ಬೆಂಗಳೂರಲ್ಲಿ ಬೀದಿ ನಾಯಿಗಳೆಂದ್ರೆ ಅಷ್ಟೇಕೆ ವೈರತ್ವ..

0

ರಾಜಧಾನಿ ಬೆಂಗ್ಳೂರಲ್ಲಿ ಮನುಷ್ಯಂಗೂ ಬೀದಿನಾಯಿಗೂ ಅದ್ಹೇಕೆ ಎಣ್ಣೆ ಸೀಗೆ ವೈರತ್ವವೋ ಗೊತ್ತಾಗ್ತಿಲ್ಲ.ಬೀದಿನಾಯಿಗಳು ಮನುಷ್ಯರನ್ನು ಕಂಡ್ರೆ ರಕ್ಕಸರಂತೆ ಮೇಲೆರಗಿ ದಾಳಿ ಮಾಡ್ತಿವೆ.ಅವುಗಳ ದಾಳಿಗೆ ಜೀವಗಳು ಕೂಡ ಬಲಿಯಾಗಿ ಹೋಗಿವೆ.ಇಷ್ಟೊಂದು ಸಂಪನ್ಮೂಲ ಇದ್ದ ಹೊರತಾಗ್ಯೂ ನಾಯಿಗಳ ಉಪಟಳಕ್ಕೆ ಬಿಬಿಎಂಪಿ ಏಕೆ ಬ್ರೇಕ್ ಹಾಕ್ಲಿಕ್ಕಾಗ್ತಿಲ್ಲ ಎನ್ನುವುದರ ಇಂಟರೆಸ್ಟಿಂಗ್ ಸ್ಟೋರಿ ಕನ್ನಡಫ್ಲ್ಯಾಶ್ನ್ಯೂಸ್.ಕಾಂನಲ್ಲಿ

ಬೆಂಗಳೂರಲ್ಲಿ ಬೀದಿನಾಯಿಗಳಿಂದ ತಿಂಗಳಿಗೆ ಕಚ್ಚಿಸಿಕೊಳ್ಳುವವರ ಸಂಖ್ಯೆ 1 ಸಾವಿರ…ಒಂದ್ ಕ್ಷಣ ಎಂಥವ್ರನ್ನೂ ಆತಂಕಕ್ಕೀಡು ಮಾಡ್ದೆ ಇರೊಲ್ಲ ಈ ಸ್ಟ್ಯಾಟಿಸ್ಟಿಕ್ಸ್.ಇಷ್ಟೊಂದು ಜ‌‌ನ ನಾಯಿಗಳಿಂದ ಕಡಿಸಿಕೊಳ್ತಿದಾರಾ ಎನ್ನೋದು ನಿಮ್ ಪ್ರಶ್ನೆಯಾದ್ರೆ ವಿತ್ ಅಂಕಿಅಂಶ ನಿಮ್ಮ ಮುಂದೆ ಇಡ್ತಿದೆ ಕನ್ನಡಫ್ಲ್ಯಾಶ್ನ್ಯೂಸ್.ಕಾಂ

ವರ್ಷ    ನಾಯಿ ಕಡಿತ ಪ್ರಕರಣ 

1-2017.    7564

2-2018.    5988

ಪ್ರತಿ 500 ಮೀಟರ್ ಗೂ 5 ರಿಂದ 6 ನಾಯಿಗಳು ಸಿಗುವಂತ ಪರಿಸ್ಥಿತಿ ಇರುವ ಬೆಂಗಳೂರಲ್ಲಿ,2017 ರಲ್ಲಿ 7564 ನಾಯಿ ಕಡಿತ ಪ್ರಕರಣ ವರದಿಯಾಗಿದ್ವು.ಅದೇ 2018 ರಲ್ಲಿ 5988 ಜನ ನಾಯಿಗಳಿಂದ ಕಚ್ಚಿಸಿಕೊಂಡಿದ್ರು ಎನ್ನುತ್ವೆ ಸರ್ವೆ.ಆದ್ರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಎಷ್ಟ್ ನಾಯಿಗಳಿವೆ ಎನ್ನೋದೇ ಗೊತ್ತಿರದ ನಾಲಾಯಕ್ ಅಧಿಕಾರಿಗಳಿಗೇ ಈ ಮಾಹಿತಿ ಇಲ್ಲ ಎನ್ನುತ್ತಾರೆ ನಿವೃತ್ತ ಪಶುಪಾಲನಾ ಇಲಾಖೆ ಅಧಿಕಾರಿಯೊಬ್ಬರು.

ಎಷ್ಟಿವೆಗೊತ್ತಾಬೀದಿನಾಯಿಗಳು:2012ರ ಸರ್ವೆ ಪ್ರಕಾರ,ಬೆಂಗಳೂರಿನಲ್ಲಿ 1ಲಕ್ಷದ 83 ಸಾವಿರ ಬೀದಿ ನಾಯಿ,1 ಲಕ್ಷದ 43 ಸಾವಿರ ಸಾಕುನಾಯಿಗಳಿದ್ವಂತೆ.ಈ ಓಬಿರಾಯನ ಕಾಲದ ಸೆನ್ಸೆಸ್ ರಿಪೋರ್ಟನ್ನೇ ಇವತ್ತಿಗೂ ತೋರ್ಸೋ ಅಧಿಕಾರಿಗಳು ಇವತ್ತೇನಾದ್ರೂ ಗಣತಿ ಮಾಡುದ್ರೆ  ಒಂದ್ ಅಂದಾಜ್ 6 ಲಕ್ಷ ನಾಯಿಗಳು ಸಿಗ್ಬೋದೇನೋ ಎಂದು ಹೇಳ್ತಾರೆ ಪಶುಪಾಲನಾ ಇಲಾಖೆ ಜಂಟಿ ನಿರ್ದೇಶಕ.

ಎಬಿಸಿಎನ್ನೋದೇಅಕ್ರಮ:ಇದಿಷ್ಟ್ ಒಂದ್ ಕಥೆಯಾದ್ರೆ ಬೀದಿ ನಾಯಿ ಹಾವಳಿ ತಡೆಯೊಕ್ಕಂತ ಇರುವ  ABCಯಲ್ಲಿ ನಡೆಯುತ್ತಿರುವ ಅಕ್ರಮದ್ದು ಮತ್ತೊಂದ್ ಕಥೆ,ಎಷ್ಟ್ ನಾಯಿಗಳಿವೆ ಎನ್ನೋದೇ ಗೊತ್ತಿರದ ಇವ್ರು ಕೆಲ ಎನ್ ಜಿಓ ಗಳು 2000ರಿಂದ 2017 ರವರೆಗೆ  5,92,144 ಲಕ್ಷ ನಾಯಿಗಳ ಸಂತಾನ ಹರಣ ಮಾಡಿರೋದಾಗಿ ಹೇಳಿ ನೀಡಿರುವ ಬಿಲ್ಲನ್ನು ಅಧಿಕಾರಿಗಳು ಕಣ್ಮುಚ್ಚಿಕೊಂಡು ಸ್ಯಾಂಕ್ಷನ್ ಮಾಡಿದ್ದಾರೆ.ಆ ಅಮೌಂಟ್  ಎಷ್ಟು ಗೊತ್ತೇ, ಬರೋಬ್ಬರಿ 34 ಕೋಟಿ ಎನ್ತಾರೆ ಪ್ರಾಣಿದಯಾ ಸಂಘದ  ನವೀನಾ ಕಾಮತ್’.

ಯಾಕ್ಕಡಿಯುತ್ತವೆಗೊತ್ತಾನಾಯಿಗಳು:ಬೀದಿನಾಯಿಗಳು ಕೂಡ ಕಾರಣಗಳಿಲ್ಲದೆ  ಮಾನವನ ಮೇಲೆರಗೊಲ್ಲ ಎನ್ನೋದನ್ನೂ ಒಪ್ಕೊಬೇಕು.ಕಸದ ಅಸಮರ್ಪಕ ನಿರ್ವಹಣೆ..ಮಾಂಸದ  ತ್ಯಾಜ್ಯವನ್ನು ಬೇಕೆಂದ್ರಲ್ಲಿ ಬಿಸಾಕೋದ್ರಿಂದ ನಾಯಿಗಳು ಅವಕ್ಕೆ ಅಟ್ರ್ಯಾಕ್ಟ್ ಆಗ್ತವೆ.ಹೊರಭಾಗದಿಂದ ನಗರಕ್ಕೆ ಬರ್ತಿರೋ ಬೀದಿನಾಯಿಗಳಿಗೂ ಬ್ರೇಕ್ ಹಾಕಲು ಬಿಬಿಎಂಪಿ ಸೋತಿದೆ ಎನ್ತಾರೆ ಬೀದಿ ನಾಯಿಗಳ ಹಕ್ಕಿಗಾಗಿ ಹೋರಾಡುತ್ತಿರುವ ನ್ಯಾಯವಾದಿ ಗೀತಾ ಮಿಶ್ರಾ.

ಇದಿಷ್ಟೇ ಅಲ್ಲ ,ರೇಗಿಸೋದ್ರಿಂದ,ಮರಿಗಳಿಗೆ ಜನ್ಮ ನೀಡಿ ಪೋಷಿಸುವ ಅವಧಿಯಲ್ಲಿ ಮುಟ್ಟೋದ್ರಿಂದ, ಆಹಾರ ತಿನ್ನುವಾಗ  ನಿದ್ರಿಸುವಾ ಗ, ಬೊಗಳುವಾಗ ಗುರುಗುಟ್ಟುತ್ತಾ ಹತ್ತಿರಕ್ಕೆ ಬಂದರೆ ಕಿರುಚುವುದರಿಂದಲೂ ನಾಯಿಗಳು ದಾಳಿ ಮಾಡುವ ಸಾಧ್ಯತೆಗಳಿವೆ.ಎಲ್ಲಕ್ಕಿಂತ ಹೆಚ್ಚಾಗಿ ಏನೂ ಗೊತ್ತಿಲ್ಲದ ಮುಗ್ಧ ಮಕ್ಕಳನ್ನು ನಾಯಿಗಳ ಬಳಿ ಬಿಡುವುದು ಮಾರಣಾಂತಿಕವಾಗ್ತಿದೆ.

ಆದ್ರೆ ಇವನ್ನೇ ನೆವವಾಗಿಟ್ಟುಕೊಂಡು ಕಾಲಹರಣ ಮಾಡ್ತಾ,ನಿಷ್ಪಾಪಿ ನಾಯಿಗಳ ಸಂತಾನಹರಣ ನಿಯಂತ್ರಣದ ಹೆಸರಿನಲ್ಲಿ ಲಕ್ಷಾಂತರ ಲೂಟ್ ಮಾಡೋದ್ರಲ್ಲೇ ಬಿಬಿಎಂಪಿ ನಿರತವಾಗಿದೆ.ಇದನ್ನು ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದಿದ್ದರೆ ಇವತ್ತು ನಾಯಿಗಳು ಹಾಗೂ ಮನುಷ್ಯರ ನಡುವೆ ಇಷ್ಟೊಂದು ದ್ವೇಷಕಾರುವ ಸಂಘರ್ಷವೇ ಏರ್ಪಡುತ್ತಿರಲಿಲ್ಲ ಅಲ್ಲವೇ..

Spread the love
Leave A Reply

Your email address will not be published.

Flash News