ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ತನಿಖೆಗೆ ಆದೇಶಿಸಿದ್ರೆ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣರೇ ಅಂದರ್!

0

ತುಮಕೂರು:ಮೈತ್ರಿ ಸರ್ಕಾರದ ವಿರುದ್ಧ ಸದಾ ಹರಿಹಾಯುತ್ತಿದ್ದ ತುಮಕೂರು‌ ಡಿಸಿಸಿ‌ ಬ್ಯಾಂಕ್ ಅಧ್ಯಕ್ಷ ಹಾಗೂ‌ಮಾಜಿ ಶಾಸಕ ಕೆ.ಎನ್ ರಾಜಣ್ಣ ವಿರುದ್ದ ಸರ್ಕಾರ ಸೇಡು ತೀರಿಸಿಕೊಂಡಿದೆ.ಕೆ.ಎನ್ ರಾಜಣ್ಣ ಅಧ್ಯಕ್ಷರಾಗಿದ್ದ ತುಮಕೂರು ಡಿಸಿಸಿ ಬ್ಯಾಂಕನ್ನೇ ಸೂಪರ್ ಸೀಡ್ ಮಾಡಿ ತಿರುಗೇಟು ನೀಡಿದೆ.ಜಾಯಿಂಟ್ ರಿಜಿಸ್ಟ್ರಾರ್ ಆಫ್ ಕೋ-ಆಪರೇಟಿವ್ ಸೊಸೈಟಿ  ಅದೇಶದ ಅನ್ವಯ ಸೂಪರ್ ಸೀಡ್ ಮಾಡಿ ಆದೇಶ ಹೊರಡಿಸಿರುವ ಸರ್ಕಾರ ತಕ್ಷಣದಿಂದ  ಜಿಲ್ಲಾಧಿಕಾರಿಗೆ ಡಿಸಿಸಿ ಬ್ಯಾಂಕ್ ಹೊಣೆ ನೀಡಿದೆ.ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್ ಒಂದು ವರ್ಷ ಡಿಸಿಸಿ‌‌ ಬ್ಯಾಂಕ್ ಹೊಣೆ ಹೊರಲಿದ್ದಾರೆ.ಈ ಮೂಲಕ ಸರ್ಕಾರದ ವಿರುದ್ಧ ಬಹಿರಂಗವಾಗಿ ಹರಿಹಾಯ್ತಿದ್ದ ರಾಜಣ್ಣರ ಬಾಯಿ ಮುಚ್ಚಿಸೋ ಪ್ರಯತ್ನ ಮಾಡಿದೆ ಮೈತ್ರಿ ಸರ್ಕಾರ.

ಇನ್ನೊಂದೆಡೆ ತುಮಕೂರು ಡಿಸಿಸಿ ಬ್ಯಾಂಕ್ ನಲ್ಲಿ ಸಾಕಷ್ಟು ಅಕ್ರಮ-ಹಗರಣಗಳು ನಡೆದಿರುವ ಬಗ್ಗೆಯೂ ದೂರು ಕೇಳಿಬಂದಿತ್ತು.ಕೆ.ಎನ್ ರಾಜಣ್ಣ ಅವ್ರೇ ಅಕ್ರಮದಲ್ಲಿ ನೇರ ಭಾಗಿಯಾಗಿರುವ ಶಂಕೆ ಕೂಡ ವ್ಯಕ್ತವಾಗಿತ್ತು.ಆದ್ರೆ ತಾವೇ ಅಧ್ಯಕ್ಷರಾಗಿದ್ದರಿಂದ ಅಕ್ರಮಗಳನ್ನು ಮುಚ್ಚಾಕುವ ಹುನ್ನಾರ ನಡೆಸಿ ಅದರಲ್ಲಿ ಯಶಸ್ವಿಯಾಗುತ್ತಾ ಬಂದಿದ್ದರೆನ್ನಲಾಗಿದೆ.ಆದ್ರೆ ಅಂತಿಮವಾಗಿ ಡಿಸಿಸಿ ಬ್ಯಾಂಕ್ ನ ಹಗರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ,ಜಿಲ್ಲಾಧಿಕಾರಿಯನ್ನೇ ಆಡಳಿತಾಧಿಕಾರಿಯನ್ನಾಗಿಸಿ ನಿಯೋಜನ ಮಾಡಿದೆ.ಬ್ಯಾಂಕ್ನ ಅಕ್ರಮಗಳ ಬಗ್ಗೆ ಗಂಭೀರ ಚಿಂತನೆ ನಡೆಸಿರುವ ಸರ್ಕಾರ ತನಿಖೆ ನಡೆಸುವ ನಿರ್ಧಾರ ಕೈಗೊಂಡ್ರೂ ಆಶ್ಚರ್ಯಪಡಬೇಕಿಲ್ಲ.ಹಾಗಾಗಿದ್ದಲ್ಲಿ ರಾಜಣ್ಣ ಜೈಲಿಗೆ ಹೋದ್ರೂ ಆಶ್ಚರ್ಯಪಡಬೇಕಿಲ್ಲ ಎಂದು ಕನ್ನಡಫ್ಲ್ಯಾಶ್ನ್ಯೂಸ್ವೆಬ್ಸೈಟ್ ಗೆ  ಬ್ಯಾಂಕ್ ನ ಮೂಲಗಳು ಮಾಹಿತಿ ನೀಡಿವೆ.

Spread the love
Leave A Reply

Your email address will not be published.

Flash News