“DARSHAN VS NEWS CHANNELS” IS THIS “UNSOLVE” PROBLEM.. NEVER…!?“ಕ್ರಾಂತಿ”ನೂ ಗೆಲ್ಲಬೇಕು..ಅದರಲ್ಲಿರೋ “ಸಮಾಜಮುಖಿ” ಸಂದೇಶನೂ ಗೆಲ್ಲಬೇಕು.. ಚಾಲೆಂಜಿಂಗ್ ಸ್ಟಾರ್ ದರ್ಶನ್ನೂ ಗೆದ್ದು ಬೀಗಬೇಕು..

ನ್ಯೂಸ್ ಚಾನೆಲ್ಸ್ ಜತೆಗಿನ ವೈಷಮ್ಯ-ಸಂಘರ್ಷ ಬಗೆಹರಿಯಲಾರದಂತದ್ದಾ..? ನೋ ಚಾನ್ಸ್..ಸಂಧಾನಕ್ಕೆ ವೇದಿಕೆ-ಮುಂದಾಳತ್ವ ಬೇಕಷ್ಟೆ..

0

ಬೆಂಗಳೂರು:ವೃತ್ತಿ ಜೀವನದಲ್ಲಿ ಒಂದ್ ಸಕ್ಸೆಸ್ ಫುಲ್ ಸ್ಟಾರ್ ಆಗಿ ಬೆಳೆಯೋ ಹಾದಿಯಲ್ಲಿ ಎದುರಾದ ತೊಡಕುಗಳನ್ನು ಧೈರ್ಯವಾಗಿ ಎದುರಿಸಿ ನಿಂತಿದ್ದಕ್ಕೇನೆ ಇರ್ಬೇಕು.ದರ್ಶನ್ ಗೆ ಚಾಲೆಂಜಿಂಗ್ ಸ್ಟಾರ್ ಎನ್ನುವ ಬಿರುದು ಸಿಗ್ತು.

ವ್ಯಕ್ತಿತ್ವ-ಸಾಧನೆಗೆ ಅನ್ವರ್ಥವಾಗಿಯೇ ಸಿಕ್ಕ  ಈ ಬಿರುದಿಗೆ ಅನೇಕ ಸನ್ನಿವೇಶಗಳು ಕಳಂಕ ತರುವ ಮಟ್ಟಕ್ಕೆ ದರ್ಶನ್ ಅವರನ್ನು ತಂದುನಿಲ್ಲಿಸಿದ್ದು ಕೂಡ ಒಪ್ಪಿಕೊಳ್ಳಲೇಬೇಕಾದ ಸತ್ಯ. ಆ ಸನ್ನಿವೇಶದಲ್ಲಿ ಚಿತ್ರರಂಗದ ಒಂದಷ್ಟು ಮಂದಿ ಸಿಕ್ಕಾಪಟ್ಟೆ ಹಾರಾಡ್ತಿದ್ದ..ಸರಿಯಾದ ಶಾಸ್ತಿನೇ ಆಗಿದೆ ಎಂದು ಮಾತ್ನಾಡಿಕೊಂಡ್ರೆ ಇನ್ನುಳಿದವರು ಪಾಪ..ಬೆಳೆಯೋ ನಟನಿಗೆ ಹೀಗಾಗಬಾರದಿತ್ತು ಎಂದು ಸಹಾನುಭೂತಿಯ ಮಾತನ್ನಾಡಿ ನೈತಿಕ ಸ್ಥೈರ್ಯ ತುಂಬಿದ್ದು ಕೂಡ ಸತ್ಯ..

ದರ್ಶನ್ ವೃತ್ತಿ ಜೀವನದಲ್ಲಿ ಕ್ರಾಂತಿಯ ಬಿಡುಗಡೆ ಸನ್ನಿವೇಶದಲ್ಲಿ ಸೃಷ್ಟಿಯಾಗಿರುವ ಗೊಂದಲ ನಿಜಕ್ಕೂ ಗಂಭೀರವಾದುದೇ.. ಯಾವೊಬ್ಬ ಸ್ಟಾರ್ ಗೂ ಇಂತದ್ದೊಂದು ಪರಿಸ್ತಿತಿ ನಿಜಕ್ಕೂ ಬಾರದಿರಲಿ.ಕ್ರಾಂತಿ ಚಿತ್ರ ಬಿಡುಗಡೆಯಾಗುತ್ತಿದೆಯೇ ಎನ್ನುವಂಥ ಶಂಕೆ ಮೂಡಿಸುವಂತ ಸನ್ನಿವೇಶ ನಿರ್ಮಾಣವಾಗಿದೆ.ಆದ್ರೆ ಏನೇ ಆಗ್ಲಿ ಅಭಿಮಾನಿಗಳಿದ್ದಾರೆ ಅವರನ್ನು ನಂಬಿ ಚಿತ್ರ ಬಿಡುಗಡೆ ಮಾಡಿಯೇ ತೀರುತ್ತೇನೆ ಎಂದು ಹಿಡಿದಿರುವ ಛಲ ಮತ್ತು ಅವರ ಆತ್ಮವಿಶ್ವಾಸ ಬೆರಗುಗೊಳಿಸುತ್ತದೆ.

ಆದರೆ ಈ ಬೆಳವಣಿಗೆ ದರ್ಶನ್ ವೃತ್ತಿಜೀವನಕ್ಕೆ ಸರಿಹೊಂದುವಂತದ್ದಾ..ತಾತ್ಕಾಲಿಕವಾಗಿ ಇದೆಲ್ಲಾ ಓಕೆ..ಆದ್ರೆ ಚಿತ್ರರಂಗದಲ್ಲಿ ಶಾಶ್ವತವಾಗಿ ಉಳಿಬೇಕಿರುವ ಸನ್ನಿವೇಶದಲ್ಲಿ ಇದು  ಖಂಡಿತಾ ಒಳ್ಳೇದಲ್ಲ ಎನ್ನುತ್ತದೆ ಇಡೀ ಕನ್ನಡ ಚಿತ್ರರಂಗ. ಒಲ್ಲದ ಕಾರಣಗಳಿಗೆ ಅನಗತ್ಯವಾಗಿ ಸುದ್ದಿಯಾದ ದರ್ಶನ್ ರಾಬರ್ಟ್ ಚಿತ್ರದ ವೇಳೆ ಮಾಡಿಕೊಂಡ ಯಡವಟ್ಟಿನಿಂದ ಮತ್ತೆ ಸುದ್ದಿಯಾದ್ರು.ತಾಳ್ಮೆ-ಸಹನೆ ಕಳೆದುಕೊಂಡು ಆಡಿದ ಮಾತಿಗೆ ಮಾದ್ಯಮಗಳ ಕೆಂಗಣ್ಣಿಗೆ ಗುರಿಯಾಗಿದ್ದೆಲ್ಲಾ ಈಗ ಇತಿಹಾಸ.

ಕನ್ನಡ ನ್ಯೂಸ್ ಚಾನೆಲ್ ಗಳು ನನ್ನ…..ಕ್ಕೆ ಸಮಾನ..ಅ…ನ್… ಎನ್ನುವ ಧಾಟಿಯಲ್ಲಿ ಮಾತನಾಡಿದ ದರ್ಶನ್ ಯಾವಾಗಲಾದ್ರೂ ಒಬ್ಬರೇ ಕುತ್ಕೊಂಡು ಆತ್ಮಾವಲೋಕನ ಮಾಡಿಕೊಂಡ್ರೆ ಅವರ ಬೆಳವಣಿಗೆಯಲ್ಲಿ ನ್ಯೂಸ್ ಚಾನೆಲ್ ಗಳು ವಹಿಸಿರುವ ನಿರ್ಣಾಯಕ ಪಾತ್ರದ ಅರಿವಾಗುತ್ತೆ.

ದರ್ಶನ್ ವೃತ್ತಿಜೀವನದಲ್ಲಿ ನೆಲೆ ಕಂಡುಕೊಳ್ಳಲು ಮಾಡುತ್ತಿದ್ದ ಸಂಘರ್ಷಗಳ ದಿನದಿಂದಲೂ “ಈ ಹುಡುಗನಲ್ಲಿ ಏನೋ ಒಂದು ಫೈರ್ ಇದೆ..ತಂದೆಯ ಹೆಸರಿನಾಸರೆಯಿಲ್ಲದೆ ಬೆಳೆಯುತ್ತಿರುವ ಹುಡುಗ ದೊಡ್ಡ ಮಟ್ಟಕ್ಕೆ ಬೆಳೆಯಬೇಕೆಂದು ಹಾರೈಸಿ ಸುದ್ದಿಗಳನ್ನು ಮಾಡಿದ್ದು,ಅನೇಕರಿಗೆ ದರ್ಶನ್ ಪ್ರತಿಭೆ-ಸಾಮರ್ಥ್ಯವನ್ನು ಪರಿಚಯಿಸಿದ್ದು ಇದೇ ಮಾದ್ಯಮಗಳೆನ್ನುವುದನ್ನು ಇವತ್ತು ನ್ಯೂಸ್ ಚಾನೆಲ್ ಗಳಿಗೆ ಚಾಲೆಂಜಿಂಗ್ ಹಾಕ್ಕೊಂಡು ಕೂತಿರುವ ಸ್ಟಾರ್ ಗೆ ಗೊತ್ತಿಲ್ಲವೇ..?

ದರ್ಶನ್ ವಿಚಾರದಲ್ಲಿ ಉತ್ತಮವಾದ ವಿಚಾರವನ್ನೇ ಹೈಲೈಟ್ ಮಾಡ್ತಾ ಬಂದಿದ್ದ ನ್ಯೂಸ್ ಚಾನೆಲ್ ಗಳು ಯಾವುದೋ ವಿಷಗಳಿಗೆಯಲ್ಲಿ  ಮಾಡಿಕೊಂಡ ಯಡವಟ್ಟನ್ನು ಯಥಾವತ್ತಾಗಿ ತೋರಿಸಿದ್ದೇ ಪ್ರಮಾದವಾಯ್ತೆನ್ನುವ ರೀತಿಯಲ್ಲಿ ರಂಪಾಟ ಮಾಡಿದ್ದು ಸರಿನಾ..? ದರ್ಶನ್ ಸ್ಥಾನದಲ್ಲಿ ಯಾರೇ ಇದ್ದು ತಪ್ಪು ಮಾಡಿದ್ರೂ ಅದನ್ನು ಮಾದ್ಯಮಗಳು ತೋರಿಸುತ್ತಿರಲಿಲ್ಲವೇ..? ಅಷ್ಟಕ್ಕು  ಸಾರ್ವಜನಿಕ ಜೀವನದಲ್ಲಿರುವ ತನ್ನ  ವೈಯುಕ್ತಿಕ ಬದುಕು,ಸಾರ್ವಜನಿಕವಾಗಿ “ರಿಫ್ಲೆಕ್ಟ್” ಆಗುತ್ತೆನ್ನುವ ಮಾಹಿತಿ ದರ್ಶನ್ ಗೆ ಇರಲಿಲ್ಲವೇ..?

ಅದನ್ನುಪರಿಶುದ್ಧ-ವಿವಾದಮುಕ್ತವನ್ನಾಗಿಟ್ಟುಕೊಳ್ಳಬೇಕೆಂಬ  ಎಚ್ಚರ ಇರಲಿಲ್ಲವೇ..? ತಾನು ಸ್ವಲ್ಪ ಯಡವಟ್ಟು ಮಾಡಿಕೊಂಡ್ರೂ ಇಂದಿನವರೆಗೂ  ತನ್ನನ್ನು ಕೈ ಹಿಡಿದು ನಡೆಸುತ್ತಿರುವ ಮೀಡಿಯಾಗಳೇ ಕೈ ಬಿಡುವ ಅಪಾಯವಿರುತ್ತಲ್ವಾ..? ಎಂಬ ಅರಿವು ಇಲ್ಲದಂತೆ ದರ್ಶನ್ ವರ್ತಿಸಿದ ರೀತಿಯಿಂದ ನಷ್ಟ ಆಗಿದ್ದು..ಲಾಭವಾಗಿದ್ದು ಯಾರಿಗೆ ಎನ್ನುವುದು ದರ್ಶನ್ ಗೇ ಚೆನ್ನಾಗಿ ಗೊತ್ತು.

ಕೆಲವರ ಚಾಡಿ ಮಾತುಗಳಿಗೆ ಕಿವಿಯಾಗಿ  ದ್ವೇಷ ಮುಂದುವರೆಸಿ, ಕೊನೆಗೆ ಆ ಧೀರ್ಘಾವಧಿಯ ಮುನಿಸನ್ನು ಮರೆತಿದ್ದು, ,ನ್ಯೂಸ್ ಚಾನೆಲ್ ಗಳೊಂದಿಗೆ ಹಳೇ ಸ್ನೇಹ ಸಂಬಂಧಕ್ಕೆ ಕೈ ಚಾಚಿದ್ದು ದರ್ಶನ್ ಅವ್ರೇ ಹೊರತು ಮೀಡಿಯಾಗಳಲ್ಲ. ಈ ಧೀರ್ಘಾವಧಿಯ ಮುನಿಸಿಂದ ದರ್ಶನ್ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು..ಅದು ಕೂಡ ಅವರಿಗೆ ಗೊತ್ತಿದೆ.

ತಾನು ಮಾಡುವ ಒಳ್ಳೆಯ ಕೆಲಸವನ್ನಷ್ಟೇ ಮಾದ್ಯಮಗಳು ಬಿಂಬಿಸಬೇಕು..ಕೆಟ್ಟದನ್ನು ಬಿಟ್ಟು ಬಿಡ್ಬೇಕು ಎಂಬ ಮನಸ್ತಿತಿಯನ್ನು ದರ್ಶನ್ ಬಿಡಬೇಕು.ಉತ್ತಮ ಕೆಲಸ ಮಾಡಿರೋದನ್ನು ನ್ಯೂಸ್ ಚಾನೆಲ್ ಗಳು ದಿನಗಟ್ಟಲೇ ತೋರಿಸಿಲ್ಲವೇ..? ದರ್ಶನ್ ಬೈಟ್ ಗಾಗಿ ಮುಗಿಬೀಳುವಷ್ಟು ನ್ಯೂಸ್ ಚಾನೆಲ್ ಗಳು ಇನ್ನೊಬ್ಬ ಕನ್ನಡ ನಟ ಬೆನ್ ಬೀಳೊಲ್ಲ ಎನ್ನುವುದು ದರ್ಶನ್ ಗೆ ಗೊತ್ತಿಲ್ವೇ..ಹಾಗೆಲ್ಲಾ ಯಾಕೆ ಬೆನ್ ಬೀಳ್ತವೆ ಎಂದು ದರ್ಶನ್ ಆತ್ಮಾವಲೋಕನ ಮಾಡಿಕೊಳ್ಳಬೇಕಾಗ್ತದೆ.ಮಾದ್ಯಮಗಳ ಅತ್ಯಂತ “ಬೇಡಿಕೆಯ ನಟರ-ಟಿಆರ್ ಪಿ ಬೈಟ್ ಲೀಸ್ಟ್” ದರ್ಶನ್ ಇದ್ದಾರೆಂದ್ರೆ ಕನ್ನಡ ನ್ಯೂಸ್ ಚಾನೆಲ್ ಗಳು ದರ್ಶನ್ ಮೇಲೆ ಇಟ್ಟಿರುವ ಪ್ರೀತಿ-ವಿಶ್ವಾಸಕ್ಕೆ ಅಷ್ಟೇ..

ನ್ಯೂಸ್ ಚಾನೆಲ್ ಗಳು ದರ್ಶನ್ ಅವರನ್ನು ಕೇವಲ ಬೇಡದ ವಿಚಾರಗಳಿಗೆ ನ್ಯೂಸ್ ಐಟಂ ಮಾಡಿಕೊಳ್ಳುತ್ತಾ ಬಂದಿಲ್ಲ.ಅವರು ಉತ್ತಮ ಕೆಲಸ ಮಾಡಿದಾಗೆಲ್ಲವೂ ಹೆಚ್ಚೆಚ್ಚು ಹೈಪ್ ಮಾಡಿವೆ ಎನ್ನುವುದನ್ನು ಅವರು ಮರೀಬಾರದು.ಆದ್ರೆ ಯಡವಿದಾಗ ಸ್ವಲ್ಪ ಖಾರವಾಗಿಯೇ ರಿಯಾಕ್ಟ್ ಮಾಡಿವೆ.

ಅಂದ್ಹಾಗೆ ಆ ಕೋಪ-ಅಸಮಾಧಾನದಲ್ಲೂ ದರ್ಶನ್ ಸುಧಾರಣೆಯಾಗಬೇಕು..ಮಾದರಿ ನಟನಾಗಬೇಕು.ಹೆಚ್ಚೆಚ್ಚು ಬೆಳೀಬೇಕೆನ್ನುವ ಕಾಳಜಿ ಇರುತ್ತೆ ಎನ್ನುವ ಸೂಕ್ಷ್ಮವನ್ನೇಕೆ ದರ್ಶನ್ ಅರ್ಥ ಮಾಡಿಕೊಳ್ಳುತ್ತಿಲ್ಲವೋ ಗೊತ್ತಾಗ್ತಿಲ್ಲ.ಆ ಸತ್ಯ ಗೊತ್ತಾದಾಗ ಮಾತ್ರ ದರ್ಶನ್ ಹಾಗೂ ನ್ಯೂಸ್ ಚಾನೆಲ್ ಗಳ ನಡುವೆ ಇನ್ನ್ಯಾವತ್ತೂ ಬಿರುಕು-ಕಂದಕ-ಗೊಂದಲ-ಅಸಮಾಧಾನ ಸೃಷ್ಟಿಯಾಗೋದೇ ಇಲ್ಲ.

ಕ್ರಾಂತಿ ರಿಲೀಸ್ ಗೆ ದಿನಗಣನೆ ಶುರುವಾಗಿದೆ.ನ್ಯೂಸ್ ಚಾನೆಲ್ಸ್ ಹಾಗೂ ದರ್ಶನ್ ನಡುವೆ ಸೃಷ್ಟಿಯಾಗಿರುವ ಸಂಘರ್ಷ  ಬಗೆಹರಿಯದಂತದ್ದೇನೂ ಅಲ್ಲ..ಅದಕ್ಕೊಂದು ವೇದಿಕೆ ಸೃಷ್ಟಿಯಾಗಬೇಕಿದೆ.ಅಲ್ಲಿ ದರ್ಶನ್ ಪೂರ್ವಾಗ್ರಹಪೀಡಿತ ಮನಸ್ತಿತಿಯನ್ನು ಬಿಟ್ಟು ಪಾಲ್ಗೊಳ್ಳಬೇಕಿದೆ.

ನ್ಯೂಸ್ ಚಾನೆಲ್ಸ್ ಕೂಡ ಇಸಂಗಳನ್ನು ಬಿಟ್ಟು ಮುಕ್ತವಾಗಿ ಚರ್ಚಿಸಬೇಕಿದೆ.ಇದರ ಮುಂದಾಳತ್ವವನ್ನು ಚಿತ್ರರಂಗ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿರುವ ದಿಗ್ಗಜರೆನಿಸಿಕೊಂಡವರು ವಹಿಸಬೇಕಿದೆ.ಅನಗತ್ಯ ಚರ್ಚೆಗೆ ಅವಕಾಶ ನೀಡದೆ ಪರಿಸ್ತಿತಿಯನ್ನು ತಿಳಿಗೊಳಿಸುವ ಕೆಲಸ ಮಾಡಿದ್ರೆ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ಸ್ಪಾಟ್ ನಲ್ಲಿ ಸಿಗೋದ್ರಲ್ಲೇ ಡೌಟೇ ಇಲ್ಲ.

ಏಕಂದ್ರೆ ನಮ್ಮ ನೆಲದ ಸೊಗಡಿನ “ಕ್ರಾಂತಿ”ನೂ  ಗೆಲ್ಲಬೇಕು..ಅದರ ಮೂಲಕ ನಮ್ಮ ನೆಲದ ನಟ.. ನಮ್ಮ ದರ್ಶನ್ ಕೂಡ ಗೆಲ್ಲಬೇಕು ಅಷ್ಟೇ..

Spread the love
Leave A Reply

Your email address will not be published.

Flash News