BreakingMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿಬೆಡಗು-ಬಿನ್ನಾಣರಾಜ್ಯ-ರಾಜಧಾನಿಸಿನೆಮಾ ಹಂಗಾಮ

KANNADA SENIOR ACTOR@ KGF CHAACHA SUFFERING FROM CANCER…“ಕೆಜಿಎಫ್ ಚಾಚಾ”ಬದುಕಬೇಕು….ಕ್ಯಾನ್ಸರ್ ವಿರುದ್ಧ ಗೆಲ್ಲಬೇಕು…..ಗತ ಇತಿಹಾಸ ಮರುಕಳಿಸಬೇಕು..ಬೆಳ್ಳಿತೆರೆಯಲ್ಲಿ ವಿಜೃಂಭಿಸಬೇಕು.

ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಹಿರಿಯ "ಖಳನಟ"ನಿಗೆ ಬೇಕಿದೆ ಕನ್ನಡ ಚಿತ್ರರಂಗದ ಆರ್ಥಿಕ ನೆರವು..:ಸಹಾಯದ ನಿರೀಕ್ಷೆಯಲ್ಲಿದೆ ರಾಯ್ ಕುಟುಂಬ..

ಬೆಂಗಳೂರು: ಸಾಕಷ್ಟು ಕಲಾವಿದರ ಬದುಕೇ ಹೀಗೆ…ಬೆಳ್ಳಿತೆರೆ ಮೇಲೆ ವಿಜ್ರಂಭಿಸಿದ್ರೂ ವೈಯುಕ್ತಿಕ ಬದುಕಿನಲ್ಲಿ ತೀರಾ ಹದಗೆಟ್ಟ ಸ್ಥಿತಿಯಲ್ಲಿರುತ್ತಾರೆ.

ಅವರ ಬದುಕು ಧಾರುಣವಾಗಿರುತ್ತೆ..  ಇದಕ್ಕೆ ಹಲವಾರು ಸಿನೆಮಾಗಳಲ್ಲಿ ವಿಲನ್ ಆಗಿ ಮಿಂಚಿ ಎಲ್ಲರ ಪ್ರೀತಿಗೆ ಪಾತ್ರವಾಗಿರುವ ನಟ ಹರೀಶ್ ರೈ ಅವರ ಸ್ತಿತಿಯೇ ಜ್ವಲಂತ ನಿದರ್ಶನ.ಕ್ಯಾನ್ಸರ್ ನಂಥ ಮಾರಣಾಂತಿಕ ಸಮಸ್ಯೆಗೆ ತುತ್ತಾಗಿರುವ ಹರೀಶ್ ರೈ ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದಾರೆನ್ನುವ  ಅಘಾತಕಾರಿ ಸುದ್ದಿ ಹೊರಬಿದ್ದಿದೆ.

ಹಾಗಾಗಿ ಚಿತ್ರರಂಗಕ್ಕೆ ತಮ್ಮ ನಟನೆಯ ಮೂಲಕ ಸಾಕಷ್ಟು ಕೊಡುಗೆ ನೀಡಿರುವ ಹಿರಿಯ ನಟನ ನೆರವಿಗೆ ಧಾವಿಸಿ ಅವರನ್ನು ಬದುಕುಳಿಸಿಕೊಳ್ಳುವುದು ಕನ್ನಡ ಚಿತ್ರರಂಗದ ಮೊದಲ ಆಧ್ಯತೆಯಾಗಬೇಕಿದೆ.

ಹರೀಶ್ ರಾಯ್ ಕರಾವಳಿಯ ಪ್ರತಿಭೆ.ಬೆಳ್ಳಿತೆರೆ ಮೇಲೆ ವಿಜೃಂಭಿಸೊಕ್ಕೆ ಬೆಂಗಳೂರು ಕರ್ಮಭೂಮಿಯನ್ನಾಗಿಸಿಕೊಂಡ್ರು ತಮ್ಮ ಮೂಲ ಬೇರುಗಳ್ನು ಕರಾವಳಿಯಲ್ಲೇ ಉಳಿಸಿಕೊಂಡಿದ್ದಾರೆ.

ಇಂಥಾ ಕಲಾವಿದ ಅನಾರೋಗ್ಯದ ನಡುವೆಯೂ ಕೆಜಿಎಫ್ ಚಿತ್ರದಲ್ಲಿ ಬೆಳೆದಿದ್ದು ಆಪರೇಷನ್ ಹಂತ,ಓಂ,ಸಿಬಿಐ ದುರ್ಗಾ,ತಾಯವ್ವ,ಕರ್ನಾಟಕ ಪೊಲೀಸ್, ಗರುಡಾ,ಮೆಜೆಸ್ಟಿಕ್, ಕತ್ತೆಗಳು ಸಾರ್ ಕತ್ತೆಗಳು, ನಲ್ಲ, ಡೆಡ್ಲಿ ಸೋಮ,ಪೊಲೀಸ್ ಸ್ಟೋರಿ, ಸಂಜು ವೆಡ್ಸ್ ಗೀತಾ, ಜಿಂಕೆಮರಿ, ದಿ ಪ್ಲ್ಯಾನ್, ರಾಜ್ ಬಹದ್ದೂರ್, ಬೆಂಗಳೂರು ಅಂಡರ್ ವರ್ಲ್ಡ್ ನಂಥ ಸಿನೆಮಾಗಳಲ್ಲಿ ನಟಿಸಿರುವ ಹರೀಶ್ ರಾಯ್ ಅನೇಕ ಕಾರಣಗಳಿಂದ ತೆರೆಯಿಂದ ಸರಿದೋದರು.

ಹರೀಶ್ ರಾಯ್ ಎನ್ನುವಂಥ ನಟನೊಬ್ಬ ಇದ್ದನಾ ಎಂದು ಮರೆತೋಗುವಷ್ಟು ಅನೇಕ ವರ್ಷಗಳವರೆಗೂ ತೆರೆಹಿಂದೆ ಸರಿದಿದ್ದ ಹರೀಶ್ ರಾಯ್ ಮತ್ತೆ ಮಿಂಚೊಕ್ಕೆ ಅವಕಾಶ ನೀಡಿದ್ದು ಯಶ್ ಅಭಿಯನದ ಕೆಜಿಎಫ್-2.ಈ ಚಿತ್ರ ಹರೀಶ್ ರೈ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿದ್ರೂ ಅದರಿಂದ ವೈಯುಕ್ತಿಕ ಬದುಕಿಗೆ ಪ್ರಯೋಜನವಾಗಲಿಲ್ಲ.ಆ ಯಶಸ್ಸು ಅವರಿಗೆ ಹೆಸರು ತಂದುಕೊಟ್ಟಿತಾದ್ರೂ ಹೇಳಿಕೊಳ್ಳುವಂಥ ಅವಕಾಶಗಳೇನು ಸಿಗಲಿಲ್ಲ..ಒನ್ಸ್ ಅಗೈನ್ ಹರೀಶ್ ಜೀವನ ಕೇರ್ ಆಫ್ ಫುಟ್ಪಾತ್ ಆಯ್ತೆಂದು ಹೇಳುವವರು ಚಿತ್ರರಂಗದಲ್ಲಿದ್ದಾರೆ,

ನಂಬಿದ ವೃತ್ತಿಜೀವನ ಕೈ ಕೊಟ್ಟ ನೋವಿನಲ್ಲೇ ಜೀವನ ಸವೆಸುತ್ತಿದ್ದ ಹರೀಶ್ ರಾಯ್ ಬದುಕಿಗೆ ದೊಡ್ಡ ಅಘಾತ ನೀಡಿದ್ದು ಅವರನ್ನು ಕಾಡುತ್ತಿದೆ ಎನ್ನಲಾದ ಕ್ಯಾನ್ಸರ್.ಹೌದು..ಕ್ಯಾನ್ಸರ್ ನ ನಾಲ್ಕನೇ ಹಾಗು ಕೊನೇ ಸ್ಟೇಜ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿರುವ ಹರೀಶ್ ರೈರನ್ನು ಉಳಿಸಿಕೊಳ್ಳೊಕ್ಕೆ ಅವರ ಕುಟುಂಬ ಸಾಕಷ್ಟು ಪ್ರಯತ್ನ ಪಡುತ್ತಿದೆ.ಆದರೆ ಈಗ ಅಗತ್ಯವಿರುವುದು ಹಣಕಾಸಿನ ನೆರವು.

ಕನ್ನಡ ಚಿತ್ರರಂಗಕ್ಕೆ ಮನಸು ಮಾಡಿದ್ರೆ ಹರೀಶ್ ರಾಯ್ ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟವಂತು ಅಲ್ಲವೇ ಅಲ್ಲ..ಆದರೆ ಸಮಸ್ಯೆ ಇರುವುದು ಔದಾರ್ಯ- ಹೃದಯವೈಶಾಲ್ಯತೆ ಮೆರೆಯೋರ್ದು.ಈಗಾಗಲೇ ಅವರ ಕಥೆ ಕೇಳಿ ಒಂದಷ್ಟು ನೆರವು ಸಿಕ್ಕಿದೆಯಾದ್ರೂ ಅದು ಅವರ ಜೀವ ಉಳಿಸೊಕ್ಕೆ ಬೇಕಾಗುವಷ್ಟಿಲ್ಲ.ಚಿತ್ರರಂಗದಲ್ಲಿ ಸಾಕಷ್ಟು ದುಡಿದು,ಹಣವುಳ್ಳ ಸ್ಟಾರ್ಸ್ ಗಳು,ಅವರನ್ನು ದುಡಿಸಿಕೊಂಡ ನಿರ್ಮಾಪಕರು, ಹರೀಶ್ ರಾಯ್ ಅವರ ಚಿಕಿತ್ಸೆಗೆ ಹಣ ನೀಡಿದ್ರೆ ನಿಜಕ್ಕೂ ಬಹುಪಕಾರವಾಗುತ್ತದೆ ಹರೀಶ್ ರಾಯ್ ಕೇಳುತ್ತಿರುವುದು ಕೂಡ ಪ್ರಾಣಭಿಕ್ಷೆಯನ್ನು.

ತೆರೆ ಮೇಲೆ ವಿಲನ್ ಆಗಿ ಅಬ್ಬರಿಸಿ,ಅಭಿಮಾನಿಗಳಿಂದ ತೀವ್ರ ಆಕ್ರೋಶ-ತಿರಸ್ಕಾರಕ್ಕೆ ತುತ್ತಾಗಿದ್ದ ಹರೀಶ್ ರಾಯ್ ನಿಜ ಜೀವನದಲ್ಲಿ ಅಷ್ಟೇ ಅಮಾಯಕ.ತಮಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದ್ರೂ ಅದಕ್ಕಾಗಿ ಅವರಿಬರ ಬಳಿ ಕೂಡ ಕೈ ಚಾಚಿಯೇ ಇಲ್ಲ..ಅವರ ಸ್ತಿತಿ ಅರ್ಥ ಮಾಡಿಕೊಂಡವರೇ ಸ್ವಯಂಪ್ರೇರಿತವಾಗಿ ಸಹಾಯ ಮಾಡುತ್ತಿದ್ದಾರೆ.ಹರೀಶ್ ರಾಯ್ ಉಳಿಯಬೇಕು..ಕ್ಯಾನ್ಸರ್ ವಿರುದ್ಧ ಹೋರಾಡಿ ಗೆಲ್ಲಬೇಕು..ಮತ್ತೆ ಹಳೇ ಲಯಕ್ಕೆ ಮರಳಬೇಕು..ತೆರೆ ಮೇಲೆ ವಿಜೃಂಭಿಸಿದ ಗತ ಇತಿಹಾಸ ಮರುಕಳಿಸಬೇಕು.ಇದೇ ಅವರ ನಟನೆಗೆ ಮಾರುಹೋದ ಕೋಟ್ಯಾಂತರ ಅಭಿಮಾನಿಗಳ ಹರಕೆ-ಪ್ರಾರ್ಥನೆ..ಅವರು ಮೊದಲಿನಂತಾಗಲು ಕನ್ನಡ ಚಿತ್ರರಂಗ ಟೊಂಕಕಟ್ಟಿ ನಿಲ್ಲಬೇಕಿದೆಯಷ್ಟೇ.. ಹರೀಶ್ ರಾಯ್ ಬೇಗ ಗುಣಮುಖ ಮತ್ತೆ ಬೆಳ್ಳಿತೆರೆಯನ್ನು ಆವರಿಸುವಂತಾಗಲಿ ಎನ್ನುವುದೇ ಕನ್ನಡ ಫ್ಲ್ಯಾಶ್ ನ್ಯೂಸ್ ಪ್ರಾರ್ಥನೆ ಕೂಡ.

ಹರೀಶ್ ರಾಯ್ ಗೆ ಸಹಾಯ ಮಾಡ ಬಯಸುವವರು ಅವರ ಕೆಳಕಂಡ ಖಾತೆಗೆ ಹಣ ಜಮಾ ಮಾಡಬಹುದು.

A/C NO:38510865963

IFSC CODE:SBIN0004408

GEOGLE PAY NO:9606960656

Spread the love

Related Articles

Leave a Reply

Your email address will not be published.

Back to top button
Flash News