BreakingScrollTop NewsUncategorizedಜಿಲ್ಲೆಫೋಟೋ ಗ್ಯಾಲರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

BBMP DRAFT ELECTORAL ROLL ANNOUNCE: FINAL LIST WILL BE ON SEPTEMBER 22: BBMP ಎಲೆಕ್ಷನ್‌ ಮತದಾರರ ಕರಡು ಪಟ್ಟಿ ರೆಡಿ..ಸೆಪ್ಟೆಂಬರ್‌ 22 ಕ್ಕೆ ಪಟ್ಟಿ ಫೈನಲ್‌…

ಈ ಬಾರಿ ಚುನಾವಣೆಯಲ್ಲಿ 79,08,394 ಮತದಾರರು: ಪುರುಷರು-4109496, ಮಹಿಳೆಯರು -3797497, ಇತರೆ 1401 ಮತದಾರರು

 ಬೆಂಗಳೂರು: ರಾಜ್ಯ ಚುನಾವಣಾ ಆಯೋಗದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ-2022ರ ಸಂಬಂಧ 243 ವಾರ್ಡ್ ವಾರು ಕರಡು ಮತದಾರರ ಪಟ್ಟಿ  ಪ್ರಕಟಿಸಲಾಗಿದೆ. ವಾರ್ಡ್‌ 243 ಗಳಲ್ಲಿ ಒಟ್ಟು 79,08,394 ಮತದಾರರಿದ್ದಾರೆ. ಅದರಲ್ಲಿ 4109496 ಪುರುಷರು, 3797497 ಮಹಿಳೆಯರು ಹಾಗೂ 1401 ಇತರೆ ಮತದಾರರಿದ್ದಾರೆ ಎಂದು  ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಸವರಾಜು ತಿಳಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ -2022 ರ ಚುನಾವಣೆ ಸಂಬಂಧ ಸರ್ಕಾರದ ಅಧಿಸೂಚನೆ ಸಂಖ್ಯೆ: ನಇ 66 ಬಿಬಿಎಸ್ 2022, ಬೆಂಗಳೂರು, 14.07.2022 ರಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 243 ವಾರ್ಡ್‌ಗಳ ಕ್ಷೇತ್ರ ಪುನರ್‌ವಿಂಗಡಣೆ ಮಾಡಿ ಪ್ರತಿ ವಾರ್ಡಿನ ಗಡಿಗಳನ್ನು ಗುರುತಿಸಿ ಅಂತಿಮ ಪಟ್ಟಿಯನ್ನು ಹೊರಡಿಸಲಾಗಿರುತ್ತದೆ.

BBMP ಎಲೆಕ್ಷನ್‌ ಮತದಾರರ ಕರಡು ಪಟ್ಟಿ ರೆಡಿ..ಸೆಪ್ಟೆಂಬರ್‌ 22 ಕ್ಕೆ ಪಟ್ಟಿ ಫೈನಲ್‌…

ರಾಜ್ಯ ಚುನಾವಣಾ ಆಯೋಗದ ಸುತ್ತೋಲೆ ಸಂಖ್ಯೆ: ರಾಚುಅ 149 ಇಯುಬಿ 2022, ದಿನಾಂಕ: 15.07.2022 ರಂತೆ ವಾರ್ಡ್‌ವಾರು ಮತದಾರರ ಪಟ್ಟಿಯನ್ನು ತಯಾರಿಸುವ ಸಂಬಂಧ ಸೂಚನೆ ಮತ್ತು ವೇಳಾಪಟ್ಟಿಯನ್ನು ನೀಡಲಾಗಿರುತ್ತದೆ. ಅದರಂತೆ, ವಿಧಾನಸಭಾ ಕ್ಷೇತ್ರವಾರು ದಿನಾಂಕ: 31.07.2022 ರವರೆಗಿನ ಮತದಾರರ ಮಾಹಿತಿಯನ್ನು ವಾರ್ಡ್ ವಾರು ಪುನರ್ ವಿಂಗಡಿಸಿ ಪಾಲಿಕೆಯ ವಾರ್ಡ್ ವಾರು ಮತದಾರರ ಪಟ್ಟಿಯನ್ನು ಸಿದ್ದಗೊಳಿಸಲಾಗಿರುತ್ತದೆ.

ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ದಿನಾಂಕ: 25.08.2022 ರಂದು ಬಿಬಿಎಂಪಿ ವ್ಯಾಪ್ತಿಯ ವಾರ್ಡ್‌ವಾರು ಮತದಾರರ ಪಟ್ಟಿಯ ಕರಡು ಪ್ರತಿಯನ್ನು ವಲಯ ಜಂಟಿ ಆಯುಕ್ತರುಗಳ ಕಛೇರಿ ಆಯಾ ವ್ಯಾಪ್ತಿಯ ಮತದಾರರ ನೊಂದಣಾಧಿಕಾರಿ/ಸಹಾಯಕ ಮತದಾರರ ನೊಂದಣಾಧಿಕಾರಿ ಮತ್ತು ವಾರ್ಡ್ ಕಛೇರಿಗಳಲ್ಲಿ ಹಾಗೂ www.bbmp.gov.in ನಲ್ಲಿ ಪ್ರಚುರ ಪಡಿಸಲಾಗಿರುತ್ತದೆ.

ಸಾರ್ವಜನಿಕರು/ಮತದಾರರು ತಮ್ಮ ಹಾಗೂ ಕುಟುಂಬದ ಮಾಹಿತಿಯನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು(Claims and Objections) ದಿನಾಂಕ: 25.08.2022 ರಿಂದ 02.09.2022 ರವರೆಗೆ ಸಂಬಂಧಪಟ್ಟ ವ್ಯಾಪ್ತಿಯ ಮತದಾರರ ನೊಂದಣಾಧಿಕಾರಿಗಳ ಕಛೇರಿಗಳಲ್ಲಿ ಸಲ್ಲಿಸಬಹುದಾಗಿರುತ್ತದೆ.

ಬಿಬಿಎಂಪಿ ಎಲೆಕ್ಷನ್‌ ಗೆ ನಾವ್‌ ರೆಡಿ..ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಿಕೊಂಡ್ರೆ ಮಿಕ್ಕಿದ್ದೆಲ್ಲಾ ಓಕೆಯಾಗಿದೆ.:ತುಷಾರ ಗಿರಿನಾಥ್

ಹೊಸದಾಗಿ ಮತದಾರರಾಗಿ ನೊಂದಾಯಿಸಿಕೊಳ್ಳಲು ಮೊಬೈಲ್ ಆ್ಯಪ್ ಆದ Voter Helpline App ಮತ್ತು NVSP Portal ವೆಬ್‌ಸೈಟ್ ಮುಖೇನಾ ವಿಧಾನಸಭಾ ಕ್ಷೇತ್ರವಾರು ಅರ್ಜಿ ಸಲ್ಲಿಸಿದ್ದಲ್ಲಿ ಮುಂದಿನ ಹಂತದಲ್ಲಿ ಪರಿಶೀಲಿಸಿ ವಾರ್ಡ್‌ವಾರು ಮತದಾರರ ಪಟ್ಟಿಯನ್ನು ಸಿದ್ಧಗೊಳಿಸಲು ಕ್ರಮವಹಿಸಲಾಗುತ್ತದೆ.  

**ಅತೀ ದೊಡ್ಡ ವಾರ್ಡ್:ಥಣಿಸಂದ್ರ: 51,653

**ಅತೀ ಕಡಿಮೆ ಸಂಖ್ಯೆಯ ಮತದಾರರ ವಾರ್ಡ್:‌ ಆನೇಕಲ್:‌18,604

Spread the love

Related Articles

Leave a Reply

Your email address will not be published.

Back to top button
Flash News