BreakingMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

NEW RESPONSIBILITY TO EX -CM B.S.YEDIYURAPPA:ರಾಜಕೀಯ “ಸನ್ಯಾಸ”ದ ಇರಾದೆಯಲ್ಲಿದ್ದ ಬಿಎಸ್ ವೈಗೆ ಹೈಕಮಾಂಡ್ “ಬಿಗ್ ಸಪ್ರೈಸ್”


ಬೆಂಗಳೂರು:ರಾಜ್ಯ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಗಳು-ತಲ್ಲಣಗಳು ಹೈಕಮಾಂಡ್ ನ್ನು ಅಲರ್ಟ್ ಮಾಡಿದಂತಿದೆ.ಹಾಗಾಗಿನೇ ಪಕ್ಷದ ರಾಷ್ಟ್ರ ಮಟ್ಟದ ಉನ್ನತಾಧಿಕಾರಿ ಹೊಂದಿರುವ ಕೇಂದ್ರ ಸಂಸದೀಯ ಮಂಡಳಿಯಲ್ಲಿ ರಾಜ್ಯ ಬಿಜೆಪಿ ಭೀಷ್ಮ ಯಡಿಯೂರಪ್ಪಂಗೆ ಉನ್ನತ ಸ್ಥಾನ ಕಲ್ಪಿಸಿದೆ.ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ನೇತೃತ್ವದ 11 ಸದಸ್ಯರ  ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪರನ್ನು ಸೇರಿಸಿಕೊಳ್ಳಲಾಗಿದೆ.ಈ ಮೂಲಕ ಕೆಲ ತಿಂಗಳಲ್ಲೇ ನಡೆಯಲಿರುವ ಬಿಬಿಎಂಪಿ ಮತ್ತು  ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಸಂಪೂರ್ಣ ಉಸ್ತುವಾರಿಯನ್ನು ಅವರ ಹೆಗಲಿಗೇರಿಸಿದಂತಾಗಿದೆ.

ಪಕ್ಷದ ಸಂಸದೀಯ ಮಂಡಳಿಯಲ್ಲಿ ಬಿಎಸ್ ವೈಗೆ ಸ್ಥಾನ ಕಲ್ಪಿಸುವ ಮೂಲಕ ಹೈಕಮಾಂಡ್ ಪಕ್ಷಕ್ಕಾಗಲಿದ್ದ ಸಾಕಷ್ಟು ಡ್ಯಾಮೇಜ್ ನ್ನು ತಪ್ಪಿಸಿದಂತಾಗಿದೆ.ಮಗನಿಗಾಗಿ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟು ರಾಜಕೀಯ ಸಂನ್ಯಾಸದತ್ತ ಮನಸು ಮಾಡಿದಂತಿದ್ದ ಬಿಎಸ್ ವೈಗೆ  ಈ ಬೆಳವಣಿಗೆಯಿಂದ ರಾಜಕೀಯ ಪುನಶ್ಚೇತನ ಸಿಕ್ಕಂತಾಗಿದೆ.ಇನ್ನಷ್ಟು ಹುರುಪಿನಲ್ಲಿ ಬಿಎಸ್ ವೈ ಕೆಲಸ ಮಾಡಲಿದ್ದಾರೆ.ಪಕ್ಷವನ್ನು ಕಾಡುತ್ತಿದ್ದ ಸಂಘಟನೆ ಕೊರತೆ ನೀಗಿಸಲಿದ್ದಾರೆ.ಇಳಿವಯಸ್ಸಿನಲ್ಲೂ ಕಾಲಿಗೆ ಚಕ್ರ ಹಾಕ್ಕೊಂಡು ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎನ್ನುವುದು ಹೈಕಮಾಂಡ್ ಲೆಕ್ಕಾಚಾರ.

ಬಿಎಸ್ ವೈ ವ್ಯಕ್ತಿತ್ವ-ರಾಜಕೀಯ ಅನುಭವ-ಜೇಷ್ಠ್ಯತೆಯನ್ನು ಗೌರವಿಸಿದ  ಹೈಕಮಾಂಡ್ ಮೇಲ್ಕಂಡ ಸ್ತಾನ ಕೊಟ್ಟಿದೆ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿದ್ದರೂ ವಾಸ್ತವವಾಗಿ ಕೇಳಿಬರುತ್ತಿರುವ ವಿಷಯಗಳೇ ಬೇರೆ.ಮಗನಿಗೆ ಸ್ಥಾನ ಬಿಟ್ಟುಕೊಟ್ಟ ವಿಚಾರದಲ್ಲಿ ಆ ನಿರ್ಧಾರಕ್ಕೆ ಪಕ್ಷದ ವರಿಷ್ಠರಿಂದ ವ್ಯಾಪಕವಾದ ವಿರೋಧವೇನು ಕೇಳಿಬಂದಿರಲಿಲ್ಲ.ಇದು ಪಕ್ಷ ತನಗೆ ಮಾಡಿದ ಅವಮಾನ ಎನ್ನುವ ನೋವು ಸಹಜವಾಗೇ ಯಡಿಯೂರಪ್ಪಗೆ ಇತ್ತು.ತನ್ನ ನಿರ್ದಾರ ಬದಲಿಸುವಂತೆ ಯಾರೂ ಬಲವಾದ ಒತ್ತಡವನ್ನು ಹೇರಿರಲಿಲ್ಲ.

ತನ್ನನ್ನು ಬೇಕಾದ ರೀತಿಯಲ್ಲಿ ಬಳಸಿಕೊಂಡವರೇ ತನ್ನ ಕಷ್ಟದ ಕಾಲದಲ್ಲಿ ಜತೆಯಾಗಲಿಲ್ಲವಲ್ಲ ಎನ್ನುವ ನೋವು ಅವರನ್ನು ಕಾಡುತ್ತಲೇ ಇತ್ತು.ಅದಕ್ಕೆ ಖಡಕ್ ಆದ ಉತ್ತರವನ್ನು  ಸರಿಯಾದ ಸಮಯದಲ್ಲೇ ಕೊಡೊಕ್ಕೆ  ಯೆಡ್ಡಿ ನಿರ್ದರಿಸಿಕೊಂಡಿದ್ದರೆನ್ನಲಾಗ್ತಿದೆ.ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ತಟಸ್ಥರಾದ್ರೆ ಸಾಕು ಪ್ರಬಲ ವೀರಶೈವ-ಲಿಂಗಾಯಿತರು ಅದನ್ನು ಅರ್ಥ ಮಾಡಿಕೊಂಡು ಏನ್ ನಿರ್ದಾರ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ತಾರೆಂದು ಯಡಿಯೂರಪ್ಪ ಸುಮ್ಮನಿದ್ದರು.ರಾಜಕೀಯ ಬೆಳವಣಿಗೆಗಳಿಂದ ದೂರವೇ ಉಳಿದಿದ್ದರು.

ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ ಹಾಗು ಯಡಿಯೂರಪ್ಪ ಅವರ ಮೌನ-ನಿರಾಸಕ್ತಿ ಹಿಂದಿರುವ ಮರ್ಮವನ್ನು ಅರಿತುಕೊಂಡ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಸಮಾಧಾನಪಡಿಸದಿದ್ರೆ ಪರಿಸ್ತಿತಿ ವಿಕೋಪಕ್ಕೆ ಹೋಗಬಹುದು..ಇದು ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಉಂಟುಮಾಡಬಹುದೆನ್ನುವ ಲೆಕ್ಕಾಚಾರದಲ್ಲಿ ಬಲಿಷ್ಠ ಹಾಗೂ ಪ್ರತಿಷ್ಟವಾದ ಸ್ಥಾನ ನೀಡುವ ಮೂಲಕ ಸಮಾಧಾನಪಡಿಸಿದ್ದೇನೆ ಎಂದು ಭಾವಿಸಿದೆ.

ಯಡಿಯೂರಪ್ಪ ಇದಕ್ಕೆ ಎಷ್ಟರ ಮಟ್ಟಿಗೆ ಸಹಮತ ವ್ಯಕ್ತಪಡಿಸ್ತಾರೋ ಗೊತ್ತಾಗ್ತಿಲ್ಲ.ಆದ್ರೆ ರಾಜ್ಯರಾಜಕಾರಣದಲ್ಲೇ ಇರಬೇಕೆನ್ನುವ ಆಸೆ-ಇರಾದೆ ಹೊಂದಿರುವ ಯಡಿಯೂರಪ್ಪ ರಾಷ್ಟ್ರರಾಜಕಾರಣದ ಈ ಕೊಡುಗೆಯನ್ನು ಸಂಪೂರ್ಣ ಮನಸಿನಿಂದಲೇ ಸ್ವೀಕರಿಸ್ತಾರೆನ್ನುವುದು ಕೊಂಚ ಡೌಟೆನ್ನಲಾಗುತ್ತಿದೆ.ಕೇಂದ್ರ ಸಂಸದೀಯ ಮಂಡಳಿಯಲ್ಲಿದ್ದರೂ ಅವರು ತುಂಬುಮನಸಿನಿಂದ ಕೆಲಸ ಮಾಡೋದು ಕೂಡ ಅನುಮಾನ..ಇದಕ್ಕೆ ಯಡಿಯೂರಪ್ಪ ಅವರ ಮೊದಲ ಆಯ್ಕೆ ರಾಜ್ಯರಾಜಕಾರಣ ಎನ್ನೋದು ಕಾರಣವಾಗಿರಬಹುದು.

ಆದ್ರೆ ಸಂಸದೀಯ ಮಂಡಳಿಯಲ್ಲಿ ಸ್ಥಾನ ಪಡೆದಿರುವುದು ಯಡಿಯೂರಪ್ಪರ ಪವರ್ ನ್ನು ರಾಜ್ಯರಾಜಕಾರಣದಲ್ಲಿ ಮತ್ತಷ್ಟು ಹೆಚ್ಚಿಸಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.ಶಿಕಾರಿಪುರ ಬಿಟ್ಟುಕೊಟ್ಟು ಸುಮ್ಮನಿದ್ದುಬಿಡ್ತಾರೆ..ನಾವ್ ಬಾಲ ಬಿಚ್ಚಬಹುದು ಎಂದುಕೊಂಡಿರುವ ಪಕ್ಷದ ಹಿತಶತೃಗಳಿಗೆ ಈ ಬೆಳವಣಿಗೆ ಆತಂಕ ಹಾಗೂ ಮುಜುಗರ ತಂದಿದ್ರು ಆಶ್ಚರ್ಯಪಡಬೇಕಿಲ್ಲ.

ಬಿಬಿಎಂಪಿ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆ ರೂಪಿಸುವುದರಿಂದ ಹಿಡಿದು ಟಿಕೆಟ್ ಯಾರಿಗೆ ಕೊಡಬೇಕೆನ್ನುವ ವಿಚಾರಗಳಲ್ಲಿ ಯಡಿಯೂರಪ್ಪ ಅವರ ಪಾತ್ರ ನಿರ್ಣಾಯಕವಾಗಲಿದೆ.ಟಿಕೆಟ್ ಗೆ ಅವರ ಮನೆ ಮುಂದೆ ಆಕಾಂಕ್ಷಿಗಳು ಕ್ಯೂ ನಿಲ್ಲಬೇಕಾಗಿ ಬಂದ್ರೂ ಆಶ್ಚರ್ಯವಿಲ್ಲ..ಈಗಾಗಲೇ ಅವರ ಮನೆಗೆ ಎಡತಾಕೊಕ್ಕೆ ಆಕಾಂಕ್ಷಿಗಳು ಸಿದ್ಧವಾಗಿಬಿಟ್ಟಿದ್ದಾರೆ..ಈ ಬೆಳವಣಿಗೆಯನ್ನು ಮಿಸ್ಯೂಸ್ ಮಾಡಿಕೊಳ್ಳೊಕ್ಕೆ ಮುಂದಾಗಿರುವಂಥವರಿಗೆ ಯಡಿಯೂರಪ್ಪ ಅವಕಾಶ ಕಲ್ಪಿಸಬಾರದು ಅಷ್ಟೇ…

Spread the love

Related Articles

Leave a Reply

Your email address will not be published.

Back to top button
Flash News