BreakingMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

SAD DEMISE:TECHI DEATH IN BANGLORE.”ದ್ವಜಾರೋಹಣ”ವೇ ಆ “ಟೆಕ್ಕಿ” ಪ್ರಾಣಕ್ಕೆ ಮುಳುವಾಯ್ತಾ..?..“ಆಗಸ್ಟ್ 15” ಇನ್ಮುಂದೆ ಆ ಕುಟುಂಬಕ್ಕೆ ಶಾಶ್ವತವಾದ ನೋವಿನ ದಿನ

ಬೆಂಗಳೂರು/ಕೊಡಗು:75ನೇ ಸ್ವಾತಂತ್ರ್ಯೋತ್ಸವ ಆ ಮನೆಯ ಪಾಲಿಗೆ ಸಂಭ್ರಮದ ದಿನವಾಗಬೇಕಿತ್ತು.ಆದ್ರೆ ಆ ದುರ್ಘಟನೆಯಿಂದ ಇಡೀ ಕುಟುಂಬ ಆಗಸ್ಟ್ 15ರ ಬಂದಾಗ್ಲೆಲ್ಲಾ ಕಣ್ಣೀರಿಡುವಂತೆ  ಮಾಡಿದೆ.

ರಾಷ್ಟ್ರಧ್ವಜ ಹಾರಿಸುವ ಅತ್ಯುತ್ಸಾಹ ಹಾಗೂ ಆತುರದಲ್ಲಿ ತೋರಿದ ಮೈಮರೆವು ಆ ಟೆಕ್ಕಿಯನ್ನು ಮರಳಿಬಾರದ ಲೋಕಕ್ಕೆ ಕಳುಹಿಸಿಬಿಟ್ಟಿದೆ.ದ್ವಜಾರೋಹಣಕ್ಕೆಂದು ಸಿದ್ಧತೆ ಮಾಡಿಕೊಳ್ಳುವ  ವೇಳೆ ಬೆಂಗಳೂರಿನ ಹೆಣ್ಣೂರಿನಲ್ಲಿ ಜಾರಿ ಬಿದ್ದು ಟೆಕ್ಕಿಯೋರ್ವರು ಸಾವನ್ನಪ್ಪಿದ್ದಾರೆ

ಮೂಲತಃ  ಕೊಡಗಿನವರಾದ ವಿಶ್ವಾಸ್ ಕುಮಾರ್ ಸಾವನ್ನಪ್ಪಿದ ದುರಾದೃಷ್ಟವಂತ.ಕೊಡಗಿನಲ್ಲಿ ಹುಟ್ಟಿ ಸುಳ್ಯ ದಲ್ಲಿ ಹಲವು ವರ್ಷ ನೆಲೆಸಿ ನಂತರ ಬೆಂಗಳೂರಿನಲ್ಲಿ ವಿಶ್ವಾಸ್ ಕುಮಾರ್ ಕೆಲಸ ಮಾಡುತ್ತಿದ್ದರು.

ಬೆಂಗಳೂರಿನಲ್ಲಿ ತಾವು ವಾಸಿಸುತ್ತಿದ್ದ ಹೆಣ್ಣೂರಿನ ಕಟ್ಟಡದ ಎರಡನೇ ಮಹಡಿಯ ಟೆರೇಸ್‍ನಲ್ಲಿ ರಾಷ್ಟ್ರಧ್ವಜ ಹಾರಿಸುವ ವೇಳೆ ಅವರು ಜಾರಿ ಬಿದ್ದು ಮೃತಪಟ್ಟಿದ್ದಾರೆ.ವಿಶ್ವಾಸ್ ಕುಮಾರ್ ಅವರು ಅರ್ಚಕ ನಾರಾಯಣ ಭಟ್ ಎಂಬವರ ಪುತ್ರ.

ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಅವರು ರಾಷ್ಟ್ರಧ್ವಜ ಹಾರಿಸುವ ಸಲುವಾಗಿ ಟೆರೆಸ್ ಗೆ ಹೋಗಿದ್ದರು. ಪತ್ನಿ ವೈಶಾಲಿ ಹಾಗೂ ಎರಡು ವರ್ಷದ ಮಗಳು ಮತ್ತು ಪೋಷಕರ ಜತೆ ವಾಸವಾಗಿದ್ದ ಎರಡನೇ ಮಹಡಿಯಲ್ಲಿ ರಾಷ್ಟ್ರದ್ವಜ ಹಾರಿಸಲು ಹೋಗಿದ್ದರು.

ಟೆರೇಸ್‍ನ ಅಡ್ಡಗೋಡೆಯನ್ನು ಏರಿ ಧ್ವಜ ಹಾರಿಸುವ ಸಲುವಾಗಿ ಕೋಲು ಕಟ್ಟಲು ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಜಾರಿ ನೆಲಕ್ಕೆ ಬಿದ್ದರು.“ನಾರಾಯಣ ಭಟ್ ಹಾಗೂ ವೈಶಾಲಿ ತಕ್ಷಣ ವಿಶ್ವಾಸ್ ಅವರನ್ನು ಆಸ್ಪತ್ರೆಗೆ ಸಾರಿಸಿದರೂ, ತಲೆಗೆ ಆಗಿದ್ದ ಗಂಭೀರ ಗಾಯದಿಂದಾಗಿ ಅವರು ಮೃತಪಟ್ಟರು” ಎಂದು ಪೊಲೀಸರು ಹೇಳಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News