ಕೊಲೆಯ ಪ್ರತೀಕಾರಕ್ಕೆ ಮತ್ತೊಂದು ಕೊಲೆ ಪಾತಕಿ ನರಸಿಂಹ ಭೀಕರ ಕೊಲೆ

0

ಬೆಂಗಳೂರು:ರಾಜಧಾನಿ ಬೆಂಗಳೂರಲ್ಲಿ ಮತ್ತೊಬ್ಬ ರೌಡಿಯ ಹೆಣ ಬಿದ್ದಿದೆ.

ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿತನಾಗಿ ಜೈಲು ಸೇರಿ ಜಾಮೀನಿನಮ ಮೇಲೆ ಬಿಡುಗಡೆಯಾಗಿ ಬಂದಿದ್ದ ಸಿ.ಡಿ ನರಸಿಂಹ ಎಂಬಾತನನ್ನು ಮನೆ ಸಮೀಪವೇ ಹಂತಕರ ತಂಡ ಅಟ್ಟಾಡಿಸಿಕೊಂಡು ಹೊಡೆದು ಕೊಲೆ ಮಾಡಿದೆ.

ರಾಜಗೋಪಾಲನಗರ ಠಾಣೆಯ ರೌಡಿಶೀಟೆರ್ ನರಸಿಂಹ ಬ್ಯಾಡರಹಳ್ಳಿಯ ಆಂದ್ರಹಳ್ಳಿ ವ್ಯಾಪ್ತಿಯ ಮನೆಯಲ್ಲಿ ವಾಸವಾಗಿದ್ದ ರೌಡಿ ಚಟುವಟಿಕೆಯಿಂದ ದೂರವಾಗಿ ತನ್ನ ಪಾಡಿಗೆ ತಾನಿದ್ದುಕೊಂಡು ಬದುಕುವ ನಿರ್ಧಾರ ಮಾಡಿಕೊಂಡಿದ್ದ.ಆದ್ರೆ ಆತ ಜಾಮೀನಿನ ಮೇಲೆ ಹೊರಬರುವುದನ್ನೇ ಕಾದು ಕುಳಿತಿದ್ದ ಹಂತಕರು ಮನೆ ಸಮೀಪವೇ ಆತನನ್ನು ಅಟ್ಟಾಡಿಸಿಕೊಂಡು ಕೊಲೆ ಮಾಡಿದೆ.

ಕೊಲೆ ಸುಲಿಗೆಯಂಥ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಜೈಲು ಸೇರಿದ್ದ ನರಸಿಂಹ ಜಾಮೀನಿನ ಮೇಲೆ ಹೊರಬಂದ್ಮೇಲೆ ಮನೆಯಿಂದ ಹೊರ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದ.2013ರಲ್ಲಿ ಈ ನರಸಿಂಗ್ ಚೇತು ಎಂಬಾತನ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ.ಕೊಲೆ ಮಾಡಿ ಹೊರಬಂದ್ಮೇಲೆ ಚೇತುವಿನ ಸಹಚರರು ನರಸಿಂಹನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.ಆದ್ರೆ ಅದೃಷ್ಟ ಚೆನ್ನಾಗಿತ್ತು.ಅವತ್ತು ಬಚಾವಾಗಿದ್ದ.ಆದ್ರೆ ಈಗ ನಡೆದಿರುವ ಕೊಲೆಯ ಸ್ವರೂಪ ಹಾಗೂ ಹಿಂದೆ ನಡೆದ ಹಲ್ಲೆಯತ್ನದಂಥ ಘಟನಾವಳಿಗಳನ್ನು ತಾಳೆ ಹಾಕಿದ್ರೆ ಕೊಲೆಗೆ ಪ್ರತೀಕಾರವಾಗಿ ಚೇತುವಿನ ಸಹಚರರೇ ನರಸಿಂಹನನ್ನು ಇಹಲೋಕದಿಂದ ಪರಲೋಕಕ್ಕೆ ಪಾರ್ಸಲ್ ಮಾಡಿಸಿದ್ರಾ ಎಂದೆನಿಸುತ್ತದೆ.ಇದೇ ಅನುಮಾನವನ್ನು ಪೊಲೀಸರು ಕೂಡ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಈ ನರಸಿಂಹ ಫೆಬ್ರವರಿಯಲ್ಲಿ ಮರ್ಡರ್ ಆಗಿದ್ದ ರೌಡಿ ಲಕ್ಷ್ಮಣನ ಗ್ಯಾಂಗ್, ಆಟೋ ರಾಮನ ಗ್ಯಾಂಗ್ ಹಾಗೂ ಇನ್ನು ಅನೇಕ ಗ್ಯಾಂಗ್ ಗಳ ಜೊತೆಗೆ ಸಣ್ಣಪುಟ್ಟ ಕಾರಣಕ್ಕೆ ದ್ವೇಷ ಕಟ್ಟಿಕೊಂಡಿದ್ದ.ಆ ದ್ವೇಷಕ್ಕೆ ಪ್ರತೀಕಾರವಾಗಿ ಈ ಕೊಲೆ ನಡೆದಿದ್ಯಾ ಎನ್ನುವ ಶಂಕೆ ವ್ಯಕ್ತವಾಗಿದ್ದು ಬ್ಯಾಡರಹಳ್ಳಿ ಪೊಲೀಸರು ತನಿಖೆ ಶುರುಮಾಡಿರೋದಾಗಿ ಕನ್ನಡಫ್ಲ್ಯಾಶ್ನ್ಯೂಸ್ವೆಬ್ಸೈಟ್ಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Spread the love
Leave A Reply

Your email address will not be published.

Flash News