BreakingMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯರಾಜ್ಯ-ರಾಜಧಾನಿ

75TH INDIPENDENCE DAY CELEBRATION IN KSRTC: KSRTC ಪಾಲಿಗೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸ್ಮರಣೀಯ-“ಬನಶಂಕರಿ” ವಾಹನಕ್ಕೂ 75ರ ಸಂಭ್ರಮ.

ಬೆಂಗಳೂರು:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ    ಕೇಂದ್ರ ಕಚೇರಿಯಲ್ಲಿ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಅಚರಿಸಲಾಯಿತು.ಇಡೀ ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವವೆಂಬ ಹೆಗ್ಗಳಿಕೆಯನ್ನು ಹೊಂದಿದೆ. ತಮ್ಮ ಪ್ರಾಣವನ್ನು ದೇಶಕ್ಕಾಗಿ ತ್ಯಾಗ ಮಾಡಿದ ವೀರ ಸ್ವಾತಂತ್ರ್ಯಯೋಧರ ಧೈರ್ಯ ಹಾಗೂ ಬಲಿದಾನವನ್ನು ನೆನಪಿಸಿಕೊಳ್ಳುವ ಮತ್ತು ಅವರ ಅವಿರತ ಹೋರಾಟದ ಕಾರಣದಿಂದ ದಾಸ್ಯದ ಸಂಕೋಲೆಯಿಂದ ಬಿಡುಗಡೆಯಾದ ಮಹತ್ವದ ದಿನದ ಸಂಭ್ರಮ ಇದಾಗಿದೆ ಎಂದರು.

ಭಾರತೀಯರಲ್ಲಿ ದೇಶಪ್ರೇಮ ಹಾಗೂ ರಾಷ್ಟ್ರೀಯತೆ ರಕ್ತಗತವಾಗಿ ಬಂದಿದೆ. ನಮ್ಮ ದೇಶವು ಎಲ್ಲ ರೀತಿಯ ಜನರು, ಸಂಸ್ಕೃತಿ, ಆಚರಣೆಗಳ ಶ್ರೀಮಂತ ನೆಲೆವೀಡಾಗಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ, ಗೌರವಿಸುವ ಸಂದರ್ಭ ಇದಾಗಿದೆ.ಕೋವಿಡ್ ಸಂದರ್ಭದಲ್ಲಿ ನಿಗಮವು ಅನುಭವಿಸುತ್ತಿದ್ದ ಆರ್ಥಿಕ ತೊಂದರೆಯಿಂದ ಕಳೆದೆರಡು ವರ್ಷಗಳಲ್ಲಿ ಯಾವುದೇ ರೀತಿಯ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಿಬ್ಬಂದಿಗಳಿಗೆ ಏರ್ಪಡಿಸಲಾಗಿರಲಿಲ್ಲ. ಆದರೆ ಪ್ರಸ್ತುತ ವರುಷದಲ್ಲಿ ಘಟಕ ಮಟ್ಟದಲ್ಲಿಯೂ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಎಂದು ವಿವರಿಸಿದರು.

ಸಿಬ್ಬಂದಿಗಳು ಆಹ್ಲಾದಕರ ವಾತಾವರಣದಲ್ಲಿ ಕೆಲಸ ಮಾಡಿದರೆ ನಿಗಮದ ಉತ್ಪಾದಕತೆಯು ಅಭಿವೃದ್ಧಿ ಹೊಂದುತ್ತದೆ. ಅವರುಗಳೊಡನೆ ಅತೀ ಹೆಚ್ಚು ಸಮಯ ಕಛೇರಿಯಲ್ಲಿ ಕಾರ್ಯ ನಿರ್ವಹಿಸುವುದರಿಂದ ಸಿಬ್ಬಂದಿಗಳೊಡನೆ ಒಡನಾಟ ಸೌಹಾರ್ದತೆಯಿಂದ ಕೂಡಿರುವುದಕ್ಕೆ ಈ ರೀತಿಯ ಕಾರ್ಯಕ್ರಮಗಳು ಪೂರಕವಾಗಲಿದೆ.ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಿಗಮದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವಿವಿಧ  ಸಾಂಸ್ಕೃತಿಕ ಹಾಗೂ ಕ್ರೀಡೆಗಳನ್ನು ಹಮ್ಮಿಕೊಂಡಿದ್ದು, ಸ್ಪರ್ಧೆಯಲ್ಲಿ ವಿಜೇತರಾದ ಅಧಿಕಾರಿ,ಸಿಬ್ಬಂದಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ನಿಗಮದ ಆಂತರಿಕ ನಿಯತಕಾಲಿಕವಾದ ‘ಸಾರಿಗೆ ಸಂಪದ’ ಮುದ್ರಿತ ಪ್ರತಿಗಳನ್ನು ಕೋವಿಡ್ ಕಾರಣದಿಂದ ಸ್ಥಗಿತಗೊಳಿಸಲಾಗಿದ್ದು, ನಿಗಮದಲ್ಲಿನ ಎಲ್ಲಾ ವಿದ್ಯಮಾನಗಳು ಪ್ರತಿಯೊಬ್ಬ ಸಿಬ್ಬಂದಿಗೂ ತಲುಪಬೇಕಾಗಿರುವ ಅವಶ್ಯಕತೆಯನ್ನು ಮನಗೊಂಡು, ವ್ಯವಸ್ಥಾಪಕ ನಿರ್ದೇಶಕರು ಸಾರಿಗೆ ಸಂಪದದ ಮುದ್ರಣವನ್ನು ಪುನರಾಂಭಿಸಿ, 75 ನೇ ಸ್ವಾತಂತ್ರ್ಯದ ವಿಶೇಷ ಆವೃತ್ತಿಯನ್ನು ಇಂದು ಬಿಡುಗಡೆ ಮಾಡಲಾಯಿತು.

ಸಂಸ್ಥೆಯ ಮೊದಲನೇ ವಾಹನವಾದ ‘ಶ್ರೀ ಬನಶಂಕರಿ ಬಸ್’ ಸಹ ಈ ವರ್ಷ ತನ್ನ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಇದನ್ನು ನಿಗಮದ ಆರಂಭದ ವಾಹನದ ಕುರುಹಾಗಿ ಕೇಂದ್ರ ಕಛೇರಿಯ ಮುಂದೆ ನಿಲ್ಲಿಸಲಾಗಿರುವುದು  ಹೆಮ್ಮೆಯ ವಿಷಯ ಎಂದರು.ಕಾರ್ಯಕ್ರಮದಲ್ಲಿ ಬಿ ಎಂ.ಟಿ ಸಿ ಯ  ಶ್ರೀಮತಿ ಜಿ. ರಾಧಿಕ,  ಸೂರ್ಯ ಸೇನ್,  ಸಿಬ್ಬಂದಿ ಮತ್ತು ಜಾಗೃತ ನಿರ್ದೇಶಕರಾದ, ಡಾ. ನವೀನ್ ಭಟ್ ವೈ ಭಾಗವಹಿಸಿದ್ದರು.

ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿದೇಶಕರಾದ ವಿ. ಅನ್ಬುಕುಮಾರ್,  ರಾಷ್ಟ್ರ ಧ್ವಜ ಆರೋಹಣ ಮಾಡಿದರು.ಇದೇ ವೇಳೆ ಮಹಾತ್ಮ ಗಾಂಧಿಜೀ, ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ  ಸಂಗೊಳ್ಳಿ ರಾಯಣ್ಣ ರವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.

Spread the love

Related Articles

Leave a Reply

Your email address will not be published.

Back to top button
Flash News