BreakingMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿಮಾಹಿತಿ/ತಂತ್ರಜ್ಞಾನರಾಜಕೀಯರಾಜ್ಯ-ರಾಜಧಾನಿ

THIS BANGLORE’S “GANDHIJI SCHOOL” CONTRIBUTE SO MUCH IN FREEDOM FIGHT..ಇದು “ಬಾಪೂ” ಬಹುವಾಗಿ ಮೆಚ್ಚಿಕೊಂಡ ಶಾಲೆ…ಬೆಂಗಳೂರಿಗೆ ಬಂದಾಗಲೆಲ್ಲಾ “ಮಹಾತ್ಮ” ಪ್ರೀತಿಯಿಂದ ಉಳಿದುಕೊಳ್ತಿದ್ದ ಶಾಲೆ..

ಬೆಂಗಳೂರು:ನಾವು ನಿಜಕ್ಕೂ ಪುಣ್ಯವಂತರು..ನಮಗೆ ದೊರೆತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುವ ಅವಕಾಶ ನಮಗೆ ಸಿಕ್ಕಿದೆ.ಅಂದ್ಹಾಗೆ ಇದು ನಮಗೆ ಅನಾಯಾಸವಾಗಿ ದೊರೆತ ಸ್ವಾತಂತ್ರ್ಯವಲ್ಲ.ಇದರ ಹಿಂದೆ ಎಷ್ಟೋ ದೇಶಪ್ರೇಮಿಗಳ ಬಲಿದಾನವಿದೆ.ರಾಷ್ಟ್ರಭಕ್ತರ ತ್ಯಾಗ ಅಡಗಿದೆ.ರಾಜಧಾನಿ ಬೆಂಗಳೂರು ಕೂಡ ನಮ್ಮ ದೇಶ ಸ್ವಾತಂತ್ರ್ಯವಾಗಲು ತನ್ನದೇ ಆದ ಕೊಡುಗೆ ನೀಡಿದೆ.ಅದನ್ನು ಸ್ಮರಿಸುವ ಕೆಲಸ ಕೇವಲ ಸ್ವಾತಂತ್ರ್ಯ ದಿನಾಚರಣೆಯ ಹಿಂದೆ-ಮುಂದೆ ಆಗುತ್ತಿರುವುದು ದುರಾದೃಷ್ಟಕರ..ಕನ್ನಡ ಫ್ಲ್ಯಾಶ್ ನ್ಯೂಸ್ ಅಂತದ್ದೇ ಒಂದು ಮಹತ್ವದ ಇತಿಹಾಸವನ್ನು ಮೆಲುಕಾಕುವ ಕೆಲಸ ಮಾಡುತ್ತಿದೆ.

ನ್ಯಾಷನಲ್ ಕಾಲೇಜ್,ಈ ವಿದ್ಯಾಸಂಸ್ಥೆ ಹೆಸರು ಕೇಳದಿರುವವರೇ ಕಡಿಮೆ.105 ವರ್ಷಗಳಷ್ಟು ಇತಿಹಾಸವಿರುವ ಈ ಶಾಲೆ ಆರಂಭವಾಗಿದ್ದು ಕೂಡ ಸ್ವಾತಂತ್ರ್ಯ ಚಳುವಳಿ ತಾರಕಕ್ಕೇರಿದ ಸನ್ನಿವೇಶದಲ್ಲಿ ಎನ್ನುವುದು ಗಮನಾರ್ಹ.

ಶೈಕ್ಷಣಿಕವಾಗಿ ತನ್ನದೇ ಆದ ಮೈಲಿಗಲ್ಲನ್ನು ಸ್ಥಾಪಿಸಿರುವ ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ನಾನಾ ಕ್ಷೇತ್ರದಲ್ಲಿ ದೇಶವಿದೇಶದಲ್ಲಿದ್ದಾರೆ.ಶಾಲೆಯ ಪ್ರತಿನಿಧಿಗಳಾಗಿ ಘನತೆ-ಗೌರವವನ್ನು ಹೆಚ್ಚಿಸಿದ್ದಾರೆ.ಇಂಥಾ ಶಾಲೆ ಸ್ವಾತಂತ್ರ್ಯ ಚಳುವಳಿಗೂ ವಿಶಿಷ್ಟವಾದ ಕೊಡುಗೆ ನೀಡಿದೆ ಎನ್ನುವುದು ಬಹುತೇಕ ಜನರಿಗೆ ಗೊತ್ತಿರಲಿಕ್ಕಿಲ್ಲ.

ನ್ಯಾಷನಲ್ ಶಾಲೆ ನನ್ನ ಅಚ್ಚುಮೆಚ್ಚಿನ ಸ್ಥಳಗಳಲ್ಲಿ ಒಂದು ಎಂದಿದ್ದರು ಮಹಾತ್ಮಗಾಂಧಿ.ಹೇಳಿದ್ದಷ್ಟೇ ಅಲ್ಲ ಅವರು ಬೆಂಗಳೂರಿಗೆ ಬಂದಾಗಲೆಲ್ಲಾ ಉಳಿದುಕೊಳ್ಳುತ್ತಿದ್ದುದೇ ಈ ಶಾಲೆಯ ಸಣ್ಣ ಕೊಠಡಿಯಲ್ಲಿ ಎನ್ನುತ್ತಾರೆ ಶಾಲೆಯ ಮುಖ್ಯಸ್ಥರು.ಇದು ಕೇವಲ ವಿದ್ಯಾದೇಗುಲವಲ್ಲ.ಸ್ವಾತಂತ್ರ್ಯ ಚಳುವಳಿಗೆ ಸಶಕ್ತ ಯೋಧರನ್ನು-ಹೋರಾಟಗಾರರನ್ನು ನಿರ್ಮಿಸಿಕೊಟ್ಟ ಕಾರ್ಖಾನೆ ಎಂದು ಹೆಮ್ಮೆಯಿಂದ ಹೇಳಿದ್ದವರು ಕೂಡ ಬಾಪೂ ಅಂತೆ.ಹಾಗಾಗಿನೇ ಈ ಶಾಲೆಗೆ ಗಾಂಧಿ ಶಾಲೆ ಎನ್ನುವ ಮತ್ತೊಂದು ಹೆಸರಿದೆ.

105 ವರ್ಷಗಳ ಭವ್ಯ ಪರಂಪರೆ ಇರುವ ಈ ಶಾಲೆ ಸಾವಿರಾರು ಹೋರಾಟಗಾರರ ಸೃಷ್ಟಿಗೆ ಕಾರಣವಾದ ಕೇಂದ್ರ.ಸ್ವಾತಂತ್ರ್ಯ ಚಳುವಳಿಯ ಹಲವು ಆಯಾಮಗಳಲ್ಲಿ ಇದು ನೀಡಿದ ಕೊಡುಗೆ ಅಪಾರ. 1917 ರಲ್ಲಿ ಡಾ.ಅನಿಬಿಸೆಂಟ್ ಅವರಿಂದ ಸ್ಥಾಪನೆಯಾದ ವಿದ್ಯಾಸಂಸ್ಥೆ ಮೊದಲು ಶಾಲೆಯಾಗಿ ಆರಂಭವಾಗಿ ನಂತರ ಕಾಲೇಜ್ ಮಟ್ಟದಲ್ಲಿ ಬೆಳೆದುನಿಂತಿದ್ದು ವಿಶೇಷ.

ಮಹಾತ್ಮಗಾಂಧೀ ವಿಚಾರಧಾರೆಗಳಿಂದ ಪ್ರೇರೇಪಣೆ ಪಡೆದ ಈ ಶಾಲೆಗೆ ಗಾಂಧೀಜಿ ಹಲವಾರು ಬಾರಿ ಭೇಟಿ ಕೊಟ್ಟಿದ್ದರಂತೆ.ಈ ಐತಿಹಾಸಿಕ ಕಾಲೇಜ್ ಮೈದಾನದಲ್ಲಿಯೇ ಅನೇಕ ಬಾರಿ ಬಾಪೂ  ಭಾಷಣ ಮಾಡಿದ್ರಂತೆ.ಸ್ವಾತಂತ್ರ್ಯ ಚಳುವಳಿಯ ಸಾಕಷ್ಟು ಚಟುವಟಿಕೆಗಳಿಗೆ ಇದೇ ಕೇಂದ್ರಬಿಂದುವಾಗಿತ್ತೆನ್ನುವುದನ್ನು ನೆನಪಿಸಿಕೊಳ್ತಾರೆ ಶಾಲೆಯ ಮುಖ್ಯೋಪಧ್ಯಾಯರು.

1924 ರ ಅಖಿಲ ಭಾರತ ಕಾಂಗ್ರೆಸ್ ಸಮ್ಮೇಳನ ನಡೆದಿದ್ದೇ ಈ ಮೈದಾನದಲ್ಲಿ. ಆ ಸಮ್ಮೇಳನದ ಮುಂದಾಳತ್ವ ವಹಿಸಿದ್ದವರೇ ಮಹಾತ್ಮಗಾಂಧೀ. ಈ ಸಮ್ಮೇಳದಲ್ಲಿ ಪಾಲ್ಗೊಂಡ ಹೆಚ್ಚಿನ ಸ್ವಯಂಸೇವಕರು ಈ ಕಾಲೇಜಿನ ವಿದ್ಯಾರ್ಥಿಗಳೆನ್ನುವುದು ಗಮನಾರ್ಹ. ಖುದ್ದು ಗಾಂಧೀಜಿ ಅವರೇ ಈ ಬೆಳವಣಿಗೆಯನ್ನು ಪ್ರಶಂಶಿಸಿದ್ದರಂತೆ.

ಇನ್ನು 1930 ರಲ್ಲಿ ನಡೆದ “ಉಪ್ಪಿನ ಸತ್ಯಾಗ್ರಹ-ದಂಡಿ ಸತ್ಯಾಗ್ರಹ”ಕ್ಕೂ ಕಾಲೇಜಿನ ಕೊಡುಗೆ ಅಪಾರ. ಇದರಲ್ಲಿ ಪಾಲ್ಗೊಳ್ಳಲು ಇಬ್ಬರು ಉಪನ್ಯಾಸಕರು ಕೆಲಸಕ್ಕೆ ರಾಜಿನಾಮೆ ಕೊಟ್ಟಿದ್ದರಂತೆ. ಬ್ರಿಟಿಷರ ವಿರುದ್ದ ಹೋರಾಡಲು ಆ ಇಬ್ಬರು ಭೂಗತರಾಗಿದ್ದರು.ಕೆ.ವೆಂಕಟರಾಮಯ್ಯ, ಎಚ್ .ಅನಂತರಾವ್ ಎನ್ನುವವರೇ ಆ ಮಹನೀಯರು.ಈ ಪೈಕಿ ಕೆ.ವೆಂಕಟರಾಮಯ್ಯ ಅವರಿಗೆ ಮಹಾತ್ಮಗಾಂಧೀಜಿ ಅವರೇ ಸರ್ದಾರ್ ಎಂಬ ಬಿರುದು ಕೊಟ್ಟು ಸನ್ಮಾನಿಸಿದ್ದರಂತೆ.

THIS BANGLORE’S “GANDHIJI SCHOOL” CONTRIBUTE SO MUCH IN FREEDOM FIGHT..ಇದು “ಬಾಪೂ” ಬಹುವಾಗಿ ಮೆಚ್ಚಿಕೊಂಡ ಶಾಲೆ…ಬೆಂಗಳೂರಿಗೆ ಬಂದಾಗಲೆಲ್ಲಾ “ಮಹಾತ್ಮ” ಪ್ರೀತಿಯಿಂದ ಉಳಿದುಕೊಳ್ತಿದ್ದ ಶಾಲೆ..

 

ಹಾಗೆಯೇ 1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲೂ ಈ ಕಾಲೇಜಿನ ಪಾತ್ರ ದೊಡ್ಡದು. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸಂಗ್ರಾಮದಲ್ಲಿ ಪಾಲ್ಗೊಂಡಿದ್ದರು.ನ್ಯಾಷನಲ್ ಶಾಲೆ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಬ್ರಿಟಿಷರಿಗೆ ತಲೆನೋವಾಗಿತ್ತಂತೆ.ಸುಮಾರು 1 ಕಿಲೋಮೀಟರ್ ಉದ್ದದಷ್ಟು ಕ್ಯೂ ಸೆಂಟ್ರಲ್ ಕಾಲೇಜ್ ನವರೆಗೂ ನಿರ್ಮಾಣವಾಗಿತ್ತಂತೆ.  ಇದೆಲ್ಲಾ ರಾಜ್ಯದ ಗೆಜೆಟಿಯರ್ ನಲ್ಲಿ ಉಲ್ಲೇಖವಾಗಿದೆ.

ಸ್ವಾತಂತ್ರ್ಯ ಚಳುವಳಿ ತಾರಕಕ್ಕೇರಿದ ಸನ್ನಿವೇಶದಿಂದ ಹಿಡಿದು ದೇಶ ಸ್ವಾತಂತ್ರ್ಯ ಪಡೆದ ಸಂದರ್ಭದವರೆಗು ನ್ಯಾಷನಲ್ ಕಾಲೇಜ್ ವಹಿಸಿದ ಪಾತ್ರ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದು.ಆದರೆ ಇದನ್ನು ಸ್ಮರಿಸುವ ಕೆಲಸ ಹೆಚ್ಚಿನ ರೀತಿಯಲ್ಲಿ ಆಗುತ್ತಿಲ್ಲ ಎನ್ನುವುದು ಮಾತ್ರ ಬೇಸರದ ವಿಚಾರ.ಕೇವಲ ಸ್ವಾತಂತ್ರ್ಯ ದಿನಾಚರಣೆಯ ಅಜುಬಾಜಿನಲ್ಲಿ ನ್ಯಾಷನಲ್ ಕಾಲೇಜ್ ಬಗ್ಗೆ ಮಾತನಾಡುವಂತಾಗಿರುವುದು ದುರಾದೃಷ್ಟಕರ.ಸರ್ಕಾರ ಈ ಕಾಲೇಜಿನ ಘಟನಾವಳಿಗಳನ್ನು ಜತನದಿಂದ ಇತಿಹಾಸವಾಗಿ ದಾಖಲಿಸಿಡುವ-ಮುಂದಿನ ಪೀಳಿಗೆಗೆ ಅಮುಲಾಗ್ರ ಮಾಹಿತಿಯಾಗಿ ಸಂರಕ್ಷಿಸಿಡುವ ಜರೂರು ಹೆಚ್ಚಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News