ಡಿ.ಸಿ ತಮ್ಮಣ್ಣರ ಟ್ರಾನ್ಸ್ ಫರ್ ದಂಧೆಯೂ…ಹಣ ಕಳ್ಕೊಂಡ ನೌಕರರ ಆತಂಕವೂ.. ಇದು ಮಾಜಿ ಸಾರಿಗೆ ಸಚಿವ ತಮ್ಮಣ್ಣನ ಕಿಕ್ ಬ್ಯಾಕ್ ಕಹಾನಿ

0

ಬೆಂಗಳೂರು:ರಾಜ್ಯ ರಾಜಕಾರಣದ 14 ದಿನಗಳ ದೊಂಬರಾಟ ಕೊನೆಗೂ ಮುಗಿದಿದೆ.ದೊಂಬರಾಟ ಮುಗಿದಿದ್ರೂ ಅಧಿಕಾರದ ಅವಧಿಯಲ್ಲಿ ಮಾಡಿರುವ ಯಡವಟ್ಟುಗಳು ಮಾತ್ರ ಮತ್ತೊಂದು ಸರ್ಕಾರ ಬಂದ್ರೂ ಬಾಧಿಸುತ್ತಲೇ ಇರುತ್ತವೆ.ಅಂದ್ಹಾಗೆ ಅಂತದ್ದೊಂದು ಯಡವಟ್ಟು ಮಾಡಿರೋದು ಯಾರು..ಯಾವ್ ಇಲಾಖೆಯಲ್ಲಿ ಎನ್ನೋ ಕುತೂಹಲವೇ..ಅದಕ್ಕೆ ಉತ್ತರ ಮೈತ್ರಿ ಸರ್ಕಾರದ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ. ಅಂದ್ಹಾಗೆ ಅಧಿಕಾರದಿಂದ ಕೆಳಗಿಳಿಯುವ ಮುನ್ನ ಈ ತಮ್ಮಣ್ಣ ಎನ್ನುವ ಮಹಾ ಉಢಾಳ-ಹೊಣೆಗೇಡಿ ಸಚಿವ ಮಾಡಿದ ಯಡವಟ್ಟುಗಳೇನು ಎನ್ನುವುದನ್ನು ಕನ್ನಡಫ್ಲ್ಯಾಶ್ನ್ಯೂಸ್.ಕಾಂಸಾಕ್ಷ್ಯಸಮೇತನಿಮ್ಮಮುಂದಿಡುತ್ತಿದೆ..

ರಾಜಕೀಯ ದೊಂಬರಾಟವನ್ನು ನೀವು ಸೂಕ್ಷ್ಮವಾಗಿ ಗಮನಿಸಿದ್ರೆ ಎರಡು ಪಕ್ಷಗಳ ಸಚಿವರು-ಶಾಸಕರು ಹಾಗೂ ಮುಖಂಡರು ಸರ್ಕಾರ ಉಳಿಸಿಕೊಳ್ಳಲು ಪರಿಶ್ರಮ ಹಾಕುತ್ತಿದ್ದರೆ ಇಬ್ಬರು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ವರ್ಗಾವಣೆ ದಂಧೆಯಲ್ಲಿ ತೊಡಗಿದ್ರು.ಅದ್ರಲ್ಲಿ ಒಬ್ರು ಕುಮಾರಸ್ವಾಮಿ ತಮ್ಮ ಹಾಗೂ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ..ಮತ್ತು ಮತ್ತೊಬ್ಬ ಸಚಿವರೇ ಮಾಜಿ ಸಿಎಂ ಕುಮಾರಸ್ವಾಮಿ ಸಂಬಂಧಿ ಡಿ.ಸಿ ತಮ್ಮಣ್ಣ..

ಸರ್ಕಾರ ಉಳೀಲಿ,ಅಥ್ವಾ ಎಕ್ಕುಟ್ಟಿ ಹೋಗ್ಲಿ..ಇರುವಷ್ಟು ಅವಧಿಯೊಳಗೆ ಎಷ್ಟಾಗುತ್ತೋ ಅಷ್ಟನ್ನು ಲೂಟ್ ಮಾಡುವ ಪ್ಲ್ಯಾನ್ ನಲ್ಲಿ ಜಿದ್ದಿಗೆ ಬಿದ್ದವರಂತೆ ತಮ್ಮಣ್ಣ ಹಾಗೂ ರೇವಣ್ಣ ಟ್ರಾನ್ಸ್ ಫರ್ ದಂಧೆಯಲ್ಲಿ ತೊಡಗಿದ್ದ ಬಗ್ಗೆ ಸಾಕಷ್ಟು ಮಾಹಿತಿ ಬಹಿರಂಗವಾಗಿತ್ತು.ಒಂದು ಹೆಜ್ಜೆ ಮುಂದ್ಹೋಗಿ ಕನ್ನಡಫ್ಲ್ಯಾಶ್ನ್ಯೂಸ್.ಕಾಂಇನ್ ವೆಸ್ಟಿಗೇಷನ್ ಮಾಡಿದಾಗ ವಿತ್ ಡಾಕ್ಯುಮೆಂಟ್ಸ್ ತಮ್ಮಣ್ಣನ ಟ್ರಾನ್ಸ್ ಫರ್ ದಂಧೆ ಹಾಗೂ ಅದರ ಹಿಂದಿನ ಕಿಕ್ ಬ್ಯಾಕ್ ನ ರೋಚಕ ಕಹಾನಿ ಬಯಲಾಗ್ತಾ ಹೋಯ್ತು.

ಯೆಸ್..ಕಿಕ್ ಬ್ಯಾಕ್ ಹಾಗೂ ಪರ್ಸಂಟೇಜ್ ಫಿಕ್ಸ್ ಮಾಡ್ಕೊಂಡು ಇವರಿಬ್ಬರು ನಡೆಸಿದ ಟ್ರಾನ್ಸ್ ಫರ್ ಒಂದು ದಂಧೆಯಾಗಿ ನಿಷ್ಪಾಪಿ ಹಾಗೂ ಬಡ ಸಾರಿಗೆ ನಿಗಮಗಳ ನೌಕರರನ್ನು ಬೀದಿಗೆ ತಂದು ನಿಲ್ಲಿಸಿದ್ದು ಸುಳ್ಳಲ್ಲ.ಸಾರಿಗೆ ಇಲಾಖೆಗೆ ಎಂಡಿ ಮತ್ತು ಸಚಿವರಾಗಿ ಬರುವ ಬಹುತೇಕರು(ಪೊನ್ನುರಾಜ್ ಅವ್ರಂಥ ಪ್ರಾಮಾಣಿಕ ಅಧಿಕಾರಿಗಳನ್ನು ಬಿಟ್ಟು) ಸಾರಿಗೆ ನಿಗಮಗಳನ್ನು  ತಮಗೆ ಇರುವಷ್ಟು ಕೆಪಾಸಿಟಿಯೊಳಗೆ ಬರ್ಬಾದ್ ಮಾಡಿಯೇ ಹೋಗ್ತಿರುವುದು ವಿಪರ್ಯಾಸ.

ಸಾರಿಗೆ ನಿಗಮಗಳನ್ನು ಉದ್ಧಾರ ಮಾಡುವಂಥ ಮಹಾನುಭಾವನೇ ಇಲಾಖೆಗೆ ಬರುತ್ತಿಲ್ಲ.ಹಾಗೊಂದು ಉದ್ದೇಶವಿಟ್ಟುಕೊಂಡು ಬರುವ ಪೊನ್ನುರಾಜ್ ಅವ್ರಂಥ ನಿಷ್ಠಾವಂಥ ಹಾಗೂ ದಕ್ಷ ಅಧಿಕಾರಿಗಳನ್ನು ಅಡ್ಜಸ್ಟ್ ಆಗಿಲ್ಲ ಎನ್ನುವ ಕಾರಣಕ್ಕೆ ಕಿತ್ತೆಸೆಯುವಂಥ ಕೆಲಸ ಮಾಡ್ತಾರೆ ಡಿ.ಸಿ ತಮ್ಮಣ್ಣನಂಥವ್ರು.

ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವ್ರ ಕೈಕಾಲು ಹಿಡಿದು ಸಾರಿಗೆ ಸಚಿವರಾಗಿ ಬಂದ್ಮೇಲೆ ಈ ತಮ್ಮಣ್ಣ ಮಾಡಿದ ರಾದ್ದಾಂತ-ಆಟದ ಆಟಗಳು-ನಡೆಸಿದ ಅಕ್ರಮ,ಭ್ರಷ್ಟಾಚಾರ ಒಂದಾ ಎರಡಾ..ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ಇದು ಸಾರಿಗೆ ನಿಗಮಗಳ ನೌಕರರಿಗೆ ಮನದಟ್ಟಾಗಿ ಹೋಗಿತ್ತು ಬಿಡಿ.ಆದ್ರೂ ವಿಧಿಯಿಲ್ಲದೆ ಸಹಿಸಿಕೊಳ್ಳುವ ಅನಿವಾರ್ಯತೆ ನೌಕರರದ್ದು.

ಈ ನಡುವೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಇತಿಹಾಸದಲ್ಲಿ ಯಾವೊಬ್ಬ ಸಚಿವನೂ ಹೊರಡಿಸದಂಥ ವಿಚಿತ್ರವಾದ ಸುತ್ತೋಲೆಯನ್ನೂ ವರ್ಗಾವಣೆ ವಿಷಯದಲ್ಲಿ ಅವರು ಹೊರಡಿಸಿದ್ದರು‌.ಸಹಜವಾಗಿ ಯಾವ್ದೇ ಸಾರಿಗೆ ಸಚಿವ್ರೂ ಕೆಳ ಹಂತದ ನೌಕರರ ವರ್ಗಾವಣೆಯಲ್ಲಿ ಕೈ ಹಾಕೊಲ್ಲ.ಆದ್ರೆ ಈ ಮಹಾಷಯ ಮಾತ್ರ ಒಬ್ಬ ಸಣ್ಣ ಪಿಯೂನ್ ಟ್ರಾನ್ಸ್ ಫರ್ರೂ ನನ್ ಗಮನಕ್ಕೆ ಬಂದೇ ಆಗ್ಬೇಕೆನ್ನೋ ಆ ಸುತ್ತೋಲೆ ಸಾಕಷ್ಟು ಚರ್ಚೆ ಹಾಗೂ ಆಕ್ರೋಶಕ್ಕೂ ಗ್ರಾಸವಾಗಿತ್ತು.

ಸಚಿವ ಸ್ಥಾನಕ್ಕೆ ಎಲ್ಲಾ ಸಚಿವ್ರೂ ರಾಜೀನಾಮೆ ಕೊಟ್ಟಾದ್ಮೇಲೂ ತಮ್ಮಣ್ಣ ಕೊಂಚವೂ ನಾಚಿಕೆ-ಮುಜುಗರ-ಭಯವಿಲ್ಲದೇ ಟ್ರಾನ್ಸ್ ಫರ್ ದಂಧೆ ಮುಂದುವರೆಸಿದ್ದರು,ಡಿ ಗ್ರೂಪ್ ನೌಕರರಿಗೆ ಪ್ರತಿ ವರ್ಗಾವಣೆಗೆ 30 ಸಾವಿರದಿಂದ ಹಿಡಿದು,ದೊಡ್ಡ ಮಟ್ಟದ ಅಧಿಕಾರಿಗಳನ್ನು 5 ಲಕ್ಷದವರೆಗಿನ ಕಿಕ್ ಬ್ಯಾಕ್ ಪಡೆದು ವರ್ಗಾವಣೆ ನಡೆಸಿದ ಕುಖ್ಯಾತಿ ಈ ತಮ್ಮಣ್ಣಂದು.

ಈ ಹುದ್ದೆಗೆ ಇಂತಿಷ್ಟು ಎಂದು ಫಿಕ್ಸ್ ಮಾಡಿ ವರ್ಗಾವಣೆಯ ಕಿಕ್ ಬ್ಯಾಕನ್ನು ಸಂಗ್ರಹಿಸೊಕ್ಕೆ ತನ್ನ ಕುಟುಂಬದ ಸದಸ್ಯರನ್ನೇ ಮೀಡಿಯೇಟರ್ನ್ನಾಗಿಸಿಕೊಂಡು ದಂಧೆ ನಡೆಸಿದ ತಮ್ಮಣ್ಣ ಕೊನೆಕೊನೆಗೆ ಲೆಟರ್ ಹೆಡ್ ಇಟ್ಕೊಂಡು ಟ್ರಾನ್ಸ್ ಫರ್ ಮಾಡಿಸಿಕೊಳ್ಳಲು ಯಾರ್ ಬರ್ತಾರೆ..ಬರದಿದ್ದರೆ ಬಲವಂತವಾಗಿಯಾದ್ರೂ ಎಳೆದುಕೊಂಡು ಬನ್ನಿ ಎನ್ನುವ ಮಟ್ಟ ತಲುಪಿದ್ದರೆಂದ್ರೆ ಹಣದ ದಾಹ ಹಾಗೂ ಅಮಲು ಹೇಗೆ ತಲೆಗೇರಿತ್ತೆನ್ನೋದು ಗೊತ್ತಾಗುತ್ತೆ.

ಈಗ ವರ್ಗಾವಣೆಯಾದ ನೌಕರಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಕಾಡ್ತಿರುವ ಆತಂಕವೇನು ಗೊತ್ತಾ,ಬಿಜೆಪಿ ಸರ್ಕಾರದಿಂದ ಸಾರಿಗೆ ಸಚಿವರಾಗಿ ಬರುವವರೇನಾದ್ರೂ ಜಿದ್ದಿಗೆ-ತಮ್ಮಣ್ಣನ ಮೇಲಿನ ಸಿಟ್ಟಿನ ಪ್ರತೀಕಾರವಾಗಿ ಎಲ್ಲಾ ವರ್ಗಾವಣೆಯನ್ನೆಲ್ಲಿ ಕ್ಯಾನ್ಸಲ್ ಮಾಡಿ ಬಿಡ್ತಾರೋ ಎನ್ನುವುದು.ಹಾಗಾಗಿದ್ದೇ ಆದಲ್ಲಿ ತಮ್ಮಣ್ಣಂಗೆ ಕೊಟ್ಟ ದುಡ್ಡಿನ ಕಥೆಯೇನು ಎನ್ನುವ ಆತಂಕ ವರ್ಗಾವಣೆ ಮಾಡಿಸಿಕೊಂಡ ಪ್ರತಿಯೋರ್ವರನ್ನು ಕಾಡಹತ್ತಿದೆ.

ಸರ್ಕಾರದ ಪತನದಿಂದಾಗಿ ತಮ್ಮಣ್ಣನಂತ ಲಂಚಬಾಕ ಹಾಗೂ ಭ್ರಷ್ಟ ಸಚಿವ ತೊಲಗಿದಂತಾಗಿದೆ. ವರ್ಷದಿಂದಲೂ ಇಲಾಖೆಗೆ ಹಿಡಿದಿದ್ದ ಗ್ರಹಣ ಬಿಟ್ಟಂತಾಗಿದೆ.ನೌಕರ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವುದಂತೂ ಇಲಾಖೆಯ ವಾತಾವರಣ ನೋಡಿದಾಗ ಗೊತ್ತಾಗುತ್ತೆ.

Spread the love
Leave A Reply

Your email address will not be published.

Flash News