BreakingMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯರಾಜ್ಯ-ರಾಜಧಾನಿ

BREAK TO ILLEGAL CANTEEN CONSTRUCTION IN PWD CAMPUS / PWD ಕಟ್ಟಡ ಕ್ಯಾಂಪಸ್ ನಲ್ಲಿ”ಸಿಂಪಲ್ ತಿಂಡಿ” ಗೆ ಬ್ರೇಕ್..”ಸಾಮಾಜಿಕ ಕಾರ್ಯಕರ್ತ”ನ ಹೋರಾಟಕ್ಕೆ ಜಯ..”ಕೇಂದ್ರದ ಪ್ರಭಾವಿ ಮುಖಂಡ”ನಿಗೆ ಮುಖಭಂಗ

ಟೆಂಡರ್ ನೀಡದೆ ಕ್ಯಾಂಟೀನ್ ಆರಂಭಕ್ಕೆ ಅವಕಾಶ ಕೊಟ್ಟಿದ್ದೇಗೆ.? ಕೆಟಿಟಿಪಿ ಆಕ್ಟ್ ಬಗ್ಗೆ ಗೌರವವಿಲ್ವೇ..? ಅಧಿಕಾರಿಗಳ ನಡೆಗೆ  ಕೋರ್ಟ್ ಗರಂ

ಬೆಂಗಳೂರು: ಸಾಮಾಜಿಕ ಕಾರ್ಯಕರ್ತನ ಹೋರಾಟಕ್ಕೆ ಕರ್ನಾಟಕ ಲೋಕೋಪಯೋಗಿ ಇಲಾಖೆ ಮಂಡಿಯೂರಿದೆ.ಕೇಂದ್ರ ಸರ್ಕಾರದ ಪ್ರಭಾವಿ ರಾಜಕೀಯ ಮುಖಂಡರೊಬ್ಬರ ಪ್ರಭಾವಕ್ಕೆ ಒಳಗಾಗಿ ನಿಯಮಬಾಹೀರವಾಗಿ ನಿರ್ಮಿಸಲು ಹೊರಟಿ ದ್ದ ಕ್ಯಾಂಟೀನ್ ಆರಂಭಕ್ಕೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.ಈ ಹಿನ್ನಲೆಯಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ನೀಡಿದ್ದ ಒಪ್ಪಿಗೆಯನ್ನು ಲೋಕೋಪಯೋಗಿ ಇಲಾಖೆ ಹಿಂಪಡೆದಿದೆ.ಈ ಮೂಲಕ ಸಾಮಾಜಿಕ ಕಾರ್ಯಕರ್ತ ಪಿ.ಸಾಯಿದತ್ತಾ ಹೋರಾಟಕ್ಕೆ ಗೆಲುವು ಸಿಕ್ಕಂತಾಗಿದೆ.

ನೃಪತುಂಗ ರಸ್ತೆಯಲ್ಲಿರುವ ಲೋಕೋಪಯೋಗಿ ಕಚೇರಿಯ ಕ್ಯಾಂಪಸ್ ನಲ್ಲಿ ಈಗಾಗಲೇ ಒಂದು ಕ್ಯಾಂಟೀನ್ ಕೆಲಸ ಮಾಡುತ್ತಿದೆ.ಬ್ಯುಸಿನೆಸ್ ಕೂಡ ಲಾಭದಾಯಕವಾಗಿದೆ.ಇದನ್ನು ಕಂಡ ಕೇಂದ್ರ ರಾಜಕಾರಣದ ಮುಖಂಡರೊಬ್ಬರು ತಮ್ಮ ಹತ್ತಿರದ ಸಂಬಂಧಿಗೆ ಅದೇ ಕ್ಯಾಂಪಸ್ ನಲ್ಲಿ ಕ್ಯಾಂಟೀನ್ ನಿರ್ಮಿಸೊಕ್ಕೆ ಅವಕಾಶ ಕೊಡಬೇಕೆಂದು ಪಿಡಬ್ಲ್ಯೂಡಿ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ರು.

ಕಾನೂನು ಪ್ರಕಾರ ಕ್ಯಾಂಟೀನ್ ಗೆ ಅವಕಾಶ ನೀಡೊಕ್ಕೆ ಬರೋದು ಇಲ್ಲ.ಇದನ್ನು ಅಧಿಕಾರಿಗಳೇ ಒಪ್ಪಿಕೊಂಡಿದ್ರು.ಆದ್ರೆ ತಮಗೆ ಇರುವ ರಾಜಕೀಯ ಪ್ರಭಾವದ ಬಗ್ಗೆಯೂ ಅಸಹಾಯಕತೆ ವ್ಯಕ್ತಪಡಿಸಿದ್ದರು.ತಮ್ಮ ಸಂಬಂಧಿಗೆ ಆ ಜಾಗದಲ್ಲಿ ಕ್ಯಾಂಟೀನ್ ಆಗಲೇಬೇಕು.ಅದೇನ್ ಮಾಡ್ತಿರೋ ಗೊತ್ತಿಲ್ಲ,ಯಾವ್ದೇ ಕಾನೂನಾತ್ಮಕ ತೊಡಕುಗಳಿದ್ದರೂ ನಿವಾರಿಸಿ ನೀವೇ ಕ್ಯಾಂಟೀನ್ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಕಾರ-ಅವಕಾಶ ಕೊಡಬೇಕೆಂದು ಆ ಮಹಾನುಭಾವ ಆದೇಶಿಸಿರುವ ಸಂಗತಿಯನ್ನೂ ಕೂಡ ಅಧಿಕಾರಿಗಳು ತಿಳಿಸಿದ್ದರು.

ಕಾನೂನು ಎಲ್ಲರಿಗೂ ಒಂದೇ,ಅದರ ಮುಂದೆ ಯಾರೂ ದೊಡ್ಡವರಲ್ಲ,ಅದು ಈ ದೇಶದ ಪ್ರಧಾನಿ ಇರಲಿ,ಅಥವಾ ರಾಜ್ಯದ ಮುಖ್ಯಮಂತ್ರಿ ಇರಲಿ,ಎಲ್ಲರೂ ಕಾನೂನು ಗೌರವಿಸಬೇಕು.ಹೀಗಿರುವಲ್ಲಿ ಆ ಕೇಂದ್ರದ ಪ್ರಭಾವಿ ಮುಖಂಡ ಯಾವ ಲೆಕ್ಕ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಕಾನೂನಿನ ಚೌಕಟ್ಟಿನಲ್ಲಿ ಪ್ರಶ್ನೆ ಮಾಡಿದ್ದರು ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ.ಆದರೂ ಪಿಡಬ್ಲ್ಯೂಡಿ ಅಧಿಕಾರಿಗಳು ಅದಕ್ಕೆ ಸೊಪ್ಪಾಕಿರಲಿಲ್ಲ.ನ್ಯಾಯಾಲಯವೇ ಅಂತಿಮ ಆಯ್ಕೆ ಎಂದು ನಿರ್ಧರಿಸಿ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಸಿದ್ದರು.

ಸಾಮಾಜಿಕ ಕಳಕಳಿ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿರುವ ಅರ್ಜಿ ವಿಚಾರಣೆ ನಡೆಸಿದಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರು 210 ಚದರ ಅಡಿ ಜಾಗದಲ್ಲಿ  ಸಿಂಪಲ್ ತಿಂಡಿ ಹೆಸರಲ್ಲಿ  ಕ್ಯಾಂಟೀನ್ ತಲೆ ಎತ್ತೊಕ್ಕೆ ಅವಕಾಶ ಕೊಡಬೇಕಾದ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಿಸಿದ್ದಾರೆ.ಟೆಂಡರ್ ನೀಡದೆ ಕ್ಯಾಂಟೀನ್ ಆರಂಭಕ್ಕೆ ಅವಕಾಶ ನೀಡಿರುವುದು ಕೆಟಿಟಿಪಿ ಅಕ್ಟ್ ನ ಉಲ್ಲಂಘನೆಯೂ ಹೌದು..ಹಾಗಾಗಿ ಇದಕ್ಕೆ ಅವಕಾಶ ಕೊಟ್ಟು ಕಾನೂನಿನ ಕೆಂಗಣ್ಣಿಗೆ ಗುರಿಯಾಗಬೇಡಿ ಎಂದು ಸೂಚನೆ ನೀಡಿದ್ರು.

ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಅವರಿಗೆ ಸಿಕ್ಕಿರುವ ಕಾನೂನಾತ್ಮಕ ಗೆಲುವಿನಿಂದಾಗಿ ಕೋರ್ಟ್ ಗಳ ಬಗ್ಗೆ ವಿಶ್ವಾಸ ಹೆಚ್ಚಾಗಿದೆಯಲ್ಲದೇ, ಅಕ್ರಮಕ್ಕೆ ಬ್ರೇಕ್ ಬಿದ್ದಂತಾಗಿದೆ ಕೂಡ.ಅದೆಲ್ಲಕ್ಕಿಂತ ಹೆಚ್ಚಾಗಿ ಕೇಂದ್ರದ ಆ ಪ್ರಭಾವಿ ನಾಯಕನಿಗೆ ಮುಖಭಂಗವಾದಂತಾಗಿದೆ.ಕಾನೂನೇ ಎಲ್ಲದಕ್ಕಿಂತ ದೊಡ್ಡದು ಎನ್ನೋದು ಈ ಮೂಲಕ ಪ್ರೂವ್ ಆದಂತಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News