BreakingMoreScrollTop NewsUncategorizedಕ್ರೈಮ್ /ಕೋರ್ಟ್ಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

SHIVAMOGGA TENSE…LOTTICHARGE-144 SECTION.. .. ಶಿವಮೊಗ್ಗ ಉದ್ವಿಗ್ನ:ಕೋಮುಗಲಭೆಗೆ ನಲುಗಿನ ಮಲೆನಾಡು:ಲಾಠಿ ಚಾರ್ಜ್-144 ಸೆಕ್ಷನ್ ಜಾರಿ..

ಶಿವಮೊಗ್ಗ: ಶಿವಮೊಗ್ಗದಲ್ಲಿಮತೀಯ ಶಕ್ತಿಗಳ ಮೇಲಾಟ-ಅಟ್ಟಹಾಸವೇನಾ ದ್ರೂ ಕಾನೂನನ್ನು ದುರ್ಬಲ ಗೊಳಿಸಿದೆ ಯಾ..?

ಅವುಗಳ ಆಟಾಟೋಪದ  ಎದುರು ಕಾ ನೂನು ಮಂಡಿಯೂರಿಬಿಟ್ಟಂತೆ ಕಾಣು ತ್ತೆ.ಪದೇ ಪದೇ ಹಳಿ ತಪ್ಪುತ್ತಿರುವ ಕಾನೂನು ಸುವ್ಯವಸ್ಥೆಗೆ ಎಸ್ಪಿ ಲಕ್ಷ್ಮಿಪ್ರಸಾದ್ ರೋಸಿ ಹೋಗಿದ್ದಾರೆ.

ಪ ರಿಸ್ತಿತಿಯನ್ನು ತಹಬದಿಗೆ ತರೊಕ್ಕೆ ಸಾಧ್ಯವಾಗದಷ್ಟು ಮತಾಂಧರು ಹಾಗೂ ಸಂಘಟನೆಗಳ ಬಗ್ಗೆ ರಕ್ತ ಕೊತ ಕೊತ ಕುದಿಯುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕತೆ ಅವರದು.ಆದರೆ ಮೇಲ್ನೋಟಕ್ಕೆ ಎಲ್ಲರಿಗೂ ಅನಿಸೋದು ಇದು ಲಾ ಅಂಡ್ ಆರ್ಡರ್ ಫೇಲ್ಯೂರ್..ಎಸ್ಪಿ ಲಕ್ಷ್ಮಪ್ರಸಾದ್ ಹಾಗೂ ಅವರ ತಂಡದ ನಿಷ್ಕ್ರೀಯತೆ ಎಂದು.

ಲಕ್ಷ್ಮಿಪ್ರಸಾದ್ ಅವರು ಜಿಲ್ಲೆಗೆ ಎಸ್ಪಿಯಾಗಿ ಬಂದಾಗ ಪರಿಸ್ತಿತಿ ತಹಬದಿಯಲ್ಲಿತ್ತು.ಧರ್ಮಾಂದರು ಬಾಲ ಬಿಚ್ಚಿರಲಿಲ್ಲ.ಆದ್ರೆ ಇದ್ದಕ್ಕಿದ್ದಂತೆ ಆ ಧೈರ್ಯ ಬರುತ್ತಿದ್ದಂತೆ ಪರಿಸ್ತಿತಿ ಬುಡಮೇಲಾಯ್ತು.ಅದನ್ನು ಈ ಕ್ಷಣದಕ್ಕೂ ತಹಬದಿಗೆ ತರೊಕ್ಕೆ ಎಸ್ಪಿ ಸಾಹೇಬ್ರಿಗೆ ಆಗಿಲ್ಲ..ಪಾಪ..

ಶಿವಮೊಗ್ಗ ಕೆಲ ವರ್ಷಗಳ ಹೋಲಿಕೆಯಲ್ಲಿ ಇಷ್ಟೊಂದು ಪ್ರಕ್ಷುಬ್ಧವಾಗಿರಲಿಲ್ಲ ಬಿಡಿ.ಯಾರೇ ಎಮ್ಮೆಲ್ಲೆಗಳಾಗಲಿ,ಯಾವ್ದೇ ಸರ್ಕಾರ ಬರಲಿ,ಕೋಮುಸಂಘರ್ಷ ಸೃಷ್ಟಿಯಾಗುತ್ತಿರಲಿಲ್ಲ.ಕೊಲೆಗಳು ಬೇರೆಯದೇ ಕಾರಣಗಳಾಗುತ್ತಿದ್ದವು.ಆದರೆ ಧರ್ಮಾ ಧರಿತ ಸಂಘರ್ಷಗಳು ವಿಕೋಪಕ್ಕೆ ತಿರುಗಿದ,ಆ ಜ್ವಾಲೆಗೆ ಬಲಿಯಾದ ಉದಾಹರಣೆಗಳೇ ಇರಲಿಲ್ಲ.ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ಮಾಮೂಲಾಗಿಬಿಟ್ಟಿದೆ.ಯಾವಾಗ ದೊಂಬಿಗಳಾಗುತ್ತವೋ..ಯಾವ ಗಲ್ಲಿಯಲ್ಲಿ ಯಾವ ಸಹೋದರನ ಹೆಣ ಬೀಳುತ್ತೋ.. ಅದರ ಲಾಭವನ್ನು ರಾಜಕೀಯ ಮುಖಂಡರು ಮಾಡಿಕೊಳ್ಳುತ್ತಾರೋ ಎನ್ನುವ ಲೆಕ್ಕಾಚಾರಗಳಂತೂ ಕಾಮನ್ ಆಗಿದೆ.

ಶಿವಮೊಗ್ಗ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಿಪ್ರಸಾದ್
ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಿಪ್ರಸಾದ್

ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ವೇಳೆ ಯಾವ ಸಂಭ್ರಮ ಶಿವಮೊಗ್ಗದಲ್ಲಿ ಮನೆ ಮಾಡ ಬೇಕಿತ್ತೋ ಅದು ಕೋಮುಗಲಭೆಯಾಗಿ ಪರಿವರ್ತನೆಯಾದದ್ದು ದುರಾದೃಷ್ಟಕರ.ಸಾವರ್ಕರ್ ಫೋಟೋ ಇಟ್ಟ ಬಗ್ಗೆ ತೆಗೆದ ತಗಾದೆ,ಟಿಪ್ಪು ಭಾವಚಿತ್ರ ಹರಿದು ರಂಪಾಟವಾಗುವ ಮಟ್ಟ ತಲುಪ್ತು.ಹೇಗೋ ಸರಿಯಾ ಗುತ್ತೆ ಎನ್ನುವಾಗಲೇ ಶಿವಮೊಗ್ಗದಲ್ಲಿ ಭಜರಂಗಿ-ಶ್ರೀರಾಮಸೇನೆ ಕಾರ್ಯಕರ್ತರು ಗಲಾಟೆ ಶುರುಮಾಡಿದ್ದಾರೆ.ಅದರ ಎಫೆಕ್ಟೋ ಏನೋ ಗೊತ್ತಿಲ್ಲ.ಶಿವಮೊಗ್ಗದ ಉಪ್ಪಾರಪೇಟೆ ಬೀದಿಯಲ್ಲಿ ಹಿಂದು ಯುವಕನಿಗೆ ಚಾಕು ಇರಿಯಲಾಗಿದೆ.ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಪರಿಸ್ಥಿತಿ ಉದ್ವಿಗ್ನಗೊಳ್ಳೊಕ್ಕೆ ಕಾರಣವಾಗಿದೆ.ಇದರ ಎಫೆಕ್ಟ್ ಪಕ್ಕದ ಭದ್ರಾವತಿಗು ತಲುಪಿದೆ.

ಗಾಂದಿ ಬಜಾರ್ ನಲ್ಲಿ ಕೆಲಸ ಮಾಡಿಕೊಂಡು ಬರುವಾಗ  ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿಯಲಾಗಿದೆ.ಅದರ  ಬೆನ್ನಲ್ಲೇ ಅಶೋಕ ರಸ್ತೆಯಲ್ಲಿ ಪ್ರವೀಣ್ ಕುಮಾರ್ ಎನ್ನುವವನಿಗೂ ಚಾಕುವಿನಿಂದ ಇರಿಯಲಾಗಿದೆ.ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಧ್ಯಕ್ಕೆ ಇಬ್ಬರೂ ಔಟ್ ಆಫ್ ಡೇಂಜರ್ ಎನ್ನಲಾಗುತ್ತಿದೆ.ಆದರೆ ಅವರ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಬೇರೆಯದೇ ತಿರುವುಗಳಿಗೆ ಕಾರಣವಾಗಬಹುದು.

ಶಿವಮೊಗ್ಗ ಉದ್ವಿಗ್ನ:ಕೋಮುಗಲಭೆಗೆ ನಲುಗಿನ ಮಲೆನಾಡು:ಲಾಠಿ ಚಾರ್ಜ್-144 ಸೆಕ್ಷನ್ ಜಾರಿ…

ಶಿವಮೊಗ್ಗದಲ್ಲಿ ನಡೆದಿರುವ ಈ ಎರಡು ಪ್ರತ್ಯೇಕ ಘಟನೆಗಳ ಎಫೆಕ್ಟ್ ಪಕ್ಕದ ಭದ್ರಾವತಿ ಮೇಲೂ ಪರಿಣಾಮ ಬೀರಿದೆ.ಅಲ್ಲಿರುವ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸ ಲಾರಂಭಿಸಿವೆ.ಶಿವಮೊಗ್ಗದ ಪೊಲೀಸರು ಭದ್ರಾವತಿಗೆ ದೌಡಾಯಿಸಿ ಪರಿಸ್ತಿತಿ ತಿಳಿಗೊಳಿಸುವು ದರಲ್ಲಿ ನಿರತವಾಗಿದ್ದಾರೆ.ಮುಂಜಾಗ್ರತಾ ಕ್ರಮವಾಗಿ  ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್.
ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್.

ಇದೆಲ್ಲದರ ಹಿಂದೆ “ಧರ್ಮಾಂದತೆ”ಯ ನೆರಳು ಮೇಲ್ನೋಟಕ್ಕೆ ಕಂಡುಬಂದ್ರೂ ವಾಸ್ತವ ಹೊಲಸು ರಾಜಕೀಯದ ಕರಿನೆರಳಿದ್ದಂತೆ ತೋರುತ್ತದೆ.ಚುನಾವಣೆ ಹತ್ತಿರವಾಗುತ್ತಿದ್ದಂತೆ ಧರ್ಮಾಧರಿತವಾಗಿ ವೋಟ್  ‍ಬ್ಯಾಂಕ್ ಮೇಲೆ ರಾಜಕೀಯ ಆಕಾಂಕ್ಷಿಗಳು ಕಣ್ಣಿಟ್ಟಿದ್ದಾರೆ.

ಅದಕ್ಕಾಗಿಯೇ ಧರ್ಮ ಧರ್ಮಗಳ ನಡುವೆ ಬಿರುಕು ಮೂಡಿಸಿ,ಕಚ್ಚಾಡಿಕೊಳ್ಳುವಂತೆ ಮಾಡಿ,ಕೊಲೆಯಲ್ಲಿ ಅದು ಪರಿಸಮಾಪ್ತಿಯಾಗುವಂತೆ ಪ್ರಚೋದನೆ ನೀಡುತ್ತಿರುವುದೇ ಈ ಹೊಲಸು ಮನಸ್ತಿತಿಯ ರಾಜಕಾರಣಿಗಳು.

ಅಫೀಮಿಗಿಂತಲೂ ಅಪಾಯಕಾರಿಯಾದ ಧರ್ಮಾಂಧತೆಯನ್ನು ಯುವಕರ ಮನಸಲ್ಲಿ ತುಂಬಿ ಎದುರಿಗೆ ಸಿಕ್ಕರೆ ಕೊಂದೇ ಬಿಡುವಷ್ಟು ಅಸೂಯೆ-ಕ್ರೌರ್ಯವನ್ನು ಮೂಡಿಸಿ ಅದರ ಲಾಭವನ್ನು ಪಡೆದುಕೊಳ್ಳುತ್ತಿರುವ ರಾಜಕಾರಣಿಗಳ ನೈಜ ಉದ್ದೇಶ ಅರ್ಥವಾದರೆ ಶಿವಮೊಗ್ಗದಲ್ಲಿ ಇನ್ನ್ಯಾವತ್ತು ರಾಜಕಾರಣಿಗಳಿಗಾಗಿ ಅವರ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಲಿಯಾಗುವವರೇ ಇರೋದಿಲ್ಲ.ಅಂಥಾ ಸ್ತಿತಿಯೊಂದು ಶಿವಮೊಗ್ಗದಲ್ಲಿ ನಿರ್ಮಾಣವಾಗಬೇಕಿದೆ.

Spread the love

Related Articles

Leave a Reply

Your email address will not be published.

Back to top button
Flash News