BreakingMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿಸಿನೆಮಾ ಹಂಗಾಮ

“VANDEMATARAM” PATRIOTIC SONG CREATE CONTROVERSY…?! :ವಿವಾದದ “ಕಿಚ್ಚು” ಹೊತ್ತಿಸಿದ “ವಂದೇಮಾತರಂ” ವೀಡಿಯೋ..?!

ಬೆಂಗಳೂರು: ದೇಶ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ.ಸಾರ್ವಭೌಮತೆಯ ಸಂಕೇತವಾದ ಸ್ವಾತಂತ್ರ್ಯೋತ್ಸವ ಜಾತ್ಯಾ ತೀತ-ಪಕ್ಷಾತೀತವಾಗಿ ಆಚರಿಸಲ್ಪಡಬೇಕು ಎನ್ನುವುದು ಸ್ವಾತಂತ್ರ್ಯವನ್ನು ಬಳುವಳಿಯಾಗಿ ಕೊಟ್ಟಿ ಹೋದವರ ಆಸೆ-ಇರಾದೆ ಯಾಗಿತ್ತು..ಆದ್ರೆ ವಿಚಾರ-ಆಚರಣೆಗಳ ನಡುವಿನ ಸಂಘರ್ಷ ಮಾತ್ರ ನಮ್ಮ ನಡುವಿನ ಅಸಮಾನತೆಯನ್ನು ಹೋಗಲಾ ಡಿಸಿಯೇ ಇಲ್ಲ..ಇದಕ್ಕೆ ಮತ್ತೊಂದು ಉದಾಹರಣೆಯಾಗಿ ತೀವ್ರ ಚರ್ಚೆ ಹುಟ್ಟಾಕಿದೆ “ವಂದೇಮಾತರಂ” ವೀಡಿಯೋ…

ವಿವಾದದ “ಕಿಚ್ಚು” ಹೊತ್ತಿಸಿದ “ವಂದೇಮಾತರಂ” ವೀಡಿಯೋ..?!ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರನ್ನು ಮರೆತ ವೀಡಿಯೋದಲ್ಲಿ ಕಿಚ್ಚ-ಶಿವಣ್ಣ ನಟನೆಗೆ ಅಭಿಮಾನಿಗಳ ಆಕ್ರೋಶ. 

ಸಂವಾದ ಎನ್ನುವಂಥ ಸಂಸ್ಥೆ ಬಹುಷಃ ಇದರ ನಿರ್ಮಾಣ ಮಾಡಿರಬೇಕೆನಿಸುತ್ತದೆ,4;38 ನಿಮಿಷಗಳ ಈ ವೀಡಿಯೋ ನೋಡೊ ಕ್ಕೆ ಅತ್ಯದ್ಭುತವಾಗಿದೆ.ಗಾಯನ-ಸಂಗೀತ ಕೇಳೊ ಕಿವಿಗು ಇಂಪೆನಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಆದ್ರೆ ವೀಡಿಯೋ ದಲ್ಲಿ ಬಳಕೆಯಾಗಿರುವ ಒಂದೆರೆಡು ಸಂಗತಿಗಳು ಇದು “ಪೂರ್ವಾಗ್ರಹಪೀಡಿತ-ಒಂದು ವಿಚಾರದ ಸಂಭ್ರಮೋತ್ಸವ” ಅಷ್ಟೇ ಎನ್ನುವ ಅನುಮಾನ ಮೂಡಿಸದೆ ಇರೊಲ್ಲ.

ವಂದೇ ಮಾತರಂ ಹಾಡನ್ನು ಅತ್ಯಂತ ಸುಂದರ-ಅದ್ಭುತವಾಗಿಯೇನೋ ರೂಪಿಸಲಾಗಿದೆ.ಆದರೆ ಅದರಲ್ಲಿ ಬಳಕೆಯಾಗಿರುವ ಸಂಗತಿಗಳನ್ನು ಗಮನಿಸಿದ್ರೆ ಇದು ಆರ್ ಎಸ್ ಎಸ್ ವಿಚಾರಗಳಲ್ಲಿ ನಂಬಿಕೆ ಇಟ್ಟವರಿಗೆಂದೇ ರೂಪಿಸಲಾಗಿದೆ ಎನಿಸುತ್ತದೆ.ಎಲ್ಲಾ ಭಾರತೀಯರನ್ನು ಸಮಗ್ರವಾಗಿಟ್ಟುಕೊಂಡು ವೀಡಿಯೋವನ್ನು ನಿರ್ಮಿಸಲಾಗಿಲ್ಲ ಎನ್ನುವ ಮಾತು ಈಗಾಗಲೇ ಎಲ್ಲರಿಂದಲೂ ಕೇಳಿಬರಲಾರಂಭಿಸಿದೆ.

ಪ್ರವೀಣ್ ಗೋಡ್ಖಿಂಡಿ ಅವರ ಸುಂದರ ನಿರ್ದೇಶನದಲ್ಲಿ ಮೂಡಿಬಂದಿರುವ ವೀಡಿಯೋ ಕಿಚ್ಚ ಸುದೀಪ್ ಅವರಿಂದ ತೆರೆದು ಕೊಳ್ಳುತ್ತದೆ.

ಇದೆಲ್ಲಾ ಬೇಕಿತ್ತಾ..?

ಕಲಾವಿದರು ಜಾತ್ಯಾತೀತರು-ಧರ್ಮಾತೀತರಾಗಿರಬೇಕು .ಆದರೆ ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಯಾವತ್ತೂ ಹೋಗಬಾರದು. ವಂದೇಮಾತರಂ ವೀಡಿಯೋದಲ್ಲಿ ಆಗಿರುವುದು ಅದೇ.ಕಿಚ್ಚ ಸುದೀಪ್ ವೀಡಿಯೋ ಆರಂಭ ದಲ್ಲೇ ಒಂದಷ್ಟು ಫೋಟೋಗಳ ಮೇಲೆ ಕೈ ಯಾಡಿಸುವ ದೃಶ್ಯವಿದೆ.ಆ ದೃಶ್ಯಗಳಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರೆಲ್ಲಾ ಬಲಪಂಥೀಯ ವಿಚಾರಧಾರೆಗಳಿಗೆ ಸೇರಿದವರು.ಅದರಲ್ಲಿ ಅನೇಕ ಮಹನೀಯರನ್ನು ಕೈ ಬಿಡಲಾಗಿದೆ.ಸುದೀಪ್ ಅವರಂಥ ಅದ್ಭುತ ನಟನಿಗೆ ತಾನು ಮಾಡುತ್ತಿರುವುದು ಸರಿ ಎಂದು ಅನಿಸಿದ್ರೆ ಅದು ದುರಾದೃಷ್ಟಕರ.ನಾಳೆ ಇದು ಪ್ರಶ್ನೆಗೆ ಈಡಾಗಬಹುದೆನ್ನುವ ಪರಿಜ್ಞಾನ ಅವರಿಗಿರಲಿಲ್ಲವೇ..? ಆ ಫೋಟೋ ಗಳಲ್ಲಿ ಅನೇಕರ ಫೋಟೋಗಳು ಬಿಟ್ಟೋಗಿವೆಯೆಲ್ಲಾ ಅದ್ಹೇಕೆ ಎಂದು ಪ್ರಶ್ನಿಸುವ ಗೋಜಿಗೂ ಸುದೀಪ್ ಏಕೆ ಹೋಗಲಿಲ್ಲವೋ ಗೊತ್ತಾಗುತ್ತಿಲ್ಲ.                -ಶಿವರಾಜ್-ಸಾಮಾಜಿಕ ಕಾರ್ಯಕರ್ತ

ಇದರಲ್ಲಿ   ಚಿತ್ರನಟರಾದ ಶಿವರಾಜಕುಮಾರ್, ಸುದೀಪ್, ರವಿ ಚಂದ್ರನ್,ಜಗ್ಗೇಶ್,ಚಿರಂಜೀವಿ ಸರ್ಜಾ, ಶ್ರೀಮರುಳಿ, ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್,ರಮೇಶ್ ಅರವಿಂದ್, ಅನಂತನಾಗ್, ಅರ್ಜು ನ್ ಸರ್ಜಾ,ಜೋಗತಿ ಮಂಜಮ್ಮ,ಸಾಲುಮರದ ತಿಮ್ಮಕ್ಕ,ವೃಷಭ್ ಶೆಟ್ಟಿ ಅವರುಗಳು ಅಭಿನಯಿಸಿದ್ದಾರೆ.ನಾಗರಿಕರಾಗಿ ತಮ್ಮ ಜವಾ ಬ್ದಾರಿಯನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆನ್ನುವುದರ ಲ್ಲಿ ಎರಡು ಮಾತಿಲ್ಲ.

ಆದರೆ ಪ್ರಶ್ನೆ ಅದಲ್ಲ,ವೀಡಿಯೋದಲ್ಲಿ ಕೇವಲ ಆರ್ ಎಸ್ ಎಸ್ ಸಿದ್ಧಾಂತಗಳನ್ನು ಬಲವಂತವಾಗಿ ತುಂಬಲಾಗಿದೆ ಎನ್ನುವ ಆಪಾದನೆ ಕೇಳಿಬಂದಿದೆ.ಸಂವಾದ ಹೇಳಿಕೇಳಿ ಬಲಪಂಥೀಯ ವಿಚಾರಗಳ ವೇದಿಕೆ.ಹಿಂದುತ್ವ-ಆರ್ ಎಸ್ ಎಸ್ ವಿಚಾರಧಾರೆ ಗಳೇ ಅದರ ಜೀವಾಳ. ಆ ಸಂಸ್ಥೆ ರೂಪಿಸಿರುವ ಈ ವೀಡಿಯೋದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾಪುರುಷರನ್ನೇ ಕೈಬಿಡಲಾಗಿದೆ.

ವಂದೇ ಮಾತರಂ ಆರ್ ಎಸ್ ಎಸ್ ನ ಹಾಡು..

ಅದು ಕೇವಲ ಒಂದು ವಿಚಾರಧಾರೆಯನ್ನು ನಂಬುವಂಥವರಿಗೆಂದೇ ಮಾಡಲಾದ ಹಾಡು.ಆದ್ರೆ ಆ ಹಾಡಿಗೆ ಕನ್ನಡದ ಕಲಾವಿದರನ್ನು ಬಳಸಿಕೊಳ್ಳುವ ಮೂಲಕ ಪ್ರಚಾರದ ಬಹುತೇಕ ಗಿಮಿಕ್ ಮಾಡಿದೆ ಸಂವಾದ ತಂಡ.ಈ ವಿಡಿಯೋದಲ್ಲಿ ಆಕ್ಟ್ ಮಾಡಲು ಕಲಾವಿದರು ದುಡ್ಡು ಪಡೆದಿದ್ದಾರೋ..? ಅಥವಾ ದೇಶಭಕ್ತಿ ಕಾರಣಕ್ಕೆ ಫ್ರೀಯಾಗಿ ಮಾಡಿದ್ದಾರೋ ಗೊತ್ತಾಗ್ತಿಲ್ಲ.ಆದ್ರೆ ವಿವಾದಕ್ಕೆ ತುತ್ತಾಗಬಹುದಾದ ಇಂತದ್ದೊಂದು ವೀಡಿಯೋದ ಭಾಗವಾಗುವುದು ಸರಿಯೋ..ತಪ್ಪೋ ಎನ್ನುವ ವಿಮರ್ಷೆ ಮಾಡದೇ ಹೋದದ್ದು ಮಾತ್ರ ದುರಾದೃಷ್ಟಕರ.

                                                                            -ಶಿವಕುಮಾರ ನಾಯ್ಕ-ಕನ್ನಡಪರ ಹೋರಾಟಗಾರ

ಇಂತದ್ದೊಂದು ವೀಡಿಯೋದಲ್ಲಿ ಕಿಚ್ಚ ಸುದೀಪ್ ಅವರಂಥವರು ಅಭಿನಯಿಸಿದ್ದರ ಬಗ್ಗೆಯೂ ಈಗ ಆಕ್ರೋಶ ವ್ಯಕ್ತವಾಗಿದೆ.ಜಗ್ಗೇಶ್ ಹೇಳಿಕೇಳಿ ಬಿಜೆಪಿಯಿಂದ ರಾಜ್ಯಸಭೆಗೆ ನಾಮನಿರ್ದೇಶಿತಗೊಂಡಿದ್ದಾರೆ. ಅವರಿಗೆ ಅದು ಅನಿವಾರ್ಯವಾಗಿರಬಹುದು.ಆದ್ರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್,ಶ್ರೀಮುರುಳಿ,ರವಿಚಂದ್ರನ್ ಅವರಂಥವರು ಅಭಿನಯಿಸಿದ್ದು ಕೂಡ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಯಾವುದೇ ಪಕ್ಷ ಬರಲಿ, ತ್ರಿವರ್ಣದ್ವಜ ಸಿದ್ಧವಾಗುವ ಖಾದಿಯನ್ನೇ ಎಲ್ಲರೂ ಬೆಂಬಲಿಸಬೇಕು.ಆದರೆ ಬಿಜೆಪಿ ಸರ್ಕಾರ ಈ ಬಾರಿ ಮಾಡಿದ್ದೇನು.ಖಾದಿಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿ ಪಾಲಿಸ್ಟರ್ ದ್ವಜಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.ಇದು ಇಡೀ ಭಾರತಕ್ಕೆ ತಿಳಿದ ವಿಚಾರ.ಆದ್ರೆ ಈ ವೀಡಿಯೋದಲ್ಲಿ ಖಾದಿಯಲ್ಲಿ ಸಿದ್ಧವಾಗಿರುವ ತ್ರಿವರ್ಣದ್ವಜವನ್ನು ಹಿಡಿದು ಜಗ್ಗೇಶ್ ಬರುವಂತದ್ದು ಕೂಡ ಬಿಜೆಪಿಯ ಧೋರಣೆಯನ್ನೇ ಅಣಕವಾಡಿದಂತಿದೆಯಂತೆ.

ಮಾತನಾಡುವುದು ಖಾದಿ ಬಗ್ಗೆ,ಬಿಂಬಿಸುವುದು ಕೂಡ ಅದೇ ವಿಚಾರಗಳನ್ನು.ಆದ್ರೆ ವಾಸ್ತವದಲ್ಲಿ ನಡೆದುಕೊಳ್ಳುವ ರೀತಿ ಮಾತ್ರ ವಿರುದ್ಧ ಎಂದಾದರೆ ಅದು  ಹಾಸ್ಯಾಸ್ಪದದಂತೆ ಭಾಸವಾಗುತ್ತದೆ.

ಈ ವೀಡಿ ಯೋ ದಲ್ಲಿ ಜಗ್ಗೇಶ್ ಮಹಿಳೆಯಿಂದ ಗೌರವಯುತವಾಗಿ ರಾಷ್ಟ್ರದ್ವಜವನ್ನು ತರುವಾಗ ಪಾಲಿಸ್ಟರ್ ಉತ್ಪಾದಿತ ತ್ರಿವರ್ಣದ್ವಜ ನೆನಪಾಗುತ್ತದೆ ಬಿಜೆಪಿಯ ದ್ವಂದ್ವ ಧೋರಣೆಯ ಪ್ರತೀಕದಂತಿದೆ ಈ ಬೆಳವಣಿಗೆ ಎನ್ನುವುದು ಅನೇಕರ ಅಭಿಪ್ರಾಯ.

ಹಾಗೆಯೇ ಕಿಚ್ಚ ಸುದೀಪ್ ನವಿರಾಗಿ ಕೈಯಾಡಿಸುವ ಚಿತ್ರಪಟಗಳಲ್ಲಿ ಆರ್ ಎಸ್ ಎಸ್ ಬೆಂಬಲಿತ ಹೋರಾಟಗಾರರನ್ನು ಬಿಟ್ಟರೆ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಎಷ್ಟೋ ಹೀರೋಗಳನ್ನೇ ನಿರ್ಲಕ್ಷ್ಯಿಸಿದಂತೆ ತೋರುತ್ತದೆ.

ಸುದೀಪ್ ಅವರಂಥ ಪ್ರಬುದ್ಧ ನಟ ಒಂದು ಸಿದ್ದಾಂತಕ್ಕೆ ಬದ್ಧವಾದ ಸಮುದಾಯದ ವಿಚಾರಗಳನ್ನು ಬೆಂಬಲಿಸಿದಂತೆ ನಟಿಸಿರುವುದು ಸ್ಚಾತಂತ್ರ್ಯ ಹೋರಾಟವನ್ನು ಒಂದು ಸಮಗ್ರ ಹೋರಾಟವಾಗಿ ನೋಡುವ ಬಹುಸಂಖ್ಯಾತರನ್ನು ಆಕ್ರೋಶಕ್ಕೀಡುಮಾಡಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಒಟ್ಟಿನಲ್ಲಿ ಸಂವಾದ ರೂಪಿಸಿರುವ ಹಾಡು ಕಣ್ಣಿಗೆ ಹಬ್ಬದಂತೆ ವಿಜೃಂಭಿಸುತ್ತದೆ.ಸಂಗೀತ ಕಿವಿಯನ್ನು ತುಂಬುತ್ತದೆ.ಆದರೆ ಅದರ ಉದ್ದೇಶ ಮಾತ್ರ ಬಹುಸಂಖ್ಯಾತರ ದೃಷ್ಟಿಯಿಂದ ತೀವ್ರ ಚರ್ಚೆ-ವಿವಾದ ಹುಟ್ಟಾಕಿರುವುದು ಮಾತ್ರ ವಿಪರ್ಯಾಸ.

Spread the love

Related Articles

Leave a Reply

Your email address will not be published.

Back to top button
Flash News