BreakingMoreScrollTop NewsUncategorizedಕ್ರೈಮ್ /ಕೋರ್ಟ್ಫೋಟೋ ಗ್ಯಾಲರಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯವಿಚಿತ್ರ-ವಿಶೇಷ

INSULT TO KSRTC…BY THIS DRIVER-CONDUCTOR..!? ಈ “ಡ್ರೈವರ್-ಕಂಡಕ್ಟರ್” KSRTC ಸಮುದಾಯಕ್ಕೇನೆ ಕಳಂಕ..?!

ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಕೋಲಾರ: ಇದು ನಿಜಕ್ಕೂ ಅಮಾನವೀಯ ಘಟನೆಯೇ ಸಾಕ್ಷಿ.ಬಸ್ಸನ್ನೇರುವ ಪ್ರಯಾಣಿಕರು ಡ್ರೈವರ್ ತಮ್ಮ ಪಾಲಿಗೆ ದೇವರು ಎಂದೇ ಭಾವಿಸುತ್ತಾರೆ.ಅವರನ್ನು ಅವರು ತಲುಪಬೇಕಾದ ಸ್ಥಳಕ್ಕೆ ತಲುಪಿಸುವ ಕೆಲಸವನ್ನು ಬಹುತೇಕ ಚಾಲಕ-ನಿರ್ವಾಹಕ ಸಿಬ್ಬಂದಿ ಮಾಡುತ್ತಲೂ ಬಂದಿದ್ದಾರೆ.ಆದರೆ ಕೋಲಾರದಲ್ಲಿ ನಡೆದಿರುವ ಈ ಘಟನೆ ಮಾತ್ರ ಕೆಎಸ್ ಆರ್ ಟಿಸಿ ಚಾಲಕ-ನಿರ್ವಾಹಕ ಸಮುದಾಯಕ್ಕೆ ಕಳಂಕ ತರುವಂತಿದೆ.ಅಂದ್ಹಾಗೆ 15-08-2022 ರಂದು ನಡೆದಿದೆ ಎನ್ನಲಾಗಿರುವ ಈ ಘಟನೆಗೆ ವ್ಯಾಪಕ ಖಂಡನೆ ಕೂಡ ವ್ಯಕ್ತವಾಗಿದೆ.

ಅಂದ್ಹಾಗೆ ಆಗಿದ್ದೇನು ಗೊತ್ತಾ…?: ತಾಯಿಯೋರ್ವರು ತನ್ನ ಮಗಳು- ಮಗನೊಂದಿಗೆ ಬಿಜಾಪುರಕ್ಕೆ  ಹೋಗಲು ಕೋಲಾರದಿಂದ  ಬಂದ ವಿಜಯಪುರ ಮಾರ್ಗದ KSRTC ಬಸ್ ಹತ್ತಿದ್ದಾರೆ( ನೊಂದಣಿ ಸಂಖ್ಯೆ KA-07-F1808) ಬೆಳ್ಳಿಗೆ 8:30  ಕ್ಕೆ ಗೌರಿಬಿದನೂರು ಕಡೆಗೆ ಹೋರಾಟ ತಾಯಿ-ಮಗಳು ಮಗ ವಿಜಯಪುರದಲ್ಲಿ ಬಸ್ ಹತ್ತಿದ್ದಾರೆ. ಬಸ್ ಹತ್ತಿದ ಮೂವರು ಕೂಡ ಟಿಕೆಟ್ ಪಡೆದಿದ್ದಾರೆ.ಚಿಕ್ಕಬಳ್ಳಾಪುರದ  ಬಸ್ ನಿಲ್ದಾಣದಲ್ಲಿ ಎರಡು ನಿಮಿಷಗಳ ಕಾಲ ಬಸ್ ನಿಲ್ಲಿಸಿದಾಗ ತಾಯಿ-ಮಗಳು ಜತೆಯಲ್ಲಿದ್ದ  ಮಗನನ್ನು ಕುಡಿಯುವ ನೀರಿನ ಬಾಟಲ್ ತರಲು ಕಳುಹಿಸಿಕೊಡುತ್ತಾರೆ.

INSULT TO KSRTC…BY THIS DRIVER-CONDUCTOR..!? ಈ “ಡ್ರೈವರ್-ಕಂಡಕ್ಟರ್” KSRTC ಸಮುದಾಯಕ್ಕೇನೆ ಕಳಂಕ..?!

ನೀರಿನ ಬಾಟಲಿ ಹಿಡಿದು ಮಗ 45 ರಿಂದ 50 ಸೆಕೆಂಡ್ ಗಳಲ್ಲಿ ಬಸ್ ಬಳಿ ಬಂದ್ರೆ ಬಸ್ ಅಲ್ಲಿಲ್ಲ.ಹೊರಟ ಬಸ್ ನ್ನು ನಿಲ್ಲಿಸುವಂತೆ ಆ ತಾಯಿ-ಮಗಳು ಪರಿಪರಿಯಾಗಿ ಕೇಳುತ್ತಾರೆ.ಆದರೆ ಅದಕ್ಕೆ ಸ್ಪಂದಿಸಿಲ್ಲ.ಅವರೊಂದಿಗೆ ಅನಾಗರಿಕರಂತೆ ವರ್ತಿಸಿದ್ದಾರೆ.ಬಸ್ ನ್ನೂ ನಿಲ್ಲಿಸದ ಅವರೊಂದಿಗೆ ತಾಯಿ-ಮಗಳು ಗಲಾಟೆ ಮಾಡಿದ್ದಾರೆ.ಆ ವೇಳೆ ತಾಯಿ-ಮಗಳ ಮಯ ಮುಟ್ಟಿ,ಅಸಭ್ಯವಾಗಿ ಅವರೊಂದಿಗೆ ವರ್ತಿಸಿದ್ದಾರೆನ್ನಲಾಗಿದೆ.

ಹಂಗೂ ಹಿಂಗು ಬಸ್  ಗೌರಿಬಿದನೂರು ಬಸ್ ನಿಲ್ದಾಣಕ್ಕೆ ಬಂದಿದೆ.ಗಾಬರಿ-ಆತಂಕ-ದುಃಖದಿಂದ ತಾಯಿ- ಮಗಳು ಅಲ್ಲಿನ TC ಯವರಿಗೆ ವಿಷಯ ತಿಳಿಸಿದ್ದಾರೆ.ಅವರೊಂದಿಗೆ ಮಾನವೀಯವಾಗಿ ವರ್ತಿಸಬೇಕಿದ್ದ  TC ಸಹ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ದಿನ ಸಾಯೋರಿಗೆ ಅಳೋರ್ಯಾರ್  ಹೋಗಮ್ಮ ಎಂದು ಗದರಿಸಿದ್ದಾರೆ. ಯಾರ ನೆರವನ್ನು ಕೇಳಿದ್ರೂ ಅಧಿಕಾರಿಗಳಿಂದ ಸ್ಪಂದನೆ ಸಿಕ್ಕಿಲ್ಲ.

ತಾಯಿ ಮಗಳು ಸಹ  ಪ್ರಯಾಣಿಕರ ಸಹಾಯ ಸಹ ಸಿಗದೆ ವಿಜಯಪುರದ ನಿವಾಸಕ್ಕೆ ಮರಳಿದ್ದಾರೆ.ತನಗೆ ಆದ ಅನ್ಯಾಯ ಮತ್ತು ಚಾಲಕ-ನಿರ್ವಾಹಕರ ಅಮಾನವೀಯ ವರ್ತನೆ ಬಗ್ಗೆ  ಚಿಕ್ಕಬಳ್ಳಾಪುರ ಡಿಪೋ ಮ್ಯಾನೇಜರ್ ಗೇ ಯುವತಿ 15-08-2022 ರಂದು ದೂರು ನೀಡಿದ್ದಾರೆ.

ಈ ಒಂದು ಘಟನೆ ನಿಜಕ್ಕೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಪ್ರಯಾಣಿಕರಿಗೆ ಮಾನವೀಯ ರೀತಿಯಲ್ಲಿ ಸ್ಪಂದಿಸುತ್ತಿರುವ ಅದೆಷ್ಟೋ ಚಾಲಕ-ನಿರ್ವಾಹಕರಿಗೆ ಕಪ್ಪುಚುಕ್ಕೆ ತಂದಂತಿದೆ.ಘಟನೆಯಲ್ಲಿ ಸಿಬ್ಬಂದಿ ತಪ್ಪಿತಸ್ಥರೇ ಆಗಿದ್ದಲ್ಲಿ ಅವರಿಗೆ ಶಿಕ್ಷೆ ಕೊಡಬೇಕು..ನೊಂದವರಿಗೆ ನ್ಯಾಯ ದೊರಕಿಸಿಕೊಡಲೇಬೇಕು.

Spread the love

Related Articles

Leave a Reply

Your email address will not be published.

Back to top button
Flash News