BreakingMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿರಾಜಕೀಯ

WHO IS HELL RESPONSIBLE FOR SHIVAMOGGA’S COMMUNAL CLASH..?! ಶಾಂತನಗರಿ ಶಿವಮೊಗ್ಗ ಕೋಮುದಳ್ಳುರಿಗೆ “ಬಲಿ”ಯಾಗೊಕ್ಕೆ ಯಾರು ಹೊಣೆ..?! ಹಿಂದುಗಳ “ಅತಿರೇಕದ “ಓಲೈಕೆ”ನಾ..?!..ಮುಸ್ಲಿಮರ “ತುಚ್ಛೀಕರಣ”ನಾ..?!

(ಪ್ರಾತಿನಿಧಿಕ ಚಿತ್ರ)
(ಪ್ರಾತಿನಿಧಿಕ ಚಿತ್ರ)

ಶಿವಮೊಗ್ಗ: ಒಬ್ಬ ಜನಪ್ರತಿನಿಧಿ ಆತ ಪ್ರತಿನಿಧಿಸೋ ಕ್ಷೇತ್ರ ಎನ್ನೋ ಕುಟುಂಬದ ಯಜಮಾನನಿದ್ದಂತೆ.ಕುಟುಂಬದೊಳಗೆ ಏನೇ ಬಂದ್ರು ಅದನ್ನು ತೂಗಿಸಿ,ಸಂಭಾಳಿಸಿಕೊಂಡು ಹೋಗೋದು ಆತನ ಕರ್ತವ್ಯ ಕೂಡ.ಆದ್ರೆ ಶಿವಮೊಗ್ಗದ ಸ್ಥಿತಿ ಹಾಗಿಲ್ವೆ..ಕುಟುಂಬದ ಯಜ ಮಾನನೆನಿಸಿಕೊಂಡವರೇ ಅದೇಕೋ ಹೊಣೆಗಾರಿಕೆ ಮರೆತಂತಿದ್ದಾರೆ…?! ಅವರ ಹೇಳಿಕೆ-ನಡುವಳಿಕೆಗಳೇ ಕುಟುಂಬದೊಳಗಿನ ಸಾಮರಸ್ಯ-ಸಮನ್ವಯಕ್ಕೆ ಬೆಂಕಿ ಇಡುವಂತಿದೆ…!? ಒಬ್ಬರನ್ನು ಓಲೈಸುವ-ಸಮರ್ಥಿಸಿಕೊಳ್ಳುವ ಆತುರದಲ್ಲಿ ಮತ್ತೋರ್ವರನ್ನು ದೂಷಿಸುವ ಕೆಲಸ ಮಾಡುತ್ತಿದ್ದಾರೆಂದು ದೂಷಿಸಲಾಗುತ್ತಿದೆ.?! ಯಾರೋ ಒಬ್ಬ ಕಿಡಿಗೇಡಿ ಕೀಳುಪ್ರವೃತ್ತಿ ಪ್ರದರ್ಶಿಸಿದ್ರೆ ಇಡೀ ಸಮುದಾಯವನ್ನು ಗೂಂಡಾಗಳೆಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ..?! .ಇದು ಆಂತರಿಕ ಕಲಹ-ದ್ವೇಷ ಕಿಚ್ಚಾಗಿ ಸುಡೊಕ್ಕೆ ಕಾರಣವಾಗ್ತಿದೆ.ದಳ್ಳುರಿಗೆ ತುಪ್ಪ ಸುರಿದಂತಾಗುತ್ತಿದೆಯಾ ಎಂಬ ಆತಂಕ ಮೂಡಿಸುತ್ತದೆ.

(ಪ್ರಾತಿನಿಧಿಕ ಚಿತ್ರ)
(ಪ್ರಾತಿನಿಧಿಕ ಚಿತ್ರ)

ಶಾಂತವಾಗಿದ್ದ ಶಿವಮೊಗ್ಗ ಇತ್ತೀಚೆಗೆ ಕೋಮುದಳ್ಳುರಿಯಲ್ಲಿ ಬೇಯುತ್ತಿದೆ.ಯಾವ್ ಕ್ಷಣದಲ್ಲಿ ಏನ್ ಆಗುತ್ತೋ ಎನ್ನುವ ಆತಂಕದಲ್ಲಿ ಜನ ಬದುಕುತ್ತಿದ್ದಾರೆ.ಶಿವಮೊಗ್ಗವನ್ನು ಹೀಗೆ ಬೂದಿಮುಚ್ಚಿದ ಕೆಂಡದಂಥ ಸ್ತಿತಿಗೆ ತಂದವರು ಯಾರೆಂದು ಜನರನ್ನು ಕೇಳಿದ್ರೆ ಪಕ್ಷಾತೀತ-ಜಾತ್ಯಾತೀವಾಗಿ ಕೇಳಿಬರೋದು ರಾಜಕಾರಣಿಗಳ ಹೆಸರು.ಅದು ಕೇವಲ ಒಂದು ಪಕ್ಷಕ್ಕೆ ಸೀಮಿತವಾಗದೆ ಎಲ್ಲರೂ ಈ ಕೋಮುದಳ್ಳುರಿಯಲ್ಲಿ ತಮ್ಮ ಸ್ವಾರ್ಥಹಿತಾಸಕ್ತಿಯ ಬೇಳೆ ಬೇಯಿಸಿಕೊಂಡವ್ರೇ..ರಾಜಕಾರಣಿಗಳು ಮನಸು ಮಾಡಿದಿದ್ದರೆ ಶಿವಮೊಗ್ಗದ ಸ್ತಿತಿ ಇಷ್ಟು ಧರ್ಮಸೂಕ್ಷ್ಮವಾಗುತ್ತಲೇ ಇರಲಿಲ್ಲ ಎನ್ತಾರೆ ಶಿವಮೊಗ್ಗದ ಜನಜೀವನ ಕಂಡ ಅನುಭವಿಗಳು.

(ಪ್ರಾತಿನಿಧಿಕ ಚಿತ್ರ)
(ಪ್ರಾತಿನಿಧಿಕ ಚಿತ್ರ)

ಕೆ.ಎಸ್.ಈಶ್ವರಪ್ಪ ಅವರನ್ನೇ ಇಲ್ಲಿ ಮುನ್ನಲೆಗೆ ತರೊಕ್ಕೆ ಕಾರಣವಿದೆ. ಕ್ಷೇತ್ರದ ಶಾಸಕರೂ ಅವರೇ..( ಕೆಎಸ್ ಈಶ್ವರಪ್ಪ ಬದಲು ಬೇರೆಯವರು ಶಾಸಕರಾಗಿದ್ದರೂ ಅವರನ್ನೇ ಉಲ್ಲೇಖಿಸಲಾ ಗುತ್ತಿತ್ತು..).ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆಯಿಂದ ಹಿಡಿದು ಕೋಮುಸಾಮರಸ್ಯ-ಧಾರ್ಮಿಕ ಸಮನ್ವಯ ಕಾಪಾಡುವ ಹೊಣೆಗಾರಿಕೆ ಉಳಿದೆಲ್ಲರಿಗಿಂತ ಅವರಿಗೇ ಹೆಚ್ಚಾಗಿರುತ್ತದೆ.ಏನೇ ಸಮಸ್ಯೆಗಳಾದ್ರೂ ಅದಕ್ಕೆ ತಕ್ಷಣ ಸ್ಪಂದಿಸಿ ನಿವಾರಣೆ ನೀಡಿ ಪರಿಸ್ತಿತಿ ಶಾಂತಗೊಳಿಸುವ ಬಾಧ್ಯಸ್ತಿಕೆನೂ ಅವರದೇ..?

ಜೆಡಿಎಸ್ ಮುಖಂಡ ಶ್ರೀಕಾಂತ್
ಜೆಡಿಎಸ್ ಮುಖಂಡ ಶ್ರೀಕಾಂತ್
ಕಾಂಗ್ರೆಸ್ ಮಾಜಿ ಶಾಸಕ ಪ್ರಸನ್ನಕುಮಾರ್
ಕಾಂಗ್ರೆಸ್ ಮಾಜಿ ಶಾಸಕ ಪ್ರಸನ್ನಕುಮಾರ್

ಅಂತದ್ದೊಂದು ಮಹತ್ವದ ಸ್ಥಾನದಲ್ಲಿರುವ ಕೆ.ಎಸ್.ಈಶ್ವರಪ್ಪ ಈ ಹೊಣೆಗಾರಿಕೆಯಲ್ಲಿ ಎಡವುತ್ತಿದ್ದಾರಾ..? ಎನ್ನುವ ಶಂಕೆ ಮೇಲ್ನೋಟಕ್ಕೆ ಮೂಡುತ್ತೆ..ಶಿವಮೊಗ್ಗದ ಜನರೇ ಶಾಸಕರಾಗಿ ಈಶ್ವರಪ್ಪ ಮಾಡ್ತಿರುವುದೇನು..? ಎಂದು ಪ್ರಶ್ನಿಸಲಾರಂಭಿಸಿದ್ದಾರೆ.? ಕ್ಷೇತ್ರದಲ್ಲಿ ಅಣ್ಣತಮ್ಮಂದಿರಂತೆ ಬಾಳಿ ಬದುಕುತ್ತಿರುವ ಹಿಂದು-ಮುಸ್ಲಿಮರನ್ನು ಅಹಿತಕರ ಘಟನೆ ನಡೆದಾಗ್ಲೆಲ್ಲಾ ಜಾತಿಯ ಹೆಸರಲ್ಲಿ ಸಮುದಾಯವನ್ನು ಪ್ರತ್ಯೇಕಿಸುವುದಾ ಅವರ  ಕೆಲಸ..?! ಒಬ್ಬ ಮುಸ್ಲಿಂ ಪೈಶಾಚಿಕ ಕೃತ್ಯ ಎಸಗಿದ್ರೆ ಇಡೀ ಮುಸ್ಲಿಂ ಸಮುದಾಯವನ್ನೇ ಅಪರಾಧಿಸ್ಥಾನದಲ್ಲಿ ನಿಲ್ಲಿಸುವಷ್ಟು ವಿವೇಚನಾರಹಿತವಾಗಿ ವರ್ತಿಸುವುದಾ..?.ಸಾಮರಸ್ಯದಲ್ಲಿ ಬದುಕುತ್ತಿರುವ “ಹಿಂದು-ಮುಸ್ಲಿಮ”ರೇ ಪರಸ್ಪರ ಅನುಮಾನಾಸ್ಪದವಾಗಿ ಬದುಕುವಂತೆ ಮಾಡುವುದಾ..? ಎಂಬ ಪ್ರಶ್ನೆ ಸಾರ್ವಜನಿಕವಾಗಿ ಕೇಳಲ್ಪಡುತ್ತಿದೆ.

ಶಾಸಕ,ಕೆಎಸ್ಈ ಮನಸು ಮಾಡಿದ್ರೆ ಕ್ಷೇತ್ರದಲ್ಲಿ  ಹಿಂದೂ ಮುಸ್ಲಿಮರನ್ನು ಒಗ್ಗೂಡಿಸಿಕೊಂಡು ಹೋಗೋದು ಕಷ್ಟವೇ ಅಲ್ಲ.ಹಿಂದೆಲ್ಲಾ ಇದೇ ರೀತಿ ಈಶ್ವರಪ್ಪ ಇದ್ದರು.ಅವರಲ್ಲಿ ಹಿಂದುಗಳ ಬಗ್ಗೆ ಇಷ್ಟೊಂದು ಗಾಢ ವ್ಯಾಮೋಹ..ಮುಸ್ಲಿಮರ ವಿರುದ್ಧ ಆಕ್ರೋಶವಿರಲೇ ಇಲ್ಲ.ಇಬ್ಬರನ್ನೂ ಸಮಾನವಾಗಿ ನೋಡುವ ಮನಸ್ಥಿತಿ ಇತ್ತು.ಕೋಮುಸಂಘರ್ಷಗಳಾದಾಗ ಏಕಾಏಕಿ ಪ್ರತಿಕ್ರಿಯೆ ಕೊಡುವ ಅವಸರ-ಆವೇಶ ಇರಲೇ ಇಲ್ಲ.ಎರಡು ಸಮುದಾಯಗಳನ್ನು ಒಟ್ಟಿಗೆ ಕೂರಿಸಿ ಶಾಂತಿ-ಸಮನ್ವಯ ಬೆಸೆಯುವಂತ ಕೆಲಸ ಮಾಡಿದ್ದಕ್ಕೆ ಶಿವಮೊಗ್ಗವೇ ಸಾಕ್ಷಿಯಿದೆ.ಈಶ್ವರಪ್ಪ ಅವರ ಗೆಲುವಿನಲ್ಲಿ ಮುಸ್ಲಿಮರು ನಿರ್ಣಾಯಕ ಪಾತ್ರ ವಹಿಸುತ್ತಿದ್ದುದ್ದರ ಹಿಂದೆ ಇದ್ದ ಕಾರಣವೇ ಓರ್ವ ಜನಪ್ರತಿನಿಧಿಯಾಗಿ ಅವರು ನಡೆದುಕೊಳ್ಳುತ್ತಿದ್ದ ರೀತಿಗೆ … ಎನ್ತಾರೆ ಅಂದು-ಇಂದಿನ ಈಶ್ವರಪ್ಪರನ್ನು ಹತ್ತಿರದಿಂದ ಕಂಡವರು.

(ಪ್ರಾತಿನಿಧಿಕ ಚಿತ್ರ)
(ಪ್ರಾತಿನಿಧಿಕ ಚಿತ್ರ)

ಆದ್ರೆ ಇವತ್ತು ಏನಾಗಿದೆ..ಹೇಗಿದ್ದ ಈಶ್ವರಪ್ಪ ಹೇಗೆ ಬದಲಾಗಿದ್ದಾರೆ..! ಅವರು ಮನಸು ಮುಸ್ಲಿಮರ ಬಗ್ಗೆ ಎಷ್ಟೊಂದು ಕಾಠಿಣ್ಯವಾಗೋ ಗಿದೆ…! ಅವರ ಹಿಂದುಗಳ ಓಲೈಕೆ ಅತಿರೇಕಕ್ಕೆ ಹೋಗಿದೆ..(ಇದು ಸ್ವತ: ಹಿಂದೂಗಳಿಗೇ ಇಷ್ಟವಿಲ್ಲ ಎನ್ನುವ ಮಾತಿದೆ) ಎಲ್ಲೇ ಗಲಭೆಗಳಾಗಲಿ,ಜಿಲ್ಲೆಯ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವಂತ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟತೆ ಕೊಡುವ ಮೊದಲೇ ಈಶ್ವರಪ್ಪ,ಮುಸ್ಲಿಂ ಗೂಂಡಾಗಳೇ ಇದನ್ನು ಮಾಡಿರೋದು..ಅವರನ್ನು ಶಿಕ್ಷಿಸ್ಬೇಕು..ಹಿಂದೂಗಳ ತಾಳ್ಮೆ ಪರೀಕ್ಷಿಸಿದ್ರೆ ಗ್ರಹಚಾರ ನೆಟ್ಟಗಿರೊಲ್ಲ..ಹುಷಾರ್ ಎನ್ನುವ ರೇಂಜ್ನಲ್ಲಿ ನಾಲಿಗೆ  ಹರಿಬಿಡ್ಲಿಕ್ಕೆ ಶುರುಮಾಡಿದ್ದಾರಂತೆ.ಇದು ಶಿವಮೊಗ್ಗದ ಜನತೆಯನ್ನು ತಮ್ಮ ಶಾಸಕರ ಬಗ್ಗೆ ಇರುಸುಮುರುಸಿನಿಂದ ಮಾತನಾಡುವಂತೆ ಮಾಡಿದೆ ಎನ್ನುವುದು ಕೂಡ ವಾಸ್ತವ.

(ಪ್ರಾತಿನಿಧಿಕ ಚಿತ್ರ)
(ಪ್ರಾತಿನಿಧಿಕ ಚಿತ್ರ)

ಈಶ್ವರಪ್ಪ ಅವರನ್ನು, ಸಾಮಾನ್ಯ ಕಾರ್ಯಕರ್ತರಾಗಿ ಯಡಿಯೂರಪ್ಪ ಅವರೊಂದಿಗೆ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವ ದಿನದಿಂದ ನೋಡಿರುವ ಅದೆಷ್ಟೋ ಜನರೇ ಈಶ್ವರಪ್ಪ ಧೋರಣೆ ಒಪ್ಪುತ್ತಿಲ್ಲವಂತೆ. ಮೂರು ಬಾರಿ ಶಾಸಕರಾಗಿ ಅವರನ್ನು ಗೆಲ್ಲಿಸಿರುವುದರಲ್ಲಿ ಕೇವಲ ಹಿಂದುಗಳ ಪಾತ್ರವಿಲ್ಲ..ತಮ್ಮನ್ನು ಬೆಂಬಲಿಸುವ ಸಾಕಷ್ಟು ಮುಸ್ಲಿಂ ಸಮುದಾಯದವರ ಕೃಪೆಯೂ ಇದೆ ಎನ್ನುವುದನ್ನು ಈಶ್ವರಪ್ಪ ಮರೆತಂತಿದೆ.ನನಗೆ ಯಾವುದೇ ಮುಸ್ಲಿಂ ಸಮುದಾಯದವರ ಬೆಂಬಲದ ಅಗತ್ಯವೇ ಇಲ್ಲ..ಕೇವಲ ಹಿಂದೂಗಳ ಮತವೇ ಸಾಕು ಎನ್ನುವ ಲಹರಿಯಲ್ಲಿ ಈಶ್ವರಪ್ಪ ಮಾತನಾಡುತ್ತಿರುವುದು ಸರಿಯಿಲ್ಲ ಅನ್ತಾರೆ.

(ಪ್ರಾತಿನಿಧಿಕ ಚಿತ್ರ)
(ಪ್ರಾತಿನಿಧಿಕ ಚಿತ್ರ)

ತಮ್ಮನ್ನು ಈ ದೇಶದವರೇ ಅಲ್ಲ ಎನ್ನುವಂತೆ ಟ್ರೀಟ್ ಮಾಡುತ್ತಿರುವ ಈಶ್ವರಪ್ಪ ಅವರ ಮನಸ್ತಿತಿ, ಮುಸ್ಲಿಂ ಬಾಂಧವರಲ್ಲಿ ಅಸಹನೆ-ಆಕ್ರೋಶ-ಅಸಮಾಧಾನ ಮೂಡಿಸಿದೆಯಂತೆ.ಪದೇ ಪದೇ ಅವರನ್ನು ದೂಷಿಸುತ್ತಿರುವುದು ಕೇವಲ ಈಶ್ವರಪ್ಪ ಮಾತ್ರವಲ್ಲ,ಇಡೀ ಬಿಜೆಪಿ ಬಗ್ಗೆನೇ ಮುಸ್ಲಿಮರು ಅಸಹನೆ ಮೂಡಿಸಿಕೊಳ್ಳುವಂತೆ ಮಾಡಿದೆಯಾ ಎನ್ನುವ ಅನುಮಾನ ಮೇಲ್ನೋಟಕ್ಕೆ ಸೃಷ್ಟಿಯಾಗುತ್ತದೆ. ಇದಕ್ಕೆ ಬಿಜೆಪಿ ಹೈಕಮಾಂಡ್ ಬ್ರೇಕ್ ಹಾಕದಿದ್ದರೆ ರಾಜಕೀಯವಾಗಿ ಬಹುದೊಡ್ಡ ನಷ್ಟ ಉಂಟಾದ್ರೂ ಆಶ್ಚರ್ಯವಿಲ್ಲ ಎನ್ತಾರೆ ರಾಜಕೀಯ ವಿಶ್ಲೇಷಕರು.

ಹಾಗೆಂದ ಮಾತ್ರಕ್ಕೆ ಕಾಲ ಇನ್ನೂ ಮಿಂಚಿ ಹೋಗಿಲ್ಲ.ಪರಿಸ್ತಿತಿ ಇನ್ನೂ ಕೈಮೀರಿಲ್ಲ.ಒಬ್ಬರನ್ನು ಓಲೈಸುವ ಭರಾಟೆಯಲ್ಲಿ ಇನ್ನೊಬ್ಬರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಗೊಂದಲ ಸೃಷ್ಟಿಸುವ,ಅದರ ಮೂಲಕ ವಿವಾದ ಮೈಮೇಲೆ ಎಳೆದುಕೊಳ್ಳುವ ಪ್ರವೃತ್ತಿಯನ್ನು ಕೈಬಿಟ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈಶ್ವರಪ್ಪ ಕೆಲಸ ಮಾಡಬೇಕಿದೆ.ಇಲ್ಲವಾದಲ್ಲಿ ಇದರ ಪರಿಣಾಮವನ್ನು ಅವರೇ ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುತ್ತದೆಯೇನೋ,..?ಗೊತ್ತಿಲ್ಲ..

Spread the love

Related Articles

Leave a Reply

Your email address will not be published.

Back to top button
Flash News