IN SHIVAMOGGA COLLEGE STUDENT TURN INTO MURDERER..!! ಅಯ್ಯೋ ಪಾಪ..!! “ಮಾಜಿ ರೌಡಿ”ಯ ಕಿರಿಕ್-ಕ್ವಾಟ್ಲೆಗೆ “ಕೊಲೆ”ಗಾರನಾದ “ಪ್ರತಿಭಾನ್ವಿತ” ವಿದ್ಯಾರ್ಥಿ..!!

ತನ್ನ ನಶೆಯ ತೆವಲಿಗೆ ಕೊಲೆಯಾದ ಕಿರಣ @ ಪುಚ್ಚಿ-ಕೊಲೆ ಮಾಡಿ ಶರಣಾದ ಹಂತಕರು..

0
ತನ್ನ ಅಮಲಿಗಾಗಿ ವಿದ್ಯಾರ್ಥಿಯನ್ನು ಪೀಡಿಸಿ,ಕೊಲೆಯಾದ ಪುಚ್ಚಿ ಅಲಿಯಾಸ್ ಕಿರಣ್
ತನ್ನ ಅಮಲಿಗಾಗಿ ವಿದ್ಯಾರ್ಥಿಯನ್ನು ಪೀಡಿಸಿ,ಕೊಲೆಯಾದ ಪುಚ್ಚಿ ಅಲಿಯಾಸ್ ಕಿರಣ್
ಮಾಜಿ ಪುಡಿ ರೌಡಿಯನ್ನು ಕೊಂದು ಜೈಲು ಸೇರಿದ ವಿದ್ಯಾರ್ಥಿ( ಪ್ರಾತಿನಿಧಿಕ ಚಿತ್ರ)
ಮಾಜಿ ಪುಡಿ ರೌಡಿಯನ್ನು ಕೊಂದು ಜೈಲು ಸೇರಿದ ವಿದ್ಯಾರ್ಥಿ( ಪ್ರಾತಿನಿಧಿಕ ಚಿತ್ರ)

ಶಿವಮೊಗ್ಗ: ಪಾತಕಿ ಹಂದಿ ಅಣ್ಣಿ ಭೀಕರ ಕೊಲೆಯ ಶಾಕ್ ನಿಂದ ಎಚ್ಚೆತ್ತುಕೊಳ್ಳುವ ಮುನ್ನವೇ  ಶಿವಮೊಗ್ಗದಲ್ಲಿ ನೆತ್ತರು ಹರಿದಿದೆ.ಆದ್ರೆ ಈ ಬಾರಿ ಮ್ಯಾಟರ್ ಸ್ವಲ್ಪ ಬೇರೆನೇ ಇದೆ.ಕೊಲೆಯಾದದ್ದು ಪ್ರತೀಕಾರಕ್ಕಲ್ಲ.ಕೊಲೆ ಮಾಡಿದವ್ನು ಕೂಡ ತೀರಾ ನಟೋರಿಯಸ್ ಅಂತೂ ಅಲ್ವೇ ಅಲ್ಲ.ಕೊಲೆಯಾದವನು ಕೂಡ ಕೇವಲ ಅಮಲಿಗಾಗಿ ಪೀಡಿಸುತ್ತಿದ್ದ ಮಾಜಿ ರೌಡಿ.ಆತನ ಕಾಟ ತಡೆದುಕೊಳ್ಳಲಿಕ್ಕಾಗದೆ ಕೊಲೆ ಮಾಡಿದ ಕಾಲೇಜ್ ಸ್ಟೂಡೆಂಟ್ ತಾನೇ ಪೊಲೀಸ್ ಠಾಣೆಗೆ ಬಂದು ಪ್ರಾಮಾಣಿಕವಾಗಿ ಸರೆಂಡರ್ ಆಗಿದ್ದಾನೆ.

ಇದೊಂದ್ ರೀತಿ ವಿಚಿತ್ರ ಮರ್ಡರ್ ಕೇಸ್ ಕಣ್ರಿ.ಕೊಲೆ ಮಾಡಿದವ್ರು ಪೊಲೀಸ್ರಿಂದ ತಪ್ಪಿಸಿಕೊಳ್ಳೊಕ್ಕೆ ಎಸ್ಕೇಪ್ ಆಗೋದೇ ಹೆಚ್ಚು.ಆದ್ರೆ ಶಿವಮೊಗ್ಗದ ಗಾಡಿಕೊಪ್ಪದಲ್ಲಿ ನಡೆದಿರುವ ಕೊಲೆ ಮ್ಯಾಟರ್ರೇ ಡಿಫರೆಂಟ್.ತಾನಾಯ್ತು ತನ್ನ ಕಾಲೇಜಾಯ್ತೆಂದು ನಿರ್ಲಿಪ್ತವಾಗಿದ್ದ ಕಾಲೇಜ್ ಸ್ಟೂಡೆಂಟ್ ಕೊಲೆ ಮಾಡುವ ಮಟ್ಟಕ್ಕೆ ಇಳಿದಿದ್ದನ್ನು ಇಡೀ ಶಿವಮೊಗ್ಗ ಅನುಕಂಪೆಯ ದೃಷ್ಟಿಯಲ್ಲಿ ನೋಡುವಂತಾಗಿದೆ. ಕೊಲೆ ಮಾಡುವ ಮಟ್ಟಕ್ಕೆ ಕಾಲೇಜ್ ಸ್ಟೂಡೆಂಟನ್ನು ಪುಡಿ ರೌಡಿ ಪ್ರವೋಕ್ ಮಾಡಿದ್ದಾನೆಂದ್ರೆ ಆತ ಅದೆಷ್ಟು ಕ್ವಾಟ್ಲೆ-ಕಿರಿಕ್ ಮಾಡಿರಬಹುದೆಂದು ಅಂದಾಜಿಸ್ಬೋದು.

ಇಲ್ಲಿ ಬೇಕೆಂತಲೇ ನಾವು ವಿದ್ಯಾರ್ಥಿ ಹೆಸ್ರು ಹೇಳ್ತಿಲ್ಲ. ಪಿಯುಸಿ ಓದುತ್ತಿದ್ದ ಆತ  ಪ್ರತಿಭಾನ್ವಿತ ವಿದ್ಯಾರ್ಥಿ ಎನಿಸಿಕೊಂಡಿದ್ದ..ಪಿಯು ಮುಗಿಸಿಕೊಂಡ ಮೇಲೆ ಒಳ್ಳೆಯ ನೌಕರಿ ಹಿಡಿದು ಸಮಾಜದಲ್ಲೊಂದು ಗಣ್ಯ ಸ್ಥಾನಮಾನ ಪಡೆಯಬೇಕೆಂದು ಕನಸು ಕಂಡಿದ್ದ.ಅದಕ್ಕಾಗಿ ಕಷ್ಟಪಟ್ಟು ಓದುತ್ತಿದ್ದ.ಅಕ್ಕಪಕ್ಕದವರು ಕೂಡ ಇದನ್ನೇ ಹೇಳುತ್ತಿದ್ದಾರೆ.ಯಾರ ತಂಟೆಗು ಹೋಗದ ಈ ಹುಡ್ಗ ಕೊಲೆ ಮಾಡಿ,ಅದನ್ನು ಒಪ್ಪಿಕೊಳ್ತಾನೆಂದ್ರೆ ಯಾವ ಪರಿ ಆತನಿಗೆ ಯಮಹಿಂಸೆ ಆಗಿರಬಹುದು ಪಾಪ ಎಂದು ಸಹಾನುಭೂತಿ ತೋರುತ್ತಿದ್ದಾರೆ.

ವಿನೋಬನಗರ ಠಾಣಾ ವ್ಯಾಪ್ತಿಯ ಸಾಗರ ರಸ್ತೆಯ ಗಾಡಿಕೊಪ್ಪದಲ್ಲಿ ಪತ್ತೆಯಾದ ಶವದ ಬಗ್ಗೆ ಪೊಲೀಸ್ರು ತಲೆಕೆಡಿಸಿಕೊಂಡಿದ್ದರು. ಕೊಲೆಗಾರನ ಪತ್ತೆಯಲ್ಲಿದ್ದಾಗಲೇ ಸ್ಟೇಷನ್ ನಲ್ಲಿ ಪ್ರತ್ಯಕ್ಷವಾದ  ಯುವಕ ಹೇಳಿದ ವಿಷಯ ಕೇಳಿ ಗಾಬರಿಯಾದರು. ಕಿರಣ ಅಲಿಯಾಸ್ ಪುಚ್ಚಿ ಎನ್ನುವ 23 ವರ್ಷದ ಮಾಜಿ ರೌಡಿಯನ್ನು ಕೊಂದಿದ್ದು ನಾನೇ..ಆದ್ರೆ ಹಾಗೆ ಕೊಲ್ಲೊಕ್ಕೆ ಆತ ಕೊಡುತ್ತಿದ್ದ ಕಾಟವೇ ಕಾರಣ ಎಂದು ರೀಸನ್ ಕೊಟ್ಟಿದ್ದ.ಕಾರಣ ಏನೇ ಆದ್ರೂ ಕಾನೂನು ದೃಷ್ಟಿಯಲ್ಲಿ ಕೊಲೆ..ಕೊಲೆನೇ ಎಂದು ಆತನನ್ನು ವಶಕ್ಕೆ ಪಡೆದ್ರು.ಆತನನ್ನು ಕೂರಿಸಿ ಕಥೆ ಕೇಳಿದಾಗ ಆತ ಕಣ್ಣೀರಾಗಿ ಹೇಳಿದ ಸ್ಟೋರಿ ಕೇಳಿ ಪೊಲೀಸ್ರೇ ಅಯ್ಯೋ ಪಾಪ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದ ಕಿರಣ ಅಲಿಯಾಸ್ ಪುಚ್ಚಿ ತಾನು ಎದುರಿಗೆ ಸಿಕ್ಕಾಗ್ಲೆಲ್ಲಾ ಪಾರ್ಟಿ ಕೊಡಿಸು..ಇಲ್ಲಾಂದ್ರೆ ಪರಿಣಾಮ ನೆಟ್ಟಗಿರೊಲ್ಲ ಎಂದು ಅವಾಜ್ ಬಿಡ್ತಿದ್ದ.ಕಾಲೇಜ್ ನಲ್ಲಿ ಓದುತ್ತಿರೋ ನಾನು ಎಲ್ಲಿಂದ ದುಡ್ಡು ತರೋದು..ಆಗೊಲ್ಲ ಎನ್ನುತ್ತಿದ್ದೆ.ಇದಕ್ಕಾಗಿ ಹಲವಾರು ಬಾರಿ ನನ್ನ ಮೇಲೆ ಅಟೆಂಪ್ಟ್ ಕೂಡ ಮಾಡಿದ್ದ.ಇದನ್ನು ನಾನು ಎಲ್ಲಿಯೂ ಹೇಳಿರಲಿಲ್ಲ.ಆದರೂ ಅಲ್ಲಿ ಇಲ್ಲಿ ಸಾಲ ಮಾಡಿ ಹಣ ನೀಡಿದ್ದೆ.

ಆದರೆ ನನಗೆ ದೊಡ್ಡ ಮೊತ್ತ ಬೇಕು..ಕೊಡು ಎಂದು ಗೋಳೋಯ್ದುಕೊಳ್ಳಲಾರಂಭಿಸಿದಾಗ ನನಗೆ ದಿಕ್ಕೇ ತೋಚಲಿಲ್ಲ.ನನ್ನ ಗೆಳಯರ ಬಳಿ ನೋವು ತೋಡಿಕೊಂಡಾಗ ಆತನನ್ನು ಮುಗಿಸುವ ಪ್ಲ್ಯಾನ್ ಕೊಟ್ರು.ಎಲ್ಲರೂ ಸೇರಿ ಪ್ಲ್ಯಾನ್ ಮಾಡಿದೆವು. ಪಾರ್ಟಿ ಕೊಡಿಸುತ್ತೇನೆ  ಗಾಡಿಕೊಪ್ಪದ ಬಾರ್ ಒಂದರ ಬಳಿ ಬರುವಂತೆ ಹೇಳಿದೆ.ಆತ ಬಂದ ಮೇಲೆ ಕುಡಿದೆವು..ನಂತರ ಎಳೆದುಕೊಂಡು ಬಂದು ಆತನ ತಲೆಗೆ ಬಾಟಲ್- ಕಲ್ಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದೆವು .ನಂತರ ಏನು ಮಾಡಬೇಕೆಂದು ಗೊತ್ತಾಗಲಿಲ್ಲ..ಓಡಿ ಹೋಗೋಣ ಎಂದು ತೀರ್ಮಾನಿಸಿದೆವು.ಆದರೆ ಅದರಿಂದೇನು ಪ್ರಯೋಜನ..ಸರೆಂಡರ್ ಆಗೋದೇ ಸರಿಯಾದ ದಾರಿ ಎಂದುಕೊಂಡು ಠಾಣೆಗೆ ಬಂದೆವು ಎಂದು ವಿವರಿಸಿದ್ದಾರೆ.

ಇನ್ನು ಕೊಲೆಯಾದ ಪುಚ್ಚಿ ಅಲಿಯಾಸ್ ಕಿರಣ  ಹಿನ್ನಲೆ ಗಮನಿಸಿದ್ರೆ ಆತ  ಮಾಜಿ ರೌಡಿ.ಏನೂ ಗಿಟ್ಟೊಲ್ಲ ಎಂದೆನಿಸಿದಾಗ ರೌಡಿಸಂನಿಂದ ಅನಿವಾರ್ಯವಾಗಿ ದೂರ ಉಳಿದಿದ್ದ. ಆದರೂ ಅಲ್ಲಿ ಇಲ್ಲಿ ಸಣ್ಣಪುಟ್ಟದಾಗಿ ರೋಲ್ ಕಾಲ್ ಮಾಡಿಕೊಂಡು ಸದಾ ಅಮಲಿನಲ್ಲಿರುತ್ತಿದ್ದ. ಅಮಲು ಇಳಿಯುವುದರೊಳಗೆ ದುಡ್ಡು ಬೇಕಿತ್ತು,ಹಾಗಂತ ಊರು ಕೇರಿಯಲ್ಲಿ ಕಿರಿಕ್ ಮಾಡಿಕೊಂಡಿರಲಿಲ್ಲ.ಆದ್ರೆ ತನ್ನ ನಶೆಗಾಗಿ ತನ್ನ ಬದುಕನ್ನೂ ಕೊನೆಗಾಣಿಸಿಕೊಂಡ..ಹಾಗೆಯೇ ಬಾಳಿ ಬದುಕಬೇಕಾದ, ಜೀವನದಲ್ಲಿ ಏನಾದರೊಂದು ಸಾಧಿಸಬೇಕೆನ್ನುವ ಮಹತ್ವಾಕಾಂಕ್ಷೆ ಹೊಂದಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಯ ಜೀವನ-ಭವಿಷ್ಯವನ್ನೇ ಆಪೋಷನ ತೆಗೆದುಕೊಂಡ್ ಬಿಟ್ಟ..ಇದನ್ನೇ ಅಲ್ವಾ ವಿಪರ್ಯಾಸ ಎನ್ನೋದು.

Spread the love
Leave A Reply

Your email address will not be published.

Flash News