BreakingMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿರಾಜಕೀಯ

NEW RECORD BY KARNATAKA’S “SPIDERMAN” JYOTHIRAJ..ವಿಶ್ ಯು ಹ್ಯಾಪಿ ಬರ್ತ್ ಡೇ…ಹುಟ್ಟುಹಬ್ಬದಂದೇ ಕರ್ನಾಟಕದ “ಸ್ಪೈಡರ್ ಮ್ಯಾನ್” ನಿಂದ ಐತಿಹಾಸಿಕ ದಾಖಲೆ

*ಜ್ಯೊತಿರಾಜ್ ನಿಂದ ಸ್ವಾತಂತ್ರ್ಯೋತ್ಸವದಂದೇ ಐತಿಹಾಸಿಕ ಸಾಧನೆ *ಹೊಸಪೇಟೆಯ ಅತೀ ಎತ್ತರದ ಕಂಬವನ್ನೇರಿದ ಜ್ಯೊತಿರಾಜ್  *ಆಗಸ್ಟ್ 15 ,ಜ್ಯೊತಿರಾಜ್ ಅವರ ಹುಟ್ಟುಹಬ್ಬ

*ಕರ್ನಾಟಕದ ಅತೀ ಎತ್ತರದ ಕಂಬವನ್ನೇರಿದ ಸಾಧನೆ  *ಸ್ವಾತಂತ್ರ್ಯೋತ್ಸವವನ್ನು ಸ್ಮರಣೀಯಗೊಳಿಸಿದ ಜ್ಯೋತಿರಾಜ್  * ವಿಶಿಷ್ಟ ಸಾಧನೆ ಮೂಲಕ ಗಮನ ಸೆಳೆಯುವ ಜ್ಯೋತಿರಾಜ್

ವಿಜಯನಗರ/ಹೊಸಪೇಟೆ: ಕೋತಿರಾಜ್….ಜ್ಯೊತಿರಾಜ್…ಕರ್ನಾಟಕದ ಸ್ಪೈಡರ್ ಮ್ಯಾನ್…ಸದಾ ಕುತೂಹಲದ ವ್ಯಕ್ತಿತ್ವ..ಒಂದಿಲ್ಲೊಂದು ಸಾಧನೆಗಳಿಂದ ಸುದ್ದಿಯಲ್ಲಿರುತ್ತಿದ್ದ  ಈ ಸ್ಪೈಡರ್ ಮ್ಯಾನ್ ಇತ್ತೀಚಿನ ವರ್ಷಗಳಲ್ಲಿ ಅದ್ಹೇಕೋ ಸುಮ್ಮನಾಗಿಬಿಟ್ಟಿದ್ದರು.ಅದೇನಾಯ್ತಪ್ಪ ಎಂದು ಜನ ತಲೆಕೆಡಿಸಿಕೊಂಡು ಹುಡುಕೊಕ್ಕೆ ಶುರುವಿಟ್ಟುಕೊಳ್ಳಬೇಕೆನ್ನುವಷ್ಟರಲ್ಲೇ ಮಹಾನುಭಾವ ಕೋಟೆ ನಾಡು ಚಿತ್ರದುರ್ಗದಿಂದ ಗಣಿನಾಡು ಬಳ್ಳಾರಿಯತ್ತ ಹೆಜ್ಜೆ ಹಾಕಿ ಎಲ್ಲರ ಕುತೂಹಲ ಮೂಡಿಸಿದ್ದಾರೆ.

ಜ್ಯೋತಿರಾಜ್ ಕೈಯಲ್ಲಿ ಆಗದ ಸಾಧನೆಗಳೇ ಇಲ್ಲ..ಅಂದುಕೊಂಡಿದ್ದನ್ನು ಎಷ್ಟೇ ಕಷ್ಟವಾದರೂ ಪರ್ವಾಗಿಲ್ಲ,ಅದನ್ನು ಮಾಡಿಯೇ ತೀರುವ ಹಠವಾದಿ ಆತ.ಇಂಥ ಪ್ರತಿಭಾನ್ವಿತ ಹಾಗೂ ಸಾಧಕ ನಮ್ಮ ರಾಜ್ಯವನ್ನು ಬಿಟ್ಟು ಬೇರೆಡೆಯಲ್ಲಿಯಾದರೂ ಇದ್ದಿದ್ದರೆ ಇವತ್ತು ಆತನನ್ನು  ಎಲ್ಲಿಯೋ ಇಟ್ಟು ಗೌರವಿಸಿಬಿಡುತ್ತಿದ್ದರೇನೋ,.,ಆದರೆ ಹಿತ್ತಲಗಿಡ ಮದ್ದಲ್ಲ ಎನ್ನುವಂತೆ ಇನ್ನೂ ಪ್ರೋತ್ಸಾಹ-ಸಹಾಯದ ನಿರೀಕ್ಷೆಯಲ್ಲೇ ಈ ವ್ಯಕ್ತಿ ಜೀವನ ಕಳೆಯುತ್ತಿದ್ದಾರೆ..ಇದು ನಮ್ಮ ದುರಾದೃಷ್ಟ..

NEW RECORD BY KARNATAKA’S “SPIDERMAN” JYOTHIRAJ..ವಿಶ್ ಯು ಹ್ಯಾಪಿ ಬರ್ತ್ ಡೇ…ಹುಟ್ಟುಹಬ್ಬದಂದೇ ಕರ್ನಾಟಕದ “ಸ್ಪೈಡರ್ ಮ್ಯಾನ್” ನಿಂದ ಐತಿಹಾಸಿಕ ದಾಖಲೆ.. 

ಈಗ ನಾವು ಹೇಳಕ್ಕೆ ಹೊರಟಿರುವ ಸಂಗತಿ..ನಿಜಕ್ಕೂ ವಿಶೇಷ..ಸದಾ ಸಾಧನೆಗಳಿಂದ ಸುದ್ದಿಯಲ್ಲಿರಬೇಕೆಂದು ಬಯಸುವ ಜ್ಯೋತಿರಾಜ್ ಕೋಟೆನಾಡನ್ನು ಬಿಟ್ಟು ಹೊಸಪೇಟೆಯಲ್ಲಿ ಪ್ರತ್ಯಕ್ಷರಾಗಿ ಹುಬ್ಬೇರಿಸುವಂತೆ ಮಾಡಿದ್ದಾರೆ.ಈ ಬಾರಿ ಅವರು ಬಂದಿರುವುದು ಮತ್ತೊಂದು ಸಾಧನೆಗೆ.ಅವರೇ ಹೇಳಿಕೊಂಡಿರುವಂತೆ ಆಗಸ್ಟ್ 15 ಅವರ ಹುಟ್ಟುಹಬ್ಬವಂತೆ.ಈ ಬರ್ತ್ ಡೇ ಮೆಮರೋಬಲ್ ಆಗಿ ಮಾಡಿಕೊಳ್ಳಬೇಕೆನ್ನುವ ಉದ್ದೇಶದಿಂದ ಹೊಸಪೇಟೆಗೆ ಬಂದಿದ್ದಾರೆ.ಅಲ್ಲಿಯೂ ಒಂದು ಸಾಧನೆ ಮಾಡಿದ್ದಾರೆ.ಹಾಗೆಯೇ ಜನರ ಶುಭಹಾರೈಕೆ ಬಯಸಿದ್ದಾರೆ.

ಹೊಸಪೇಟೆಯಲ್ಲೇ ಅತ್ಯಂತ ಎತ್ತರದ 405 ಅಡಿ ಎತ್ತರದ ದ್ವಜ ಸ್ತಂಬವನ್ನು ಜ್ಯೊತಿರಾಜ್ ಹತ್ತಿದ್ದಾರೆ.ಈ ದ್ವಜಸ್ತಂಬ 80 ಅಡಿ ಉದ್ದ 120 ಅಡಿ ಅಗಲದ ದ್ವಜವನ್ನ ಹೊಂದಿದ್ದು, ಈ ಬೃಹತ್ ದ್ವಜ ಹಾರಾಡಲು ತಂತ್ರಜ್ಞರು ಹಗಲು ರಾತ್ರಿ ಎನ್ನದೆ ಶ್ರಮವಹಿಸಿ ಯಶಸ್ವಿಯಾಗಿದ್ದಾರೆ.

ದೇಶದ ಇತಿಹಾಸದಲ್ಲೇ ವಿಜಯನಗರ ಜಿಲ್ಲೆಯಲ್ಲಿ ಅತೀ ಎತ್ತರದ ದ್ವಜ ಸ್ಥಂಬ ನಿರ್ಮಾಣವಾಗಿರುವುದು ದಾಖಲೆ.ಇದು ಆನಂದ್ ಸಿಂಗ್ ಅವರ ಕನಸು ಹಾಗೂ ಮಹತ್ವಾಕಾಂಕ್ಷೆ.ಎಲ್ಲೇ ನಿಂತರೂ ಈ ದ್ವಜ ಕಾಣಿಸುತ್ತದೆ.ಹೆಮ್ಮೆ ಮೂಡುತ್ತದೆ.ಈ ದ್ವಜಕಂಬವನ್ನು ಜನ್ಮ ದಿನದಂದೇ ಹತ್ತಿದ್ದಾರೆ.ಇದನ್ನು ಏರುವ ಧೈರ್ಯ ಮಾಡಿದ ಅಷ್ಟೇ ಅಲ್ಲ ಅದರಲ್ಲಿ ಯಶಸ್ವಿಯೂ ಆದ ಹೆಗ್ಗಳಿಕೆ ಜ್ಯೋತಿರಾಜ್ ದ್ದು. ಜ್ಯೋತಿರಾಜ್ ಹುಟ್ಟುಹಬ್ಬಕ್ಕೆ ಕನ್ನಡ ಫ್ಲ್ಯಾಶ್ ನ್ಯೂಸ್ ಶುಭ ಹಾರೈಸುತ್ತದೆ.ರಾಜ್ ಅವರಿಂದ ಮತ್ತಷ್ಟು ಸಾಧನೆ ಬರುವಂತಾಗಲಿ ಎಂದು ಆರೈಸುತ್ತದೆ.

Spread the love

Related Articles

Leave a Reply

Your email address will not be published.

Back to top button
Flash News