BreakingMoreScrollTop NewsUncategorizedಫೋಟೋ ಗ್ಯಾಲರಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯರಾಜ್ಯ-ರಾಜಧಾನಿ

EXCLUSIVELY FREE JOURNEY IN BMTC BUS: 75TH INDIPENDENCE DAY GIFT FOR BMTC PASSENGERS..:ಆಗಸ್ಟ್ 15ಕ್ಕೆ BMTC ಬಸ್ ಗಳಲ್ಲಿ ಸಂಪೂರ್ಣ ಉಚಿತ ಪ್ರಯಾಣ: ಎಲ್ಲಿಯಾದ್ರೂ ಹತ್ತಿ..ಎಲ್ಲಾದ್ರೂ ಇಳಿರಿ..ಎಷ್ಟ್ ದೂರ ಬೇಕಾದ್ರೂ ಪ್ರಯಾಣಿಸಿ.

ಬೆಂಗಳೂರು:ಇದನ್ನು ಬಿಎಂಟಿಸಿಯ ದೂರದೃಷ್ಟಿ ಕೊರತೆಯ ನಿರ್ದಾರ ಎನ್ನ್ಬೇಕೋ ಅಥವಾ ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಬಂಪರ್ ಆಫರ್ ಎನ್ನಬೇಕೋ ಗೊತ್ತಾಗ್ತಿಲ್ಲ.ನೂರಾರು ಕೋಟಿ ನಷ್ಟಕ್ಕೆ ಸಿಲುಕಿ ತತ್ತರಿಸುತ್ತಿದ್ದರೆ 75ನೇ ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸೋ ಮೂಡ್ ನಲ್ಲಿರುವಂತೆ ಕಾಣುವ ಸಾರಿಗೆ ಸಚಿವರು ಅಂದು ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಕ ರೆಲ್ಲರಿಗೂ ಉಚಿತ ಪ್ರಯಾಣ ವ್ಯವಸ್ಥೆ ಮಾಡಿ ಆದೇಶ ಹೊರಡಿಸಿದ್ದಾರೆ.

ಆದರೆ ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಗೊತ್ತಿರ್ಲಿ ಅಂಥಾ ಹೇಳ್ತೇವೆ.ಬಿಎಂಟಿಸಿಯ ಆರ್ಥಿಕ ಪರಿಸ್ಥಿತಿಯನ್ನು ಚೆನ್ನಾಗಿ ಬಲ್ಲಂಥ ಬೆಂಗಳೂರಿನ ಯಾವೊಬ್ಬ ಪ್ರಯಾಣಿಕನಿಗೂ ಇಂತದ್ದೊಂ ದು ಆಫರ್ ಬೇಕಿರಲಿಲ್ಲ ಎನಿಸುತ್ತದೆ.ಸಾರಿಗೆ ಸಚಿವ ಶ್ರೀರಾಮಲು ಅವರಿಗೆ ಇಂತದ್ದೆಲ್ಲಾ ಐಡ್ಯಾ ಅದ್ಯಾರ್ ಕೊಡ್ತಾರೋ ಗೊತ್ತಾಗುತ್ತಿಲ್ಲ.ಸ್ವಾಮಿ ಸಂಸ್ಥೆ ಉದ್ದಾರಕ್ಕೆ ಏನಾದ್ರೂ ಮಾಡಿ..ಸಂಸ್ಥೆ ದಿನೇ ದಿನೇ ಆರ್ಥಿಕವಾಗಿ ಕುಸಿತಕ್ಕೆ ಒಳಗಾಗುತ್ತಿದೆ.

ಅದನ್ನು ಮೇಲಕ್ಕೆತ್ತುವ ಕೆಲಸಕ್ಕೆ ಮುಂದಾಗಿ ಸಂಸ್ಥಯನ್ನು ಉಳಿಸಿ,ಕಾರ್ಮಿಕರನ್ನು ಬದುಕಿಸಿ ಎಂದು ಇಡೀ ರಾಜ್ಯ ಒಕ್ಕೊರಲಿಂದ ಹೇಳುತ್ತಿದ್ದರೆ ಕಿವಿ-ಕಣ್ಣು-ಸಂವೇದನೆ ಇಲ್ಲದವರಂತಾಗಿರು ವುದು ನಿಜಕ್ಕು ವಿಪರ್ಯಾಸ.ಸಚಿವ ಶ್ರೀರಾಮಲು ಅವರು ಸಂಸ್ಥೆಯಲ್ಲಿ ಕಾಣಸಿಗೋದೇ ಅವರ ಹಿತಾಸಕ್ತಿಗೆ ಪೂರಕವಾದ ಕಾರ್ಯ ಕ್ರಮಗಳಲ್ಲಿ ಅನ್ಸುತ್ತೆ.ಕಾರ್ಮಿಕರ ಸಮಸ್ಯೆ-ಅಹವಾಲು-ಸಾರಿಗೆ ನಿಗಮಗಳ ನಷ್ಟಕ್ಕೆ ಸಂಬಂಧಿಸಿದ ಕಾರ್ಯಕ್ರಮ-ಸಭೆಗಳಲ್ಲಿ ಕಾಣಸಿಗೋದೇ ಕಡಿಮೆಯಂತೆ.

EXCLUSIVELY FREE JOURNEY IN BMTC BUS: 75TH INDIPENDENCE DAY GIFT FOR BMTC PASSENGERS..:ಆಗಸ್ಟ್ 15ಕ್ಕೆ BMTC ಬಸ್ ಗಳಲ್ಲಿ ಸಂಪೂರ್ಣ ಉಚಿತ ಪ್ರಯಾಣ: ಎಲ್ಲಿಯಾದ್ರೂ ಹತ್ತಿ..ಎಲ್ಲಾದ್ರೂ ಇಳಿರಿ..ಎಷ್ಟ್ ದೂರ ಬೇಕಾದ್ರೂ ಪ್ರಯಾಣಿಸಿ.

ಉದಾಹರಣೆಗೆ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿರುವ ಕಾರ್ಮಿಕರಲ್ಲಿ ಎಷ್ಟು ಜನರನ್ನು ಕರೆಯಿಸಿ ಮಾತನಾಡಿ ಸಮಸ್ಯೆ ಬಗೆಹರಿಸಿದ್ದಾರೆ… ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ… ಕಾರ್ಮಿಕ ರಿಗೆ ನೆರವಾಗುವಂಥ ವ್ಯವಸ್ಥೆ ಜಾರಿಗೊಳಿಸುವಂತೆ ಸೂಚಿಸಿದ್ದಾರೆ….ಲೆಕ್ಕ ಹಾಕಿದ್ರೂ ಬೆರಳೆಣಿಕೆಯಷ್ಟು ಅನ್ಸುತ್ತೆ.ಆದರೆ ಅದೇ ಎಲೆಕ್ಟ್ರಿಕಲ್ ಬಸ್ ಗಳ ಖರೀದಿ ವಿಚಾರ, ವಿವಿಧ ಕಾಮಗಾರಿ ಗಳ ಕುರಿತಾದ ಹಗುತ್ತಿಗೆದಾರರೊಂದಿಗಿನ ಸಭೆ,ಹೊಸ ಬಸ್ ಗಳ ಖರೀದಿ-ಲೋಕಾರ್ಪಣೆಯಂಥ ಕಾರ್ಯಕ್ರಮ-ಸಭೆಗಳಲ್ಲಿ ಹಾಜರಿರುತ್ತಾರೆನ್ನುವ ದೊಡ್ಡ ಆರೋಪ ಅವರ ಮೇಲಿದೆ.ಇದನ್ನೆಲ್ಲಾ ಹೇಳೊಕ್ಕೆ ಕಾರಣವಿದೆ.

ಬಿಎಂಟಿಸಿಯ ಪತ್ರಿಕಾ ಪ್ರಕಟಣೆಯಲ್ಲಿ 14-08-2022 ರಂದು ವಿಧಾನಸೌ ಧದ ಮುಂಭಾಗದಲ್ಲಿ 12 ಮೀಟರ್ ಉದ್ದದ 300 ಎಲೆಕ್ಟ್ರಿಕ್ ಬಸ್ ಗಳು ಲೋಕಾರ್ಪಣೆಯಾಗಲಿವೆ ಎಂಬ ಉಲ್ಲೇಖ ವಿದೆ.ಶ್ರೀರಾಮಲು ಅವರ ಬಗ್ಗೆ ಕಾರ್ಮಿಕರು ನಂಬಿಕೆ ಕಳೆದುಕೊಂಡು ಜಮಾನವೇ ಆಗಿದೆ.ಅವರ ಬಳಿ ಸಮಸ್ಯೆ ಹೇಳಿಕೊಳ್ಳೋದೂ ಒಂದೇ, ಎಮ್ಮೆ ಮೇಲೆ ನೀರು ಸುರಿಯೋದೇ ಒಂದೇ ಎನ್ನುವ ಮನಸ್ತಿತಿಗೆ ಕಾರ್ಮಿಕರು ಬಂದು ತಲುಪಿದ್ದಾರೆ.

ಅಧಿಕಾರ ಸ್ವೀಕರಿಸುವಾಗ ಹೇಳಿದ್ದನ್ನೆಲ್ಲಾ ಮರೆತ ದಿನದಿಂದಲೇ ಶ್ರೀರಾಮಲು ಅವರ ಬಳಿ ಹೋಗೋದು..ನೋವು ತೋಡಿಕೊಳ್ಳೋದು.. ಅಹವಾಲು ಸಲ್ಲಿಸೋದನ್ನೇ ಕಾರ್ಮಿಕರು ನಿಲ್ಲಿಸಿ ಬಿಟ್ಟಿದ್ದಾರೆನ್ನುವ ಮಾತುಗಳಿವೆ.ಕೊರೊನಾ ಸಂಕಷ್ಟದಲ್ಲಿ ನೂರಾರು ಕೋಟಿ ನಷ್ಟ ಅನುಭವಿಸಿ,ಇನ್ನೇನು ಚೇತರಿಸಿಕೊಳ್ಳುತ್ತಿರುವ ಕಾಲಘಟ್ಟದಲ್ಲೇ ಆಗಸ್ಟ್ 15 ರಂದು ಎಲ್ಲಾ ರೂಟ್ ಗಳಲ್ಲೂ ಸಂಚರಿಸುವ ಬಸ್ ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿರುವುದರಿಂದ ಸಂಸ್ಥೆಗೆ ಹತ್ತಿರತ್ತಿರ 1 ಕೋಟಿ ಗಳಿಕೆ ಕೈ ತಪ್ಪಬಹುದೆನ್ನುವ ಅಂದಾಜಿದೆ.

ಆ ನಷ್ಟವನ್ನು ಸರ್ಕಾರ ತುಂಬಿಕೊಡುತ್ತೋ…ಅಥವಾ ಸಚಿವ ಶ್ರೀರಾಮುಲು ತಮ್ಮ ಜೇಬಿನಿಂದ ಭರಿಸುತ್ತಾರಾ..? ಸರ್ಕಾರದ ಮಟ್ಟದಲ್ಲಿ ಸಾರಿಗೆ ನಿಗಮಗಳಿಗೆ ಬೇಕಿರುವ ಆರ್ಥಿಕ ನೆರವನ್ನು ಭರಿಸಿಕೊಡುವುದರಲ್ಲಿಯೇ ಶ್ರೀರಾಮಲು ವಿಫಲವಾಗುತ್ತಿರುವ ಬಗ್ಗೆ ಬಹುದೊಡ್ಡ ಆರೋಪವಿದೆ..ಹಾಗಾಗಿ ಆಗಸ್ಟ್ 15ರ ಉಚಿತ ಪ್ರಯಾಣದ ಪರಿಕಲ್ಪನೆ ಬಗ್ಗೆ ಅಸಾಧಾರಣವಾದ ಆಕ್ರೋಶ-ಅಸಮಾಧಾನ-ಬೇಸರವಿದ್ದರೂ ಕಾರ್ಮಿಕರು ವಿರೋಧಿಸಿ ಪ್ರಯೋಜನವಿಲ್ಲ ಎಂದ್ಕೊಂಡು ಸುಮ್ಮನಾಗುತ್ತಿದ್ದಾರೆ ಅಷ್ಟೇ..

Spread the love

Related Articles

Leave a Reply

Your email address will not be published.

Back to top button
Flash News