BreakingMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿಸಿನೆಮಾ ಹಂಗಾಮ

WILL WHOLE SANDALWOOD STAND BEHIND DARSHAN’S KRANTHI..?! “ದರ್ಶನ್” ಬೆನ್ನಿಗೆ ನಿಲ್ಲುತ್ತಾ ಚಿತ್ರರಂಗ:”ಕ್ರಾಂತಿ” ಕ್ಯಾಂಪೇನ್ ಗೆ “ಸ್ಟಾರ್ ನಟ”ರ ಮನೆ ಬಾಗಿಲು ತಟ್ಟೊಕ್ಕೆ “ಡಿ-ಬಾಸ್” ಫ್ಯಾನ್ಸ್ ರೆಡಿ..

ಬೆಂಗಳೂರು:ಇದೊಂದ್ ರೀತಿ ಕನ್ನಡ ಚಿತ್ರರಂಗಕ್ಕೆ ಅತ್ತ ದರಿ ಇತ್ತ ಪುಲಿ ಎನ್ನುವಂತ ಸ್ಥಿತಿ..ಚಿತ್ರರಂಗ ಎನ್ನುವ ಕುಟುಂಬದ “ಹಿರಿಮಗ”ನಿಗೆ ನ್ಯೂಸ್ ಚಾನೆಲ್ ಗಳು ಬಹಿಷ್ಕಾರ ಹಾಕಿರುವ ವೇಳೆ ಆತನ ಬೆನ್ನಿಗೆ ನಿಲ್ಲಬೇಕೋ…ಅಥವಾ ನ್ಯೂಸ್ ಚಾನೆಲ್ ಗಳಿಂದ ಅಂತರ ಕಾಯ್ದುಕೊಳ್ಳಬೇಕೋ. ಎನ್ನುವ ಗೊಂದಲ ಚಿತ್ರೋದ್ಯಮದ ಮುಂದೆ ನಿರ್ಮಾಣವಾಗಿದೆ.

ದರ್ಶನ್ ರನ್ನು ಬೆಂಬಲಿಸಬೇಕೋ.. ನ್ಯೂಸ್ ಚಾನೆಲ್ ಗಳ ಜತೆ ಎಂದಿನ ಸ್ನೇಹ-ಆತ್ಮೀಯತೆ-ಅಂಡರ್ ಸ್ಟ್ಯಾಂಡಿಂಗ್ ಮುಂದುವರೆಸಿ ಕೊಂಡು ಹೋಗಬೇಕೋ..ತಿಳಿಯದ ಸಂದಿಗ್ಧ ಸ್ಥಿತಿಯಲ್ಲಿದೆ ಗಾಂಧೀನಗರಿ.

ಚಾಲೆಂಜಿಂಗ್ ಸ್ಟಾರ್ ಎಂದ್ರೆ ವಿವಾದ…ವಿವಾದ ಎಂದ್ರೆ ದರ್ಶನ್ ಎನ್ನುವಂತಾಗಿದೆ.ಮೊನ್ನೆ ಅವರೇ ಹೇಳಿದಂತೆ ನಾನೇ ಮಾತ್ನಾಡಿದ್ರು ಕಾಂಟ್ರವರ್ಸಿಯಾಗುತ್ತದೆ ಎನ್ನುತ್ತಲೇ ಬಹುದೊಡ್ಡ ಕಂದಕವನ್ನು ನ್ಯೂಸ್ ಚಾನೆಲ್ ಜತೆ ಸೃಷ್ಟಿಸಿಕೊಂಡಿದ್ದಾರೆ.ಅದು ಅವರ ಸ್ವಯಂಕೃತಾಪರಾಧವೋ..ಅಥವಾ ಪರಿಸ್ತಿತಿಗಳೋ ಅದರ ಅವಲೋಕನ ಸಾಕಷ್ಟು ಸನ್ನಿವೇಶಗಳಲ್ಲಿ ಆಗಿದೆ..

ಆದ್ರೂ ಅಭಿಮಾನಿಗಳು ಮಾತ್ರ ನ್ಯೂಸ್ ಚಾನೆಲ್ ಗಳು ಕೈಬಿಟ್ಟರೇನು..ನಮ್ಮ ಹೀರೋನ ನಾವ್ ಬೆಂಬಲಿಸ್ತೇವೆ. .ನ್ಯೂಸ್ ಚಾನೆಲ್ ಗಳ ಹೊರತಾಗ್ಯೂ ಕ್ರಾಂತಿಯನ್ನು ಗೆಲ್ಲಿಸ್ತೇವೆ ಎಂದು ಪಟ್ಟುಹಿಡಿದಿರುವುದು ಕನ್ನಡ ಚಿತ್ರೋದ್ಯಮದ ಇತಿಹಾಸದಲ್ಲೇ ಇದು ಮೊದಲಿರಬೇಕು ಎನ್ಸುತ್ತೆ..ನ್ಯೂಸ್ ಚಾನೆಲ್ ಗಳೊಂದಿಗೆ ಠಕ್ಕರ್ ತೆಗೆದುಕೊಳ್ಳುವ ಷ್ಟು ಕೆಪಾಸಿಟಿ ಇನ್ನೊಬ್ಬ ನಟನಿಗೆ ಇಲ್ಲದ ಸನ್ನಿವೇಶ ಗಮನಿಸಿದ್ರೆ ಇದೇ ಕೊನೆಯೂ ಆಗ್ಬೋದು.. ಅನ್ಸುತ್ತೆ.

ಇದು ಒತ್ತಟ್ಟಿಗಿರಲಿ,ಕನ್ನಡ ಚಿತ್ರರಂಗ ಸಧ್ಯಕ್ಕೆ ಕ್ರಾಂತಿಯ ವಿಚಾರದಲ್ಲಿ ಸಿಕ್ಕಾಪಟ್ಟೆ ಗೊಂದಲಕ್ಕೆ ಸಿಲುಕಿದೆ. ದರ್ಶನ್ ನ್ನು ಬೆಂಬಲಿಸಬೇಕೆನ್ನುವ ಇರಾದೆ ಇದ್ದ ಹೊರತಾಗ್ಯೂ ನ್ಯೂಸ್ ಚಾನೆಲ್ ಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತಲ್ಲ ಎಂದು ಪೇಚಿಗೆ ಸಿಲುಕಿದೆ.

ಕ್ರಾಂತಿಯನ್ನು ಮೆಚ್ಚಿ ಮಾತನಾಡಿದ್ರೆ ಅದು ಯಾವ್ ಚಾನೆಲ್ ಗಳಲ್ಲೂ ಟೆಲಿಕಾಸ್ಟ್ ಆಗೊಲ್ಲ. ಒಂದೊಮ್ಮೆ ದರ್ಶನ್ ಬಗ್ಗೆ ಮಾತನಾಡಿದ್ರೆ ನ್ಯೂಸ್ ಚಾನೆಲ್ ಗಳೂ ನಮ್ಮಿಂದಅಂತರ ಕಾಯ್ದುಕೊಂಡುಬಿಡುತ್ವಾ..ನ್ಯೂಸ್ ಚಾನೆಲ್ ಗಳ ಜತೆಗಿನ ಸಂಘರ್ಷ ಅನಗತ್ಯವಾಗಿ ನಮಗೇಕೆ ಬೇಕೆನ್ನುವ ಮನಸ್ತಿತಿಯಲ್ಲಿರೋರೇ ಹೆಚ್ಚಾಗಿದ್ದಾರೆ.ಹಾಗಾಗಿನೇ ಒಂದು ವರ್ಗದ ನಟರನ್ನು ಬಿಟ್ಟು ಬಿಗ್ ಸ್ಟಾರ್ ಗಳು ಡಿ ಬಾಸ್ ಅವರ ಬಗ್ಗೆಯಾಗಲಿ,ಕ್ರಾಂತಿ ಬಗ್ಗೆಯಾಗಲಿ ಮಾತನಾಡುವ ಗೋಜಿಗೇ ಹೋಗುತ್ತಿಲ್ಲ ಎನ್ನಲಾಗಿದೆ.

ಆದರೆ ಕೆಲವು ಮೂಲಗಳ ಪ್ರಕಾರ ಕ್ರಾಂತಿಯನ್ನು ಬೆಂಬಲಿಸಲಿಕ್ಕೆ ಇಡೀ ಚಿತ್ರರಂಗ ಅಣಿಯಾಗುತ್ತಿದೆ ಯಂತೆ.ಹಾಗಂತ ಇದು ನ್ಯೂಸ್ ಚಾನೆಲ್ ಗಳಿಗೆ ಕೊಡ್ತಿರೋ ಠಕ್ಕರ್ ಅಲ್ವಂತೆ..ಕ್ರಾಂತಿ ಗೆಲ್ಲಬೇಕು..ದರ್ಶನ್ ಗೆಲ್ಲಬೇಕು..ಈ ಮೂಲಕ ನಿರ್ಮಾಪಕ ಗೆಲ್ಲಬೇಕು ಎನ್ನುವುದಷ್ಟೇ ನಮ್ಮ ಉದ್ದೇಶ ಎನ್ನುತ್ತಿದ್ದಾರಂತೆ.

ಹಾಗಾಗಿನೇ ದರ್ಶನ್ ಅವರ ಕ್ರಾಂತಿಯನ್ನು ಕಲಾವಿದರೇ ಪ್ರಮೋಟ್ ಮಾಡೊಕ್ಕೆ ನಿರ್ಧರಿಸಿದ್ದಾರಂತೆ. ಆದರೆ ಯಾರು ಅದರ ಮುಂದಾಳತ್ವ ವಹಿಸ್ತಾರೆನ್ನವುದು ಮಾತ್ರ ಸಧ್ಯಕ್ಕೆ ಗೊತ್ತಾಗಿಲ್ಲ.

ಅನೇಕ ನಟರು ಈಗಾಗಲೇ ಕ್ರಾಂತಿ ಪ್ರಮೋಷನ್ ಗೆ ಕೈ ಹಾಕಿಯಾಗಿದೆ.ಆದರೆ ಕ್ರಾಂತಿ-ದರ್ಶನ್ ನ್ನು ಬೆಂಬಲಿಸುವ ಭರಾಟೆಯಲ್ಲಿ ನ್ಯೂಸ್ ಚಾನೆಲ್ ಗಳ ವಿರೋಧ ಕಟ್ಟಿಕೊಂಡಿಲ್ಲ.

ಡಿಪ್ಲಮ್ಯಾಟಿಕ್ ಅಗಿಯೇ ಚಿತ್ರದ ಬಗ್ಗೆ ಮಾತನಾಡಿದ್ದಾರೆ.ಆದರೆ ಡಿ ಬಾಸ್ ಅಭಿಮಾನಿಗಳ ಆಕಾಂಕ್ಷೆ ಶಿವಣ್ಣ,ಕಿಚ್ಚ ಸುದೀಪ್,ಜಗ್ಗೇಶ್,ರವಿಚಂದ್ರನ್ ಅವರಂಥ ನಟರು  ಕ್ರಾಂತಿಯನ್ನು ಪ್ರಮೋಷನ್ ಮಾಡ್ಬೇಕೆನ್ನೋದು.ಇದಕ್ಕಾಗಿ ಸೋಶಿಯಲ್ ಮೀಡಿಯಾಗಳಲ್ಲೂ ಕ್ಯಾಂಪೇನ್ ಶುರುವಾಗಿದೆಯಂತೆ.

ಆದರೆ “ಕ್ರಾಂತಿ” ಪ್ರಮೋಷನ್ ವಿಚಾರದಲ್ಲಿ ಅವರಿಂದ ಸ್ಪಷ್ಟತೆ-ಖಚಿತತೆ ಸಿಕ್ಕಿಲ್ಲ.ಒಂದ್ವೇಳೆ ದರ್ಶನ್ ರ ಕ್ರಾಂತಿ ಬಗ್ಗೆ ಮಾತನಾಡಿದ್ರೇನೆ, ತಮ್ಮ ವಿರುದ್ಧ ಮಾತನಾಡು ತ್ತಿದ್ದಾರೆ ಎಂದು ನ್ಯೂಸ್ ಚಾನೆಲ್ ಗಳು ಪರಿಭಾವಿಸುತ್ತವೇನೋ ಎನ್ನುವ ಅಳುಕು ನಟರಿಗಿದೆಯೋ ಗೊತ್ತಾಗ್ತಿಲ್ಲ.

ಅದೇನೇ ಆಗಲಿ, ಕ್ರಾಂತಿ ಹಾಗೂ ದರ್ಶನ್ ವಿಚಾರದಲ್ಲಿ ಕನ್ನಡ ಚಿತ್ರೋದ್ಯಮ ಹಿಂದೆಂದೂ ಎದುರಿಸಲಿರಲಾರದಂಥ ಸಂದಿಗ್ಧ ಸನ್ನಿವೇಶಕ್ಕೆ ಮುಖಾಮುಖಿ ಯಾಗಿರೋದಂತೂ ಸತ್ಯ..ಚಿತ್ರೋದ್ಯಮದ ಒಗ್ಗಟ್ಟು-ಮನಸ್ತಿತಿ ದರ್ಶನ್ ವಿಚಾರದಲ್ಲಿ ಹೇಗಿದೆ ಎಂದು ಟೆಸ್ಟ್ ಮಾಡೊಕ್ಕೆ ಅವರ ಅಭಿಮಾನಿಗಳೇ ಇನ್ಮುಂದೆ ಸ್ಟಾರ್ ನಟರ ಮನೆ ಬಾಗಿಲು ತಟ್ಟೊಕ್ಕೆ ಸಿದ್ಧವಾಗಿದ್ದರಂತೆ ಎನ್ನುವ ಸುದ್ದಿ ಗಾಂಧೀನಗರದಲ್ಲಿ ಕೇಳಿಬರಲಾರಂಭಿಸಿದೆ.

Spread the love

Related Articles

Leave a Reply

Your email address will not be published.

Back to top button
Flash News