BreakingMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

BJP MEGA STRATEGY TO CHALLENGE SIDDARAMOTSAVA.. “ಸಿದ್ದರಾಮೋತ್ಸವ”ಕ್ಕೆ “ಠಕ್ಕರ್” ಕೊಡ್ಲಿಕ್ಕೆ ಬಿಜೆಪಿ ಮೆಗಾ ಪ್ಲ್ಯಾನ್..!

ಬೆಂಗಳೂರು:“ನಾ ಭೂತೋ ನ ಭವಿಷ್ಯತಿ..”  ಎನ್ನುವಂತೆ  ನಡೆದ ಸಿದ್ಧರಾಮೋತ್ಸವ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ-ಕೋಲಾಹಲ ಸೃಷ್ಟಿಸಿರುವುದಂತೂ ಸತ್ಯ.

ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಯಾವುದೇ ಒಂದು ರಾಜಕೀಯ ಸಮಾರಂಭ,ರಾಜಕೀಯ ಮುಖಂಡನ ಹುಟ್ಟುಹಬ್ಬ ಇಷ್ಟೊಂದು ಜನಸಾಗರದ ನಡುವೆ ಅಷ್ಟೊಂದು ಅದ್ದೂರಿಯಾಗಿ ನಡೆದ ನಿದರ್ಶನಗಳೇ ಇರಲಿಲ್ಲ.ಹಾಗಾಗಿ ಸಿದ್ಧರಾಮೋತ್ಸವ ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಸಾರ್ವಕಾಲಿಕ  ದಾಖಲೆಯಾಗಿ, ಪಕ್ಷಾತೀತವಾದ ಮೈಲಿಗಲ್ಲಿನ ಸಾಧನೆಯಾಗಿ ಇತಿಹಾಸದ ಪುಟ ಸೇರಿದ್ದನ್ನು ಯಾರೊಬ್ಬರೂ ಅಲ್ಲಗೆಳೆಯುವಂತಿಲ್ಲ.

 

**ಸಿದ್ಧರಾಮೋತ್ಸವಕ್ಕೆ ಅಕ್ಷರಶಃ ಕನಲಿದ ಬಿಜೆಪಿ ಹೈಕಮಾಂಡ್**

**ಸವಾಲಾಗಿ ಸ್ವೀಕರಿಸದೆ ಟೀಕೆಯಲ್ಲೇ ಉಡಾಳತನ ಮುಂದುವರೆಸಿದ ಬಿಜೆಪಿ ರಾಜ್ಯ ನಾಯಕರು**

**ರಾಜ್ಯ ನಾಯಕರ ಉಡಾಫೆ ಧೋರಣೆಗೆ ಬೇಸತ್ತ ಬಿಜೆಪಿ ಹೈಕಮಾಂಡ್**

**ಬಿಜೆಪಿ ಪುನಶ್ಚೇತನಕ್ಕೆ ತಾನೇ ಅಖಾಡಕ್ಕೆ ಇಳಿದ ಹೈಕಮಾಂಡ್**

**ಸಿದ್ದರಾಮೋತ್ಸವಕ್ಕೆ ಠಕ್ಕರ್ ಕೊಡ್ಲಿಕ್ಕೆ ಮೆಗಾ ಪ್ಲ್ಯಾನ್ ಸಿದ್ದ**

**ರಾಜ್ಯಾದ್ಯಂತ ಸೆಪ್ಟೆಂಬರ್ ನಲ್ಲಿ ಬಿಜೆಪಿ ನಾಯಕರ ಪ್ರವಾಸ**

**ನಾಲ್ಕು ತಂಡಗಳಾಗಿ ಸಿದ್ಧಗೊಳ್ಳಲಿರುವ ಬಿಜೆಪಿ ನಾಯಕರು**

**ಪ್ಲ್ಯಾನ್ ನ ಸಂಪೂರ್ಣ ಉಸ್ತುವಾರಿ ವಿಜಯೇಂದ್ರ ಬೆನ್ನಿಗೆ**

**ಅಮಿತ್ ಶಾ ಸೂಚನೆ ಮೇರೆಗೆ ಪ್ಲ್ಯಾನ್ ರೂಪಿಸಲಿರುವ ವಿಜಯೇಂದ್ರ**

ಬಿಜೆಪಿ ಎದುರು ಕಳಾಹೀನವಾಗುತ್ತಿದ್ದ ಕಾಂಗ್ರೆಸ್ ಗೆ “ಫೀನಿಕ್ಸ್” ನಂಥ ಸ್ಪೂರ್ತಿ-ಆತ್ಮವಿಶ್ವಾಸ ತುಂಬಿ ದ ಕಾರ್ಯಕ್ರಮ ಸಿದ್ಧರಾಮೋತ್ಸವ ಎನ್ನೋದ್ರಲ್ಲಿ ಡೌಟೇ ಇಲ್ಲ.ಪಕ್ಷದೊಳಗೆ ಸಿಎಂ ವಿಷಯದಲ್ಲಿ ಡಿಕೆಶಿ ಮತ್ತು ಸಿದ್ಧರಾಮಯ್ಯ ನಡುವೆ ನಡೆಯುತ್ತಿದ್ದ ಸಂಘರ್ಷದಲ್ಲೇ ಕಾಂಗ್ರೆಸ್ ಒಡೆದ ಮನೆಯಾಗ ಲಿದೆ ಎನ್ನುವ ಲೆಕ್ಕಾಚಾರವನ್ನು ಈ ಸಿದ್ದರಾಮೋತ್ಸವ ಬುಡ ಮೇಲು ಮಾಡಿತು.ಡಿಕೆಶಿ ಮತ್ತು ಸಿದ್ಧು ಒಂದಾಗಿ ವೇದಿಕೆ ಮೇಲೆ ಲವಲವಿಕೆಯಿಂದ ಇದ್ದುದು ಬಹುಷಃ ಪಕ್ಷದ ಸಾಂಘಿಕ ಶಕ್ತಿಯ ದ್ಯೋತಕವಾಗಿ ಕಂಡಿದ್ದರೂ ಅತಿಶಯವಿಲ್ಲ.

ಒಂದೆಡೆ ರಾಜ್ಯದಲ್ಲಿ ಮತೀಯ ಸಂಘರ್ಷ ತಾಂಡವಾಡುತ್ತಿದೆ. ಜಾತಿ ಹೆಸರಲ್ಲಿ ಕೊಲೆಗಳಾಗುತ್ತಿವೆ.ಸ ಮಾಜದಲ್ಲಿ ಶಾಂತಿ ಹದಗೆಡುತ್ತಿದೆ.ಯಾರ ಮನಸಲ್ಲೂ ಸಂತಸ-ನೆಮ್ಮದಿ ಇಲ್ಲ.ಇನ್ನೊಂದೆಡೆ ಮಳೆಯಿಂದ ಜನರ ಬದುಕುಗಳು ಕೊಚ್ಚಿ ಹೋಗಿವೆ.ಸೂರು ಕಳೆದುಕೊಂಡಿದ್ದಾರೆ.ಅಪಾರ ಜೀವಹಾನಿಯಾಗಿದೆ.ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಇಂಥಾ ಸನ್ನಿವೇಶದಲ್ಲಿ ಸಂಭ್ರಮಾಚರಣೆ ಸರಿಯಲ್ಲ..ಬೇರೆಯದೇ ಸಂದೇಶ ರವಾನೆಯಾಗಲಿಕ್ಕೆ ಕಾರಣವಾಗ್ಬೋದೆನ್ನುವ ಜಾಣವಂತಿಕೆಯಲ್ಲಿ ಬಸವರಾಜ ಬೊಮ್ಮಾಯಿ ಆಡಳಿತಾವಧಿ ಸರ್ಕಾರದ ಒಂದು ವರ್ಷದ ಸಾಧನೆಯ ಸಂಭ್ರಮಾಚರಣೆ ರದ್ದು ಮಾಡಿ ಬಿಜೆಪಿ ಎಚ್ಚರಿಕೆಯ ಹೆಜ್ಜೆಯನ್ನೇನೋ ಇಟ್ಟಿತು.

ಬಿಜೆಪಿ ತನ್ನ ಸಂಭ್ರಮಾಚರಣೆ ರದ್ದು ಮಾಡಿ ಸುಮ್ಮನಾಗಲಿಲ್ಲ,ಇಂಥಾ  ಪ್ರತಿಕೂಲ ಸನ್ನಿವೇಶದಲ್ಲಿ ಕಾಂಗ್ರೆಸ್ ಗೆ  75 ಕೋಟಿ ವೆಚ್ಚದ ಸಿದ್ಧರಾಮೋತ್ಸವದ ಅಗತ್ಯವಿದೆಯಾ..? ಇದಾ ಕಾಂಗ್ರೆಸ್ ನ ಸಂಸ್ಕ್ರತಿ-ಸಂಸ್ಕಾರವಂತಿಕೆ..? ಜನರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದರೆ ಅವರನ್ನು ಸಾಂತ್ವನಿಸುವು ದನ್ನು ಬಿಟ್ಟು ಅಂದಾ ದರ್ಬಾರ್ ನಡೆಸುತ್ತಿದ್ದಾರೆ ನೋಡಿ.ಈ ರಾಜ್ಯಕ್ಕೆ ಇಂಥವರು ಬೇಕಾ..? ಎಂಬ ಸಂದೇಶವನ್ನು ಸಮಾಜದೊಳಗೆ ಹರಿಬಿಡುವಂಥ ಕೆಲಸಕ್ಕೆ ಕೈ ಹಾಕಿದ್ರು. ಆದ್ರೆ  ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ಸಿದ್ಧರಾಮೋತ್ಸವ ನಡೆಸಿ ಕಾಂಗ್ರೆಸ್ಸಿಗರು ಯಶಸ್ವಿಯಾದ್ರೆ, ಏನೋ ಮಾಡಲಿಕ್ಕೆ ಹೋಗಿ ಕೈ ಸುಟ್ಟುಕೊಂಡಿದ್ದು ಬಿಜೆಪಿಗರು ಮಾತ್ರ.

ರಾಜ್ಯವನ್ನು ಕಾಡುತ್ತಿರುವ ಪ್ರತಿಕೂಲ ಸನ್ನಿವೇಶದಲ್ಲೂ,ಬಿಜೆಪಿ ಮಾಡಿದ ಅಪಪ್ರಚಾರದ ಹೊರತಾ ಗ್ಯೂ ರಾಜ್ಯದ ಜನರು ಸಿದ್ಧರಾಮೋತ್ಸವದಲ್ಲಿ ಪಾಲ್ಗೊಂಡಿದ್ದು ಸ್ಥಳೀಯ ನಾಯಕರನ್ನು  ತೀವ್ರ ಮುಜುಗರಕ್ಕೀಡುಮಾಡಿದ್ದೆಷ್ಟು ಸತ್ಯವೋ..ಕಾಂಗ್ರೆಸ್ ನ ಈ ಬೆಳವಣಿಗೆ ಭವಿಷ್ಯದಲ್ಲಿ ಬಿಜೆಪಿ ಅಸ್ಥಿತ್ವಕ್ಕೆಲ್ಲಿ ಮುಳುವಾಗುತ್ತೋ ಎಂದು ಹೈಕಮಾಂಡ್ ನ್ನುವಿಚಲಿತಗೊಳಿಸಿದ್ದು ಕೂಡ ಅಷ್ಟೇ ವಾಸ್ತವ.ಸದಾ ಉಡಾಫೆ-ಉಡಾಳತನದ ಮೂಡ್ ನಲ್ಲೇ ಇರುವ ರಾಜ್ಯ  ಬಿಜೆಪಿಗರು ಸಿದ್ಧರಾಮೋತ್ಸ ವಯ ಯಶಸ್ಸನ್ನು ಕಿಂಡಲ್ ಮಾಡಿದ್ರೆ,  ಬಿಜೆಪಿ ಹೈಕಮಾಂಡ್ ಪರಿಸ್ಥಿತಿ ಸುಧಾರಿಸದಿದ್ದರೆ ಮುಳುಗೋದು ಕನ್ಫರ್ಮ್ ಎಂದುಕೊಂಡು ಬೆಂಗಳೂರಿಗೇ ಬಂದಿಳಿದುಬಿಡ್ತು.ಅದರ ಪರಿಣಾಮವೇ  ಕೇಂದ್ರಗೃಹ ಸಚಿವ ಅಮಿತ್ ಶಾ ಬೆಂಗಳೂರು ಭೇಟಿ.

ಯೆ ಕ್ಯಾ ಯಡಿಯೂರಪ್ಪಾಜೀ..ಕರ್ನಾಟಕ್ ಮೆ ಯೆ.. ಕ್ಯಾ ಹೋ ರಹಾ ಹೈ ..ಐಸೆ ಪರಿಸ್ತಿತಿಮೇ ಕುಚ್ ತೋ ಕರ್ನಾ ಪಡೆಗಾ..ನಹಿ ತೋ ಹಮ್ ಹಮೇಷಾ ಹಮೇಷಾ ಕೇಲಿಯೇ ಡೂಬ್ ಜಾಯೆಂಗೆ..ಕುಚ್ ಸೋಚಿಯೇ ಎಂದು ತಮ್ಮ ಆತಂಕ ತೋಡಿಕೊಂಡಿರೆನ್ನುವ ಮಾತುಗಳಿವೆ. ನಳಿನ್ ಕುಮಾರ್ ಕಟೀಲ್,ನಿರ್ಮಲ್ ಕುಮಾರ್ ಸುರಾನಾ..ಸಿ.ಟಿ. ರವಿ ಸೇರಿದಂತೆ ಕೆಲವೇ ಕೆಲವು ಮುಖಂಡರ ಸಮ್ಮುಖದಲ್ಲಿ ನಡೆದ ಚರ್ಚೆಯ ಅಂತಿಮ ಸ್ವರೂಪವಾಗಿ ಅಮಿತ್ ಶಾ ಹೊರಡಿಸಿದ ಫರ್ಮಾನ್ ಒಂದೇ.. ರಾಜ್ಯ ಪ್ರದಕ್ಷಿಣೆ..ಅದು ಕೂಡ ಶೀಘ್ರವೇ ನಡೆಯಬೇಕೆನ್ನುವುದು.ಬೇರೆ ಗತ್ಯಂತರವಿಲ್ಲದೆ ರಾಜ್ಯ ಬಿಜೆಪಿ ಮುಖಂಡರು ಒಪ್ಪಿಕೊಳ್ಳಲೇಬೇಕಿದೆ.

ಅಮಿತ್ ಶಾ ಬೆಂಗಳೂರಿಗೆ ಭೇಟಿ ಕೊಟ್ಟು ಹೋದ ಮೇಲೆ ರಾಜ್ಯವನ್ನು ನಾಲ್ಕು ತಂಡಗಳಾಗಿ ಸುತ್ತುವ ನೀಲನಕ್ಷೆಯನ್ನು ರಾಜ್ಯ ಬಿಜೆಪಿ  ಸಿದ್ಧಪಡಿಸಿಟ್ಟುಕೊಂಡಿದೆ.ಕಾಂಗ್ರೆಸ್ ಗೆ ಠಕ್ಕರ್ ಕೊಡುವ ಪ್ರಯತ್ನದ ಭಾಗವಾಗಿಯೇ ರಾಜ್ಯ ಪ್ರದಕ್ಷಿಣೆ ನಡೆಯುತ್ತದೆ ಎಂದ್ರೂ ಆಶ್ವರ್ಯಪಡಬೇಕಿಲ್ಲ.ವಿಶೇಷ ಏನ್ ಗೊತ್ತಾ ಇದೆಲ್ಲದರ ಲೀಡರ್ ಶಿಪ್ ನ್ನು ಶಾ ಮಾಜಿ ಸಿಎಂ ಯಡಿಯೂರಪ್ಪ ಬೆನ್ನಿಗೆ ಹೊರಿಸಿದ್ದಾರೆನ್ನುವುದು. ನಿಮ್ಮಿಂದಲೇ ಪಕ್ಷ ಉಳಿಸಿ ಬೆಳೆಸೊಕ್ಕೆ ಸಾಧ್ಯ ಎಂಬ ಮಾತನ್ನು ಅಮಿತ್ ಶಾ ಅತ್ಯಂತ ಭಾವುಕರಾಗಿ ಹೇಳಿ ಹೊರಟರೆನ್ನುವುದು ಮೇಲ್ಕಂಡ ಬೆಳವಣಿಗೆಗೆ ಸಾಕ್ಷಿ ಇದ್ದವರೆನ್ನಲಾದವರ ಹೇಳಿಕೆ.

ಅಂದ್ಹಾಗೆ ರಾಜ್ಯವನ್ನು ಧೀರ್ಘಕಾಲಕ್ಕೆ ಅಲ್ಲದಿದ್ದರೂ ಸಿದ್ಧರಾಮೋತ್ಸವದ ಗುಂಗಿನಲ್ಲಿರುವ ಸಮುದಾಯದ ಮನಸ್ತಿತಿಯನ್ನು ವಿಚಲಿತಗೊಳಿಸಬೇಕೆನ್ನುವ ಸೀಮಿತ ಉದ್ದೇಶದ ಪರ್ಯಟನೆ ಮುಂದಾಳತ್ವವನ್ನು ಬಿಜೆಪಿ ಯುವರಾಜ ಬಿ.ವೈ ವಿಜಯೇಂದ್ರ ವಹಿಸಿಕೊಳ್ಳುವ ಸಾಧ್ಯತೆಗಳೇ ದಟ್ಟವಾಗಿವೆ.ಬಿಜೆಪಿಯ ಸಧ್ಯದ  ಸ್ಟಾರ್ ಕ್ಯಾಂಪೇನರ್ ನಂತಾಗಿರುವ ವಿಜಯೇಂದ್ರ ಅವರೇ ಈ ಪರ್ಯಟನೆಯ ನೀಲನಕ್ಷೆ, ತಂಡಗಳು ಹಾಗೂ ಅದರ ರೂಪುರೇಷೆಗಳನ್ನು ಸಿದ್ದಪಡಿಸಲಿದ್ದಾರಂತೆ.ಕೆಲವೇ ದಿನಗಳಲ್ಲಿ ಇದರ ಸ್ವರೂಪ ಅಂತಿಮಗೊಳ್ಳಲಿದೆ.ದಿನಾಂಕವನ್ನು ಶೀಘ್ರವೇ ಅಧೀಕೃತಗೊಳಿಸಲಾಗುವುದಂತೆ.

ಬಿಎಸ್ ವೈ, ವಿಜಯೇಂದ್ರ,ನಳಿನ್ ಕುಮಾರ್ ಕಟಿಲ್, ಸಿಟಿ ರವಿ ಅವರುಗಳ ನೇತೃತ್ವದಲ್ಲಿ ತಂಡ ರಚನೆಯಾಗಲಿದೆ.ಶಾಸಕರು,ಸಚಿವರು.ಸಂಸದರು ಜಿಲ್ಲೆಗಳ ಮುಖಂಡರು ಹೆಚ್ಚೆಚ್ಚು ಸಂಖ್ಯೆಯಲ್ಲಿ ರಾಜ್ಯ ಪರ್ಯಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾಂಗ್ರೆಸ್ ಗೆ ಭಯ ಮೂಡಿಸ್ಬೇಕು.ಪಕ್ಷವನ್ನು ಬಲಯುತವಾಗಿ ಸಂಘಟಿಸಬೇಕೆನ್ನುವ ಫರ್ಮಾನ್ ನ್ನು ಕೂಡ ಹೊರಡಿಸಲಾಗಿದೆಯಂತೆ.

ರಾಜ್ಯವನ್ನು ಪರ್ಯಟನೆ ಮಾಡಿ ಪಕ್ಷವನ್ನು ಸಂಘಟಿಸುವ, ಕಳೆಗುಂದುತ್ತಿರುವ ವರ್ಚಸ್ಸನ್ನು ಮತ್ತೆ ದೊರಕಿಸಿಕೊಡುವ ಮಹತ್ವದ ಹೊಣೆಗಾರಿಕೆಯನ್ನು ಪಕ್ಷದ ಹೈಕಮಾಂಡ್ ವಿಜಯೇಂದ್ರ  ಹೆಗಲಿಗೇರಿಸಿದೆ. ಸೋ ವಿಜಯೇಂದ್ರ ಸಧ್ಯದ ಮಟ್ಟಿಗೆ ಹೈಕಮಾಂಡ್ ದೃಷ್ಟಿಯಲ್ಲಿ ನೀಲಿಗಣ್ಣಿನ ಹುಡುಗನಂತಾಗಿದ್ದಾರೆ.ಆದ್ರೆ ವಿಜಯೇಂದ್ರ ಬೆಳವಣಿಗೆ ಸಹಿಸದೆ ಒಳಗೊಳಗೆ ಉರಿದುಕೊಂಡಿರುವವರು ಯಾವ್ ರೀತಿ ಸಾಥ್ ಕೊಡ್ತಾರೆನ್ನುವುದು ಸ್ವಲ್ಪ ಆಶ್ಚರ್ಯ ಮೂಡಿಸಿದೆ.

Spread the love

Related Articles

Leave a Reply

Your email address will not be published.

Back to top button
Flash News