BreakingMoreScrollTop NewsUncategorizedಫೋಟೋ ಗ್ಯಾಲರಿಸಿನೆಮಾ ಹಂಗಾಮ

RAVI BOPANNA UNSUCCESS..!! WILL TEACH LESSON TO CRAZY STAR RAVICHANDRAN..?: ರವಿಚಂದ್ರನ್ ಕನಸಿನ “ಬೋಪಣ್ಣ”ಪ್ಲಾಪ್.. ರವಿಮಾಮ ಮುಗ್ಗರಿಸಿದ್ದು ಎಲ್ಲಿ..ಏಕೆ.. ಗೊತ್ತಾ..?

ಬೆಂಗಳೂರು:ಒಂದು ಗೆಲುವಿಗಾಗಿ ಹಪಾಹಪಿಸುತ್ತಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಮತ್ತೆ ಅದೃಷ್ಟ ಕೈ ಕೊಟ್ಟಿದೆ.ಅದೃಷ್ಟ ಎನ್ನುವುದಕ್ಕಿಂತ ಅವರ ಪ್ರಜ್ಞಾಪೂರ್ವಕ ತಪ್ಪು ಸೋಲಿಗೆ ಕಾರಣವಾಗಿದೆ ಎನ್ನೋದು ಸಿನಿ ವಿಮರ್ಷಕರ ಅನಿಸಿಕೆ.ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದ ರವಿ ಬೋಪಣ್ಣ ನನ್ನು ಪ್ರೇಕ್ಷಕ ಸಾರಾಸಗಟಾಗಿ ತಿರಸ್ಕರಿಸಿದ್ದಾನೆ.ನಾನೇನೇ ಮಾಡಿದ್ರೂ  ಪ್ರೇಕ್ಷಕ ಒಪ್ಪಿಕೊಂಡ್ ಬಿಡ್ತಾನೆ ಎನ್ನೋ ಭ್ರಮೆ ಬಿಟ್ಟು ಇನ್ನಾದ್ರೂ ವಾಸ್ತವಕ್ಕೆ ಹತ್ತಿರವಾಗುವಂಥ ಚಿತ್ರಗಳನ್ನು ಮಾಡಿ ಎನ್ನೋ ಸಂದೇಶವನ್ನು ಈ ಸೋಲಿನ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಾನೆ ಎನ್ನಲಾಗ್ತಿದೆ.

ಗ್ಲಾಮರ್ ಒಂದು ಚಿತ್ರದ ಜೀವಾಳ ನಿಜ..ಆದ್ರೆ ಅದೇ ಗ್ರಾಮರ್ ಎಂದುಕೊಂಡಂತಿದೆ ರವಿಚಂದ್ರನ್.ಹೆಣ್ಣನ್ನು ಸರಕನ್ನಾಗಿ ಬಳಸಿಕೊಳ್ತಾರೆನ್ನುವ ಆಪಾದನೆ ಕೇಳಿಬಂದಾಗ್ಲೆಲ್ಲಾ ಅದಕ್ಕೆ ಕಲಾತ್ಮಕತೆಯ ನೆವ ನೀಡಿ ತನ್ನ ವಾದವನ್ನೇ ಗೆಲ್ಲಿಸುತ್ತಿದ್ದ ರವಿಚಂದ್ರನ್ ಗೆ ಅದೇ “ಕ್ರೇಜಿ” ಫಾರ್ಮೂಲಾ ಮುಳುವಾಗಿದ್ದನ್ನು ನೋಡಿದ್ದೇವೆ,ಅವರನ್ನು ಮತ್ತೆ ಜನ ನೆನಪಿಸಿಕೊಳ್ಳುವಂತೆ ಮಾಡಿದ್ದು ಮಾಣಿಕ್ಯ..ದೃಶ್ಯಂ ಎನ್ನುವಂಥ ಕಲಾತ್ಮಕ ಮತ್ತು ಕಥೆ ಪ್ರಧಾನ ಚಿತ್ರಗಳೆನ್ನುವುದನ್ನು ಇಲ್ಲಿ ನೆನಪು ಮಾಡಿಕೊಡಬೇಕಿಲ್ಲ.

ರವಿಬೋಪಣ್ಣ ಹೆಸರು ಕೇಳಿದವರು ದೃಶ್ಯಂ ಚಿತ್ರದ ಇಮ್ಯಾಜಿನೇಷನ್ ಇಟ್ಕೊಂಡು ಹೋಗ್ತಾರೆ.ಅಥವಾ ಟ್ರೈಲರ್ ಗಳಲ್ಲಿ ಉಳಿಸಿಕೊಂಡಿರುವ ಕುತೂಹಲ ತಣಿಸಿಕೊಳ್ಳೊಕ್ಕೆ ಹೋಗ್ತಾರೆ.ಆದ್ರೆ ಹಾಗೆ ಹೋದವರು ಚಿತ್ರದುದ್ದಕ್ಕೂ ಕಾಣಸಿಗುವ ವೃದ್ಧ ನಾಯಕನೋರ್ವ ಮಗಳ ವಯಸ್ಸಿನ ಹೆಣ್ಣುಗಳೊಂದಿಗೆ ರೊಮ್ಯಾನ್ಸ್ ಮಾಡುವಂತ ದೃಶ್ಯಗಳನ್ನು ನೋಡಿ ಮುಜುಗರ ಪಟ್ಕೊಂಡು ರವಿಚಂದ್ರನ್ ಅವರಂಥ ನಟನಿಗೆ ಇಂತದ್ದೊಂದು ಸ್ತಿತಿ ಏಕೆ ಬಂತಪ್ಪಾ ಎಂದು ಬೈಯ್ದುಕೊಂಡು ಬರುವಂತಾಗಿದೆಯಂತೆ.ಏಕೆಂದ್ರೆ ಚಿತ್ರದಲ್ಲಿ ಅದರ “ಓಘ” ಉಳಿಸಿಕೊಂಡು ಹೋಗುವಂಥ ಕಥೆಯಿಲ್ಲ.ಕಿವಿಗೆ ಇಂಪೆನಿಸುವ ಹಾಡುಗಳಿಲ್ಲ. ಹೋಗ್ಲಿ, ಕಲಾತ್ಮಕವಾಗಿ ಚಿತ್ರವನ್ನು ತೆರೆ ಮೇಲೆ ಕಟ್ಟಿಕೊಡುವಂಥ ಛಾಯಾಗ್ರಹಣವೋ..ಅದೂ ಇಲ್ಲ.ಯಾವ ಕಾರಣಕ್ಕೆ ಚಿತ್ರ ನೋಡ್ಬೇಕೆ್ನುವ ಗೊಂದಲಕ್ಕೆ ಸಿಲುಕುತ್ತಿದ್ದಾನೆ ಪ್ರೇಕ್ಷಕ.

RAVI BOPANNA UNSUCCESS..!! WILL TEACH LESSON TO CRAZY STAR RAVICHANDRAN..?: ರವಿಚಂದ್ರನ್ ಕನಸಿನ “ಬೋಪಣ್ಣ”ಪ್ಲಾಪ್.. ರವಿಮಾಮ ಮುಗ್ಗರಿಸಿದ್ದು ಎಲ್ಲಿ..ಏಕೆ.. ಗೊತ್ತಾ..?

ಗ್ಲ್ಯಾಮರ್ ನ್ನು ಚಿತ್ರದುದ್ದಕ್ಕೂ ಸರಕನ್ನಾಗಿಸಿಕೊಂಡಂತಿದೆ ರವಿಚಂದ್ರನ್.ಅರ್ಥವಾಗದ ಸಂಗೀತದ ಅಬ್ಬರದಲ್ಲಿ ಹೆಣ್ಣಿನೊಂದಿಗೆ ರೊಮ್ಯಾನ್ಸ್ ಮಾಡುವುದೇ ತನ್ನ ಕಾಯಕ ಎಂದುಕೊಂಡು ಅಭಿನಯಿಸಿದಂತಿದೆ ಕ್ರೇಜಿಸ್ಟಾರ್. ರಾಧಿಕಾ ಹಾಗು ಕಾವ್ಯ ಶೆಟ್ಟಿ ಅವರನ್ನು ಗ್ಲಾಮರ್ ಬೊಂಬೆಗಳಾಗಿ ತೆರೆಯಲ್ಲಿ ಬಿಂಬಿಸಿದ್ದಾರೆ.ಒಳ್ಳೆ ಕಥೆಯಿಲ್ಲ.ಹಳೆಯ ರವಿಯನ್ನು ತೆರೆ ಮೇಲೆ ಮತ್ತೆ ಪುನರುತ್ಥಾನಗೊಳಿಸಿದ್ದೇನೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ರವಿಮಾಮನ ನಿಜವಾದ ಬಂಡವಾಳವನ್ನು ಬಿಚ್ಚಿಟ್ಟಿದೆ ಸಿನೆಮಾದ ಸೋಲು.

ರವಿಚಂದ್ರನ್ ಅವರನ್ನು ಅವರ ಗ್ಲಾಮರ್-ಕ್ರೇಜಿ ಕಾರಣಕ್ಕೆ ಇಷ್ಟಪಡುತ್ತಿದ್ದ ಪ್ರೇಕ್ಷಕರೇ ರವಿಬೋಪಣ್ಣನನ್ನು ತಿರಸ್ಕರಿಸಿದ್ದಾರೆಂದ್ರೆ ಅರ್ಥ ಮಾಡಿಕೊಳ್ಳಬಹುದು ಗ್ಲಾಮರ್ ಹೆಸರಿನಲ್ಲಿ ರವಿಚಂದ್ರನ್ ಪ್ರದರ್ಶಿಸಿರಬಹುದಾದ “ಅಭಿರುಚಿ” ಎಂತದ್ದು ಎನ್ನುವುದೆಂದು.ರವಿಚಂದ್ರನ್ ತೆರೆ ಮೇಲೆ ಕಮಾಲ್ ಮಾಡಿರುತ್ತಾರೆಂದುಕೊಂಡು ಥಿಯೇಟರ್ ಗಳಿಗೆ ಹೋಗುತ್ತಿರುವ ಅಭಿಮಾನಿಗಳು ಬೇಸರದಿಂದ ಹೊರಬರುತ್ತಿದ್ದಾರೆ.ರವಿಚಂದ್ರನ್ ಈ ವಯಸ್ಸಿನಲ್ಲಿ ಹಾಗೆಲ್ಲಾ ಮಾಡಬಾರದಿತ್ತು.ಈ ವಯಸ್ಸಿನಲ್ಲೂ ಆ ರೊಮ್ಯಾನ್ಸ್-ಗ್ಲ್ಯಾಮರ್ ಬೇಕಿತ್ತಾ..ಇವರದು ಬಿಡಿ,ಅವರೊಂದಿಗೆ ಆ ರೀತಿ ನಟಿಸೊಕ್ಕೆ ಕಾವ್ಯಶೆಟ್ಟಿ-ರಾಧಿಕಾನಿಗೇನು ಬಂದಿತ್ತು ಕರ್ಮ ಎಂದು ಮಾತನಾಡಿಕೊಳ್ಳುವಷ್ಟು ಪ್ರೇಕ್ಷಕ ರವಿಚಂದ್ರನ್ ಮಾಡಿರುವ ನಿರಾಶೆಗೆ ಆಕ್ರೋಶ ವ್ಯಕ್ತಪಡಿಸ್ತಾರೆ.

ತಾನೇನೇ ಮಾಡಿದ್ರೂ ನಡೆದೋಗುತ್ತೆ..ತಾನೇನೇ ತೋರಿಸಿದ್ರೂ ಪ್ರೇಕ್ಷಕ ಒಪ್ಪಿಕೊಳ್ತಾನೆ..ತಾನು ತನ್ನ ಹೀರೋಯಿನ್ ನ್ನು ಹೇಗೆಲ್ಲಾ ತೋರಿಸಿದ್ರೂ ಪ್ರೇಕ್ಷಕ ಜೊಲ್ಲು ಸುರಿಸಿಕೊಂಡು ನೋಡ್ತಾನೆ..ತನ್ನಿಂದ ಇನ್ನೂ ಅಂಥಾ ಮತ್ತೊಂದಷ್ಟು ಚಿತ್ರಗಳು ಬೇಕೆನ್ನುವ ಅಭಿಪ್ರಾಯ ಕೊಡ್ತಾನೆಂದುಕೊಂಡಿದ್ದ ಆ ಜಮಾನ ಇವತ್ತಿಲ್ಲ ಎನ್ನುವುದನ್ನು ರವಿಚಂದ್ರನ್ ಮನಗಾಣಬೇಕಿದೆ.

ಸೋಲಿನ ಸರಪಳಿ ಕಳಚಿಕೊಳ್ಳಲು ವಾಕರಿಕೆ ಎನಿಸುವಷ್ಟರ  ಮಟ್ಟಿಗಿನ “ಗ್ಲಾಮರ್” ಇವತ್ತಿಗೆ ಔಟ್ ಡೇಟೆ‍ಡ್.ಅದರಿಂದಲೇ ಚಿತ್ರ ಗೆಲ್ಲುತ್ತೆನ್ನುವ ಮನಸ್ತಿತಿಯಿಂದ ರವಿಚಂದ್ರನ್ ಹೊರಬರಲೇಬೇಕಿದೆ.ಅಂತದ್ದೊಂದು ಸಂದೇಶವನ್ನೋ..ಪಾಠವನ್ನೋ ಪ್ರೇಕ್ಷಕ ರವಿಬೋಪಣ್ಣನ ವಿಷಯದಲ್ಲಿ ನೀಡಿದ್ದಾರೆನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ರವಿಚಂದ್ರನ್ ನಿಜಕ್ಕೂ ಎಚ್ಚೆತ್ತುಕೊಳ್ಳಬೇಕಿದೆ..ಅದು ನಮ್ಮ ಆಶಯ ಹಾಗೂ ಅನಿಸಿಕೆ ಕೂಡ.

Spread the love

Related Articles

Leave a Reply

Your email address will not be published.

Back to top button
Flash News