BreakingMoreScrollTop Newsಕ್ರೈಮ್ /ಕೋರ್ಟ್ಜಿಲ್ಲೆಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯರಾಜ್ಯ-ರಾಜಧಾನಿ

OFFICIALS HARRASMENT..!! BMTC DRIVER HANGHIMSELF. /ಮೇಲಾಧಿಕಾರಿಗಳ ದೌರ್ಜನ್ಯಕ್ಕೆ ಇನ್ನೆಷ್ಟು ಬಲಿ ಬೇಕೋ..? ಡಿಪೋ ಮ್ಯಾನೇಜರ್ ಕಿರುಕುಳಕ್ಕೆ BMTC ಚಾಲಕ ಬಲಿ..!? ಡಿಪೋದಲ್ಲೇ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ..!

ಡಿಪೋಗೆ ಬೆಳಗ್ಗೆ ಬಂದ್ರೂ ಡ್ಯೂಟಿ ಸಿಗದೆ ಸಂಜೆವರೆಗು ಕಾದು ವಾಪಸ್ ಹೋಗುವಂಥ ಸಿಬ್ಬಂದಿ ನೂರಾರು ಸಂಖ್ಯೆಯಲ್ಲಿದ್ದಾರೆ...

ಬೆಂಗಳೂರು:ಮೇಲಾಧಿಕಾರಿಗಳ ಕಿರುಕುಳ ಬಿಎಂಟಿಸಿಯಲ್ಲಿ ಚಾಲಕನೋರ್ವನನ್ನು ಬಲಿಪಡೆದಿದೆ. ಮೇಲಾಧಿಕಾರಿಗಳು ಡ್ಯೂಟಿ ನೀಡದೆ ಹೊರಗೆ ನಿಲ್ಲುವಂತೆ ಹೇಳಿ ಸತಾಯಿಸಿದ್ದಕ್ಕೆ ಬೇಸತ್ತು ಡಿಪೋ 21 ರ ಚಾಲಕ ಹೊಳಿಬಸಪ್ಪ ಎಂಬುವವರು ಡಿಪೋದಲ್ಲೇ ಇದ್ದ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮುಷ್ಕರದ ನಂತರ ಬಸ್ ಗಳು ಡಿಪೋದಲ್ಲಿ ಆಪರೇಟ್ ಆಗುತ್ತಿರುವುದು ಸಹಜವಾಗೇ ಕಡಿಮೆಯಾಗಿದೆ.ಚಾಲಕರಿಗೆ ಬಸ್ ಸಿಗುವದು ಕೂಡ ಕಡಿಮೆಯಾಗಿದೆ.ಹಾಗಾಗಿ ಅನೇಕ ಚಾಲಕರಿಗೆ ಡ್ಯೂಟಿ ಸಿಗುತ್ತಿಲ್ಲ.ಡ್ಯೂಟಿ ಸಿಗದಿದ್ದರೆ ಅವತ್ತು ಅವರಿಗೆ ವೇತನರಹಿತ ರಜೆ ಎಂದು ಡಿಕ್ಲೇರ್ ಮಾಡಲಾಗ್ತದೆ.ಡಿಪೋಗೆ ಬೆಳಗ್ಗೆ ಬಂದ್ರೂ ಡ್ಯೂಟಿ ಸಿಗದೆ ಸಂಜೆವರೆಗು ಕಾದು ವಾಪಸ್ ಹೋಗುವಂಥ ಸಿಬ್ಬಂದಿ ನೂರಾರು ಸಂಖ್ಯೆಯಲ್ಲಿದ್ದಾರೆ.

ಹೊಳಿಬಸಪ್ಪನ ವಿಷಯದಲ್ಲಿ ಆಗಿರುವುದು ಕೂಡ ಅದೇ.ಹೊಳಿಬಸಪ್ಪ ಡ್ಯೂಟಿಗೆ ಬಂದ್ರು ಡ್ಯೂಟಿ ಕೊಡದೆ ಸತಾಯಿಸಲಾಗುತ್ತಿತ್ತು ಎನ್ನಲಾಗಿದೆ.ಡಿಪೊ ಮ್ಯಾನೇಜರ್ ಗೆ ಈ ವಿಷಯ ಗೊತ್ತಿದ್ರೂ ತಲೆಕೆಡಿಸಿಕೊಂಡಿರಲಿಲ್ಲವಂತೆ.ಇವತ್ತು ಕೂಡ ಹೀಗೆಯೇ ಆಗಿದೆ.ಇದಕ್ಕೆ ಬೇಸತ್ತು ಹೊಳಿಬಸಪ್ಪ ಡಿಪೋದಲ್ಲೇ ಸೂಸೈಡ್ ಮಾಡಿಕೊಂಡಿದ್ದಾರಂತೆ.

ರಾಜರಾಜೇಶ್ವರಿ ನಗರ ಡಿಪೋದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಹೊಳಿಬಸಪ್ಪ ಡಿಪೋದಲ್ಲೇ ಇರುವ ಮರಕ್ಕೆ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರ್ಮಿಕ ಸಿಬ್ಬಂದಿಯನ್ನು ಡ್ಯೂಟಿ ಕೊಡದೆ ಸತಾಯಿಸುತ್ತಿರುವ ಡಿಪೋ ಮ್ಯಾನೇಜರ್ ಗಳ ವಿರುದ್ದ ಕ್ರಮ ಕೈಗೊಳ್ಳಬೇಕೆನ್ನುವ ಆಗ್ರಹವನ್ನು ಸಾರಿಗೆ ಮುಖಂಡ ಆನಂದ್ ಮಾಡಿದ್ದಾರೆ. ಎಲ್ಲಿವರೆಗೆ ಕಿರುಕುಳ ತಪ್ಪುವುದಿಲ್ಲವೋ ಅಲ್ಲಿವರೆಗೆ ಆತ್ಮಹತ್ಯೆಗಳನ್ನು ತಪ್ಪಿಸಲಿಕ್ಕೆ ಆಗೊಲ್ಲ ಎಂದು ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News