ಮಳೆಗಾಲದಲ್ಲಿ ಕಾಡುವ ಮೊಡವೆಗೆ ಪರಿಹಾರ ಏನು?

0

ಮಳೆಗಾಲದಲ್ಲಿ ಒಂದು ಸಣ್ಣ ಗಾಯವಾದ್ರೂ ಅದು ಮಾಯೊಕ್ಕೆ ಕಾಯ್ಬೇಕಾಗುತ್ತೆ.ಆರೋಗ್ಯದ ದೃಷ್ಟಿಯಲ್ಲಿ ಅದರ ನಿವಾರಣೆಗೆ ಹಿಡಿಯೋ ಕಾಲ ಹೆಚ್ಚೆನ್ನುವ ಮಾತಿದೆ.ಕೆಲ ವಿಷಯಗಳಿಗೆ ಬಂದ್ರೆ ಅದು ಸತ್ಯವೂ ಹೌದು..

ಬಹಳಷ್ಟು ಜನರಲ್ಲಿ ಅದರಲ್ಲೂ ಯೌವ್ವನಾವಸ್ಥೆಗೆ ಕಾಲಿಡುವ ಸಾಕಷ್ಟು ಯುವಕರು ವೈದ್ಯರ ಬಳಿ ಹೇಳಿಕೊಳ್ಳುವ ದೂರಿನಲ್ಲಿ ಬಹುತೇಕ ಚರ್ಮ ಹಾಗೂ ಮೊಡವೆಗೆ ಸಂಬಂಧಿಸಿದ್ದೇ ಆಗಿರುತ್ತಂತೆ.

ಮಳೆಗಾಲದಲ್ಲಿ ಮೊಡವೆ ಸಮಸ್ಯೆ ಕಾಣಿಸಿಕೊಂಡ್ರೆ ಅದಕ್ಕೆ ಔಷಧಿ-ಪರಿಹಾರವೇನು ಎಂಬ ಶಂಕೆ ಹಾಗೂ ಆತಂಕ ಅನೇಕರನ್ನು ಕಾಡುತ್ತದೆ.ಮಳೆಗಾಲದ ಮೊಡವೆಗೆ ಪರಿಹಾರ ಇಲ್ವೇ..ವೈದ್ಯ ಲೋಕದಲ್ಲಿ ಇಂಥಾ ಸಮಸ್ಯೆಗೆ ಇಂಥಾ ಪರಿಹಾರ ಇಲ್ಲ ಎನ್ನುವ ಪ್ರಮೇಯವೇ ಉದ್ಭವವಾಗೊಲ್ಲ.ಇಲ್ಲಿ ಎಲ್ಲಕ್ಕೂ ಪರಿಹಾರ ಇದೆ.

ಕೆಲವರಿಗೆ ಮಳೆಗಾಲದಲ್ಲಿ ಮೊಡವೆ ಸಮಸ್ಯೆ ಕಾಡುತ್ತದೆ.ಇನ್ನು ಕೆಲವರಿಗೆ ಮೊಡವೆ ಎನ್ನುವುದು ಹತ್ತಿರಕ್ಕೂ ಸುಳಿಯೊಲ್ಲ.ಅವರಿಗೆ ಬಾರದ ಸಮಸ್ಯೆ ನಮಗೇಕೆ ಬರುತ್ತೆ ಎಂದು ಅನೇಕರು ನೊಂದುಕೊಳ್ಳುತ್ತಾರೆ.ಆದ್ರೆ ಹಾಗೆ ನೊಂದುಕೊಳ್ಳುವ ಅವಶ್ಯಕತೆನೇ ಇಲ್ಲ ಎನ್ನುತ್ತಾರೆ ಚರ್ಮ ವೈದ್ಯ ಡಾ.ದೀಪಕ್.ಏಕೆ ಹೆದರಬಾರದು ಎನ್ನುವುದಕ್ಕೆ ಕೆಲವು ಟಿಪ್ಸ್ ಕೂಡ ಅವ್ರು ಕೊಡ್ತಾರೆ ನೋಡಿ.

ಮೊಡವೆ ಬಂದಾಗ ಅದಕ್ಕೆ ಟ್ರೀಟ್ಮೆಂಟ್ ಕೊಡುವಾಗ ಚರ್ಮ ಯಾವ್ ಸ್ವರೂಪದ್ದು ಎನ್ನೋದನ್ನು ತಿಳ್ಕೊಬೇಕಾದ ಅಗತ್ಯ ಹೆಚ್ಚಾಗಿದೆ.ಶುಷ್ಕ ಅಥವಾ ಒಣ ತ್ವಚೆಯಾಗಿದ್ದರೆ ಅದಕ್ಕೆ ಸ್ವಲ್ಪ ವಿಭಿನ್ನವಾಗಿ ಟ್ರೀಟ್ಮೆಂಟ್ ಕೊಡ್ಬೇಕಾಗುತ್ತೆ.

ತ್ವಚೆಯಲ್ಲಿ ನೀರಿನಾಂಶದ ಕೊರತೆ ಕಂಡು ಬಂದ್ರೆ ಬರುವುದೇ ಮೊಡವೆ ಎನ್ನಲಾಗುತ್ತೆ.ಇಂಥಾ ಮೊಡವೆಗೆ ಪರಿಣಾಮಕಾರಿಯಾದ ಪರಿಹಾರದ ಬಗ್ಗೆ ಗಮನಿಸೋದಾದ್ರೆ ಇಲ್ಲೊಂದಿಷ್ಟಿದೆ ನೋಡಿ ಟಿಪ್ಸ್.

ಮಳೆಗಾಲದಲ್ಲಿ  ತ್ವಚೆಯನ್ನು ಹೀಗೆ ಆರೈಕೆ ಮಾಡಿದ್ರೆ ಮೊಡವೆನೂ ಬರೊಲ್ಲ,ತ್ವಚೆನೂ ಕಾಂತಿಯುತವಾಗಿ ಹೊಳೆಯುತ್ತದಂತೆ.

ಅದರಲ್ಲಿ ಪ್ರಮುಖವಾಗಿ ಕಹಿ ಬೇವು ರಾಮಬಾಣವಾಗಿ ಕೆಲಸ ಮಾಡುತ್ತದೆ.

ಕಹಿ ಬೇವಿನ ಎಲೆಯನ್ನು ಅರಿಶಿಣ ಮತ್ತು ಹಾಲು,ಕರಿಬೇವಿನ ಸೊಪ್ಪಿನೊಂದಿಗೆ ಸೇರಿಸಿ ಚೆನ್ನಾಗಿ ರುಬ್ಬಿ.ಅದರ ಪೇಸ್ಟನ್ನು ಮುಖಕ್ಕೆ ಹಚ್ಚಿಕೊಂಡು 10 ನಿಮಿಷ ಗಾಳಿಗೆ ಬಿಡಬೇಕು.ಅದು ಡ್ರೈ ಆದ ಮೇಲೆ ತೊಳೆದು ನೋಡಿ ಮುಖದ ಕಾಂತಿಯಲ್ಲಿ ಹೇಗೆ ಬದ್ಲಾವಣೆ ಬರುತ್ತೆ ಎಂದು.ಅದೇ ರೀತಿ ಕಹಿಬೇವಿನ ಎಣ್ಣೆ, ತೆಂಗಿನೆಣ್ಣೆ, ಬಾದಾಮಿ ಎಣ್ಣ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದು ಕೂಡ ‘ತ್ವಚೆಯ ಕಾಂತಿ ವೃದ್ಧಿಸುತ್ತೆ.ಹಾಗೆಯೇ  ಕಹಿಬೇವಿನ ಹಣ್ಣಾದ ಕಾಯಿಗಳನ್ನು ಮೊಡವೆ ಮೇಲೆ ನಿಧಾನವಾಗಿ ಸವರುವುದರಿಂದಲೂ ತ್ವಚೆಯ ಕಾಂತಿ ಹೆಚ್ಚುವುದಲ್ಲದೇ ಮೊಡವೆಗಳು ಕಡಿಮೆಯಾಗುತ್ತೆ. ಅದರಂತೆ ಮುಖ ತೊಳೆದ ಮೇಲೆ ಮೃದುವಾದ ಟವೆಲ್ ನಿಂದ ಮುಖವನ್ನು ಒರೆಸಲು ಮರೆಯದಿರಿ.ರಫ್ ಆಗಿರುವ ಟವಲ್ ಬಳಸೋದನ್ನು ನಿಲ್ಲಿಸಿ,ಇದರ ಜೊತೆ ಮುಖ್ಯವಾಗಿ ಮಳೆಗಾಲದಲ್ಲಿ ನೀರು ಸೇವಿಸಲು ಮನಸು ಒಪ್ಪೊಲ್ಲ.ಹಾಗಂತ ನಿರ್ಲಕ್ಷ್ಯಿಸಬೇಡಿ.ನೀರನ್ನು ಎಂದಿನಂತೆ ಚೆನ್ನಾಗಿ ಕುಡಿಯಿರಿ,.ನೀರು ಕೂಡ ತ್ವಚೆಗೆ ಒಂದು ಔಷಧ.
ಇನ್ನು ಚಳಿಯ ಅನುಭವವನ್ನು ದೂರ ಮಾಡಲು ಮಳೆಗಾಲದಲ್ಲಿ ಹೆಚ್ಚಾಗಿ ಕಾಫಿ,ಟೀ ಕುಡಿಯುತ್ತೇವೆ,ಆದ್ರೆ ಅತಿಯಾದ ಸೇವನೆಗೆ ಬ್ರೇಕ್ ಹಾಕೋದು ಒಳ್ಳೇದು.ಇದೆಲ್ಲದರ ಹೊರತಾಗ್ಯೂ ಮೊಡವೆ ಸಮಸ್ಯೆ ಕಡಿಮೆಯಾಗಲಿಲ್ಲ ಎಂದ್ರೆ ಚರ್ಮ ವೈದ್ಯರನ್ನು ಸಂಪರ್ಕಿಸೋದನ್ನು ಮರೆಯಬೇಡಿ.

Spread the love
Leave A Reply

Your email address will not be published.

Flash News