BreakingMoreScrollTop NewsUncategorizedಕ್ರೈಮ್ /ಕೋರ್ಟ್ಫೋಟೋ ಗ್ಯಾಲರಿರಾಜಕೀಯ

SEXUAL HARRASMENT ALLEGATION OVER “MURUGAA SHARANA SEER”.. ಶಹಬ್ಬಾಷ್ .!! “ಕಾವಿ”ಯೊಳಗಿನ “ಕಾಮ” ಬಟಾಬಯಲು ಮಾಡಿದ “ದಿಟ್ಟ ಹೆಣ್ಣುಮಕ್ಕಳಿಗೆ ಪ್ರಶಂಸೆ..

ಚಿತ್ರದುರ್ಗ "ಬ್ರಹನ್ಮಠ"ದಿಂದ ಹೊರಬಿದ್ದು- "ಒಡನಾಡಿ" ಮಡಿಲು ಸೇರೋವರೆಗಿನ ಆ ಸಾಹಸಿ ಹೆಣ್ಣು ಮಕ್ಕಳ ಕಥೆಯೇ ರೋಚಕ..

ಬೆಂಗಳೂರು/ಚಿತ್ರದುರ್ಗ/ ಮೈಸೂರು: ಮೊದಲು ಆ ಎರಡು ಹೆಣ್ಣು ಮಕ್ಕಳನ್ನು ಅಭಿನಂದಿಸಲೇಬೇಕು. ಮೊದಲನೆಯದಾಗಿ ಮಠದಲ್ಲಿ ಮುಂದುವರೆಯಬಹುದಾಗಿದ್ದ ಲೈಂಗಿಕ ಪರಂಪರೆಗೆ ಬ್ರೇಕ್ ಹಾಕಿದ್ದಕ್ಕೆ…, ಎರಡನೆಯದಾಗಿ ಮಠದೊಳಗಣ ನಡೆಯುತ್ತಿದ್ದ ವ್ಯಭಿಚಾರವನ್ನು ಬಟಾಬಯಲು ಮಾಡಿದ ಅವರ ಸಾಹಸ ಪ್ರವೃತ್ತಿಗೆ.. ಯಾಕಂದ್ರೆ ಬಹಿರಂಗವಾಗಿರುವುದು, ರಾಜ್ಯದ ಅತ್ಯಂತ ಪ್ರಭಾವಿ ಮಠಗಳಲ್ಲೊಂದಾದ  ಚಿತ್ರದುರ್ಗ ಬ್ರಹನ್ಮಠದಲ್ಲಿ ಕಾವಿ ದಿರಿಸಿನೊಳನೆ ಅನೇಕ ವರ್ಷಗಳಿಂದ ವ್ಯವಸ್ಥಿತವಾಗಿ ನಡೆಯುತ್ತಿತ್ತು ಎನ್ನಲಾದ “ಹಾದರ”.ಹಾಗೆಯೇ, ನಾಡಿನ ಜನತೆ ಎದುರು ಬೆತ್ತಲಾಗಿರುವುದು ವೈಚಾರಿಕತೆಯ ಕಟ್ಟರ್ ಪ್ರತಿಪಾದಕರಂತಿದ್ದ ಮುರುಘಾಶರಣರು…

ಯೆಸ್…ಚಿತ್ರದುರ್ಗದ ಬ್ರಹನ್ಮಠದ ಶ್ರೀ ಮುರುಘಾ ಶರಣರ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸಂಬಂಧ ದಾಖಲಾಗಿರುವ ದೂರು “ಕಾವಿ” ವಲಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಬಾಯಿ ಬಿಟ್ಟರೆ ವೈಚಾರಿಕತೆ ಬಗ್ಗೆ ಪುಂಖಾನುಪುಂಕವಾಗಿ ಮಾತನಾಡುತ್ತಿದ್ದ ಆ ಶರಣ ಇವ್ರೇನಾ ಎಂದು ಮಠದ ಅಪಾರ ಭಕ್ತವೃಂದ ಮಾತನಾಡಿಕೊಳ್ಳುವಂತಾಗಿದೆ.

ಈ ಇಬ್ಬರು ಹೆಣ್ಣು ಮಕ್ಕಳಿಗಷ್ಟೇ ಸೀಮಿತವೇ..ಅಥವಾ ಮಠದ ಇತರೆ ಹೆಣ್ ಮಕ್ಕಳ ಮೇಲೂ..?!: ಅನಾಥ ಮಕ್ಕಳನ್ನು ದತ್ತು ಪಡೆದು ಅವರನ್ನು ಸಾಕಿ ಸಲಹಿ ಅವರಿಗೊಂದು ಉಜ್ವಲ ಭವಿಷ್ಯ ನೀಡುವ ಮಠದ ಪರಂಪರೆನೇ ಈಗ ಪ್ರಶ್ನೆಗೀಡಾಗುತ್ತಿದೆ.ಬಾಲಕಿಯರು ನೀಡಿರುವ ದೂರು ಮಠದಲ್ಲಿ ಶ್ರೀಗಳ ಲೈಂಗಿಕ ಪರಂಪರೆಗೆ ದೊಡ್ಡ ಇತಿಹಾಸವಿದೆಯೇ ಎನ್ನುವ ಪ್ರಶ್ನೆಯನ್ನು ಸಾರ್ವಜನಿಕವಾಗಿ ಸೃಷ್ಟಿಸಿದೆ.

ಮಠದ ಹೊರಗೆ ವೈಚಾರಿಕತೆ-ಆಂತರ್ಯದಲ್ಲಿ ಹಾದರನಾ..?!ಸಚ್ಚಾರಿತ್ರ್ಯವನ್ನು ಹೊದ್ದು ಮಲಗಿದಂತೆ ಭಾಸವಾಗುತ್ತಿದ್ದ ಬ್ರಹನ್ಮಠದ ಆಂತರ್ಯದಲ್ಲಿ ನಡೆಯುತ್ತಿದ್ದದು ಹೆಣ್ಣು ಮಕ್ಕಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ,…ಆಸೆ ಆಮಿಷಗಳ ಹೆಸರಲ್ಲಿ ಅವರ ಶೀಲಹರಣ,.. ಬಡತನ-ಅಸಹಾಯಕತೆಯ ದುರುಪಯೋಗ….ಹಣ ನೀಡಿ ಕಾಮದಾಸೆ ತೀರಿಸಿಕೊಳ್ಳುವ ಹಾದರದ ಕೃತ್ಯಗಳು ಎನ್ನುವುದು ಹೆಣ್ಣು ಮಕ್ಕಳು ಬಾಯ್ಬಿಟ್ಟಿರುವ ಸ್ಪೋಟಕ ಸಂಗತಿಗಳಿಂದ ಬಹಿರಂಗವಾಗಿದೆ.ಸಹಜವಾಗಿ ಇಂತದ್ದೊಂದು ಆರೋಪ ಕೇಳಿಬಂದಾಗ ಶ್ರೀಗಳ ಬೆನ್ನಿಗೆ ನಿಲ್ಲಬೇಕಿರುವ ಬಹುತೇಕ ಭಕ್ತರು, ಮುರುಘಾಶರಣರ ಧೋರಣೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅವರ ಬಂಧನವಾಗಬೇಕು.ಅವರ ಕರ್ಮ-ಕಾಮಕಾಂಡಗಳ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆನ್ನುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ.

ಚಿತ್ರದುರ್ಗದ ರಾಜಕಾರಣವನ್ನು ನಿರ್ಧರಿಸುವ ಮಟ್ಟಕ್ಕೆ ಬೆಳೆದು ನಿಂತ ಶ್ರೀಗಳ ಬಗ್ಗೆ ಸಾರ್ವಜನಿಕ ವಾಗಿ ಅಪಾರ ಗೌರವ-ಆದರಗಳಿತ್ತು.ದಾರ್ಶನಿಕತೆ-ವೈಚಾರಿಕತೆ ಬಗ್ಗೆ ಅಪಾರ ಪಾಂಡಿತ್ಯ ಹೊಂದಿದ್ದ ರಿಂದ ಸಹಜ ವಾಗೇ ಅವರ ಆದರ್ಶಗಳಿಗೆ ಜನ ಮಾರುಹೋಗುತ್ತಿದ್ದರು.ಆದರೆ ಅದರ ಹಿಂದೆಲ್ಲಾ ಒಂದು ಢೋಂ ಗಿತನ- ವ್ಯಾಘ್ರತನ-ಕಾಮಲಾಲಸೆ ಇತ್ತೆನ್ನುವುದು ಮೇಲ್ಕಂಡ ಪ್ರಕರಣದಿಂದ ಕಂಡುಬಂದಿ ರುವುದರಿಂದ ಶ್ರೀಗಳ ಪೀಠತ್ಯಾಗ-ಕಾವಿ ತೊರೆಯುವಿಕೆ ಹಾಗೂ ಮಠದ ಶಾಲೆಗಳಲ್ಲಿ ಓದುತ್ತಿರುವ ಹೆಣ್ಣು ಮಕ್ಕಳ ಸಮಗ್ರ ವಿಚಾರಣೆಯಾಗಬೇಕೆನ್ನುವ ಕೂಗು ಕೇಳಿಬರುತ್ತಿದೆ.

ಆದ್ರೆ ಘಟನೆ ನಡೆದ ಸ್ಥಳ ಚಿತ್ರದುರ್ಗ..!!ದೂರು ದಾಖಲಾಗಿದ್ದು ಮೈಸೂರಿನಲ್ಲಿ..ಏಕೆ…?  ಚಿತ್ರದುರ್ಗ ದಲ್ಲಿ ಪೊಲೀಸ್ ವ್ಯವಸ್ಥೆ ಅಷ್ಟೊಂದು ಹದಗೆಟ್ಟಿದೆಯೇ.? ಅಥವಾ ಮಠದ ವಿಚಾರಗಳಲ್ಲಿ ನಿರ್ಲಿಪ್ತವಾಗಿದೆಯೇ..? ಸಾರ್ವಜನಿಕವಾಗಿ ಇಷ್ಟೊಂದು ಗಂಭೀರ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗದ ಸ್ಥಿತಿ ಅಲ್ಲಿದೆಯೇ..? ಎನ್ನುವ ಪ್ರಶ್ನೆ ಸಾರ್ವಜನಿಕರದು.

ಚಿತ್ರದುರ್ಗದ ಪೊಲೀಸರಿಂದ ನಮಗೆ ನ್ಯಾಯ ಸಿಗೊಲ್ಲ ಎಂದು ಆ ಹೆಣ್ಣುಮಕ್ಕಳಿಗೆ ಅನಿಸಿದ್ದರೂ ಆಶ್ಚರ್ಯವಿಲ್ಲ. ಶ್ರೀಗಳ ವಿರುದ್ದ ದೂರು ಕೊಟ್ಟರೆ ಅದನ್ನು ಸ್ವೀಕರಿಸುವ ಬದಲು ಮುಚ್ಚಾಕಿ ತಮ್ಮನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸ್ತಾರೇನೋ ಎನ್ನುವ ಅನುಮಾನ ಬಂದು ನೇರವಾಗಿ ಅವರು ಪರಿಚಯಸ‍್ಥರ ಮೂಲಕ ಮೈಸೂರಿನ ಒಡನಾಡಿಯನ್ನು ಸಂಪರ್ಕಿಸಿದ್ದಾರಾ… ಗೊತ್ತಾಗ್ತಿಲ್ಲ.

ಚಿತ್ರದುರ್ಗ ಪೊಲೀಸರಿಗೇಕೆ ದೂರು ಕೊಡಲಿಲ್ಲ.ಅವರ ವಿಚಾರಣಾ ವೈಖರಿ ಬಗ್ಗೆ ನಂಬಿಕೆ ಇರಲಿಲ್ವಾ..?! ಚಿತ್ರದುರ್ಗದ ಪೊಲೀಸರ ಮೇಲೆ ನಂಬಿಕೆ ಇದ್ದಿದ್ದರೆ ಆ ಮಕ್ಕಳು ಮೈಸೂರಿನ ಒಡನಾಡಿಯನ್ನು ಸಂಪರ್ಕಿಸ್ತಿರಲಿಲ್ಲವೇನೋ ?.ಮಕ್ಕಳ ರಕ್ಷಣಾ ಘಟಕದ ಮೂಲಕ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿರಲಿಲ್ಲವೇನೋ..? ದೂರು ಕೊಟ್ಟರೆ ಚಿತ್ರದುರ್ಗ ಪೊಲೀಸ್ರೇ ಡಬಲ್ ಗೇಮ್ ಆಡ್ಬಿಟ್ರೆ ತಮ್ಮ ಪ್ರಯತ್ನವೆಲ್ಲಾ ನಿಷ್ಪಲವಾಗುತ್ತದೆ ಎಂದೆನಿಸಿಯೇ  ಆ ಎರಡು ಮಕ್ಕಳು ಒಡನಾಡಿ ಮೂಲಕ ನ್ಯಾಯಕ್ಕಾಗಿ ಬಾಗಿಲು ತಟ್ಟಿದ್ದಾರೇನೋ..? ಅದೂ ಗೊತ್ತಾಗ್ತಿಲ್ಲ.

ಚಿತ್ರದುರ್ಗ ಪೊಲೀಸರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಮಕ್ಕಳು ಸಂಪರ್ಕಿಸಿದ್ದಾರೋ ಇಲ್ಲವೋ ಗೊತ್ತಾಗುತ್ತಿಲ್ಲ.ಆದರೆ ಈ ಹೆಣ್ಣುಮಕ್ಕಳಿಗೆ ಸ್ಥಳೀಯರಿಂದ ನ್ಯಾಯ ಸಿಗುತ್ತೆನ್ನುವ ನಂಬಿಕೆ ಇರಲಿಲ್ಲ ಎನ್ನುವು ದನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ.

ಚಿತ್ರದುರ್ಗ ಪೊಲೀಸರ ಮೇಲೆ ಶ್ರೀಗಳು ಪ್ರಭಾವ ಬೀರಬಹುದು.ತಮಗಿರುವ  ರಾಜಕಾರಣಿಗಳ ಸಹಾಯ ಪಡೆದುಕೊಳ್ಳಬಹುದು. .ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಜೀವಕ್ಕೇ ಸಂಚಕಾರ ತರಬಹುದೆನ್ನುವ ಕಾರಣಕ್ಕೆ ಜಾಣತನ ಪ್ರದರ್ಶಿಸಿ ಮೈಸೂರಿನ ಒಡನಾಡಿ ಸಂಪರ್ಕಿಸಿದ್ದಾಗಿಯೂ ಪ್ರಾಥಮಿಕ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

ನೋ ಡೌಟ್..ಮುರುಘಾಶರಣ ವೈಚಾರಿಕಾ ಚಿಂತನೆಯ ಅತ್ಯದ್ಭುತ ವಿಚಾರವಂತ:ಅಂದ್ಹಾಗೆ ಚಿತ್ರದುರ್ಗದ ಬ್ರಹನ್ಮಠಕ್ಕೆ  ಶರಣ ದಾರ್ಶನಿಕ ಪರಂಪರೆಯ ಬಹುದೊಡ್ಗ ಇತಿಹಾಸವಿದೆ. ಈ ಪರಂಪರೆಯನ್ನು ಅನೇಕ ವರ್ಷಗಳಿಂದ ಟೀಕೆಟಿಪ್ಪಣಿಗೊಳಗಾಗದಂತೆ ನಡೆಸಿಕೊಂಡು ಬಂದ ಹಿನ್ನಲೆ ಮುರುಘಾಶರಣರಿಗಿತ್ತು.ಆದರೆ ಅವರ ಎಲ್ಲಾ ಸಮಾಜಸೇವಾರ್ಥ ಹಾಗೂ ಮಾನವಮುಖಿ ಕಾರ್ಯಗಳಿಗೆ ಅವರ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯದ ಕಳಂಕ ಹೊಳೆಯಲ್ಲಿ ಹುಣಸೆ ತೊಳೆದಂತಾಗಿದೆ. ಮಠದ ಪರಂಪರೆಗೆ ಮರುಘಾಶರಣರು ಕಳಂಕ ತಂದ್ರು ಎನ್ನುವ ಮಾತು ಕೇಳಿಬಂದಿದ್ದು, ಕಳಂಕಮುಕ್ತರಾ ಗೋವರೆಗೂ ಕಾವಿ ಕಳಚಿ ಎಂಬ ಕೂಗು ಮೊಳಗಲಾರಂಭಿಸಿದೆ.

ಅನಾಥ ಮಕ್ಕಳನ್ನು ಸಾಕಿ ಸಲಹುವ ಕೆಲಸವನ್ನು ಮಾಡುತ್ತಾ ಬಂದಿದ್ದ ಮುರುಘಾಶರಣರು ಆ ಮಕ್ಕಳನ್ನೂ ಕಾಮತೃಷೆ ತೀರಿಸಿಕೊಳ್ಳೊಕ್ಕೆ ಬಳಸಿಕೊಂಡಿರುವ ಅವಕಾಶಗಳಿರಬಹುದಲ್ಲ ಎಂಬ ಶಂಕೆ ವ್ಯಕ್ತವಾಗುತ್ತಿದೆ., ಮಠ ಪರಂಪರೆಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದುದ್ದರಿಂದಲೇ  ತಮ್ಮ ಕಾವಿಯನ್ನು ಹಾದರವನ್ನೆಲ್ಲಾ ವ್ಯವಸ್ಥಿತವಾಗಿ ಮುಚ್ಚಿಕೊಳ್ಳಲು ಅಸ್ತ್ರ ಮಾಡಿಕೊಂಡರಾ ಎನ್ನುವ ಪ್ರಶ್ನೆ ಕೂಡ ಕಾಡಲಾರಂಭಿಸಿದೆ.

ಓರ್ವ ಹೆಣ್ಣಾಗಿ ಮುರುಘಾಶರಣರ “ಪಲ್ಲಂಗ”ಕ್ಕೆ ಹೆಣ್ಮಕ್ಕಳನ್ನು ಕಳುಹಿಸ್ತಿದ್ಲಾ ವಾರ್ಡನ್ ರಶ್ಮಿ..!?FIR ನಲ್ಲಿ ನಮೂದಾಗಿರುವ ಸಂಗತಿಗಳನ್ನು ಗಮನಿಸಿದಾಗ, ಶ್ರೀಗಳು  ನಡೆಸುತ್ತಾ ಬಂದಿದ್ದ ವ್ಯಭಿಚಾರದ ಕೃತ್ಯಕ್ಕೆ  ಅಕ್ಕಮಹಾದೇವಿ ವಸತಿ ವಿದ್ಯಾನಿಲಯದ ವಾರ್ಡನ್ ರಶ್ಮಿ ಓರ್ವ ಹೆಣ್ಣಾಗಿ ಸಾಥ್ ಕೊಟ್ಟಿದ್ದು ನಾಚಿಕೆಗೇಡು.. ಹಾಗೆಯೇ ಈ ಹಾದರ ಎಲ್ಲೂ ಬಹಿರಂಗವಾಗದಂತೆ  ಎಲ್ಲದನ್ನೂ ..ಎಲ್ಲವನ್ನೂ ಮ್ಯಾನೇಜ್ ಮಾಡಿದ್ದು ಮುರುಘಮಠದ ಬಸವಾದಿತ್ಯ & ಪರಮಶಿವಯ್ಯ…ಎಲ್ಲಕ್ಕಿಂತ ಹೆಚ್ಚಾಗಿ ಕಾನೂನಾತ್ಮಕವಾಗಿ ರಕ್ಷಣೆಗೆ ನಿಂತವರು ಮಠದ  ವಕೀಲ ಗಂಗಾಧರಯ್ಯ..! ಈ ದುಷ್ಟ ಕೂಟಕ್ಕೆ ಅದೆಷ್ಟು ಅಮಾಯಕ ಹೆಣ್ಣು ಮಕ್ಕಳು ತಮ್ಮ ಚಾರಿತ್ರ್ಯವನ್ನು ಕಳಕೊಂಡಿದ್ದಾರೋ..?  ಆ ಕ್ರೌರ್ಯವನ್ನು ನಾಲಿಗೆ ಕಚ್ಚಿಕೊಂಡು ಸಹಿಸಿಕೊಂಡಿದ್ದರೋ  ಗೊತ್ತಿಲ್ಲ.

ಮಠದ ಹೆಣ್ಣು ಮಕ್ಕಳನ್ನೆಲ್ಲಾ ಕಾಮದ ದೃಷ್ಟಿಯಲ್ಲಿ ನೋಡುತ್ತಿದ್ರಾ  ಮುರುಘಾ ಶ್ರೀಗಳು..?!: ಮಠದ ಶಾಲೆಗಳಲ್ಲಿ ನೂರಾರು ಹೆಣ್ಣು ಮಕ್ಕಳು ಓದುತ್ತಿದ್ದಾರೆ.ಅವರನ್ನೆಲ್ಲಾ ಮುರುಘಾಶರಣರು ಕಾಮದ ದೃಷ್ಟಿಯಲ್ಲಿ ನೋಡುತ್ತಿದ್ದರಾ..? ಇರೋ ಮಕ್ಕಳೆಲ್ಲಾ ಕಾಮತೃಷೆ ತೀರಿಸುವ ಸರಕುಗಳೆಂದು ಬಾವಿಸಿದ್ದರಾ…? ಇನ್ನು ತಾವು ಸಾಕಿದ ಅನಾಥ ಮಕ್ಕಳ ಪೈಕಿ ಅದೆಷ್ಟು ಹೆಣ್ಣು ಮಕ್ಕಳನ್ನು ಮೈನೆರೆಯುವ ವೇಳೆಗಾಗಲೇ ಲೈಂಗಿಕವಾಗಿ ಬಳಸಿಕೊಂಡಿರಬಹುದು..?

ಇಂತದೊಂದಿಷ್ಟು ಪ್ರಶ್ನೆಗಳು ಮಠದ ಕ್ಯಾಂಪಸ್ ನಲ್ಲಿ ವಿಚಾರವಂತರಿಂದ ಕೇಳಿಬರುತ್ತಿದೆ.ಹಾಗಾಗಿ ಹೆಣ್ಣು ಮಕ್ಕಳನ್ನೆಲ್ಲಾ ಒಮ್ಮೆ ತನಿಖೆಗೊಳಪಡಿಸು ವುದು ಸೂಕ್ತ..ಆ ವೇಳೆ ಮುರುಘಾಶರಣರು ಇನ್ನೊಂದಿಷ್ಟು ಹೆಣ್ಣ ಮಕ್ಕಳನ್ನು ಹೀಗೆಯೇ ಬಳಸಿಕೊಂಡಿರುವ ಪುರಾವೆಗಳು ಸಿಕ್ಕರೆ ಅವರ ಮೇಲಿರುವ ಆರೋಪ ಸಾಬೀತಾಗುತ್ತದೆ.

ಮುರುಘಾಶರಣರು ಹಣ್ಣು ಕೊಡುವ,ಸಿಹಿ ಕೊಡುವ ನೆಪದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಸುತ್ತಿದ್ದರೆನ್ನಲಾದ ಲೈಂಗಿಕ ದೌರ್ಜನ್ಯ ಇವತ್ತಲ್ಲ ನಾಳೆ ಬಯಲಾಗಲೇಬೇಕಿತ್ತು.ಆ ಧೈರ್ಯ ಮಾಡಿದ ಆ ಎರಡು ಹೆಣ್ಣು ಮಕ್ಕಳ ನ್ನು ಅಭಿನಂದಿಸಲೇಬೇಕು.ಮುಂದುವರೆಯಬಹುದಿದ್ದ ಮುರುಘಾಶರಣರ ಲೈಂಗಿಕ ದೌರ್ಜನ್ಯ ಪರಂಪರೆಗೆ ಬ್ರೇಕ್ ಹಾಕುವಲ್ಲಿ ಈ ಬೆಳವಣಿಗೆ ಸಹಕಾರಿಯಾಗಿದೆ.

ಮಠಾಧೀಶರೇ…ತನಿಖೆ  ಮುಗಿಯುವವರೆಗೂ ಮುರುಘಾಶರಣರನ್ನು ವಹಿಸಿಕೊಂಡು ಬರಬೇಡಿ..: ನಾಡಿನ ಜನತೆ ಕಾವಿಯನ್ನು ವಿನಮ್ರಪೂರ್ವಕವಾಗಿ ವಿನಂತಿಸುತ್ತಿರುವುದು ಒಂದನ್ನ,.ದಯವಿಟ್ಟು ಈ ಪ್ರಕರಣದಲ್ಲಿ ಮುರುಘಾಶರಣರ ಬೆನ್ನಿಗೆ ನಿಲ್ಲಬೇಡಿ..ಅವರನ್ನು ಸಮರ್ಥಿಸಿಕೊಳ್ಳಬೇಡಿ..ಏಕೆಂದರೆ ಅವರ ವಿರುದ್ದ ಕೇಳಿಬಂದಿರುವಂತದ್ದು ಅಂತಿಂಥ ಆಪಾದನೆಯಲ್ಲ.ಬುದ್ಧಿ.ದಣಿ..ಅಪ್ಪೋರಾ ಎಂದು ವಾತ್ಸಲ್ಯಪೂರಿತವಾಗಿ ತಮ್ಮಡೆಗೆ ಬರ್ತಿದ್ದ ಹೆಣ್ಣು ಮಕ್ಕಳನ್ನು ಕಾಮತೃಷೆಗೆ ಬಳಸಿಕೊಂಡಂಥ ಘನಘೋರ ಆರೋಪ.ಸತ್ಯಾಸತ್ಯತೆಗಳ ಪರಾಮರ್ಷೆ ನಡೆದು, ಮುರುಘಾಶರಣರು ನಿರಪರಾಧಿಗಳೆಂದು ಸಾಬೀತಾದ್ರೆ ಆನಂತರ ಆರೋಪ ಮಾಡಿದವರನ್ನು ವಿಚಾರಿಸಿಕೊಳ್ಳಲು ಕಾನೂನಿದೆ..

ಅಲ್ಲಿವರೆಗೂ ಮುರುಘಾಶರಣರನ್ನು ವಹಿಸಿಕೊಂಡು ತನಿಖೆ ದಿಕ್ಕು ತಪ್ಪಿಸೋದು..ಮಕ್ಕಳ ಕುಟುಂಬದವರನ್ನು ಒತ್ತಡಕ್ಕೆ ಸಿಲುಕಿಸುವುದು..ಪೊಲೀಸರ ಮೇಲೆ ಪ್ರಭಾವ ಬೀರಿಸುವಂತದ್ದನ್ನು ಮಾಡಬೇಡಿ.ಹಾಗೇನಾದ್ರೂ ಮಾಡಿದ್ರೆ ನೀವೆಲ್ಲಾ ರೌರವ ನರಕಕ್ಕೇಕೆ ಹೋಗೋದು..ಅಲ್ಲದೇ ನಿಮ್ಮ ಮಠಗಳಲ್ಲಿರುವ ಶಾಲೆಗಳಿಗೂ ಹೆಣ್ಣು ಮಕ್ಕಳನ್ನು ಕಳುಹಿಸೊಕ್ಕೆ ಪೋಷಕರು ಹಿಂದೇಟು ಹಾಕ್ಬೋದು.ಹಾಗಾಗಿ ಆ ಅಪಾಯವನ್ನೆಲ್ಲಾ ಅರಿತು ತನಿಖೆ ಮುಗಿಯೋವರೆಗೂ ಸುಮ್ಮನಿರಿ.ಅದೇ ನೀವು ಮಾಡುವ ಮಹೋಪಕರಾರ ಹಾಗಯೇ ಸಹಕಾರವಾದೀತು ಎನ್ನೋದು ಸಮಸ್ತ ಕಾವಿಸಮೂಹದಲ್ಲಿ ನಾಡಿನ ಜನತೆ ಮಾಡಿಕೊಳ್ಳುತ್ತಿರುವ ಪ್ರಾರ್ಥನೆ.

Spread the love

Related Articles

Leave a Reply

Your email address will not be published.

Back to top button
Flash News