್ಲಿ ಪರಿಣಾಮ ನೆಟ್ಟಗಿರೊಲ್ಲ ಎಂದು ವಾರ್ನ್ ಮಾಡಿದ್ರು.ಅಷ್ಟೇ ಅಲ್ಲ ಆಸ್ತಿಯನ್ನು ಜಪ್ತಿ ಮಾಡಬೇಕಾಗ್ತದೆ ಎಂದು ಎಚ್ಚರಿಸಿದ್ದರು.

ಪಾತಕಿ ಮಲ್ಲಿಕಾರ್ಜುನ್ ಚಡಚಣ ನ ಪತ್ನಿ ವಿಮಲಾಬಾಯಿ ಶರಣಾಗತಳಾದ ಬಿಜಾಪುರ ಕೋರ್ಟ್
ಪಾತಕಿ ಮಲ್ಲಿಕಾರ್ಜುನ್ ಚಡಚಣ ನ ಪತ್ನಿ ವಿಮಲಾಬಾಯಿ ಶರಣಾಗತಳಾದ ಬಿಜಾಪುರ ಕೋರ್ಟ್

ಅಲೋಕ್ ಕುಮಾರ್ ಅವಾಜ್ ಹಾಕ್ತಿದ್ದಂಗೆ ಅಲರ್ಟ್ ಆದ ಭೀಮಾತೀರದ ಪಾತಕಿಗಳು ತಮ್ಮ ಆಟಾಟೋಪ ಮುಂದುವರೆಸಿದ್ರೆ ಬದುಕೊಕ್ಕೆ ಆಗೊಲ್ಲ ಎಂದುಕೊಂಡು ವಿಮಲಾಬಾಯಿ ಜತೆ ಸಂಪರ್ಕ ಸಾಧಿಸಿ ಆಕೆಯ ಶರಣಾಗತಿಗೆ ಪ್ಲ್ಯಾನ್ ರೆಡಿ ಮಾಡಿದ್ದಾರೆ.ಅದರಂತೆಯೆ ಇಂದು ಬೆಳಗ್ಗೆ ನ್ಯಾಯಾಲಯದ ಮುಂದೆ ಶರಣಾಗತಗೊಳಿಸಿದ್ದಾರೆ.

ಪಾತಕಿ ಮಲ್ಲಿಕಾರ್ಜುನ್ ಚಡಚಣ
ಪಾತಕಿ ಮಲ್ಲಿಕಾರ್ಜುನ್ ಚಡಚಣ
ಭೀಮಾತೀರದ ಮೋಸ್ಟ್ ನಟೋರಿಯಸ್ ಪಾತಕಿ ಮಹಾದೇವ ಬೈರಗೊಂಡ
ಭೀಮಾತೀರದ ಮೋಸ್ಟ್ ನಟೋರಿಯಸ್ ಪಾತಕಿ ಮಹಾದೇವ ಬೈರಗೊಂಡ

ಭೀಮಾತೀರದ ಮೋಸ್ಟ್ ನಟೋರಿಯಸ್ ಪಾತಕಿ ಮಹಾದೇವ ಬೈರಗೊಂಡ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ  ವಿಮಲಾದೇವಿ ಹಾಗೂ ಸಹಚರರನ್ನು ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ.ವಿಮಲಾಬಾಯಿ ಶರಣಾಗತಿಯಿಂದ ಭೀಮಾ ತೀರದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಪ್ರಕ್ಷುಬ್ಧಗೊಂಡಿರುವ ಭೀಮಾ ತೀರದಲ್ಲಿ ಶಾಂತಿ ನೆಲಸಲು ಜೀವಪಣಕ್ಕಿಟ್ಟು ಕೆಲಸ ಮಾಡುತ್ತಿರುವ ಅಲೋಕ್ ಕುಮಾರ್ ಅವರ ಕೆಲಸಕ್ಕೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.ಅವರು ಇರುವ ದಿನಗಳಲ್ಲಿ ಸಂಪೂರ್ಣ ಶಾಂತಿ ನೆಲೆಸುವಂತೆ ಮಾಡಿ ಸಾಹೇಬ್ರೇ ಎಂದು ಜನ ಬಿನ್ನಬಿಸಿಕೊಳ್ತಿದಾರೆ.

NATORIOUS CRIMINAL SURRENDER BEFORE BIJAPUR COURT:ಶಾಂತವಾಯ್ತು ಪ್ರಕ್ಷುಬ್ಧ “ಭೀಮೆ” ತೀರ.. ನಟೋರಿಯಸ್ ಪಾತಕಿ ಮಲ್ಲಿಕಾರ್ಜುನ್ ಚಡಚಣನ ಪತ್ನಿ ವಿಮಲಾಬಾಯಿ ಕೋರ್ಟ್ ಗೆ ಸರೆಂಡರ್..

Spread the love
Leave A Reply

Your email address will not be published.

Flash News