BreakingMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

BIG SHOCKING…BIG EXCLUSIVE.. CHANGES IN KARNATAKA CM..!? …ಬಸವರಾಜ ಬೊಮ್ಮಾಯಿ ಬದಲಾವಣೆ ಪಕ್ಕ..! “ಮುಖ್ಯಮಂತ್ರಿ “ಗಾದಿಗೆ ಈ ಮೂವರಲ್ಲಿ ಒಬ್ಬರು ಫೈನಲ್..!

**ಬಿಜೆಪಿ ಹೈಕಮಾಂಡ್ ಗೆ ಶುರುವಾಗಿದೆ ಕಾಂಗ್ರೆಸ್ ಫೋಭಿಯಾ..!!

**ಸಿದ್ದರಾಮೋತ್ಸವ ಕಂಡು ಕಂಗಾಲಾದ ಬಿಜೆಪಿ ಹೈಕಮಾಂಡ್.!?

**ಉತ್ತರ ಕರ್ನಾಟಕದಿಂದಲೇ ಹೆಚ್ಚು ಜನ ಭಾಗಿಯಾದ ವರದಿ ರವಾನೆ..”!!

**ಕುರುಬ-ಲಿಂಗಾಯಿತರು ಬಿಜೆಪಿ ತೊರೆದು ಕಾಂಗ್ರೆಸ್ ನತ್ತ ಮುಖ..!!

**ಬಿಜೆಪಿಯ ವೋಟ್ ಬ್ಯಾಂಕ್ ಉತ್ತರ ಕರ್ನಾಟಕದ ಕೋಟೆ ಕಳೆದುಕೊಳ್ಳುವ ಭೀತಿ..!!

**ಬಸವರಾಜ ಬೊಮ್ಮಾಯಿ ಮುಂದಿಟ್ಟುಕೊಂಡು ಚುನಾವಣೆಗೆ ಹೋದ್ರೆ ಸೋಲು ಖಚಿತ ಎನ್ನುವ ಆಂತರಿಕ ಸರ್ವೆ..?!

ಬೆಂಗಳೂರು/ನವದೆಹಲಿ:ಬದಲಾದ  ರಾಜಕೀಯ ಸನ್ನಿವೇಶದಲ್ಲಿ ರಾಜ್ಯಕ್ಕೆ ನೂತನ ಸಿಎಂ ದೊರೆಯುವುದು ಬಹುತೇಕ  ಪಕ್ಕಾ ಎನ್ನಲಾಗುತ್ತಿದೆ. ಅಂದ್ಹಾಗೆ ಈ ಬದಲಾವಣೆ ಈ ವಾರದಲ್ಲೇ ನಡೆಯಲಿದ್ದು ಬಸವರಾಜ ಬೊಮ್ಮಾಯಿ ಬದಲಾವಣೆ ಬಹುತೇಕ ನಿಕ್ಕಿ ಎನ್ನಲಾಗುತ್ತಿದೆ.ಅವರ ಬದಲಿಗೆ ಯಾರು ಎನ್ನುವ ಪ್ರಶ್ನೆಗೆ ಬಿಜೆಪಿ ಹೈಕಮಾಂಡ್ ಒಂದಷ್ಟು ಆಯ್ಕೆ ಮುಂದಿಟ್ಟುಕೊಂಡಿದ್ದು ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ದೊರೆತಿರುವ ದೆಹಲಿ ಮೂಲಗಳ ಪ್ರಕಾರ  ಮೊದಲ ಪ್ರಾಶಸ್ತ್ಯ ಮಾಜಿ ಸಿಎಂ  ಜಗದೀಶ್ ಶೆಟ್ಟರ್ ಎನ್ನಲಾಗುತ್ತಿದೆ.

ವಿಧಾನಸಭೆ ಚುನಾವಣೆಗೆ ತಿಂಗಳುಗಳ ಗಣನೆ  ಜತೆಗೆ ಬಿಬಿಎಂಪಿ ಚುನಾವಣೆಗೆ ದಿನಗಣನೆ ಶುರುವಾಗಿರುವುದರ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಮಹತ್ವದ ನಿರ್ದಾರ ತೆಗೆದುಕೊಳ್ಳೊಕ್ಕೆ ಮುಂದಾಗಿದೆ ಎನ್ನುವ ಸ್ಪೋಟಕ ಮಾಹಿತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ದೊರೆತಿದೆ.ಅಮಿತ್ ಶಾ ಅವರ ಮೊನ್ನೆಯ ಭೇಟಿಯೇ ಇದಕ್ಕೆ ವೇದಿಕೆಯೊಂದನ್ನು ಸಿದ್ಧಗೊಳಿಸಿತ್ತು ಎನ್ನಲಾಗಿದೆ.

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರೊಂದಿಗಿನ ಚರ್ಚೆ ಇದನ್ನು ಬಹುತೇಕ ಕನ್ಫರ್ಮ್ ಎನ್ನು ವಂತೆ ಮಾಡಿತ್ತು.ಅಂದೇ ಬಸವರಾಜ ಬೊಮ್ಮಾಯಿ ಅವರ ನೇತೃತ್ವವನ್ನು ಬದಲಿಸಿ ಬೇರೆಯವರ ಕೈಗೆ ಅಧಿಕಾರ ಹಸ್ತಾಂತರಿಸುವ ಮಹತ್ವದ ತೀರ್ಮಾನಕ್ಕೆ ಶಾ ಬಂದಿದ್ದರು ಎನ್ನಲಾಗಿದೆ.ಅದರ ಮುಂದುವರೆದ ಭಾಗವಾಗಿಯೇ ಮುಂದಿನ ವಾರದೊಳಗೆ ನೂತನ ಸಿಎಂ ಘೋಷಣೆ ಮತ್ತು ಅಧಿಕಾರ ಸ್ವೀಕಾರ ಪ್ರಕ್ರಿಯೆ ಮುಗಿಯಲಿದೆ ಎನ್ನುವ ಸೂಚನೆಯೊಂದನ್ನು ಶಾ ನೀಡಿ ಹೋಗಿದ್ದರೆನ್ನುವ ಸುದ್ದಿಯಿದೆ.

 ಬಸವರಾಜ ಬೊಮ್ಮಾಯಿ ಕಿಂಡಲ್ ಮಾಡಿದ್ದು ನಿಜನಾ..?!ಮೊನ್ನೆ ಶಾ ಬೆಂಗಳೂರಿಗೆ ಬಂದಾಗ ಬಸವರಾಜ ಬೊಮ್ಮಾಯಿ ಅವರನ್ನು ಕಿಂಡಲ್ ಮಾಡುವ ರೀತಿಯಲ್ಲಿ ಮಾತನಾಡಿಸಿದರೆನ್ನುವ ಮಾತುಗಳಿವೆ. “ಅಜ್ ಕೆ ಬಾದ್ ಹಮ್ ಪಾಲಿಟಿಕ್ಸ್ ಕರೆಂಗೆ.. ಏಕ್ ಸಾಲ್ ಆಪ್ ಕೋ ದಿಯಾ.. ಹಮ್ ನೇ ದೇಖಾ ..ಆಫ್ ನೆ ಕ್ಯಾ ಕಿಯಾ ಎಂದು ಹೇಳುವ ಮೂಲಕ ಸಿಎಂ ಬದಲಾವಣೆಯ ಮುನ್ಸೂಚನೆಯನ್ನು ಸೂಚ್ಯವಾಗಿ ನೀಡಿದರೆನ್ನುವ ಮಾತುಗಳಿವೆ.

ಹಾಗೆಯೇ ಶಾ ಜತೆಯಲ್ಲಿದ್ದರೆನ್ನಲಾದ ನಿರ್ಮಲ್ ಕುಮಾರ ಸುರಾನಾ.ಬಿಎಸ್ ಯಡಿಯೂರಪ್ಪ, ಸಿ.ಟಿ ರವಿ.ನಳಿನ್ ಕುಮಾರ್ ಕಟೀಲ ಅವರೊಂದಿಗೂ ಧೀರ್ಘಕಾಲ ಚರ್ಚಿಸಿದರೆನ್ನುವ ಮಾತುಗಳಿವೆ.ನಿರ್ಮಲ್ ಕುಮಾರ್ ಸುರಾನಾ ಅವರನ್ನು ಉದ್ದೇಶಿಸಿ,ಸುರಾನಾ ಜೀ ಕೊಯಿ ಕಂಪ್ಲೆಂಟ್ಸ್ ಹೈ ತೋ ಅಭೀ ಬತಾವೋ…ಚೇಂಜಸ್ ಕರ್ನೆ ಕಾ ಬಾದ್ ಮತ್ ಬತಾವೋ ಎಂದು ಹೇಳಿದರೆನ್ನುವ ವರ್ತಮಾನ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭ್ಯವಾಗಿದೆ.

ಹೈಕಮಾಂಡ್ ಸಿಎಂ ಬದಲಾವಣೆಗೆ ಮುಂದಾಗಿರೋದೇಕೆ..: ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಧಿಕಾರದ ಹೆಬ್ಬಾಗಿಲು ಎಂದ್ರೆ ಅದು ಕರ್ನಾಟಕ.ಸಧ್ಯಕ್ಕೆ ಬಿಜೆಪಿ ಅಧಿಕಾರದಲ್ಲಿದ್ದರೂ ಮುಂದಿನ ಚುನಾವಣೆ ವೇಳೆಗೆ ಅದು ಕೈ ತಪ್ಪವ ಆತಂಕವಿದೆ ಎನ್ನುವುದು ವರಿಷ್ಟರಿಗೆ ಆಂತರಿಕ ಸರ್ವೆಗಳಿಂದ್ಲೇ ಗೊತ್ತಾಗಿದೆ.

ಅನೇಕ ವಿವಾದ-ಹಗರಣಗಳ ಆಪಾದನೆ-ವಿವಾದಾತೀತ ಆಡಳಿತ ನೀಡುವಲ್ಲಿ ಬಸವರಾಜ ಬೊ ಮ್ಮಾಯಿ ಕಂಪ್ಲೀಟ್ ವಿಫಲವಾಗಿರುವ ಬಗ್ಗೆ ವರದಿ ತರಿಸಿಕೊಂಡ ಬಳಿಕವೇ ಹೈಕಮಾಂಡ್ ಕರ್ನಾ ಟಕಕ್ಕೆ ಶಾ ಅವರನ್ನು ಕಳುಹಿಸಿಕೊಟ್ಟಿದ್ದು. ಬೆಂಗಳೂರಿಗೆ ಬಂದವರೇ ಸಿದ್ದರಾಮೋತ್ಸವ ಹೆಸರಿ ನಲ್ಲಿ ನಡೆದ “ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನ ಶಕ್ತಿ ಪ್ರದರ್ಶನ”ಕ್ಕೆ ಹೈಕಮಾಂಡೇ ಶಾಕ್ ಆಯಿ ತೆ್ನ್ನುವ ಮಾಹಿತಿಯಿದೆ. ಕಾಂಗ್ರೆಸ್ ದಿನಕಳೆದಂತೆಲ್ಲಾ ಹೆಚ್ಚೆಚ್ಚು ಬಲವಾಗುತ್ತಿರು ವುದು,  ಅದು ಕೂಡ ಬಿಜೆಪಿಯ ಭದ್ರ ಕೋಟೆಯಂತಿರುವ ಉತ್ತರ ಕರ್ನಾಟಕಕ್ಕೆ ಲಗ್ಗೆ ಇಡುತ್ತಿರುವುದು ಬಿಜೆಪಿಗೆ ತಲೆ ನೋವಾಗಿದೆ.ಸ್ವಲ್ಪ ಯಾಮಾರಿದ್ರೂ ಮತ್ತೆ ಅಧಿಕಾರಕ್ಕೆ ಬರುವ ಅವಕಾಶವನ್ನು ಕೈಯಾರೆ ಕಳೆದುಕೊಳ್ತೇವೆ ಎನ್ನುವ ಆತಂಕ ಹೈಕಮಾಂಡ್ ಗೆ ಕಾಡಲಾರಂಭಿಸಿದೆ.

ಬಸವರಾಜ ಬೊಮ್ಮಾಯಿ ಅವರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದ್ರೆ ಪಕ್ಷಕ್ಕೆ ಹೀನಾಯ ಸೋಲು ಕಟ್ಟಿಟ್ಟಬುತ್ತಿ.ಅದರಲ್ಲೂ ಪಕ್ಷದ ಭದ್ರಕೋಟೆಯಾಗಿರುವ ಉತ್ತರ ಕರ್ನಾಟಕವನ್ನೇ ಕಳೆದುಕೊಳ್ಳುತ್ತೇವೆ ಹಾಗಾಗಿ ಬಸವರಾಜ ಬೊಮ್ಮಾಯಿ ಅವರನ್ನು ಬದಲಿಸಿ ಅವರ ಸ್ಥಾನಕ್ಕೆ ಉತ್ತರ ಕರ್ನಾಟಕ ಭಾಗದ  ಲಿಂಗಾಯಿತ ಸಮುದಾಯದ ನಾಯಕನನ್ನು ಪ್ರತಿಷ್ಟಾಪಿಸುವುದು ಸೂಕ್ತ ಎನ್ನುವ ನಿರ್ದಾರಕ್ಕೆ ಬಂದಿಯೇ ಕೆಲವರ ಹೆಸರುಗಳನ್ನು ಮುನ್ನೆಲೆಗೆ ತಂದಿದೆ.ಆ ಲೀಸ್ಟನ್ನು ಕೂಡ ಬೆಂಗಳೂರಿನಲ್ಲಿ ಕುಳಿತುಕೊಂಡೇ ಅಮಿತ್ ಶಾ ಫೈನಲ್ ಮಾಡಿದ್ದಾರೆ.ಆ ಲೀಸ್ಟ್ ನಲ್ಲಿರುವ ಮೊದಲ ಹೆಸರು ಜಗದೀಶ್ ಶೆಟ್ಟರ್ ನಂತರದ್ದು ಕುಮಾರಿ ಶೋಭಾ ಕರಂದ್ಲಾಜೆ ನಂತರದ್ದು ಬಸನಗೌಡ ಪಾಟೀಲ್ ಯತ್ನಾಳ್.

ಮೊದಲ ಪ್ರ್ಯಾಶಸ್ತ್ಯ ಜಗದೀಶ್ ಶೆಟ್ಟರ್ ಏಕೆ..?!: ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ಕೈಗಾರಿಕಾ ಸಚಿವ ಸ್ಥಾನದಿಂದ ಕೈಬಿಡಲ್ಪಟ್ಟ ಜಗದೀಶ್ ಶೆಟ್ಟರ್ ಹೆಸರು ಸಧ್ಯಕ್ಕೆ ಮುಂಚೂಣಿಯಲ್ಲಿದೆಯಂತೆ.ಇದಕ್ಕೆ ಕಾರಣ ರಾಜ್ಯದ 21 ನೇ ಸಿಎಂ ಆಗಿ ಅಧಿಕಾರ ನಡೆಸಿದ್ದಾರೆ.ಜಾತಿಯಲ್ಲಿ ಬಣಜಿಗ ಲಿಂಗಾಯಿತ.ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ನಾಯಕಿ,ಹಗರಣ-ಭ್ರಷ್ಟಾಚಾರದ ಸೋಂಕಿಲ್ಲ.ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಬಲ್ಲ ಚಾಣಾಕ್ಷ ಎನ್ನುವುದು.

ಒಮ್ಮೆ ಸಿಎಂ ಆಗಿ ಕೆಲಸ ಮಾಡಿ ಅನುಭವ ಇರುವ ಜಗದೀಶ್ ಶೆಟ್ಟರ್ ಬಿಎಸ್ ವೈ ಅವರ ಅತ್ಯಾಪ್ತ.ಅಮಿತ್ ಶಾ ಬಂದ್ಹಾಗ ಯಡಿಯೂರಪ್ಪ ಖುದ್ದು ಇವರ ಹೆಸರನ್ನೇ ಮುನ್ನಲೆಗೆ ತಂದರೆನ್ನುವ ಮಾತಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕಾದ್ರೆ ಉತ್ತಮ ಆಯ್ಕೆ ಜಗದೀಶ್ ಶೆಟ್ಟರ್.ಉತ್ತರ ಕರ್ನಾಟಕದಲ್ಲಿ ಪಕ್ಷ 60-70 ಸ್ಥಾನ ಗೆಲ್ಲೊಕ್ಕೆ ಶೆಟ್ಟರ್ ಅವರ ಅಯ್ಕೆಯೇ ಸೂಕ್ತ ಎನ್ನುವ ಅಂಶಗಳನ್ನು ಶಾ ಮುಂದೆ ಪ್ರಸ್ತಾಪಿಸಿದರು ಎನ್ನಲಾಗಿದೆ.

ದಾವಣಗರೆಯಲ್ಲಿ ಸಿದ್ಧರಾಮೋತ್ಸವ ನಡೆದ ಸನ್ನಿವೇಶದಲ್ಲಿ ಉತ್ತರ ಕರ್ನಾಟಕದಿಂದ ಪ್ರತಿಯೊಂದು ಕ್ಷೇತ್ರದಿಂದ ಕನಿಷ್ಟ ಎಂದರೂ 15-20 ಸಾವಿರ ಕಾರ್ಯಕರ್ತರು ಭಾಗವಹಿಸಿರುವ ಬಗ್ಗೆ ಮಾಹಿತಿ ಇದೆ.ಕುರುಬ-ಲಿಂಗಾಯಿತ ಸಮುದಾಯ ಕಾಂಗ್ರೆಸ್ ಪರ ವಾಲುತ್ತಿದೆ.ಇದು ಉತ್ತರ ಕರ್ನಾಟಕದಲ್ಲಿ ಪಕ್ಷದ ಅಸ್ಥಿತ್ವದ ದೃಷ್ಟಿಯಿಂದ ಆತಂಕದ ವಾತಾವರಣ.ಕಾಂಗ್ರೆಸ್ ನತ್ತ ವಾಲಿರುವವರನ್ನು ಮತ್ತೆ ಬಿಜೆಪಿಗೆ ಕರೆತರೊಕ್ಕೆ ಉತ್ತರ ಕರ್ನಾಟಕದವರೇ ಆದ ಲಿಂಗಾಯಿತ ಸಮುದಾಯದ ವರ್ಚಸ್ಚಿ ನಾಯಕನ ಅಗತ್ಯವಿದ್ದು ಆ ಕೊರತೆ ನೀಗಿಸುವ ಶಕ್ತಿ  ಜಗದೀಶ್ ಶೆಟ್ಟರ್ ಗಿದೆ ಎನ್ನುವ ಸಂಗತಿಯನ್ನು ಅಮಿತ್ ಶಾಗೆ ಮನವರಿಕೆ ಮಾಡಿಕೊಡಲಾಗಿದೆಯಂತೆ.ಹಾಗಾಗಿನೇ ಮೊದಲ ಆಯ್ಕೆ ಜಗದೀಶ್ ಶೆಟ್ಟರ್ ಎನ್ನಲಾಗುತ್ತಿದೆ.

ಶೋಭಾ ಕರಂದ್ಲಾಜೆ ಮುಂಚೂಣಿಯಲ್ಲಿ ಯಾಕೆ..? ಹೈಕಮಾಂಡ್ ದೃಷ್ಟಿಯಲ್ಲಿ ಇರುವ ಪ್ರಮುಖ ಹೆಸರು ಕುಮಾರಿ ಶೋಭಾ ಕರಂದ್ಲಾಜೆ.ಯಾವುದೇ ಹಗರಣ-ಆರೋಪಗಳಿಲ್ಲದ  ಕ್ಲೀನ್ ಇಮೇಜ್ ಹೊಂದಿರುವ ರಾಜಕಾರಣಿ ಎನ್ನುವುದು ಮೊದಲ ಅಂಶವಾದರೆ, ಪಕ್ಷದ ಫೈರ್ ಬ್ರ್ಯಾಂಡ್ ಎನಿಸಿಕೊಂಡಿದ್ದಾರೆ.ಮಿಗಿಲಾಗಿ ಹಿಂದುತ್ವದ ವಿಷಯ ಬಂದ್ರೆ  ಹಾರ್ಡ್ ಕೋರ್ ಎನಿಸಿಕೊಂಡಿದ್ದಾರೆ.

ಜಾತಿಯಲ್ಲಿ ಒಕ್ಕಲಿಗರಾಗಿರುವ ಕರಂದ್ಲಾಜೆ ಗೆ ಸಿಎಂ ಸ್ಥಾನ ಕೊಡೋದ್ರ ಹಿಂದೆ ಕರಾವಳಿಗೆ ಪ್ರಾಶಸ್ತ್ಯ ನೀಡುವುದು, ಒಕ್ಕಲಿಗ ವೋಟ್ ಬ್ಯಾಂಕ್ ಸೆಳೆಯುವುದು ಎಲ್ಲಕ್ಕಿಂತ ಹೆಚ್ಚಾಗಿ ರಾಜ್ಯದ ಇತಿಹಾಸದಲ್ಲಿ ಮಹಿಳೆಯೊಬ್ಬಳಿಗೆ ಸಿಎಂ ಸ್ಥಾನ ನೀಡಿದ ಹೆಗ್ಗಳಿಕೆ ಬಿಜೆಪಿದ್ದು ಎನ್ನುವ ಸಂದೇಶ ರಾಜ್ಯದ ಜನತೆಗೆ ರವಾನಿಸುವ ಪೊಲಿಟಿಕಲ್ ಸ್ಟ್ರಾಟಜಿ ಇದೆ ಎನ್ನಲಾಗ್ತಿದೆ. ಆಡಳಿತಾತ್ಮಕವಾಗಿಯೂ ಅಧಿಕಾರಿಗಳನ್ನು ಹೇಗೆ ಬ್ಯಾಲೆನ್ಸ್ ಮಾಡಬೇಕೆನ್ನುವ ಪಟ್ಟು ಕೂಡ ಕರಂದ್ಲಾಜೆಗೆ ಯಡಿಯೂರಪ್ಪ ಅವರೊಂದಿಗಿದ್ದ ದಿನಗಳಿಂದಲೂ ಕರಗತವಾಗಿದೆ.ಹಾಗಾಗಿ ಹೈಕಮಾಂಡ್ ಮೇಲಿನೆಲ್ಲಾ ಅಂಶಗಳನ್ನು ಪರಿಗಣಿಸಿದ್ರೆ ಕರಂದ್ಲಾಜೆ ರಾಜ್ಯದ ಮೊದಲ ಮಹಿಳಾ ಸಿಎಂ  ಆಗಿ ಅಧಿಕಾರ ವಹಿಸಿಕೊಂಡ್ರೂ ಆಶ್ವರ್ಯವಿಲ್ಲ.

ಬಸನಗೌಡ ಪಾಟೀಲ್ ಯತ್ನಾಳ್ ಯಾಕೆ ಆಗ್ಬೋದು: ಬಿಜೆಪಿ ಸರ್ಕಾರ ಹಳಿ ತಪ್ಪಿದಾಗಲೆಲ್ಲಾ ಎಚ್ಚರಿಸುವ ಕೆಲಸ ಮಾಡಿದ ಯತ್ನಾಳ್ ಕಟ್ಟರ್ ಹಿಂದುತ್ವದ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಫೈರ್ ಬ್ರ್ಯಾಂಡ್ ಎನ್ನುವ ಹೆಗ್ಗಳಿಕೆ ಇದೆ. 30ನೇ ವರ್ಷಕ್ಕೆ ಕೇಂದ್ರ ಸಚಿವರಾಗಿ ಕೆಲಸ ಮಾಡಿರುವುದರಿಂದ ಆಡಳಿತಾತ್ಮಕ ಅನುಭವ ಕೂಡ.

ಯಾವುದೇ ಭ್ರಷ್ಟಾಚಾರ-ಅಕ್ರಮ-ಅವ್ಯವಹಾರಗಳಲ್ಲಿ ಯತ್ನಾಳ್ ಹೆಸರು ಥಳಕು ಹಾಕ್ಕೊಂಡಿಲ್ಲ.ಸ್ವಲ್ಪ ವಾಚಾಳಿ ಎನ್ನುವುದನ್ನು ಬಿಟ್ಟರೆ ಕ್ಲೀನ್ ಇಮೇಜ್ ರಾಜಕಾರಣಿ ಎನ್ನುವ ಹೆಸರು ಪಡೆದುಕೊಂಡಿದ್ದಾರೆ.ನಾನು ಹೈಕಮಾಂಡ್ ಗೆ ಬಿಟ್ಟರೆ ಬೇರೆ ಯಾರಿಗೂ ಹೆದರೋನಲ್ಲ ಎನ್ನುವ ಮೂಲಕ ಹೈಕಮಾಂಡ್ ವಿಶ್ವಾಸ ಗಳಿಸಿರುವ ಹಿರಿಮೆ ಯತ್ನಾಳ್ ದ್ದು.

ಅದೆಲ್ಲಕ್ಕಿಂತ ಹೆಚ್ಚಾಗಿ ಪಂಚಮಸಾಲಿ ಸಮುದಾಯದವರು.ಉತ್ತರ ಕರ್ನಾಟಕದಲ್ಲಿ ಪ್ರಬಲ ಸಮುದಾಯವಾಗಿರುವ ಪಂಚಮಸಾಲಿ ಸಮುದಾಯಕ್ಕೆ ಸಿಎಂ ಕೊಡಬೇಕೆನ್ನುವ  ಕೂಗು ಮೊದಲಿಂದಲೂ ಬಲವಾಗಿದೆ.ನಾನು ಕೂಡ ಸಿಎಂ ಆಕಾಂಕ್ಷಿ ಎಂದು ಮೊದಲಿಂದಲು ಯತ್ನಾಳ್ ಪ್ರೊಜೆಕ್ಟ್ ಮಾಡ್ಕೊಂಡು ಬಂದಿದ್ದಾರೆ.

ಅದೆಲ್ಲಕ್ಕಿಂತ ಹೆಚ್ಚಾಗಿ ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಪಂಚಮಸಾಲಿಗಳೇ ಸುಮಾರು 6-75 ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರು.ಅಲ್ಲದೇ ಆ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನ ಪಡೆದವರೇ ಸಿಎಂ ಆಗಿದ್ದಾರೆ.ಇದಕ್ಕೆ ಸಿದ್ದರಾಮಯ್ಯ ನಿದರ್ಶನ.ಅದೇ ಫಾರ್ಮೂಲಾವನ್ನು ಹೈಕಮಾಂಡ್ ಅಪ್ಲೈ ಮಾಡೋ ಚಿಂತನೆಯಲ್ಲಿದೆ ಎನ್ನಲಾಗುತ್ತಿದೆ.

ಒಟ್ನಲ್ಲಿ ಮೂವರಲ್ಲಿ ಒಬ್ಬರನ್ನು ಮುಖ್ಯಮಂತ್ರಿಗಾಧಿಗೆ ತಂದುಕೂರಿಸುವ ಚಿಂತನೆಯಲ್ಲಿ ಹೈಕಮಾಂಡ್ ಇದೆ ಎನ್ನುವುದಂತೂ ಪಕ್ಕಾ ಎನ್ನಲಾಗ್ತಿದೆ

Spread the love

Related Articles

Leave a Reply

Your email address will not be published.

Back to top button
Flash News