ಮಳೆಗಾಲದಲ್ಲಿ ತ್ವಚೆ ಆರೈಕೆಗೆ ಎಕ್ಸ್ಫರ್ಟ್ಸ್ ಸಲಹೆ

0

ಎಲ್ಲಾ ಕಾಲಗಳಿಗೆ ಹೋಲಿಸಿದ್ರೆ ಈ ಮಳೆಗಾಲದಲ್ಲಿ ಎಲ್ಲವನ್ನು ಕಾಯ್ದುಕೊಳ್ಳುವುದು ಸ್ವಲ್ಪ ಕಷ್ಟ ಹಾಗೂ ಸವಾಲಿನ ಕೆಲಸ.ಮಳೆಗಾಲದಲ್ಲಿ ಅಧಿಕ ತೇವಾಂಶವಿರೋದೇ ಇದಕ್ಕೆ ಕಾರಣ.ಹಾಗಂತ ಸುಮ್ಮನಿರಲಿಕ್ಕೊಗಲ್ವೇ.,ಹಾಗಾಗಿನೇ ಒಂದಷ್ಟು ಸಲಹೆ ಮೇಲೆ ನಮ್ಮ ದೇಹ ಮತ್ತು ಆರೋಗ್ಯ ಕಾಪಾಡಿಕೊಳ್ಳುವುದೇ ಬುದ್ಧಿವಂತಿಕೆ.

ಮೊದಲೇ ಹೇಳಿದಂತೆ ದೇಹದ ಎಲ್ಲಾ ಅಂಗಗಳಂತೆ ಮಳೆಗಾಲದಲ್ಲಿ ತ್ವಚೆಯ ಸೌಂದರ್ಯ,ಆರೋಗ್ಯ ಹಾಗೂ ಕಾಂತಿಯನ್ನು ಕಾಯ್ದುಕೊಳ್ಳುವುದು ಸವಾಲೇ. ಆದ್ರೆ ಚರ್ಮ ತಜ್ಞರು ಅದಕ್ಕೆಂದೇ ಕೆಲವು ಹೆಲ್ತ್ ಟಿಪ್ಸ್ ಕೊಡ್ತಾರೆ.ಅದನ್ನು ನಾವು ಪಾಲಿಸಬೇಕು ಅಷ್ಟೇ.

ಅಧಿಕ ತೇವಾಂಶದಿಂದ ತ್ವಚೆಗೆ ಸಮಸ್ಯೆ ಎದುರಾಗುತ್ತೆ.ಹಾಗಂದ ದುಬಾರಿ ಟಿಪ್ಸ್ ಗಳಿಗೆ ಕಿವಿಗೊಡ್ಬೇಡಿ.ಸಿಂಪಲ್ಲಾದ ಟಿಪ್ಸ್ ಗಳನ್ನು ಕನ್ನಡ ಫ್ಲ್ಯಾಷ್ ನ್ಯೂಸ್.ಕಾಂ ಬ್ಯೂರೋ..ಕೊಡ್ತದೆ ನೋಡಿ.

ಅಂದ್ಹಾಗೆ ವೈದ್ಯರು ಮನೆಯಲ್ಲೇ ಮಾಡಿಕೊಳ್ಳಲು ಸಾಧ್ಯವಿರುವ ಕೆಲವು ಟಿಪ್ಸ್ ಕೊಡ್ತಾರೆ.ಅದರಲ್ಲಿ ಪ್ರಮುಖವಾಗಿ ಲೋಳೆಸರ ಬಳಕೆ ತ್ವಚೆಯ ಸಮಸ್ಯೆಯನ್ನು ಬಹುತೇಕ ಹೋಗಲಾಡಿಸಿ ಬೇಕಾದ ತ್ವಚೆಯ ಸೌಂದರ್ಯ ಹಾಗೂ ಕಾಂತಿಯನ್ನು ಹೆಚ್ಚಿಸುತ್ತಂತೆ.ಅದ್ಹೇಗೆ ಎಂದ್ರೆ ಲೋಳೆಸರದಲ್ಲಿ ತ್ವಚೆಗೆ ಏನೇ ಅಲರ್ಜಿಗಳಾದ್ರೂ ಅದನ್ನು ನಿವಾರಿಸುವ ಗುಣವಿದೆ.ಅಲರ್ಜಿಯಾಗಿರುವ ತ್ವಚೆಯ ಸ್ಥಳಕ್ಕೆ ಒಂದಷ್ಟು ದಿನ ನಿಯಮಿತವಾಗಿ ಸವರಿದ್ರೆ ಅಲರ್ಜಿ ಮಂಗಮಾಯ.ಕಾಂತಿಯೂ ಹೆಚ್ಚುತ್ತೆ ಎನ್ನುತ್ತಾರೆ ಚರ್ಮ ತಜ್ಞ ಡಾ.ಕ್ರಿಸ್ಟೋಫರ್ ಜಾನ್.
ಅದರಂತೆ ಕಹಿ ಬೇವು ಕೂಡ ರಾಮಬಾಣವಾಗಿ ಕೆಲಸ ಮಾಡುತ್ತಂತೆ.ಇದಕ್ಕೆ ಪ್ರಮುಖ ಕಾರಣ ಸೋಂಕು ನಿವಾರಕ ಗುಣ.

ಕಹಿಬೇವು ಮೊಡವೆ, ಕಪ್ಪ ಕಲೆ, ಮೈ ಮೇಲೆ ಗುಳ್ಳೆಗಳನ್ನು ದೂರಮಾಡೋದಷ್ಟೇ ಅಲ್ಲ ತ್ವಚೆಯ ಸೌಂದರ್ಯ ಹಾಗೂ ಆರೋಗ್ಯ ವೃದ್ಧಿಸುತ್ತೆ.ಸ್ನಾನ ಮಾಡುವಾಗ ನೀರಿಗೆ ಕಹಿ ಬೇವಿನ ಎಲೆ ಹಾಕ್ಕೊಂಡು ಸ್ನಾನ ಮಾಡೋದು ಆರೋಗ್ಯಕರ.ಹಾಗೆಯೇ  ಗಾಯವಾದ ಕಡೆಗಳಲ್ಲಿ  ಕಹಿ ಬೇವಿನ ಎಣ್ಣೆ ಹಚ್ಚುವುದು ಕೂಡ ಉತ್ತಮ.ಎಲ್ಲಕ್ಕಿಂತ ಹೆಚ್ಚಾಗಿ ಆಹಾರದ ಜತೆ 1-2 ಕಹಿ ಬೇವಿನ ಎಲೆ ತಿಂದ್ರೆ ಕಾಯಿಲೆಗಳೇ ಬರೊಲ್ಲ.ಹಾಗೇ ತ್ವಚೆಯ ಕಾಂತಿಯೂ ವೃದ್ಧಿಯಾಗುತ್ತೆ ಎನ್ನುತ್ತಾರೆ ಡಾ.ಕ್ರಿಸ್ಟೋಫರ್.

ಇವುಗಳ ಜೊತೆಗೆ ದೇಹಕ್ಕೆ ಬೆಚ್ಚಗಿನ ಅನುಭವ ನೀಡೋದ್ರ ಜೊತೆಗೆ ದೇಹವನ್ನು ಕ್ಲೆನ್ಸ್ ಮಾಡುವ ಹಾಗೂ ತ್ವಚೆಯ ಕಾಂತಿ ವೃದ್ಧಿಸಿ ಸಮಸ್ಯೆಗಳನ್ನು ದೂರ ಮಾಡುವ ಸಾಮರ್ಥ್ಯವಿರುವ ಗ್ರೀನ್‌ಟೀ, ಶುಂಠಿ ಟೀ, ತುಳಸಿಯಂಥ ಆಯುರ್ವೇದ ಟೀ ಬಳಸುವುದು ಅತ್ಯಪಯುಕ್ತ ಅನ್ತಾರೆ ಅವ್ರು.

ಹಾಗೆಯೇ ಮಳೆಗಾಲದಲ್ಲಿ ನಾವ್ ತಿನ್ನುವ ಆಹಾರ ವ್ಯವಸ್ಥೆಯಲ್ಲಿ ಆಯುರ್ವೇದ ಹಾಗೂ ಔಷಧಿ ಗುಣಗಳುಳ್ಳ ಅರಿಶಿಣವನ್ನು ಅಳವಡಿಸಿಕೊಳ್ಳುವುದು ಸೂಕ್ತ.ಏಕೆಂದ್ರೆ ಅರಿಶಿಣ ದಲ್ಲಿ ಮೊಡವೆ, ಕಪ್ಪುಕಲೆ ನಿವಾರಿಸುವ ಗುಣವಿದೆ.ಹಾಗೆಯೇ ಆಹಾರದಲ್ಲಿ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ ಎನ್ನುತ್ತಾರೆ ಆಯುರ್ವೇದ ತಜ್ಞ ಡಾ.ಕಿಶೋರ್. ಇದಿಷ್ಟೇ ಅಲ್ಲ,ತ್ವಚೆಯ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿಗೆ ಸಹಕಾರಿಯಾಗುವಂಥ ಸಾಕಷ್ಟು ಸಂಗತಿಗಳು ವೈದ್ಯ ವಿಜ್ಞಾನದಲ್ಲಿದೆ.   

Spread the love
Leave A Reply

Your email address will not be published.

Flash News